ನನ್ನ ಹೆಸರು ಬ್ರಯನ್ ಮೊಂತೆರೊ. ನಾನು ಮಂಗಳೂರಿನಲ್ಲಿ ನೆಲೆಸಿದ್ದೇನೆ. ನನ್ನ ತಂದೆಯ ಹೆಸರು ಜಾನ್ ಮೊಂತೆರೊ, ತಾಯಿಯ ಹೆಸರು ಫ಼್ಲೊಸ್ಸಿ ಮೊಂತೆರೊ. ನನ್ನ ತಂದೆ ಬಡಗಿ ವೃತ್ತಿಯಲ್ಲಿದ್ದಾರೆ. ನನಗೆ ಒಬ್ಬಳು ತಂಗಿ ಇದ್ದಾಳೆ.

ನಾನು ನನ್ನ ಪ್ರಾಥಮಿಕ ವಿಧ್ಯಾಭ್ಯಾಸವನ್ನು ಸೈಂಟ್. ಆನ್ಸ್ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಒಂದನೆ ತರಗತಿಯಿಂದ, ಹತ್ತನೆ ತರಗತಿಯವರೆಗೆ ಕಲಿತಿರುವೆನು. ನಾನು ಹತ್ತನೆ ತರಗತಿಯಲ್ಲಿ ೭೫% ದಷ್ಟು ಅಂಕಗಳನ್ನು ಪಡೆದಿರುವೆನು.ನಮ್ಮ ಶಾಲೆಯಲ್ಲಿ ಎಲ್ಲಾ ಟೀಚರ್ ಗಳು ಓದಲು ತುಂಬ ಪ್ರೋತ್ಸಾಹವನ್ನು ನೀಡುತ್ತಿದ್ದರು. ನಾನು ನನ್ನ ಬಿಡುವಿನ ವೇಳೆಯಲ್ಲಿ ಸಂಗೀತವನ್ನು ಕೇಳುವುದನ್ನು ಇಷ್ಟ ಪಡುತ್ತೇನೆ.

ನಾನು ನನ್ನ ಪದವಿ ಪೂರ್ವ ಶಿಕ್ಷಣವನ್ನು ಸಂತ ಅಲೋಶಿಯಸ್ ಪಿ ಯು ಕಾಲೇಜಿನಲ್ಲಿ ಪಡೆದೆನು. ಅದರಲ್ಲಿ ಆಯ್ಕೆಯಾಗಿ ವಾಣಿಜ್ಯ ಶಾಸ್ತ್ರದಲ್ಲಿ (ಸಿ.ಇ.ಬಿ.ಎ) ಪಡೆದಿದ್ದೆನು.ನನಗೆ ದ್ವಿತೀಯ ಪಿಯುಸಿ ಯಲ್ಲಿ ೭೮% ಅಂಕದೊಂದಿಗೆ ತೇರ್ಗಡೆ ಹೊಂದಿರುವೆನು.

ಪ್ರಸ್ತುತ ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ (ಬಿ.ಸಿ.ಎ ) ಉನ್ನತ ವ್ಯಾಸಂಗ ಮಾಡುತ್ತಿರುವೆನು.