ಸದಸ್ಯ:Bhargavi K S/ನನ್ನ ಪ್ರಯೋಗಪುಟ

'ಲೀಟರ್' ಘನ ಅಳತೆಯ ಒಂದು ಏಕಮಾನ. ಲೀಟರ್ ಎಸ್ಐ ಏಕಮಾನವಲ್ಲವಾದರೂ ಅದನ್ನು ಎಸ್ಐ ಪದ್ಧತಿಯೊಂದಿಗೆ ಬಳಕೆಗೆ ಒಪ್ಪಿಕೊಳ್ಳಲಾಗಿದೆ ಮತ್ತು ಮೆಟ್ರಿಕ್ ಪದ್ಧತಿಯ ಹಲವು ಆವೃತ್ತಿಗಳಲ್ಲಿ ಕಾಣಿಸಿಕೊಂಡಿದೆ. ೧೦೦೦ ಲೀಟರ್‌ಗಳಿಗೆ ಸಮವಾದ ಘನ ಮೀಟರ್ ಘನ ಅಳತೆಯ ಅಧಿಕೃತ ಎಸ್ಐ ಏಕಮಾನವಾಗಿದೆ. ಒಂದು ಲೀಟರ್ ಎಂದರೆ ಒಂದು ಘನ ಡೆಸಿಮೀಟರ್‍ಗೆ ಸಮ ಅಥವಾ ೧೦೦೦ ಘನ ಸೆಂಟಿಮೀಟರ್. ಲೀಟರ್ ಎಂದರೆ ಘನಮೀಟರಿನ ಹತ್ತನೇ ಒಂದು ಭಾಗದಷ್ಟುಅಥವಾ ೧೦^೩ ಸೆಂಟಿಮೀಟರ್.

ಲೀಟರ್ ಕ್ಯಾನ್


ಯೂನಿಟ್ ಪದ್ದತಿಯಲ್ಲಿ ಪರಿಮಾಣಕ್ಕೆ ಯೂನಿಟ್ ಲೀಟರ್.

ಹಿನ್ನಲೆ: ೧೯೦೧ ರಿಂದ ೧೯೬೪ ರವರೆಗು ಲೀಟರ್ ಅನ್ನು ಹೀಗೆ ವಿವರಿಸುತ್ತಿದ್ದರು-"ಗರಿಷ್ಟ ಸಾಂದ್ರತೆ ಮತ್ತು ಪ್ರಮಾಣಿತ ಒತ್ತಡ ಒಂದು ಕೇಜಿಯ ಶುದ್ದ ನೀರಿನ ಪರಿಮಾಣಕ್ಕೆ ಸಮ."

  ಲೀಟರ್ ಒಂದು ಅಳತೆಯ ಮೂಲಮಾನ.

ಲೀಟರ್ ನ ಮೊದಲನೆ ಹೆಸರು "ಕ್ಯಾಡಲ್". ೧೭೯೫ರಲ್ಲಿ ಫ಼್ರಾನ್ಸ್ ನಲ್ಲಿ ಪರಿಚಯಿಸಲ್ಪಟ್ಟಿದೆ. ಲೀಟರನ್ನು ದ್ರವರೂಪದ ಪದಾರ್ಥಗಳನ್ನು ಅಳತೆ ಮಾಡುವುದಕ್ಕಾಗಿ ಹೆಚ್ಚು ಉಪಯೂಗಿಸುತ್ತಾರೆ. ಉದಾ:ಹಾಲು,ಮೊಸರು,ಎಣ್ಣೆಗಳನ್ನು ಅಳತೆ ಮಾಡುತ್ತಾರೆ. ಪೆಟ್ರೊಲ್ ಬಂಕ್ಗಳಲ್ಲಿ ಸಹಾ ಲೀಟರ್ ನಲ್ಲಿ ಅಳತೆ ಮಾಡುತ್ತಾರೆ. ಹಿಂದಿನ ಕಾಲದಲ್ಲಿ ವ್ಯಾಪಾರದಲ್ಲಿ ಹೆಚ್ಚು ಉಪಯೋಗಿಸುವ ಅಳತೆಯ ಮೂಲವೆ ಲೀಟರ್. ದಿನಸಿ ಅಂಗಡಿಯಲ್ಲಿ ಲೀಟರ್ ಅನ್ನು ಹೆಚ್ಚು ಉಪಯೋಗಿಸುತ್ತಾರೆ. ಲೀಟರ್ ಎಂಬ ಪದವನ್ನು ಸೂಚಿಸಲು ಎಲ್ ಎಂಬ ಚಿಹ್ನೆಯನ್ನು ಉಪಯೋಗಿಸುತ್ತಾರೆ. ಸಾಮಾನ್ಯವಾಗಿ ಲೀಟರ್ ಅನ್ನು, ಗ್ಯಾಲನ್, ಪಿಂಟ್ಸ್, ಕಾಲುಭಾಗ, ಕಪ್ಗಳು, ದ್ರವಗಳು ,ಔನ್ಸ್ ಮುಂತಾದ ಯೂನಿಟ್ ಗಳನ್ನು ಬಳಿಸಲು ಉಪಯೋಗಿಸುತ್ತಾರೆ. ಮಿಲಿಲೀಟರ್ ಅನ್ನುವುದು ಒಂದು ಮೆಟ್ರಿಕ್ ಘಟಕ. ಇದನ್ನು ಸಣ್ಣ ದಾರಕಗಳ ಸಾಮರ್ಥ್ಯಗಳನ್ನು ಅಳೆಯುವುದಕ್ಕೆ ಉಪಯೋಗಿಸುತ್ತಾರೆ. ೧ಲೀಟರ್ = ೧೦೦೦ಮಿಲಿ. ಆದ್ದರಿಂದ ದೊಡ್ಡ ಕಂಟೈನರ್ ಗಳನ್ನು ಅಳೆಯುವ ಸಾಮರ್ಥ್ಯವಿದೆ. ಗರಿಷ್ಟ ಸಾಂಧ್ರತೆಯಲ್ಲಿ ೧ಲೀಟರ್ ನ ನೀರನ್ನು ಅಳತೆಮಾಡಿದಾಗ ಅದು ಸಮೂಹದಲ್ಲಿ ೧ಕೇಜಿಗೆ ಸಮವಾಗಿದೆ. ಸಾಮಾನ್ಯವಾಗಿ ೧೦೦೦ ಲೀಟರ್ ಅಷ್ಟು ನೀರು ೧೦೦೦ಕೇಜಿಗಳಷ್ಟು ಸಮೂಹ ಹೊಂದಿರುತ್ತದೆ .ಈ ಸಂಬಂಧ ಹೊಂದಿದೆ ಏಕೆಂದರೆ, ಮೂಲತಃ ಒಂದು ಗ್ರಾಮ = ಒಂದು ಮಿಲಿ ಅಷ್ಟು ನೀರು.

ಬೀಕರ್

ಉಲ್ಲೇಖಗಳು; ಕನ್ನಡ ನಿಘಂಟು;

        [].
         []
  1. https://en.wikipedia.org/wiki/File:CubeLitre.svg
  2. https://en.wikipedia.org/wiki/Litre