ಸದಸ್ಯ:B.r.vaidehileena/sandbox
ಉದಯ ಮಲ್ಲಿಗೆ
ಸುವಾಸಿತ ಮಂಗಳೂರು ಮಲ್ಲಿಗೆ , ಉಡುಪಿ ಮಲ್ಲಿಗೆ ಎಲ್ಲರಿಗೂ ಗೋತ್ತು. ಆದರೆ ಅಷ್ಟೇ ಅಥವಾ ಅದಕ್ಕಿಂತಲೂ ಹೆಚ್ಚು ಪರಿಮಳ ಹೋದಿದ ಮತ್ತೋದು ಮಲ್ಲಿಗೆ ಉದಯ ಮಲ್ಲಿಗೆ. ಸಾಮನ್ಯವಾಗಿ ಎಲ್ಲಾ ಮಲ್ಲಿಗೆಯು ರಾತ್ರಿ ಅರಳಿದರೆ ಇಂದು ಸೂಯ ರವಿ ಉದಯಿಸದ ನಂತರ ಅರಳುತ್ತದೆ. ಮೋಗು ಕತ್ತು ಇಟ್ಡರೆ ಅರಳುದಲ್ಲ ನಂತರ ಅರಳುತ್ತದೆ. ಮೊಗ್ಗು ಕಿತ್ತು ಇಟ್ಟರೆ ಅರಳುವುದಿಲ್ಲ. ಇದು ಇದರ ವಿಶೇಷತೆ. ಮಲ್ಲಿಗೆಯಲ್ಲಿ ಹಲವು ತಳಿಗಳಿವೆ. ಇವುಗಳಲ್ಲಿ ಉದಯ ಮಲ್ಲಿಗೆಯೂ ಒಂದು. ಇದು ಪುರಾತನ ತಳಿ. ಅಚ್ಚ ಬಿಳಿ ಬಣ್ಣ, ವಿಶಿಷ್ಟ ಗಮಲು ಹೊಂದಿದೆ. ಕರಾವಳಿ ಹಾಗೂ ಮಲೆನಾಡಿನಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಅರಳಿದ ಹೂ ಸಂಜೆವರೆಗೂ ಗಿಡದಲ್ಲಿ ನಳನಳಿಸುತ್ತಿರುತ್ತದೆ. ಪೂತಿ ಅರಳಿದ ಹೂವಿನಲ್ಲಿ ಎರಡು ವ್ರತ್ತಗಳಿರುತ್ತದೆ. ಹೊರವ್ರತ್ತದಲ್ಲಿ ದೊಡ್ಡಗಾತ್ರದ ದಳಗಳು. ಒಳವ್ರತ್ತದಲ್ಲಿ ಮುಚ್ಚಿಕೊಂಡಂತೆ ಕಾಣುವ ದಳಗಳು. ಮಧ್ಯಭಾಗದಲ್ಲಿ ಪುಟ್ಟ ದಳಗಳಿಂದ ಅವರಿಸಿದ ಹಳದಿ ಬಣ್ಣದ ಪುಟ್ಟ ಕೇಸರಗಳು. ಒಟ್ಟಿನಲ್ಲಿ ಮಾಲೆ ಮಾಡಿ ಮುಡಿಯಲು ಹೇಳಿ ಮಾಡಿಸಿದ ಹೂ. ಇಷ್ಟು ಸ್ಂದಯವಿದ್ದರೂ ಇದು ಶಾಪಗ್ರಸ್ತ ಹೂ. ಏಕೆಂದರೆ ಇದನ್ನು ದೊಡ್ಡ ಪ್ರಮಾಣದಲ್ಲಿ ಬೆಳೆಸುವವರಿಲ್ಲ. ಮಾರುಕಟ್ಟೆಯಲ್ಲಿ ಕಂಡು ಬರುವುದಿಲ್ಲ. ಉದಯ ಮಲ್ಲಿಗೆ ವಷವಿಡೀ ಹೂ ಬಿಡುವುದಿಲ್ಲ. ಫೆಬ್ರವರಿ ತಿಂಗಳು ಬಂದಾಗ ಗಿಡದ ಕೊಂಬೆ ಕೊಂಬೆಗಳು ಚಿಗುರಿ ಮೊಗ್ಗುಗಳನ್ನು ಬಿಡುತ್ತವೆ. ಮಾಚ‍್-ಎಪ್ರಿಲ್ ತಿಂಗಳು ಹೂಗಳ ಸುಗ್ಗಿ. ಗಿಡವನ್ನು ಮರಕ್ಕೆ ಹಬ್ಬಿಸಿದರೆ ಉದ್ದ ಬಳ್ಳಿಯಾಗಿ ಬೆಳೆದು ಇಡೀ ಮರವನ್ನು ಆವರಿಸುತ್ತದೆ. ಚಪ್ಪರ ಹಾಕಿಯೂ ಬೆಳೆಸಬಹುದು. ಗೆಲ್ಲು ನೆಟ್ಟು ಸಸ್ಯಾಭಿವ್ರದ್ಧಿ ಮಾಡಬಹುದು. ಉಳಿದ ಮಲ್ಲಿಗೆಯಂತೆ ಇದಕ್ಕೆ ನೀರು, ಗೊಬ್ಬರ ಯಥೇಚ್ಚ ಬೇಕಿಲ್ಲ. ಲಭ್ಯವಿರುವ ಮಣ್ಣಿನ ಸತ್ವವನ್ನೇ ಹೀರಿ ಇದು ಬೆಳೆಯುತ್ತದೆ.ರೋಗ, ಕೀಟ ಭಾದೆಯಿಂದಲೂ ಮುಕ್ತ. ಒಂದು ಗಿಡ ಬಹುಕಾಲ ಬದುಕಿ ಹೂಗಳನ್ನು ಬಿಡುತ್ತದೆ.