ಸದಸ್ಯ:Asmita1996/sandbox
ಬಿ.ಸಿ.ಎ (ಬ್ಯಾಚುಲರ್ ಆಪ್ ಕಂಪ್ಯೂಟರ್ ಎಪ್ಲಿಕೇಶನ್) : ಬಿ.ಸಿ.ಎ ಕಂಪ್ಯೂಟರ್ ಕ್ಷೇತ್ರದಲ್ಲಿ ಹೊಸ ಪದವಿ ಕೋರ್ಸ ಆಗಿದೆ. ಇದರ ಅವಧಿಯು ಮೂರು ವಷ೯ಗಳು. ಈ ಕೋರ್ಸ ಪೂರ್ಣಗೊಂಡ ನಂತರ ವಿದ್ಯಾರ್ಥಿಗಳು ಸ್ನಾತಕೋತ್ತರ ಪದವಿಗೆ ಅಥವಾ ಸ್ವಂತ ಉದ್ಯೋಗಾವಕಾಶಗಳನ್ನಯ ಪ್ರಯತ್ನಿಸಬಹುದು. ಬಿ.ಸಿ.ಎ ಪದವಿಧರರು ಸರಕಾರಿ ಅಥವಾ ಖಾಸಗೀ ವಲಯದಲ್ಲಿ ತಮ್ಮ ವ್ರತ್ತಿ ಪ್ರಾರಂಭಿಸಲು ಸಾಕಷ್ಟು ಅವಕಾಶಗಳಿವೆ. ಈ ಪದವಿಯು ವಿದ್ಯಾರ್ಥಿಗಳಿಗೆ ಕಂಪ್ಯೂಟರ್ ತಂತ್ರಜ್ಜಾನ ವಿಷಯದಲ್ಲಿ ಅತ್ಯುತ್ತಮ ಜ್ಜಾನವನ್ನು ನೀಡುತ್ತದೆ. ಆದುದರಿಂದ ಅವರು ಮಾಹಿತಿ ತಂತ್ರಜ್ಜಾನದಲ್ಲಿ ತಮ್ಮ ಸವಾಲಿನ ವ್ರತ್ತಿಯನ್ನು ಪ್ರಾರಂಭಿಸಬಹುದು. ಕೇವಲ ವಿಜ್ಜಾನ ಕಲಿತ ವಿದ್ಯಾರ್ಥಿಗಳು ಮಾತ್ರ ಬಿಸಿಎ ಮಾಡಬಹುದು ಎಂಬ ವಿಷಯ ಸತ್ಯಕ್ಕೆ ದೂರವಿರುತ್ತದೆ. ೧೨ನೇ ತರಗತಿ ಉತ್ತೀರ್ಣರಾದ ವಾಣಿಜ್ಯ ವಿಷಯದ ವಿದ್ಯಾರ್ಥಿಗಳು ಸಹ ಈ ಪದವಿ ಕೋರ್ಸ ಮಾಡಬಹುದು. ಆದರೆ ಸ್ವಲ್ಪ ಗಣಿತ ವಿಷಯದ ಜ್ಜಾನವಿರಬೇಕು. ಭಾರತವು ಮಾಹಿತಿ ತಂತ್ರಜ್ಜಾನದಲ್ಲಿ ಮುಂದುವರೆದ ರಾಷ್ಡ್ರವಾಗಿದ್ದು, ಬಿ.ಸಿ.ಎ ಪದವಿಧರರಿಗೆ ಇಲ್ಲಿ ವಿಫುಲ ಉದ್ಯೋಗಾವಕಾಶಗಳಿರುತ್ತವೆ. ಮಾಹಿತಿ ತಂತ್ರಜ್ಜಾನದ ವಲಯಗಳಾದ ವಿಪ್ರೋ, ಇನ್ಟೆಕ್, ಸತ್ಯಂ, ಟಾಟಾ ಕನ್ಸಲ್ಟನ್ಸಿ, ಹಾಗೂ ವಿದೇಶ ಕಂಪನಿಗಳಾದ ವೊಡಾಫೋನ್, ಎಸ್ಸಾರ್ ಮುಮತಾದ ಕಂಪನಿಗಳು ಪ್ರತಿವರ್ಷ ಬಿ.ಸಿ.ಎ ಪದವಿಧರರನ್ನು ನೇಮಿಸಿಕೊಳ್ಳುತ್ತದೆ. ಬಿ.ಸಿ.ಎ ಪದವಿಯ ಜ್ಜಾನದಿಂದ ನಾವು ಸಹ ನಮ್ಮ ಸ್ವಂತ ಮಾಹಿತಿ ತಂತ್ರಜ್ಜಾನದ ವ್ರತ್ತಿಯನ್ನು ಪ್ರಾರಂಭಿಸಬಹುದು.