ಸದಸ್ಯ:BinduMadhava95/ನನ್ನ ಪ್ರಯೋಗಪುಟ

ಕುವೆಂಪು, ಎಂಬ ಅಂಕಿತ ನಾಮದಿಂದ ಹೆಸರಾಂತಕರಾದ "ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ" ರವರು ೨೯ ಡಿಸೆಂಬರ್ ೧೯೦೪ ರಂದು, ಚಿಕ್ಕಮಂಗಳೂರಿನ ಬಳಿ ಇರುವ ಹಿರೇಕೊಡಿಗೆ ಎಂಬ ಊರಿನಲ್ಲಿ ಜನಿಸಿದರು. ಇವರ ತಂದೆ ವೆಂಕಟಪ್ಪ ಗೌಡ ಮತ್ತು ತಾಯಿ ಸೀತಮ್ಮ. ಇವರ ವ್ಯಾಸಂಗವೆಲ್ಲ ತಂದೆಯ ಊರಾದ ಕುಪ್ಪಳ್ಳಿಯಲ್ಲಿ ನಡೆಯಿತು. ಇವರ ಇಂಗ್ಲಿಷ್ ವ್ಯಾಸಂಗವೆಲ್ಲ ತೀರ್ಥಹಳ್ಳಿಯಲ್ಲಿ ನಡೆಯಿತು. ತದನಂತರ ಮುಂದಿನ ಓದಿಗಾಗಿ ಮೈಸೂರ್ ಗೆ ತೆರಳಿದರು. ಹೀಗೆ ಇವರು ಮೈಸೂರಿನ ಮಹಾರಾಜಾ ಕಾಲೇಜು ನಿಂದ ಕನ್ನಡದಲ್ಲಿ ಮೇಜರ್ ಪಧವಿಯನ್ನು ಪಡೆದರು. ಏಪ್ರಿಲ್ ೩೦, ೧೯೩೭ ರಂದು ಇವರು ಹೇಮಾವತಿ ಎಂಬುವರನ್ನು ಮದುವೆಯಾದರು. ಕುವೆಂಪು ರವರಿಗೆ ನಾಲ್ಕು ಜನ ಮಕ್ಕಳು. ಪೂರ್ಣಚಂದ್ರ ತೇಜಸ್ವಿ ಮತ್ತು ಕೋಕಿಲೋದಯಃ ಚೈತ್ರ, ಇವರ ಸುಪುತ್ರರು. ಇಂದುಕಲಾ ಮತ್ತು ತಾರಿಣಿ ಇವರ ಸುಪುತ್ರಿಯರು. ಕುವೆಂಪು ರವರು ತಾವು ಓದಿದ ಕಾಲೇಜ್ನಲ್ಲಿಯೇ ಕನ್ನಡ ಅಧ್ಯಾಪಕರಾಗಿ ಕೆಲಸ ಮಾಡುತಿದ್ದರು. ೧೯೩೬ ರಿಂದ ಇವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನಲ್ಲಿ ಅಧ್ಯಾಪಕರಾಗಿ ಸೇವೆ ಸಲ್ಲಿಸಿಧಾರೆ. ತದನಂತರ ೧೯೫೫ರಲ್ಲಿ ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಕಾರ್ಯ ಸಲ್ಲಿಸಿದರೆ. ೧೯೫೬ ರಲ್ಲಿ ಇವರನ್ನು ಮೈಸೂರ್ ವಿಶ್ವವಿದ್ಯಾನಿಲಯದ ಉಪಕುಲಪತಿಯನ್ನಿ ಮಾಡಿದರು.

ಕುವೆಂಪು ಮೊದಲು ತಮ್ಮ ಸಾಹಿತ್ಯವನ್ನು (ಬಿಗಿನರ್ಸ್ ಮ್ಯೂಸ್ ) ಆಂಗ್ಲ ಭಾಷೆಯಲ್ಲಿ ಶುರುಮಾಡಿದರು. ಇದನ್ನು ನೋಡಿದ ಬ್ರಿಟಿಷ್ ಅಧಿಕಾರಿ ಒಬ್ಬರು ಕುವೆಂಪುರವನ್ನು ತಮ್ಮ ಮಾತೃ ಭಾಷೆಯಾದ ಕನ್ನಡಲ್ಲಿ ಬರೆಯಲು ಪ್ರೋತಾಸಿಷಿದರು. ಇದಿರಿಂದ ಪುಳಕಿತರಾದ ಕುವೆಂಪುರವರು ತಮ್ಮ ಎಲ್ಲ ಸಾಹಿತ್ಯವನ್ನು ಕನ್ನಡದಲ್ಲಿ ಬರೆಯಲು ಆರಂಭಿಸಿದರು. ಇವರು ಕನ್ನಡ ಅಧ್ಯಯನ ಸಂಸ್ಥೆ ("ಇನ್ಸ್ಟಿಟ್ಯೂಟ್ ಆ ಕನ್ನಡ ಸ್ಟಡೀಸ್ ") ಎಂಬ ಸಂಸ್ಥೆಯನ್ನು ಮೈಸೂರ್ ಯೂನಿವರ್ಸಿಟಿಯಲ್ಲಿ ಸ್ಥಾಪಿಸಿದರು. ಇದನ್ನು ಕಾಲಕ್ರಮೇಣ "ಕುವೆಂಪು ಇನ್ಸ್ಟಿಟ್ಯೂಟ್ ಆ ಕನ್ನಡ ಸ್ಟಡೀಸ್ " ಎಂದು ಹೆಸರಿಡಲಾಗಿದೆ. ಇವರ ತಿಳುವಳಿಕೆ ಅಪಾರವಾದದ್ದು. ಇವರು ಜಾತಿ, ಮತ, ಕುಲ, ಜನಾಂಗ ಎಂದು ಯಾವತ್ತಿಗೂ ಬೇಧ ಭಾವ ಮಾಡಿದವರಲ್ಲ. ಇವರು ಸಾಮಾಜಿಕ ಸಮಾನತೆಯ ಬಗ್ಗೆ ಮಾತನಾಡುತಿದರು ಹಾಗು ಪಾಲಿಸುತ್ತಿದ್ದರು. ಇವರು ಕಾರನಾಟಕದ ಮೊದಲ ಜ್ಞಾನಪೀಠ ಪ್ರಶಸ್ತಿ ವಿಜೇತರು. ಇವರ "ಶ್ರೀ ರಾಮಾಯಣ ದರ್ಶನಂ " ಎಂಬ ಪುಸ್ತಕಗೆ ಈ ಪ್ರಶಸ್ತಿ ದೊರೆಯಿತು. ಇದರೊಂದಿಗೆ ಇವರಿಗೆ ಕರ್ನಾಟಕ ರತ್ನ (೧೯೯೨), ಪದ್ಮ ವಿಭೂಷಣ್ (೧೯೮೮ ) , ಪಂಪ ಅವಾರ್ಡ್ (೧೯೮೭ ), ರಾಷ್ಟ್ರಕವಿ ("National ಪೊಯೆಟ್ ") (೧೯೬೪ ), ಪದ್ಮ ಭೂಷಣ್ (೧೯೫೮ ), ಸಾಹಿತ್ಯ ಅಕಾಡೆಮಿ ಅವಾರ್ಡ್ (೧೯೫೫ ) ಮುಂತಾದವು ದೊರೆತಿವೆ. ಸಾಹಿತ್ಯ ಸಂಪುಟಗಳು- ಮಹಾಕಾವ್ಯ : ಶ್ರೀ ರಾಮಾಯಣ ದರ್ಶನಂ, ಚಿತ್ರಾಂಗದಾ. ಕಾದಂಬರಿಗಳು: ಮೇಲೆಗಳಲ್ಲಿ ಮಧುಮಗಳು, ಕಾನೂರು ಹೆಗ್ಗಡತಿ , ನಾಟಕಗಳು: ಬಲಿದಾನ ,ಸ್ಮಶಾನ ಕುರುಕ್ಷೇತ್ರ, ಜಲಗಾರ ಮುಂತಾದವು, ಆತ್ಮಕಥೆ : ನೆನಪಿನ ದೋಣಿಯಲಿ ಮುಂತಾದ ಬರಹಗಳನ್ನು ಇವರು ಕನ್ನಡ ಸಾಹಿತ್ಯಕ್ಕೆ ಕೊಡುಗೆ ಯಾಗಿ ನೀಡಿಧಾರೆ.



ಚಿತ್ರ:Kuvempu
kuvempu]