ಸದಸ್ಯ:Bhavya shree p v/sandbox
ಶಾಂತಾದೇವಿ ಮಾಳವಾಡ
ಕನ್ನಡನಾಡಿನ ವಿದ್ವಾಂಸರೂ ಸಂಶೊಧಕರೂ ಆದ ಪ್ರಾಧ್ಯಾಪಕ ಎಸ್. ಎಸ್. ಮಾಳವಾಡೆ ಪತ್ನಿ ಶಾಂತಾದೇವಿ ಅವರು ಮಾಳವಾಡೆ ಪತ್ನಿ ಎನ್ನುವ ಕಾರಣದಿಂದಲೇ ಅವರು ಪ್ರಸಿದ್ಧಗೊಳ್ಳಲಿಲ್ಲ. ತಮ್ಮತನವನ್ನು ಬೆಳೆಸಿಕೊಳ್ಳುತ್ತಾ ತಮ್ಮದೇ ಲೇಖನ ಕಲೆಯಿಂದ ತಮ್ಮ ಹೆಸರನ್ನು ಪ್ರಸಿದ್ಧಿಗೊಳಿಸಿದವರು ಅವರು. ಅವರ ಹತ್ತಾರು ಸಾಹಿತ್ಯ ಕೃತಿಗಳು ಅವರ ವ್ಯಕ್ತಿತ್ವವನ್ನು ಸಾರುತ್ತವೆ. ಇವರು ಜನ್ಮತಃ ಬೆಳಗಾವಿಯರವರು. ಕನ್ನಡ ಸಾಹಿತ್ಉ ಪರಿಷತ್ತಿನ ಪರೀಕ್ಷೆಗಳನ್ನು ಪಾಸುಮಾಡಿ ಮನೆಯಲ್ಲೇ ಇಂಗ್ಲೀಷ್, ಹಿಂದಿ, ಮರಾಠಿ ಶಿಕ್ಷಣವನ್ನು ಪಡೆದರು. ಕಥಾ ಸಾಹಿತ್ಯದಿಂದ ಹಿಡಿಸು ಅಧ್ಯಾತ್ಮದ ಬರೆವಣಿಗೆಯವರೆಗೂ ಇವರ ಪ್ರತಿಭೆ, ಆಸ್ಕತಿ ಹರಡಿದೆ. ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ಇ, ಜ.ಚ.ನಿ. ಪ್ರಶಸ್ತಿ ಸಾಹಿತ್ಯ ಸುಮ ಎಂಬ ಬಮಗಾರದ ಪದಕ ಸಹಿತ ಪ್ರಶಸ್ತಿಯೂ ದೊರಕಿದೆ. ಅನೇಕ ಸಂಘ-ಸಂಸ್ಥೆಗಲಿಂದಲೂ ಕನ್ನಡ ಸಾಹಿತ್ಯ ಪರಿಷತ್ತಿನಿಂದಲೂ ಸನ್ನಾನಿತರಾಗಿದ್ದಾರೆ. ಉತ್ತಮ ಗೃಹಿಣಿಯಾಗಿದ್ದು ಸಮಾಜ ಸೇವಾಕತೆಯಾಗಿದ್ದಾರೆ. ೧೯೭೩ರಿಂದ ೧೯೭೮ರ ವರೆಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿದ್ದು ಈಗ ರಾಜ್ಯಸಾಹಿತ್ಯ ಅಕಾಡೆಮಿ ಸದಸ್ಯೆಯಾಗಿದ್ಆಎ. ಇತ್ತೀಚೆಗಷ್ಟೇ ಷಷ್ಟ್ಯಬ್ದಿ ಕಾಯ್ಕ್ರಮ ನಡೆದು ಶಾಂತಾದೇವಿ ಅವರಿಗೆ ಒಂದು ಅಭಿನಂದನ ಗ್ರಂಥ ಅಪಣೆಯಾಗಿದೆ.
ಬಾಲ್ಯದಲ್ಲಿ :- ತವರುಮನೆಯವರು ಇಟ್ಟ ಹೆಸರು ದಾನಮ್ಮ. ಕೋ ಆಪರೇಟಿವ್ ಡಿಪಾಟ್‍ಮೆಂಟಿನಲ್ಲಿ ಅಸಿಸ್ಟೆಂಟ್ ರಿಜಿಸ್ಟ್ರಾರ್ ಆಗಿದ್ದ ಮುರಿಗೆಪ್ಪ ಶೆಟ್ಟರು ತಂದೆ. ತಾಯಿ ಜಯವಂತಿದೇವಿ ಶೆಟ್ಟಿ ಶಾಂತಾದೇವಿಯ ಜನನ ೧೯೨೨ರಲ್ಲಿ ಬೆಳಗಾವಿಯಲ್ಲಿ ದಾನಮ್ಮ ಎರಡು ವಷದ ಮಗುವಾಗಿದ್ದಾಗಲೇ ತಂದೆಯ ವಿಯೊಗ, ಹತ್ತನೆಯ ವಯಸ್ಸಿನಲ್ಲಿ ತಾಯಿಯೂ ತೀರಿಕೊಂಡರು. ಅವರ ತಾಯಿಯ ತಾಯಿ ಅಜ್ಜಿ ಅಕ್ಕರೆಯಿಂದ ಮೊಮ್ಮಗಳನ್ನು ಬೆಳೆಸಿದರು. ಚಿಕ್ಕಮ್ಮ, ದೊಡ್ಡಮ್ಮ, ಮೊದಲಾದವರೆಲ್ಲ ತಮ್ಮ ಹೊಟ್ಟೆಯಲ್ಲಿ ಹುಟ್ಟಿದ ಮಗಳಂತೆ ನೋಡಿಕೊಂಡರು. ಆದರೂ ಬುದ್ಧಿ ತಿಳಿಯಹತ್ತಿದೊಡನೆ ತಾಯ್ತಂದೆಗಲಿಲೊfಲದ ಅಭಾವ ದಾನಮ್ಮನಿಗೆ ಎದ್ದು ತೋರುಹತ್ತಿತ್ತು.
ದಾನಮ್ಮನ ವಿದ್ಯಾಭ್ಯಾಸ ಹಯಸ್ಕುಲು ಎರಡನೇ ತರಗತಿವರೆಗೂ ಸಾಗಿಬಂದಿತು. ಸಂಪ್ರದಾಯಸ್ಥ ದೊಡ್ಡಪ್ಪ ಶಾಲೆ ಬಿಡಿಸಿದರು. ದಾನಮ್ಮನಿಗೆ ಹದಿನಾಲ್ಕು ವರುಷ ತುಮಬಿದ ತಿಮಗಲ್ಲಿಯೇ ಗದುಗಿನ ಚಿಕ್ಕಪ್ಪ, ವಿರೂಪಾಕ್ಷಶೆಟ್ಟರ ಮನೆಯಲ್ಲಿ ಬಹಳ ವಿಜೃಂಭಣೆಯಿಂದ ವಿವಾಹ ನೇರವೇರಿಉ. ದಾನಮ್ಮನವರ ಮಾವನ ಹೆಸರು ಸಂಗನ ಬಸಪ್ಪ ಮಾಳವಾಡ. ಅತ್ತೆಯ ಹೆಸರು ಕಾಳಮ್ಮ.
ತಾಯಿ ಜಯವಂತಿದೇವಿ ಕಸೂತಿ ಕಲೆಯಲ್ಲಿ ಪ್ರವಿನರೆಂದು ಖ್ಯಾತಿಗಳಿಸಿದ್ದರು. ದಾನಮ್ಮನ ಅಜ್ಜಿ, ಅಜ್ಜನೊಮದಿಗೆ ಮುಂಬಯಿ ಪ್ರಾಂತದ ಎಲ್ಲಡೆ ತಿಗಾಡಿದವರು. ಎಲ್ಲ ಭಾಗದ ಪಾಕಶಾಸ್ತ್ರದಲ್ಲಿಯು ಬಲ್ಲಿದರು. ತಾಯಿಯ ಕಸೂತಿ ಕಲೆ, ಅಜ್ಜಿಯ ಪಾಕ ಕಲೆ ದಾನಮ್ಮನಲ್ಲಿ ರಕ್ತಗತವಾಗಿ ಬಂದಿದೆ.