ಸಚಿನ್: ಎ ಬಿಲಿಯನ್ ಡ್ರೀಮ್ಸ್ ಸಚಿನ್: ಎ ಬಿಲಿಯನ್ ಡ್ರೀಮ್ಸ್ ೨೦೧೭ರಲ್ಲಿ ಬಿಡುಗಡೆಯಾಗಲಿರುವ ಭಾರತೀಯ ಜೀವನಚರಿತ್ರೆಯ ಚಿತ್ರ. ಇದನ್ನು ಜೇಮ್ಸ್ ಎರ್ಸ್ಕೈನ್ ಬರೆದು ನಿರ್ದೇಶಿಸಿದ್ದಾರೆ. ಇದನ್ನು ರವಿ ಭಾಗ್ಚನ್ದ್ಕ ಮತ್ತು ಕಾರ್ನಿವಲ್ ಮೋಶನ್ ಪಿಕ್ಛರ್ಸ್, ೨೦೦ ನಾಟ್ಅವ್ಟ್ ಪ್ರೊಡಕ್ಶನ್ಸ್ ಅಡಿಯಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರ ಭಾರತೀಯ ಕ್ರಿಕೇಟಿಗ ಸಚಿನ್ ಟೆಂಡೂಲ್ಕರ್ ಅವರ ಜೀವನ ಚರಿತ್ರೆಯ ಆಧಾರಿತವಾಗಿದೆ. ಈ ಚಿತ್ರವು ೨೬ ಮೇ ೨೦೧೭ರಂದು ಬಿಡುಗಡೆಯಾಗಲಿದೆ.

                    ಈ ಚಲನಚಿತ್ರವು ಸಚಿನ್ ರವರ ಕ್ರಿಕೇಟ್ ಮತ್ತು ವಯಕ್ತಿಕ ಜೀವನವನ್ನು ಚಿತ್ರಿಸಿದೆ. ನಮಗೆ ಗೊತ್ತಿರದ ಅವರ ಜೀವನದ ಕೆಲವು ಸಂಗತಿಗಳನ್ನೂ ಈ ಚಿತ್ರದಲ್ಲಿ ಸೆರೆಹಿಡಿತಯಲಾಗಿದೆ. ಈ ಚಿತ್ರ ಏಕಕಾಲದಲ್ಲಿ ತಮಿಳು, ತೆಲುಗು ಹಾಗು ಮರಾಠಿ ಭಾಷೆಗಳಲ್ಲಿ ಬಿಡುಗಡೆಯಾಗುತ್ತದೆ.