ಸದಸ್ಯ:Bindureddy682/ನನ್ನ ಪ್ರಯೋಗಪುಟ

"ಹಂದಿಜ್ವರ"

ಬದಲಾಯಿಸಿ

ಹಂದಿಜ್ವರವು ಹಲವು ಪ್ರಕಾರಗಳ ಹಂದಿಜ್ವರ ವೈರಾಣುಗಳ ಪೈಕಿ ಯಾವುದಾದರೂ ಒಂದರಿಂದ ತಗಲುವ ಒಂದು ಸೋಂಕು. ಹಂದಿಜ್ವರ ವೈರಾಣು (ಸ್ವೈನ್ ಇನ್‌ಫ್ಲುಯೆಂಜಾ ವೈರಸ್ - ಎಸ್ಐವಿ) ಹಂದಿಗಳಲ್ಲಿ ವಿಶಿಷ್ಟವಾದ ಇನ್‌ಫ್ಲುಯೆಂಜಾ ಕುಟುಂಬದ ವೈರಾಣುಗಳ ಯಾವುದೇ ತಳಿ. ೨೦೦೯ರ ವೇಳೆಗೆ, ಪರಿಚಿತವಾಗಿರುವ ಎಸ್ಐವಿ ತಳಿಗಳು, ಇನ್‌ಫ್ಲುಯೆಂಜಾ ಸಿ ಮತ್ತು ಎಚ್೧ಎನ್೧, ಎಚ್೧ಎನ್೨, ಎಚ್೩ಎನ್೧, ಎಚ್೩ಎನ್೨ ಹಾಗೂ ಎಚ್೨ಎನ್೩ ಎಂದು ಪರಿಚಿತವಾಗಿರುವ ಇನ್‌ಫ್ಲುಯೆಂಜಾ ಎಯ ಉಪಪ್ರಕಾರಗಳನ್ನು ಒಳಗೊಂಡಿವೆ.

  ಹಂದಿ ಜ್ವರದ ಲಕ್ಷಣಗಳೇನು?

ಹಂದಿಜ್ವರ ಬಂದಾಗಿನ ಲಕ್ಷಣಗಳು ಮಾನವರಿಗೆ ಫ್ಲೂ ಬಂದಾಗಿನ ಲಕ್ಷಣಗಳನ್ನೆ ಹೋಲುತ್ತವೆ. ಜ್ವರ, ಕೆಮ್ಮು, ಗಂಟಲು ನೋವು, ಮೈಕೈ ನೋವು, ತಲೆ ನೋವು, ಚಳಿ, ಸುಸ್ತು ಇರುತ್ತವೆ, ಕೆಲವರಿಗೆ ಭೇದಿ ಮತ್ತು ವಾಂತಿ ಸಹಾ ಬರಬಹುದು. ಈ ಮ್ಮುಂಚೆ ತೀವ್ರವಾದ ಅನಾರೋಗ್ಯದಿಂದ ಈ ಸೋಂಕಿನಿಂದ ಸಾವು ಸಂಭವಿಸಿರುವುದು ವರದಿಯಾಗಿದೆ. ಋತುಮಾನಕ್ಕೆ ಅನುಗುಣವಾಗಿ ಬರುವ ಫ್ಲು ನಂತೆ ಹಂದಿಜ್ವರವೂ ಸುಧೀರ್ಘವಾದ ವೈದ್ಯಕೀಯ ಸಮಸ್ಯೆ ಯಾಗಲಿದೆ. ಸೋಂಕಿತರಿಗೆ ಕೆಮ್ಮಿದ್ದಾಗ ಮತ್ತು ಸೀನಿದಾಗ ಫ್ಲು ವೈರಾಣುಗಳು ಒಬ್ಬರಿಗೆ ಹರಡುತ್ತವೆ. ಕೆಲವು ಸಲ ಫ್ಲು ವೈರಾಣುವಿರುವ ವಸ್ಥುವನ್ನು ಮೂಟ್ಟಿ ಅದೆ ಕೈ ಅನ್ನು ಬಾಯಿ ಅಥವ ಮೂಗಿನ ಹತ್ತಿರ ಇಟ್ಟು ಕೊಂಡರೂ ಸೋಂಕು ತಗುಲಬಹುದು. ಸೋಂಕು ತಗುಲಿದವರು ಇನ್ನೊಬ್ಬರಿಗೆ ತಮಗೆ ಲಕ್ಷಣ ಕಾಣಿಸಿ ಕೊಳ್ಳುವ ಒಂದು ದಿನ ಮೊದಲಿನಿಂದ ನಂತರ ಬಂದ ಏಳು ದಿನಕ್ಕೂ ಮೀರಿ ಸೋಂಕು ಹರಡುವರು. ಅಂದರೆ ನೀವು ಅನಾರೋಗ್ಯ ಪೀಡಿತರು ಎಂದು ತಿಳಿಯುವ ಮೊದಲು ಮತ್ತು ಬಂದ ನಂತರವೂ ಸೋಂಕು ಹರಡಬಹುದು.

  ಫ್ಲೂ ಬಾರದಂತೆ ನಾನು ಏನು ಮಾಡ ಬೇಕು ?

ಕೈತೊಳೆಯುವುದು ಪ್ರಥಮ ಮತ್ತು ಅತಿ ಮುಖ್ಯ ಕೆಲಸ. ಆರೊಗ್ಯವನ್ನು ಕಾಪಾಡಿಕೊಳ್ಳುವುದು ಬಹು ಉತ್ತಮ. ಚೆನ್ನಾಗಿ ನಿದ್ರೆ ಮಾಡಿ, ದೈಹಿಕ ಚಟುವಟಿಕೆ ಇರಲಿ, ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ, ಹೆಚ್ಚು ನೀರು ಕುಡಿಯಿರಿ. ಪೌಷ್ಟಿಕ ಆಹಾರ ಸೇವೆಸಿರಿ. ವೈರಾಣು ಇರಬಹುದಾದ ಮಲಿನವಾದುದ್ದನ್ನು ಮುತ್ತಬೇಡಿ, ರೋಗ ಪೀಡಿತರೊಡನೆ ಹತ್ತಿರದ ಸಂಪರ್ಕ ಬೇಡ.

 ರೋಗ ಬಾರದಂತೆ ನಾನು ಹೇಗೆ ರಕ್ಷಣೆ ಪಡೆಯಬೇಕು?

ಹಂದಿ ಜ್ವರದಿಂದ ರಕ್ಷಣೆ ಪಡೆಯಲು ಸಧ್ಯಕ್ಕೆ ಯಾವ ಔಷಧಿಯೂ ಇಲ್ಲ. ನೀವುತೆಗೆದುಕೊಳ್ಳುವ ದೈನಂದಿನ ಚಟುವಟಿಕೆಗಳಿಂದ ರೋಗಾಣ ಹರಡುವುದನ್ನು ತಡೆಯಬಹುದು. ಈ ಕೆಳಗಿನ ಕ್ರಮಗಳಿಂದ ಆರೋಗ್ಯ ರಕ್ಷಣೆ ‍ಸಾಧ್ಯ:

  • ಕೆಮ್ಮುವಾಗ ಅಥವ ಸೀನಿವಾಗ ಬಾಯಿ ಮತ್ತು ಮೂಗನ್ನು ಮೂಚ್ಚಿಕೊಳ್ಳಿ.
  • ಕೈಯನ್ನು ಸೋಪು ಮತ್ತು ನೀರನಿಂದ ಆಗಾಗ ತೊಳೆದು ಕೊಳ್ಳಿ. ವೀಶೇಷವಾಗಿ ಕೆಮ್ಮಿದಾಗ ಮತ್ತು ಸೀನಿವಾಗ. ಆಲ್ಕೋಹಾಲ್ ಪೂರಿತವಾದವು ಉಪಯುಕ್ತ.
  • ಬಾಯಿ, ಮೂಗು ಮತ್ತು ಕಣ್ಣುಗಳನ್ನು ಮುಟ್ಟಿಕೊಳ್ಳ ಬೇಡಿ ಅದರಿಂದ ವೈರಾಣು ಹರಡುವುದು ತಪ್ಪುತ್ತದೆ.
  • ನೀವು ಇನ್ಫ್ಲುಯೇಂಜಾದಿಂದ ಬಳಲುತ್ತಿದ್ದರೆ, ಶಾಲೆಗೆ, ಆಫೀಸಿಗೆ ಹೋಹದೆ ಮನೆಯಲ್ಲೇ ಇರೊ, ಜನರೊಂದಿಗೆ ಹೆಚ್ಚಿನ ಸಂಪರ್ಕ ಬೇಡ, ಹೆಚ್ಚಿನ ಜನರೊಂದಿಗೆ ಬೆರಿಯುವುದರಿಂದ ಸೋಂಕು ಹೆಚ್ಚಾಗಿ ಹರಡುತ್ತದೆ.

ಕೆಮ್ಮು ಮತ್ತು ಸೀನುವುದರಿಂದ ವೈರಾಣು ಹರಡುವುದನ್ನು ತಡೆಯುವ ಉತ್ತಮ ವಿಧಾನ ಯಾವುದು? ನೀವು ರೋಗಿಗಳಾಗಿದ್ದರೆ, ಸಾಧ್ಯವಾದಷ್ತು ಇತರರ ಸಂಪರ್ಕ ಕಡಿಮೆ ಮಾಡಿಕೊಳ್ಳಿ. ಸ್ಲೆಗೆ ಅಥವ ಕೆಲಸಕ್ಕೆ ಹೋಹಬೇಡಿ. ಕೆಮ್ಮುವಾಗ, ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ ಅದರಿಂದ ನಿಮ್ಮ ಸುತ್ತ ಮುತ್ತ ಇದ್ದವರಿಗೆ ರೋಗ ಹರಡುವುದಿಲ್ಲ. ಆ ಟಿಶ್ಯೂ ಪೇಪರನ್ನು ಕಸದ ಬುಟ್ಟಿಗೆ ಹಾಕಿ.

ನಿಮಗೆ ಅನಾರೋಗ್ಯದ ಕೆಳಗಿನ ಲಕ್ಷಣಗಳು ಗೋಚರಿಸಿದರೆ ತಕ್ಷಣ ತುರ್ತು ಚಿಕಿತ್ಸೆ ಪಡೆಯಿರಿ.

  ಮಕ್ಕಳಲ್ಲಿ ತಕ್ಷಣದ ವೈದ್ಯಕೀಯ ಚಿಕಿತ್ಸೆ ಬೇಕಾಗುವ ತುರ್ತು ಸಂದರ್ಭದ ಲಕ್ಷಣಗಳು:
  • ಏದುಸಿರು ಅಥವ ಉಸಿರಾಟದ ತೊಂದರೆ
  • ನೀಲಿಯಾದ ಚರ್ಮ
  • ಸಾಕಷ್ಟು ದ್ರವ ಸೇವಿಸದೆ ಇರುವುದು
  • ಏಳದಿರುವುದು ಮತ್ತು ಮೌನವಾಗಿರುವುದು
  • ಎತ್ತಿ ಕೊಂಡರು ಕಿರಿಕಿರಿ ಮಾಡುವುದು
  • ಫ್ಲೂನ ಲಕ್ಷಣಗಳು ಸುಧಾರಿಸಿ ಮತ್ತೆ ಜ್ವರ, ಕೆಮ್ಮು ಬರುವುದು
  • ಜ್ವರ ಮತ್ತು ಚಿಕ್ಕ ಚಿಕ್ಕ ಗುಳ್ಳೆಗಳು
    ಮಾಡ ಬೇಕಾದ ಮತ್ತು ಮಾಡ ಬಾರದ ಕ್ರಮಗಳು

ಮಾಡ ಬೇಕಾದವುಗಳು

  • ಕೆಮ್ಮುವಾಗ, ಸೀನುವಾಗ ನಿಮ್ಮ ಬಾಯಿ ಮತ್ತು ಮೂಗನ್ನು ಮುಚ್ಚಿಕಿಳ್ಳಿ
  • ಕೆಮ್ಮಿದಾಗ ಮತ್ತು ಸೀನಿದಾಗ ಮೂಗು, ಕಣ್ಣುಗಳ್ನ್ನು ಮುಟ್ಟುವ ಮೊದಲು ಮತ್ತು ನಂತರ ಕೈಯನ್ನು ಸಾಬುನಿನಿಂದ ತೊಳೆದುಕೊಳ್ಳಿ
  • ಗುಂಪಿನಲ್ಲಿ ಇರಬೇಡಿ
  • ಫ್ಲೂ ನ ಸೋಂಕು ಇದ್ದರೆ ಮನೆಯಲ್ಲೆ ಇರಿ
  • ಫ್ಲೂನ ಲಕ್ಷಣಗಳಾದ ಕೆಮ್ಮು ಮೂಗು ಸೋರುವುದು, ಸೀನು ಮತ್ತು ಜ್ವರ ಇರುವವರಿಂದ ದೂರವಿರಿ
  • ಚೆನ್ನಾಗಿ ನಿದ್ರಿಸಿ, ದೈಹಿಕ ಚಟುವಟಿಕೆ ಇರಲಿ, ಒತ್ತಡವನ್ನು ಯಶಸ್ವಿಯಾಗಿ ನಿಭಾಯಿಸಿ
  • ಹೆಚ್ಚು ನೀರು ಕುಡಿಯಿರಿ.


  • ಕೈಕುಲುಕುವುದು, ಸಾಮಾಜಿಕವಾದ ಅಪ್ಪುಗೆ ಮತ್ತು ಮುದ್ದಿಸುವುದು ಅಥವ ಸ್ವಾಗತಕ್ಕಾಗಿ ಯಾವದೆ ದೈಹಿಕ ಸಂಪರ್ಕ
  • ವೈದ್ಯರ ಸಲಹೆ ಇಲ್ಲದೆ ಔಷಧಿ ತೆಗೆದುಕೊಳ್ಳುವುದು
  • ಎಲ್ಲೆಂದರಲ್ಲಿ ಉಗುಳುವುದು
  • ಮಕ್ಕಳಿಗೆ ಆಸ್ಪರಿನ್ ಕೊಡುವುದು.

"ಉಲೇಖನಗಳು"

ಬದಲಾಯಿಸಿ

[] []

  1. http://vijaykarnataka.indiatimes.com/district/belagavi/-/articleshow/24444831.cms
  2. http://kannada.oneindia.com/news/bangalore/h1n1-bbmp-issues-set-of-guidelines-091747.html