ಅಳಲೆ ಕಾಯಿ

ಬದಲಾಯಿಸಿ

ವರ್ಣನೆ

ಬದಲಾಯಿಸಿ

ಎಲ್ಲಾ ಕಡೆಗಳಲ್ಲಿ ಸಾಮಾನ್ಯವಾಗಿ ಬೆಳೆಯುವ ಮಧ್ಯಮ ಗಾತ್ರದ ಮರ ಇದಾಗಿದೆ. ಮುಪ್ಪನ್ನು ಗೆಲ್ಲುವ, ಯೌವ್ವನವನ್ನು ಕಾಪಾಡುವ, ಅನೇಕ ವ್ಯಾಧಿಗಳನ್ನು ನಿವಾರಿಸುವ, ತ್ರಿದೋಷಗಳನ್ನು ಪರಿಹರಿಸುವ ಹಾಗೂ ಹೃದಯಕ್ಕೆ ಶಕ್ತಿ ನೀಡುವ ಬಹು ಶ್ರೇಷ್ಟ ಗುಣಗಳಿಂದ ಕೂಡಿದೆ. ದೊಡ್ಡ ಮರವಾಗಿ ಬೆಳೆಯುವ ವೃಕ್ಷವಾಗಿದೆ. ಬಯಲು ಸೀಮೆಯಲ್ಲಿ ಇದು ಛತ್ರಿಯಾಕಾರದ ಮರವಾಗಿ ಬೆಳೆಯುತ್ತದೆ. ಸಾಮಾನ್ಯವಾಗಿ ಇದು 10ರಿಂದ 15 ಮೀಟರ್ ಎತ್ತರಕ್ಕೆ ಬೆಳೆಯುತ್ತದೆ. ಎಲೆಗಳ ಕವಲುಗಳಲ್ಲಿ ಮೃದುವಾದ, ಹೊಳೆಯುವ, ಮಾಸುಬಣ್ಣದ ರೋಮಗಳಿರುತ್ತದೆ. ಹೂವುಗಳಲ್ಲಿ ಒಂದು ರೀತಿಯ ಸಹಿಸಲಾಗದ ವಾಸನೆ ಇರುವುದು ಮತ್ತು ಮಾಸು ಬಿಳುಪು ಅಥವಾ ತಿಳಿ ಹಳದಿ ವರ್ಣವಿರುವುದು. ಕಾಯಿ ಎಳೆಯದಾಗಿದ್ದಾಗ ಹಸಿರಾಗಿದ್ದು ಒಣಗಿದ ಮೇಲೆ ಗಟ್ಟಿಯಾಗಿ ಹಳದಿ ಬಣ್ಣವನ್ನು ಹೊಂದುವುದು. ಕಾಯಿಯ ಮೇಲೆ ಉದ್ದುದ್ದ ಮತ್ತು ಆಳವಾದ ತಗ್ಗುಗಳಿರುವುದು. ಕಾಯಿಯ ಒಳಗಡೆ ಗಟ್ಟಿಯಾದ ಹಾಗೂ ಉದ್ದವಾದ ಬೀಜವಿರುವುದು. ಇದು ಚಿಕಿತ್ಸೆಗೂ ಕೂಡಾ ಸಹಕಾರಿಯಾಗಿದೆ.[]

ಸರಳ ಚಿಕಿತ್ಸೆಗಳು

ಬದಲಾಯಿಸಿ

ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು

ಬದಲಾಯಿಸಿ

ಚೆನ್ನಾಗಿ ಬಲಿತಿರುವ ಹಾಗೂ ದಪ್ಪವಾದ ಅಳಲೆ ಕಾಯನ್ನು ಶುದ್ಧವಾದ ನೀರಿನಲ್ಲಿ ತೇದು ಗಂಧವನ್ನು ಕಣ್ಣಿಗೆ ಹಚ್ಚುವುದರಿಂದ ಕಣ್ಣು ಕೆಂಪಾಗುವುದು ಹಾಗೂ ಕಣ್ಣಿನಲ್ಲಿ ನೀರು ಸುರಿಯುವುದು ಕಡಿಮೆಯಾಗುತ್ತದೆ.

ಮೂಲವ್ಯಾಧಿ

ಬದಲಾಯಿಸಿ

ಚಿತ್ರಮೂಲ, ಶುಂಠಿ, ಅಳಲೆಕಾಯಿ ಸಿಪ್ಪೆ ಈ ಮೂರು ವಸ್ತುಗಳನ್ನು ಕ್ರಮವಾಗಿ 10-10 ಗ್ರಾಂ ತೆಗೆದುಕೊಂಡು ನುಣ್ಣಗೆ ಕುಟ್ಟಿ ಪುಡಿಮಾಡಿ ಶೇಖರಿಸುವುದು. 10 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯ ಮಾಡಿ 2 ಗ್ರಾಂ ಯವಕ್ಷಾರವನ್ನು ಸೇರಿಸಿ ಸೇವಿಸುವುದರಿಂದಾಗಿ ಮೂಲದ ಮೊಳೆಗಳು ನಿಧಾನವಾಗಿ ಕರಗಿ ಹೋಗುವುದು ಮತ್ತು ರಕ್ತಸ್ರಾವ, ಉರಿ ಶಮನವಾಗುವುದು.

ತಲೆನೋವು

ಬದಲಾಯಿಸಿ

ತ್ರಿಫಲ ಚೂರ್ಣ, ಶುಂಠಿ, ದನಿಯ ಮತ್ತು ವಾಯು ವಿಳಂಗಗಳ ಸಮತೂಕದ ಚೂರ್ಣ ಮಾಡುವುದು. ಇದರಲ್ಲಿ 20 ಗ್ರಾಂ ಚೂರ್ಣವನ್ನು ನೀರಿಗೆ ಹಾಕಿ ಕಷಾಯವನ್ನು ಅರ್ಧಭಾಗ ಕೆಳಗಿಳಿಸಿ ತಣ್ಣಗಾದ ಮೇಲೆ ದಿವಸಕ್ಕೆ ಎರಡುಬಾರಿ ಸೇವಿಸುವುದು.

ಕಣ್ಣುಗಳ ಮುಂದೆ ಕತ್ತಲೆ ಹಾಯುವುದು

ಬದಲಾಯಿಸಿ

10 ಗ್ರಾಂ ತ್ರಿಫಲ ಚೂರ್ಣವನ್ನು ( ಅಳಲೆಕಾಯಿ ಸಿಪ್ಪೆ, ನೆಲ್ಲಿ ಚೆಟ್ಟು, ಮತ್ತು ತಾರೆಕಾಯಿ) ಸ್ವಲ್ಪ ಹಸುವಿನ ತುಪ್ಪ ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ಬೆಳಗ್ಗೆ ಸೇವಿಸುವುದರಿಂದ ಕಣ್ಣುಗಳ ಮುಂದೆ ಕತ್ತಲೆ ಹಾಯುವುದು ಕಡಿಮೆಯಾಗುತ್ತದೆ.

ದಾಹ ಜ್ವರ, ಶೋಭೆ

ಬದಲಾಯಿಸಿ

ಬೇವಿನ ತೊಗಟೆಯ ಒಳನಾರು, ಮರದರಸಿನ ಮತ್ತು ತ್ರಫಲೆ ಚೂರ್ಣವನ್ನು ಚೆನ್ನಾಗಿ ಕಲ್ಪತ್ತಿನಲ್ಲಿ ಅರೆದು ನೀರಿಗೆ ಹಾಕಿ ಚತುರಾಂಷ ಕಷಾಯ ಮಾಡುವುದು. ಈ ಕಷಾಯಕ್ಕೆ ಶುದ್ಧಿ ಮಾಡಿದ ಮಹಿಷಾಸುರ ಗುಗ್ಗಲು ಮತ್ತು ಒಂದು ಬೆಳ್ಳಿಯ ವರಕು ಸೇರಿಸಿ ಸೇವಿಸುವುದು.

ಪಿತ್ತದ ಕೆಮ್ಮು

ಬದಲಾಯಿಸಿ

ಜ್ಯೇಷ್ಟಮಧು, ಅಳಲೆಕಾಯಿ, ನೆಲ್ಲಿಚೆಟ್ಟು ಸಮಭಾಗ ಚೂರ್ಣಿಸಿ ಹೊತ್ತಿಗೆ ಅರ್ಧ ಟೀ ಚಮಚ ಚೂರ್ಣಕ್ಕೆ ಅರ್ಧ ಟೀ ಚಮಚ ಸಕ್ಕರೆ ಪುಡಿ ಸೇರಿಸಿ ಹಾಲಿನಲ್ಲಿ ಹಾಕಿ ಸೇವಿಸುವುದರಿಂದ ಪಿತ್ತದ ಕೆಮ್ಮು ಗುಣವಾಗುತ್ತದೆ.

ಸ್ತ್ರೀಯರ ಶ್ವೇತ ಪದರದಲ್ಲಿ

ಬದಲಾಯಿಸಿ

10 ಗ್ರಾಂ ಅಳಲೆಕಾಯಿಯ ಒಳಗಡೆಯ ಬೀಜಗಳನ್ನು ನುಣ್ಣಗೆ ಚೂರ್ಣಿಸಿ ಸಮಭಾಗದ ಕಲ್ಲು ಸಕ್ಕರೆ ಪುಡಿ ಮತ್ತು ಜೇನು ಸೇರಿಸಿ ದಿನಕ್ಕೆ ಎರಡು ವೇಳೆ ಸೇವಿಸುವುದರಿಂದ ಕಾಯಿಲೆ ಗುಣಮುಖವಾಗುತ್ತದೆ.

ಕಿರುನಾಲಿಗೆ ಬೀಳುವುದು

ಬದಲಾಯಿಸಿ

ಅಳಲೆಕಾಯಿ ಸಿಪ್ಪೆಯ ವಸ್ತ್ರಗಾಳಿತ ಚೂರ್ಣಕ್ಕೆ ಸ್ವಲ್ಪ ಜೇನು ಸೇರಿಸಿ ಕಿರುನಾಲಿಗೆಗೆ ಸ್ಪರ್ಶಿಸುವುದರಿಂದ ಈ ಕಾಯಲೆ ಗುಣಮುಖವಾಗುತ್ತದೆ.

ಗುಲ್ಮ ಮತ್ತು ಹೊಟ್ಟೆಯೊಳಗಡೆ ಗಂಟುಗಳು

ಬದಲಾಯಿಸಿ

ಅಳಲೆಕಾಯಿ ಸಿಪ್ಪೆಯ ನಯವಾದ ಚೂರ್ಣವನ್ನು 10 ಗ್ರಾಂ ಒಂದು ಬಟ್ಟಲು ಕಬ್ಬಿನ ರಸದಲ್ಲಿ ಕದಡಿ ದಿವಸಕ್ಕೆರಡು ವೇಳೆ ಸೇವಿಸುವುದು.

ಮೂತ್ರ ತಡೆ ಮತ್ತು ಮೂತ್ರದಲ್ಲಿ ಕಲ್ಲು

ಬದಲಾಯಿಸಿ

ಕಕ್ಕೆಯ ತಿರುಳು, ಕುರಿಟಿಗನ ಬೇರು, ಅಳಲೆಕಾಯಿ ಸಿಪ್ಪೆ, ಪಾಷಾಣ ಬೇಧಿ, ನೆಗ್ಗಿಲನ್ನು ಸಮ ಪ್ರಮಾಣದಲ್ಲಿ ತೆಗೆದುಕೊಂಡು ಚೆನ್ನಾಗಿ ಜಜ್ಜಿ ಎಂಟು ಬಟ್ಟಲು ನೀರಿಗೆ ಹಾಕಿ ಕಾಯಿಸಿ ಒಂದು ಬಟ್ಟಲು ಕಷಾಯ ಮಾಡಿಕೊಳ್ಳುವುದು ಹಾಗೂ ದಿವಸಕ್ಕೆ ಎರಡು ಟೀ ಚಮಚ ಸೇವಿಸುವುದು.

ಪ್ರಯಾಣದಲ್ಲಿ ಪರ ಊರುಗಳ ನೀರು ಕುಡಿಯುವುದರಿಂದ ಆಗುವ ದೋಷಗಳಿಗೆ

ಬದಲಾಯಿಸಿ

ಅಳಲೆಕಾಯಿ ಸಿಪ್ಪೆ, ಶುಂಠಿ, ಮತ್ತು ಜೀರಿಗೆಯ ಸಮತೂಕ ಅರೆದು ವಸ್ತ್ರಗಾಳಿತ ಪುಡಿ ಮಾಡುವುದು. ಪ್ರಯಾಣದಲ್ಲಿ ಕಾಲು ಚಮಚ ಪುಡಿಯನ್ನು ಜೇನಿನೊಂದಿಗೆ ಸೇರಿಸಿ ನೆಕ್ಕುವುದು.

ಉಲ್ಲೇಖ

ಬದಲಾಯಿಸಿ
  1. ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್ ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು