ಸದಸ್ಯ:Bhoomishetty/ನನ್ನ ಪ್ರಯೋಗಪುಟ
ಮಾಯಿದ ಪುರುಷೆ
ಬದಲಾಯಿಸಿಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನಲ್ಲಿ ಮಾತ್ರ ಕಂಡುಬರುತ್ತದೆ. ಹೆಸರೇ ಸೂಚಿಸುವಂತೆ ಮಾಯಿ ತಿಂಗಳ ಹುಣ್ಣಿಮೆಯಿಂದ ಆರಂಭಿಸಿ ಹದಿನೈದು ದಿನಗಳವರೆಗೆ ಈ ಕುಣಿತ ನಡೆಯುತ್ತದೆ. ಕೆಳಜಾತಿಯವರಾದ ನಲಿಕೆ ಜನಾಂಗದವರು ಈ ಕುಣಿತವನ್ನು ನಡೆಸುತ್ತಾರೆ.
ವೇಷ ಭೂಷಣ
ಬದಲಾಯಿಸಿಮಾಯಿದ ಪುರುಷೆ ಎಂದರೆ ಏಳು ಜನ ಅಣ್ಣ-ತಮ್ಮಂದಿರು. ಇವರನ್ನು 'ಏಳ್ವರೆ ಪುರುಶರ್' ಎಂದು ಕರೆಯುವುದುಂಟು ತಂಡದಲ್ಲಿ ಒಟ್ಟು ಹತ್ತು ಜನರಿರುತ್ತಾರೆ. ಏಳು ಜನ ಪುರುಷರು, ಒಂದು ಸ್ತ್ರೀ ವೇಷ ,ಒಬ್ಬಳು ಅಡುಗೋಲಜ್ಜಿ ಮತ್ತು ಒಬ್ಬ ತೆಂಬರೆಯವ. ಪುರುಷರು ಕಚ್ಚೆಪಂಚೆ ಉಟ್ಟು,ಉದ್ದತೋಳಿನ ಅಂಗಿ ತೊಟ್ಟು,ಹೆಗಲಿಗೆ ಶಾಲು,ತಲೆಗೆ ಬಿಳಿಯ ಅಥವಾ ಕೆಂಪು ಇಲ್ಲವೆ ಹಳದಿ ಬಣ್ಣದ ಮುಂಡಾಸು (ರುಮಾಲು) ಸುತ್ತಿಕೊಳ್ಳುತ್ತಾರೆ. ಹಿರಿಯ ಪುರುಷನ ಕಾಲಿಗೆ ಗಗ್ಗರವಿರುತ್ತದೆ.ಮುಖಕ್ಕೆ 'ಸಪೇತ' ಹಚ್ಚಿ ಕೆಂಪು ಮತ್ತು ಕಪ್ಪು ಬಣ್ಣಗಳಿಂದ ಅಲಂಕಾರ ಅಲಂಕಾರ ಮಾಡಿಕೊಳ್ಳುತ್ತಾನೆ. ಕುತ್ತಿಗೆಯಲ್ಲಿ ಹೂವಿನ ಹಾರ ಇರುತ್ತದೆ. ಸ್ತ್ರೀ ವೇಷವನ್ನು ಗಂಡಸರೇ ಮಾಡುತ್ತಾರೆ. ಹಳ್ಳಿಯ ಹೆಂಗಸರಂತೆ ಸೀರೆ,ರವಕೆ,ಉಟ್ಟು ಜಡೆ ನೆಯ್ದು ಇಳಿಬಿಡಲಾಗುತ್ತದೆ.ಹೂ ಮುಡಿದು ಮುಖವನ್ನು ಅಲಂಕರಿಸಿ,ಕಾಡಿಗೆ ಬೊಟ್ಟಿಟ್ಟು ಕೈಗೆ ಬಳೆ, ಕಾಲಿಗೆ ಗೆಜ್ಜೆ ಇರುತ್ತದೆ.ಅಡಗೂಲಜ್ಜಿಯ ವೇಷದಾರಿ ಸೀರೆ ರವಿಕೆ ತೊಟ್ಟಿರುತ್ತಾನೆ.ದಡ್ಡಾಳು (ಒಂದು ಜಾತಿಯ ಮರ) ಮರದ ನಾರಿನಿಂದ ಮಾಡಿದ ನಾರಿನಿಂದ ಮಾಡಿದ ಬಿಳಿ ಟೋಫನ್ ಧರಿಸುತ್ತಾರೆ. ಉದ್ದ ಹಲ್ಲು ಕಾಣಲೆಂಬ ಕಾರಣಕ್ಕೆ ಮೇಲ್ತುಟಿಯ ಅಡಿಗೆ ಒಂದು ಅಡಿಕೆ ಹಾಳೆ ತುಂಡಿನಿಂದ ಮಾಡಿದ ಹಲ್ಲಿನಂತಹ ರಚನೆಯನ್ನು ಇಟ್ಟುಕೊಳ್ಳುತ್ತಾನೆ.ತನ್ನ ಬೆನ್ನು ಬಾಗಿದಂತೆ ತೋರಿಸಿಕೊಳ್ಳಲು ಬೆನ್ನಿನ ಹಿಂಬದಿಗೆ ಬಟ್ಟೆಯ ಸಿಂಬೆಯನ್ನು ಕಟ್ಟಿಕೊಳ್ಳುತ್ತಾನೆ.ಬಾಗಿದ ಬೆನ್ನಿನಿಂದ ದಂಡೆ ಊರುತ್ತ ನಡೆಯುತ್ತಾನೆ.
ಆಚರಣ ಕ್ರಮ
ಬದಲಾಯಿಸಿಇಂತಹ ವೇಷ ಹಾಕಿಕೊಂಡು ಮನೆ ಮನೆಗೆ ಹೋಗಿ ಕುಣಿಯುತ್ತಾರೆ. ಈ ಕಲೆಯ ಸಾಹಿತ್ಯವು ಪಾರ್ದನ ರೂಪದಲ್ಲಿ ತುಳುವಿನಲ್ಲಿದೆ.ಶುರುವಿನಲ್ಲಿ ತೆಂಬೆರೆ ಬಡಿಯುತ್ತ ಹಾಡು ಹೇಳುತ್ತಾರೆ.ಕುಣಿತದವರು ಪಾದದ ಮುಂಭಾಗ ಒತ್ತಿ ಜಾರಿಸಿ,ಹಿಂಬಾಗ ಊರಿ ಹೆಜ್ಜೆ ಇಡುತ್ತಾರೆ.ಹೆಣ್ಣು ವೇಷ ಸಣ್ಣ ಸಣ್ಣ ಹೆಜ್ಜೆಯಿಟ್ಟುಕೊಂಡು ಹಸ್ತಮುದ್ರಿಕೆಯನ್ನು ತೋರುತ್ತ ಕುಣಿಯುತ್ತಾಳೆ.ದಂಟೆ ಊರುತ್ತ,ಕೆಮ್ಮುತ್ತಾ,ನಡುಗಿಕೊಂಡು ತಂಡದ ಮಧ್ಯದಿಂದ ಅಡುಗೋಲಜ್ಜಿ ಹಾದುಹೋಗುತ್ತಾಳೆ.
ಪುರಾಣ
ಬದಲಾಯಿಸಿಏಳು ಜನ ಸಹೋದರರಿಗೆ ಒಬ್ಬಳು ತಂಗಿ.ಈ ಏಳು ಮಂದಿ ಸಹೋದರರು ಯುದ್ಧಕ್ಕೆ ಹೊರಡುವಾಗ ತಂಗಿಯನ್ನು ಜಾಗ್ರತೆಯಾಗಿ ನೋಡಿಕೊಳ್ಳುವಂತೆ ತಮ್ಮ ತಮ್ಮ ಹೆಂಡತಿಯರಿಗೆ ಹೇಳುತ್ತಾರೆ.ಅವರು ಯುದ್ದಕ್ಕೆ ಹೋದ ಕೆಲವೇ ದಿನಗಳಲ್ಲಿ ತಂಗಿ ಋತುಮತಿಯಾಗುತ್ತಾಳೆ.ಗೆರಟೆಯಲ್ಲಿ ಸೀಗೆ ತಿಳಿ ಕೊಟ್ಟು,ಹೊಳೆಗೆ ಹೋಗಿ ಸ್ನಾನ ಮಾಡಿ ಬರುವಂತೆ ಆಕೆಗೆ ಅತ್ತಿಗೆಯರು ಹೇಳುತ್ತಾರೆ.ಸ್ನಾನ ಮಾಡಿದ ನಂತರ ಕತ್ತಿ ಹಿಡಿದುಕೊಂಡು ಕಾಡಿಗೆ ಹೋಗಿ ಸೊಪ್ಪು ತರುವಂತೆಯೂ, ಕೊಡ ಹಿಡಿದು ನೀರು ತರುವಂತೆಯೂ ಹೇಳುತ್ತಾರೆ. 'ಇರ್ಪೆ'(ಒಂದು ಜಾತಿಯ ಮರ) ಮರವು ಹೂವು ಬಿಡುವ ಕಾಲ ಬರುತ್ತದೆ.ಅತ್ತಿಗೆಯರು ತಂಗಿಯನ್ನು ಹೂವು ಕೊಯ್ಯಲೆಂದು ಕಾಡಿಗೆ ಕರೆದೊಯ್ಯುತ್ತಾರೆ.ಮರಕ್ಕೆ ಏಣಿ ಇಟ್ಟು ಮರ ಹತ್ತಿಸುತ್ತಾರೆ.