ಸದಸ್ಯ:Ashwini krishnegowda/ನನ್ನ ಪ್ರಯೋಗಪುಟ

ಕೆ.ಜೆ.ಕುಂದಣಗಾರ ಬದಲಾಯಿಸಿ

ಬಾಲ್ಯ ಬದಲಾಯಿಸಿ

ಗಿರಿಮಲ್ಲಪ್ಪ (ಕಾಳಪ್ಪ ಗುರುಪ್ಪ) ಕುಂದಣಗಾರರು ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕು ಕೌಜಲಗಿ ಹಳ್ಳಿಯಲ್ಲಿ ಹುಟ್ಟಿದವರು ( 14-8-1895-22-8-1965) ಬಡತನದ ಕವಚತೊಟ್ಟು,ಕಷ್ಟಗಳ ಕುಂಡಲ ಧರಸಿ,ವಿಶ್ವಕರ್ಮ (ಪತ್ತಾರ,ಬಡಿಗೇರ,ಅಕ್ಕಸಾಲಿ,ಪಂಚಾಳ,ಕುಂದಣಗಾರ,ಕಂಬಾರ,ಸ್ವರ್ಣಕಾರ,ಅಚಾರ್ರು) ಕುಟುಂಬದಲ್ಲಿ ದಾರುಣತರ ಬಾಲ್ಯ ಕಳೆದರು. ಪತ್ತಾರ ಮನೆಗಳು ಉಪ ಜೀವನ ಸಾಗಿಸುವ ರೀತಿಯನ್ನು ದೇವರೇ ಬಲ್ಲ. ಕುಂದಣಾಗರರು ಹುಟ್ಟಿದ ಕೌಜಲಗಿಯಲ್ಲಾಗಲಿ, ನೆರೆಹೊರೆಯ ಹಳ್ಳಿಗಳಲ್ಲಾಗಲಿ, ಹಗಲಲ್ಲಿ ದೀಪ ಮಶಾಲು ಹಚ್ಚಿ ಹುಡುಕಿದರೂ ಬಂಗಾರ ಕಾಣುವುದು ಅಪರೂಪ. ಊರಲ್ಲಿ ಎಂದೋ ಒಮ್ಮೆ ಯಾರೋ ಒಬ್ಬರು ಒಂದು ಉಂಗುರವನ್ನೊ ಬೆಂಡೊಲೆಯನ್ನೊ ಮಾಡಿಸುವುದಿದ್ದರೆ, ಮೊದಲು ಕಾಳು-ಕಡ್ಡಿ ಕೊಟ್ಟು ಪತ್ತಾರನ ಹೊಟ್ಟೆಗೆ ಹಿಟ್ಟು ಪೊರೈಸಬೇಕು, ಆ ಮುಂದೆ ತಮ್ಮ ಆಭರಣ ಕಾಣಬೇಕು. ಕುಂದಣಾಗರರ ಮನೆತನ ಇಂತಹ ಕಡುಬಡತನದ ಒಂದು ಕುಟುಂಬ. ಬಡತನ ಆ ಸಂಸಾರಕ್ಕೆ ಹಾಸಲಿತ್ತು, ಹೊದೆಯಲಿತ್ತು. ಬಂದ ನೆಂಟರಿಷ್ಟರಿಗೂ ಹಂಚಲಿತ್ತು. ಮೂರು ವರುಷ ತುಂಬುವುದರೊಳಗೆ ತಾಯಿ ತಂದೆಯನ್ನ ಕಳೆದುಕೊಂಡ ತರುವಲಿ ಕಲ್ಲಪ್ಪನ ಕೊರಳಿಗೆ ದುಃಖಗಳ ಹಾರ,ಹೆಗಲಿಗೆ ಹೊಣೆಗಳ ಹೊರೆ ಎಲ್ಲಿ ಹೋದರೂ ನೆರಳಾಗಿ ಹಿಂಬಾಲಿಸಿತು.ಬೆರಣಿಯನ್ನು ಆಯುವುದರಲ್ಲಿ ಆಯುಷ್ಯ ಕಳೆಯಿತು,ಅಟ್ಟುಂಬ ದಿನಗಳು ಬರಲೇ ಇಲ್ಲ.ನೆರಳಾಟವೇ ನಿತ್ಯ ಉಸಿರಾಗಿ ಹಣ್ಣಾದರು,ಅನರೋಗ್ಯದ ಚಳಿಗಾಳಿ ಮಳೆಗೆ ಮುದುಡಿ ಮುರುಟಿದರು.

ಪ್ರಾಥಮಿಕ ಶಿಕ್ಷಣ ಬದಲಾಯಿಸಿ

ಕೌಜಲಗಿಲ್ಲಿ ಪ್ರಾಥಮಿಕ ಶಿಕ್ಷಣದ ಓದು ಮುಗಿಯಿತು. ಅಲ್ಲಿಂದ ಬೆಳಗಾವಿಗೆ ಬಂದು ಸರಕಾರಿ ಸರ್ದಾರ ಪ್ರೌಢಶಾಲೆಯಲ್ಲಿ ಕಲಿತರು. ಕಲ್ಲಪ್ಪನಿಗೆ ಕೂಲಿನಾಲಿ ಮಾಡಿಯಾದರೂ ಕಲಿಯುವ ಉಮೇದು; ಓದುತ್ತ ಸಂಪಾದನೆ, ಸಂಪಾದಿಸುತ್ತ ಓದು. ಕಲ್ಲಪ್ಪ ಕಲಿತಪ್ಪ ಆಗಲು ಒಂದು ದಾರಿ ತೆರೆಯಿತು, ಕಲ್ಲಪ್ಪನ ಅಕ್ಷರ ದುಂಡು, ಬಾಯಿ ಲೆಕ್ಕದಲ್ಲಿ ಚುರುಕು. ಅದನ್ನು ನೋಡಿ ದೊಡ್ಡ ಸರಾಫ ಶಂಕರಪ್ಪ ಮೇಲುಗಿರಿಯವರು ತಮ್ಮ ದುಖಾನಿನಲ್ಲಿ ಲೆಕ್ಕಪತ್ರಗಳನ್ನು ಸರಿಯಾಗಿಡುವ ಉಸ್ತುವಾರಿಕೆ ಕೆಲಸ ಕೊಟ್ಟರು. ತಿಂಗಳಿಗೆ ನಾಲ್ಕು ರೂಪಾಯಿ ಪಗಾರ! ಕಲ್ಲಪ್ಪನ ಕಲಿಕೆಗೆ ಅನುಕೂಲವಾಯಿತು. ಧಾರವಾಡಕ್ಕೆ ಬಂದು ಅಂದಿನ ವಿಕ್ಟೋರಿಯ ಹೈಸ್ಕೂಲ್ [ಇಂದಿನ ವಿದ್ಯಾರಣ್ಯ ಹೈಸ್ಕೂಲ್] ಮೂಲಕ ಮೆಟ್ರಿಕ್ಯುಲೇಷನ್ ಪರಿಕ್ಷೇಗೆ ಕುಳಿತು ಉತ್ತಮ ಶ್ರೇಣಿ ಪಡೆದರು. ಮುಂದುವರೆದ ಓದಿಗೆ ಮತ್ತೆ ಗಂಡಾಂತರ ಎದುರಾಯಿತು. ಈಗಿರುವ ಇಡೀ ಧಾರವಾಡ,ಬೆಳಗಾವಿ,ಬಿಜಾಪುರ,ಗುಲ್ಬರ್ಗ,ಬೀದರ ಜಿಲ್ಲೆಗಳ ವ್ಯಾಪಕ ಪ್ರದೇಶದಲ್ಲಿ ಅಂದು ಎಲ್ಲಿಯೂ ಉಚ್ಚ ಶಿಕ್ಷಣ ಸಂಸ್ಥೆಗಳು ಇರಲಿಲ್ಲ.ಮುಂಬಯಿ –ಕರ್ನಾಟಕವೆನಿಸಿದ ಈ ಭಾಗದವರು ಇಂಟರ್ ಮಿಡಿಯೆಟ್ ( ಈಗಿನ ಪ್ರಿ ಯುನಿವರ್ಸಿಟಿ) ಮತ್ತು ಅದಕ್ಕೂ ಹೆಚ್ಚಿನ ಕಲಿಕೆಗೆ ಪುಣಿಗೂ ಮುಂಬಯಿಗೂ ಹೋಗಬೇಕಿತ್ತು. ಐನೂರು ಕಿ.ಮಿ. ದೂರದ ಪುಣೆಯ ಫರ್ಗುಸನ್ ಕಾಲೇಜು ಸೇರಿದ ಕುಂದಣಗಾರರು 1913 ರಲ್ಲಿ ಇಂಟರ್ ಮಿಡಯೆಟ್ ಮಿಡಿಯಟ್ ಪರೀಕ್ಷೆ ಮುಗಿಸಿದರು. ಹೆಚ್ಚಿನ ಶಿಕ್ಷಣಕ್ಕೆ ಅಲ್ಪ ವಿರಾಮ ಬಿತ್ತು, ಅದಕ್ಕೆ ಬೇಕಾದ ಕಾಸು ಕೂಡಿಸಬೇಕಾಗಿತ್ತು.ಮೂರು ವರ್ಷ ಮೀನ ಮೇಷ ಎಣಿಸುತ್ತ ಕಾಲಹರಣ ಮಡಿದ ಮೇಲೆ ಅಹನ್ಯಹನಿಗೊಂದು ನಿಲುಗಡೆ ದಡ ಸಿಕ್ಕಿತು. 1916 ರಲ್ಲಿ ಕೊಲ್ಲಾಪುರದ ರಾಜರಾಮ ಹೈಸ್ಕೂಲಿನಲ್ಲಿ ಶಿಕ್ಷಕರಾದರು ಅಲ್ಲಿಂದ 1918 ರಲ್ಲಿ ಗೋಕಾಕದ ಮುನಿಸಿಪಲ್ ಪ್ರೌಡಶಾಲೆಯಲ್ಲಿ ಅಧ್ಯಾಪಕರಾದರು. ಹೀಗೆ ದುಡಿಯುತ್ತಿರುವಾಗಲೇ ಬಿ.ಎ ಪರೀಕ್ಷೆಗೆ ಟರ್ಮು ತುಂಬುತ್ತ, ಖಾಸಗಿಯಾಗಿ ಕಲಿಯುತ್ತ 1919ರಲ್ಲಿ ಪದವೀಧರರಾದರು.

ಉನ್ನಯ ಶಿಕ್ಷಣ ಬದಲಾಯಿಸಿ

ಗೋಕಾಕದಲ್ಲಿ ವಾಸ್ತವ್ಯ ಮಾಡಿದ್ದರೂ ಮೇಲಿಂದ ಮೇಲೆ ಧಾರವಾಡ ಮತ್ತು ಬೆಳಗಾವಿಗೆ ದಾರಿ ಸವೆಸುತ್ತ ಪ್ರಯತ್ನಿಸಿದರು.ಬಿಡದ ಛಲ, ಉಡದ ಪಟ್ಟು,ಕಡೆಗೂ 1925 ರಲ್ಲಿ ಕುಂದಣಗಾರರು, ತಮ್ಮ ಮೂವತ್ತನೆಯ ವಯಸ್ಸಿನಲ್ಲಿ ಮುಂಬಯಿ ವಿಶ್ವವಿದ್ಯಾಲಯದಿಂದ ಕನ್ನಡ ಎಂಎ.ಸ್ನಾತಕೋತ್ತರ ಪದವೀಧರರಾದರು.

ಅಧ್ಯಾಪಕ ವೃತ್ತಿ ಬದಲಾಯಿಸಿ

ಅದೇ ವರ್ಷ ಧಾರವಾಡದ ಕರ್ನಾಟಕ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕರಾಗಿ ನೇಮಕಗೊಂಡರು. ಆಗ ನಡೆದ ಕೆಲವು ಸಂಚುಗಳಿಂದ ಕುಂದಣಗಾರರಿಗೆ ಧಾರವಾಡ ಕಾಲೇಜಿನ ಕೆಲಸ ತಪ್ಪಿ, ಅದನ್ನು ಅವರಿಗಿಂತ ಕಡಿಮೆ ಅರ್ಹತೆಯವರಿಗೆ ಕೊಡಲಾಯಿತು. ಧಾರವಾಡಕ್ಕೆ ತಪ್ಪಿದ ಭಾಗ್ಯ ಕೊಲ್ಲಾಪುರಕ್ಕೆ ದಕ್ಕಿತು. ಕೊಲ್ಲಾಪುರದ ಸಂಸ್ಥಾನದ ದಿವಾಣರಾದ ರಾವ್ ಬಹೂದ್ದರ ಅಣ್ಣಾಸಾಹೇ ಬಾಬಾಜಿ ಲಠ್ಠೆ [1878-1950] ಅವರು ಕೊಲ್ಲಾಪುರದ ರಾಜಾರಾಮ ಹೈಸ್ಕೂಲಿನಲ್ಲಿ ಉಪಾಧ್ಯಾಯರಾಗಿ ನೇರವಾದ ನೇಮಕಾತಿ ಆಜ್ಞೆ ಕೊಡಿಸಿ ಜ್ಞಾನವೃಕ್ಷವನ್ನು ನೀರೆರೆದು ನಿಲ್ಲಿಸಿದರು. ರಾಜಾರಾಮ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಪಕ ಹುದ್ದೆಯನ್ನು ಸೃಷ್ಠಿಸಿ ಕುಂದಣಗಾರರನ್ನು ನೇಮಿಸದರು. ಅಲ್ಲಿಂದ 1948ರ ವರೆಗೆ ಕೊಲ್ಲಾಪುರ ಅವರ ಕರ್ಮಭೂಮಿಯಾಯಿತಲ್ಲದೆ ಅದನ್ನು ಕನ್ನಡದ ವ್ಯವಸಾಯ ಮಾಡಿದರು. ಕನ್ನಡ ಮರಾಠಿಗರನ್ನು ಕೂಡಿಸುವ ಹೊನ್ನಕೊಂಡಿಯಾಗಿ,ಕರ್ನಾಟಕದ ಶ್ರೇಷ್ಠ ರಾಯಭಾರಿಯಾಗಿ ಅವರು ಮಿಂಚಿದರು. ಬ್ರಿಟಿಷರು ಭಾರತವನ್ನು ಆಳುತ್ತಿದ್ದ ಆದಿನಗಳಲ್ಲಿ ಶೈಕ್ಷಣಿಕ ವಲಯದ ಹಲವು ಜ್ಞಾನ ಶಾಖೆಗಳು ಪುನರ್ ಜೀವಿತವಾದವು. ಪಶ್ಚಿಮದ ಎರಕದಲ್ಲಿ,ಜರ್ಮನಿಯ ವಿದ್ವಾಂಸರ ಮಾದರಿಯಲ್ಲಿ ಪ್ರಾಚೀನ ಕನ್ನಡದ ಸಾಹಿತ್ಯದ ಅಧ್ಯಯನ ಮೊದಲಾಯಿತು.ಅಪ್ರಕಟಿತ ಹಳೆಗನ್ನಡ ಕಾವ್ಯಗಳನ್ನು,ಗ್ರಂಥ ಸಂಪಾದನೆಯ ಶಾಸ್ತ್ರ ನಿಯಮದ ಚೌಕಟ್ಟಿನಲ್ಲಿ ಸಂಪಾದಿಸಿ ಪೀಠಿಕೆ,ಪದಕೋಶ ,ಅನುಬಂಧ ಪರಿಕರ ಸಹಿತ ಪ್ರಕಟಿಸುವ ಪದ್ದತಿಯೊಂದು ಪ್ರಾರಂಭವಾಯಿತು. ರಾಜಮಾರ್ಗ ತೆರೆಯಿತು. ಈ ಕೆಲಸದಲ್ಲಿ ದೇಶೀಯ ಸೂರಿಗಳು ಹಿಂದೆ ಬೀಳಲಿಲ್ಲ. ಮೈಸೂರು,ಮದರಾಸು,ಮುಂಬಯಿ ಕನ್ನಡ ಪ್ರದೇಶಗಳ ಹಿಡಿಮಂದಿ ಬಲ್ಲಿದರು ಪಾಂಡಿತ್ಯದ ಪರಿಶ್ರಮಕ್ಕೆ ತೊಡಗಿದರು. ಉತ್ತರ ಕರ್ನಾಟಕದ ಸಂಶೋಧಕ ಸೂರಿವರೇಣ್ಯರಲ್ಲಿ ಆ.ನೇ.ಉಪಾಧ್ಯೆ, ಶಿ.ಶಿ ಬಸವನಾಳ, ಫ.ಗು.ಹಳಕಟ್ಟಿ ಮತ್ತು ಕೆ.ಜಿ.ಕುಂದಣಗಾರ ಮೊದಲ ಮನ್ನಣೆ ಪಡೆದವರು. ಆಳವಾದ ವಿದ್ವತ್ತನ್ನು ಬಯಸುವ ಪಂಪನ ಆದಿಪುರಾಣ ,ಹಸ್ತಿಮಲ್ಲಿಪೇಣ ಆಚಾರ್ಯಕೃತ ಪೂರ್ವಪುರಾಣ ,ನೇಮಿಚಂದ್ರನ ಲೀಲಾವತಿ ಪ್ರಭಂದ ಮುಂತಾದ ಪ್ರಾಚೀನ ಕಾವ್ಯಗಳನ್ನು ಹೊರತಂದರು.ಪ್ರಾಚೀನ ಮಾತೃಕೆಗಳಿಂದ ಶುದ್ದಕವಿಪಾಠವನ್ನು ನಿರ್ಧರಿಸುವುದಕ್ಕೆ ಬೇಕಾದ ಬುದ್ದಿಯ ಬಲ,ಕಾವ್ಯಾನುಶೀಲನ ವಶದಿಂದ ಪ್ರಾಪ್ತವಾದ ಸಂಸ್ಕಾರ ಅವರಲ್ಲಿತ್ತು. ಸಂಶೋಧನ ಪ್ರವೃತ್ತಿಯನ್ನು ಗಂಭೀರವಾಗಿ ಮೈಗೂಡಿಸಿ ಕೊಂಡವರಿಗೆ ನಿವೃತ್ತಿ ಎಂಬುದಿಲ್ಲ. ಉಸಿರು ಇರುವವರೆಗೆ ಕಸುವು ಇರುವತನಕ ಹಗಲಿರುಳು ದುಡಿದವರು ಕೆ.ಜಿ.ಕುಂದಣಗಾರರು.

ಸಾಹಿತ್ಯ ಕೃಷಿ ಬದಲಾಯಿಸಿ

ಛಂದಸ್ಸು,ಶಾಸನಶಾಸ್ತ್ರ,ವಾಸ್ತು ಶಿಲ್ಪ, ನಿಂಘಟು,ಹಸ್ತಪ್ರತಿಶಾಸ್ತ್ರ,ಕವಿ-ಕಾವ್ಯ-ಕಾಲ ಕುರಿತ ಇತಿವೃತ್ತ ಜಿಜ್ಞಾಸೆ, ಸಂಸ್ಕøತ-ಕನ್ನಡ-ಪ್ರಾಕೃತ-ಪಾಳಿ ಭಾಷೆಗಳ ಹಿನ್ನಲೆಯಿಂದ ಶಬ್ದಾರ್ಥ ಚರ್ಚೆ ,ಜೈನ ಮತ್ತು ವೀರಶೈವ ಧರ್ಮಜ್ಞಾನ ಪ್ರಸರಣ ,ಜನಪದ ಅಧ್ಯಯನ,ಸಾಂಸ್ಕøತಕ ವಿವೇಚನೆ- ಹೀಗೆ ಅವರ ಅಧ್ಯಯನ ಹಲವು ಜ್ಞಾನ ಶಾಖೆಗಳಿಗೆ ದಾಂಗುಡಿಯಿಟ್ಟಿದೆ. ಈ ಎಲ್ಲಾ ಬಗೆಯ ಬರವಣಿಗೆಯಲ್ಲಿ ಪಾರದರ್ಶಕವಾಗುವುದು ಪ್ರಾಮಾಣಿಕ ಮತ್ತು ಸಂಪೂರ್ಣ ತೊಡಗುವಿಕೆ.ಪುರಾತತ್ವ ಶೋಧನ ವಿಧಾನದಲ್ಲಿನಾಸಕ್ತಿವಹಿಸಿ ಸಂಶೋಧನೆ ಕೈಗೊಂಡ ಕನ್ನಡ ವಿದ್ವಾಂಸರಲ್ಲಿ ಕೆ.ಜಿ.ಕುಂದಣಗಾರರು ಮೊತ್ತಮೊದಲನೆಯ ಪ್ರಾಕ್ತನ ಶಾಸ್ತ್ರಜ್ಞರು.ಕೊಲ್ಲಾಪುರದಲ್ಲಿ ಮಹಾಲಕ್ಷ್ಮಿ ದಿಬ್ಬದ ಪ್ರದೇಶದಲ್ಲಿ ಉತ್ಕನನ ಕೈಗೊಂಡರು. ಆ ಪುರಾತತ್ವ ಶೋಧದ ಸಾರವನ್ನು`ಮಹಾಲಕ್ಷ್ಮಿ ಟೆಂಪಲ್’ ಎಂಬ ಇಂಗ್ಲಿಷ್ ಗ್ರಂಥದಲ್ಲಿ ತಿಳಿಸಿದ್ದಾರೆ. ಪ್ರಾಕ್ತನ ಶಾಸ್ತ್ರದಂತೆ ಶಾಸನಶಾಸ್ತ್ರ, ಛಂದಸ್ ಶಾಸ್ತ್ರವೆಂಬ ಜ್ಞಾತಿ ಶಿಸ್ತುಗಳಲ್ಲಿಯೂ ಸಮದಂಡಿಯಾದ ಪ್ರಗಲ್ಬ ಪಾಂಡಿತ್ಯ. ಈ ಮೂರು ಪೂರಕ ಕ್ಷೇತ್ರಗಳಲ್ಲಿಯೂ ಕೆಸರ್ಗಲ್ಲು ಕಲಸಿಟ್ಟು ಗುದ್ದಲಿ ಪೂಜಿ ಮಾಡಿದ ಆದ್ಯರೆನಿಸಿದರು .ದೇವಾಲಯಗಳಿಗೆ ಶಾಸನಕಗಳ ಅನ್ವೇಷಕರಾಗಿ ಹೋಗುತ್ತಿದ್ದರು.ಕೊಲ್ಲಾಪುರದಲ್ಲಿ ಇದ್ದಾಗಲೂ ಅದರ ಸುತ್ತಲಿನ ಶಾಸನಗಳನ್ನು ಕುರಿತು. ಆ.ನೇ ಉಪಾಧ್ಯೆಯವರ ಸಲಹೆಯಂತೆ,ಸೂಕ್ತ ಟಿಪ್ಪಣಿಗಳ ಸಹಿತ ಇಂಗ್ಲಿಷಿನಲ್ಲಿ Inscripitions from northern Karnataka and Kolhapur, ಎಂಬ ಗ್ರಂಥವನ್ನು ಪ್ರಕಟಿಸಿದರು. ಎಚ್.ಹೆರಾಸರು ಕುಂದಣಗಾರರನ್ನು ಕುರಿತು “ಶಾಸನ ಶಾಸ್ತ್ರ ಮತ್ತು ಪ್ರಾಕ್ತನ ಶಾಸ್ತ್ರಗಳಲ್ಲಿ ಇಂಥ ಪ್ರಾವೀಣ್ಯ ಪಡೆದಿರುವ ಸಂಶೋಧಕ ಕುಂದಣಗಾರರನ್ನು ಶಿಕ್ಷಕರನ್ನಾಗಿ ಹೊಂದಿರುವ ಕಾಲೇಜಿನ್ನು ಅಭಿನಂದಿಸಬೇಕು,ಪ್ರೊ ಕುಂದಣಗಾರರು ಭಾರತದ ಮತ್ತು ವಿದೇಶದ ಶಾಸನತಜ್ಞರ ಸಾಲಿನಲ್ಲಿ ನಿಲ್ಲುತ್ತಾರೆ. ಎಂದು ಮುಂತಾಗಿ ಶ್ಲಾಘಿಸಿದ್ದಾರೆ.ಈ ಸಾಕಲ್ಯಜ್ಞಾನ ಅವರಿಗೆ ಗುರುಗಳಿಂದ ಬರಲಿಲ್ಲ, ಸ್ವಾಧ್ಯಾಯದಿಂದ ಸಂಪಾದಿಸಿದ್ದರು,ಸ್ವಂತ ಪರಿಶ್ರದಿಂದ ಸ್ವಯಮಾಚಾರ್ಯರಾದರು. ಅವರ ಪಾಂಡಿತ್ಯಕ್ಕೆ ಬಲ್ಲಿದರು ಮಂಡೆಬಾಗಿ ಮಣಿದರು .ಟೈಮ್ಸ್ ಆಫ್ ಇಂಡಿಯಾ ಮತ್ತು ಇಲ್ಲಸ್ಟ್ರೇಡ್ ವೀಕ್ಲಿ ಆಪ್ ಇಂಡಿಯಾ ಪತ್ರಿಕೆಗಳಲ್ಲಿ ಕುಂದಣಗಾರರ ಸಂಶೋಧನೆಯ ಫಲಿತಗಳು ವರದಿಯಾದವು. ಕೊಲ್ಲಾಪುರ ಬದಿಯ ಪಂಚಾಗಂಗಾ ನದಿಯ ತೀರದಲ್ಲಿ ಉತ್ಖನನವನ್ನು ಸಕಾರದ ಹಣ ಸಹಾಯವಿಲ್ಲದೆ ಸ್ವಂತ ಪರಿಶ್ರಮದಿಂದ ಯಶಸ್ವಿಯಾಗಿ ಗುರಿಮುಟ್ಟಿದದ್ದು ಕಂಡು ಪ್ರಶಂಸೆಯ ಹೇಳಿಕೆಗಳು ಹೊರಟುವು. ವಿಖ್ಯಾತ ಪ್ರಾಚ್ಯವಸ್ತು ಸಂಶೋಧಕ ಮಾರ್ಟಿಮರ್ ವೀಲರ್ ಖುದ್ದಾಗಿ ಬಂದು ಕುಂದಣಗಾರರನ್ನು ಅಭಿನಂದಿ` ಇದು,ಅದ್ಬುತ,ಆಶ್ಚರ್ಯ ಹುಟ್ಟಿಸುವಂತದ್ದು’ ಎಂದು ಕೊಂಡಾಡಿದರು. ಮೋರೆಸರ `ಕದಂಬ ಕುಲ’ ಗ್ರಂಥ ಪ್ರಸಿದ್ದಿ ಪಡೆದಿದೆ. ಕದಂಬ ವಂಶದ ಸಾಧನೆಗಳನ್ನು ಪರಿಚಯಿಸುವ ಈ ಮೌಲಿಕ ಕೃಥಿಯನ್ನ ಬರೆಯುವಾಗ ಮೋರೆಸರು ಕುಂದಣಗಾರರಲ್ಲಿ ಚರ್ಚಿಸಿ ಸೂಚನೆಗಳನ್ನು ಪಡೆದರೆಂಬುದು ಕುಂದಣಗಾರು ಹೊಂದಿದ್ದ ಇತಿಹಾಸಜ್ಞಾನ ಮತ್ತು ಪ್ರಭತ್ವಕ್ಕೆ ಜ್ವಲಂತ ಸಾಕ್ಷಿ.ತಮ್ಮ ಸ್ವಾದ್ಯಾಯ ಕಾಲದಲ್ಲಿ ಮಿರ್ಜಿ ಅಣ್ಣಾರಾಯರು, ಸಂಸ್ಕøತ ಮತ್ತು ಪ್ರಾಕೃತ ಜ್ಞಾನಕ್ಕೆ ಆ.ನೇ ಉಪಾಧ್ಯೆಯವರನ್ನೂ ಹಳೆಗನ್ನಡ ಸಾಹಿತ್ಯ ಲಾಭಕ್ಕೆ ಕುಂದಣಗಾರರನ್ನು ಸಂಪರ್ಕಿಸುತ್ತಿದ್ದರು. ಸೇಡಾಬಾಳದಿಂದ ಕೊಲ್ಲಾಪುರಕ್ಕೆ ಹೋಗಿ ತಿಂಗಳಲ್ಲಿ ನಾಲ್ಕೈದು ದಿನ ಬಿಡಾರ ಹೂಡುತ್ತಿದ್ದರು. ಉಪಾದ್ಯೆ-ಕುಂದಣಗಾರ-ಅಣ್ಣಾರಾಯ ಈ ಮೂವರು ಮದ್ಯಮ ತನುಗಾತ್ರರು, ಕದಳೀಗರ್ಭ ಶ್ಯಾಮರು,ಶಾರದೆಯವರಪುತ್ರರು.ಉಪಾಧ್ಯೆ ವಿದ್ವತ್ತಿಗೆ ತವನಿಧಿ, ಕುಂದಣಗಾರರು ಬತ್ತದ ಅರಿವಿನ ತೊರೆ. ಅಣ್ಣಾರಾಯರು ಇವರಿಬ್ಬರ ಮಾನಸ ಪುತ್ರರಾಗಿ ವರ್ಧಿಸ್ಟು.ಉಪಾಧ್ಯೆಮತ್ತು ಕುಂದಣಗಾರರು ಮುಚ್ಚುಕೋಟು ತೊಟ್ಟು ,ಕಚ್ಚೆ ಪಂಚೆ ಹುಟ್ಟು ತಲೆಗೆ ಕರಿಯ ಟೊಪ್ಪಿಗೆಯಿಟ್ಟು ಕೈಯಲ್ಲಿ ಕೊಡೆ ಹಿಡಿದು ಕೊಲ್ಲಾಪುರದಲ್ಲಿ ಗಾಲಿ ಸವಾರಿ ಹೊರಡುವುದು. ಅವರಿಬ್ಬರ ಜೊತೆಗೆ ಬಿಳಿಯ ಗಾಂಧಿ ಟೋಪಿ,ಜುಬ್ಬ,ಮಿರ್ಜಿಯವರು ಉಪನದಿಯಾಗಿ ಸೇರುವುದು. ಈ ಮೂವರ ಜೋಡಿಯನ್ನು ನೋಡುವವರಿಗೆ ಸಾಹಿತ್ಯಕ್ಕೆ ಕೈಕಾಲು ಮೂಡಿ ನಡೆದಾಡುತ್ತಿದ್ದ ಅನುಭವ.ಶ್ರವಣಬೆಳಗೊಳದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ. ಅಧ್ಯಕ್ಷರಾಗಿ ಉಪಾಧ್ಯೆಯವರು ವ್ಯಕ್ತಪಡಿಸಿದ ಮರುಕ್ಷಣದ ಪ್ರತಿಕ್ರಿಯೆ. –ಈಗ ಮಿತ್ರರಾದ ಕುಂದಣಗಾರರು ಇರಬೇಕಿತ್ರಿ ಸ್ಕಾಲರ್ ಅಂದ್ರ ಅವರ ನೋಡ್ರಿ’ ಕನ್ನಡ ಸಾಹಿತ್ಯ ಸಂಬಂಧವಾದ ಸಂಶಯಗಳ ನಿವಾರಣೆಗೆ ಕುಂದಣಗಾರರ ಸಹಾಯ ಸಿದ್ದವಾಗಿರುತ್ತಿತ್ತು.ಸ್ವಯಂ ಉಪಾಧ್ಯೆಯವರೇ ಇದನ್ನ ಒಪ್ಪಕೊಂಡಿದ್ದಾರೆ. “ಕುಂದಣಗಾರರ ಉಪಕಾರ ನನ್ನ ಮ್ಯಾಲಿ ಬಾಲ ಐತ್ರಿ ,ಅವರ ಮಾರ್ಗದರ್ಶನ ಇರದಿದ್ರ ನನ್ಗೆ ತುಂಬಾ ತ್ರಾಸ ಆಗಲಿಕ್ ಇತ್ರಿ.ಅದೇನೂ, ನನ್ ಸುದೈವ ಅನ್ರಿ ಕುಂದಣಗಾರರ ಸ್ನೇಹ ಪ್ರಾಪ್ತಿ ಲಭಿಸ್ತ್ರಿ .ಅವರ್ ಕೊಲ್ಲಾಪುರ ಬಿಟ್ಟ್ ಬೆಳಗಾವಿಗ ಹೋದ್ರರಿ.ಅದರ ದಸೀಂದ ನನಗ್ ತ್ರಾಸ ಆಯ್ತಿರಿ. ಉಪಾಧ್ಯೆ ಹಾಗೂ ಕುಂದಣಗಾರರು ಸೇರಿ ಸಹಸಂಪದಕಾರಾಗಿ ಸೇರಿ ಚಿನ್ಮಯ ಚಿಂತಮಣಿ ಮತ್ತು ಜ್ಞಾನ ಭಾಸ್ಕರ ಚರಿತೆ ಎರಡು ಕಿರು ಕಾವ್ಯಗಳನ್ನು ಸಂಪಾದಿಸಿದ್ದಾರೆ. ಅವರಿಬ್ಬರೂ ಒಟ್ಟಿಗೆ ಇಪ್ಪತ್ತು ವರ್ಷ ಕೊಲ್ಲಾಪುರದಲ್ಲಿ ಕನ್ನಡ ವಿದ್ವತ್ತಿನ ಅಧ್ವರ್ಯುಗಳಾಗಿ, ಸಂಜೀವನ ಕರ್ನಾಟಕ ಪರಂಪರೆಯ ವಾರಸುದಾರರಾಗಿ,ಸಂಸ್ಕøತಿಯ ರಾಯಭಾರಿಗಳಾಗಿ ತಾವು ಕಲಿತ ಕಲ್ಪಿಯನ್ನು ಧಾರೆಯೆರೆದರು. ಪುದುವಾಳುತ್ತಾ ಕನ್ನಡದಂತೆ ಇಂಗ್ಲಿಷಿನಲ್ಲೂ ಬರೆದರು.ಅದರಿಂದ ಕನ್ನಡೇತರರು ಕನ್ನಡ ರತ್ನಭಂಡಾರದ ಸಿರಿ ಸಂಪದವನ್ನು ತಿಳಿದರು. ಹೊರನಾಇನಲ್ಲಿದ್ದ ಈ ಇಬ್ಬರು ವಿದ್ವಾಸಂರು ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು. ಕೊಲ್ಲಾಪುರದಲ್ಲಿ ಕನ್ನಡ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಹುರುಪು ತುಂಬಿದ ಹಿರಿಯರಾದ ಕುಂದಣಗಾರರ ಮೇಲಾಳಿಕೆಯಲ್ಲಿ ಕರ್ನಾಟಕ ಸಂಘ ಹುಟ್ಟಿತು. ಅದರ ವತಿಯಿಂದ ಹರಿಹರ ದೇವ ಎಂಬ ಅಪರೂಪದ ಪುಸ್ತಕವು ಹಚ್ಚಯಿತು.ಪ್ರೊ.ಸ.ಸ ಮಾಳವಾಡರು ಅಂದಿನ ದಿನಗಳನ್ನು ದಾಖಲಿಸಿದ್ದಾರೆ. ಕನ್ನಡ ಸಾಹಿತ್ಯ ಸಂಸ್ಕøತಿಗಳ ವ್ಯಾಸಂಗಕ್ಕೆ ಉಪಯುಕ್ತವಾಗುವ ದೊಡ್ಡಗಾತ್ರದ ಪುಸ್ತಕ ಭಂಡಾರವು ಆಗಲೇ ರಾಜರಾಮ ಕಾಲೇಜಿನಲ್ಲಿತ್ತು. ಪುರತಾನ ಸಂಶೋಧನೆಗಳಿಗೆ, ಕನ್ನಡ ಶಿಲಾ ಶಾಸನಗಳ ಅಧ್ಯಯನಕ್ಕೆ ಬೇಕಾದ ಸಾಮಗ್ರಿಗಳು ಅಲ್ಲಿತ್ತು. ಇದ್ದನ್ನೆಲ್ಲಾ ಕಟ್ಟಿ ಬೆಳಸಿದರು. ಪ್ರೊ.ಕುಂದಣಗಾರರು.ಮಹಾರಾಷ್ಟ್ರದ ಒಂದು ದೇಶಿ ಸಂಸ್ಥಾನದಲ್ಲಿ 40 ವರ್ಷಗಳ ಹಿಂದಣ ಪರಿಸ್ಥಿತಿಯಲ್ಲಿ ಇಂತಹ ಕಾರ್ಯವನ್ನ ಸಾಧಿಸಿದ ಕುಂದಣಗಾರರ ನಿಷ್ಠೆ. ಕುಶಲತೆಗಳೂ,ಪ್ರಶಂಸನೀಯ.ಅವರ ಸವಿಯಾದ, ಗೌರವಾನ್ವತವಾದ ವ್ಯಕ್ತಿತ್ವದಿಂದ ಅದು ಸಾದ್ಯವಾಯಿತು.ರಾಜರಾಮ ಕಾಲೇಜಿನ ಆಗಿನ ಪ್ರಾಧ್ಯಪಕರು,ಕೊಲ್ಲಾಪುರದ ಪ್ರತಿಷ್ಟ ವ್ಯಕ್ತಿಗಳು ಅವರನ್ನು ವಾತ್ಸಲ್ಯದಿಂದ ಅಣ್ಣ ಎಂದು ಸಂಭೋದಿಸುತ್ತಿದ್ದರು. ಪ್ರಾಚೀನ ಕರ್ನಾಟಕದಲ್ಲಿ ಅಣ್ಣ ಎಂಬ ಸಂಭೋದನೆಯನ್ನು ಪಡೆದವ ಹತ್ತನೆಯ ಶತಮಾನದ ಚಾವುಂಡರಾಯ.ಅದ್ದರಿಂದ ಪ್ರೊ.ಕುಂದಣಗಾರರನ್ನು ಇಪ್ಪತ್ತನೆಯ ಶತಮಾನದ ಚಾವುಂಡರಾಯನೆಂದು ಹೇಳಬೇಕಾಗುತ್ತದೆ. ಸಾಹಿತ್ಯ, ಸಂಸ್ಕøತಿ, ಧರ್ಮಗಳನ್ನು ಕುರಿತು ನಿಷ್ಟೆಯಲ್ಲಿ, ವಿದ್ಯಾದಾನದ ಬಗೆಗೆ ತೊರುವ ಔದಾರ್ಯದಲ್ಲಿ, ಉನ್ನತವಾದ ಕಾರ್ಯದ ಸಾಧನಗಳನ್ನು ನಾಡಿನ ಹಿತಕ್ಕಾಗಿ ಬಳಸುವಲ್ಲಿ ಈ ಆಧುನಿಕ ಚಾವುಂಡರಾಯ ಗೈದ ಸಾಧನಗಳನ್ನು ಕರ್ನಾಟಕವು ಕೃತಜÐತೆಯಿಂದ ಸ್ಮರಿಸಬೇಕಾಗುತ್ತದೆ.

  • ಕೋಲ್ಹಾಪುರದಲ್ಲಿ ಪ್ರಾಚ್ಛವಸ್ತು ವಿಭಾಗವನ್ನು ಹುಟ್ಟುಹಾಕಿ ಕಟ್ಟಿ ಬೆಳೆಸಿದ ಪ್ರೋ ಕುಂದಣಗಾರರು ದಾರವಾಡದ ಕನ್ನಡ ಸಂಶೋಧನಾ ಸಂಸ್ಥೆಯ ಸಂಸ್ಥಾಪನೆಗೂ ತುಂಬ ಶ್ರಮಿಸಿದರು. ಆದರೆ ನಿರಂತರ 15 ವರ್ಷಗಳ ಸ್ವಂತ ಖರ್ಚಿನ ಕಾಯಕದಿಂದ ಕೋಲ್ಹಾಪುರದಲ್ಲಿ ರೂಪಿಸಿದ ಪ್ರಾಚ್ಛ ವಸ್ತು ಸಂಗ್ರಹಾಲಯ ಅತೀ ಮಹತ್ವದ ಏಕ ವ್ಯಕ್ತಿಯ ದೊಡ್ಡ ಸಾzನೆ ಪ್ರೋ.ಮ.ಗು.ಬಿರಾದಾರ ಬರೆದಿರುವುದರಲ್ಲಿ ಅತಿಶಯೊಕ್ತಿಯಿಲ್ಲ. ಈ ಪ್ರಾಚ್ಛ ವಸ್ತು ಸಂಗ್ರಹಾಲಯದ ಪ್ರತೀ ವಸ್ತುವಿನ ಮೇಲು ಪ್ರೋ ಕುಂದಣಗಾರರ ಬೆರಳಿನ ಗುರುತುಗಳಿರುತ್ತದೆ. ಆಗಿನ ಕಾಲದಲ್ಲಿ ಲಕ್ಷಗಟ್ಟಲೆ ಹಣ ಖರ್ಚು ಮಾಡಿದರೂ ಆಗದ ಆ ವಸ್ತು ಸಂಗ್ರಹಾಲಯ ಈ ಬಡ ಪ್ರಾಧ್ಯಾಪಕನೊಬ್ಬನ ಬೆವರು ಸಹಿತ ಪರಿಶ್ರಮದ ಫಲ ಎಂಬುದನ್ನು ಎಷ್ಟು ಜನ ನೆನಪಿಟ್ಟಿದ್ದಾರೋ ? ಅವರ ಗಳಿಕೆಯ ಅರ್ಧಕ್ಕೂ ಹೆಚ್ಚು ಹಣ ಈ ಸಂಶೋಧನಾ ಕಾರ್ಯಕ್ಕಾದರೆ, ಕಾಲು ಭಾಗ ಕನ್ನಡ ವಿದ್ಯಾರ್ಥಿಗಳ ಕಲ್ಯಾಣಕ್ಕೆ ! ಉಳಿದದ್ದರಲ್ಲಿ ಹರಕು ಹಾಸಿಗೆಯ, ಚಟ್ನಿ ರೊಟ್ಟಿಯ ಸಂಸಾರ ಸಾಗುತ್ತಿತ್ತು.

ಕರ್ನಾಟಕದಲ್ಲಿ ನಾಟ್ಯ ಶಾಸ್ತ್ರದ ಅದ್ಯಾಯನಕ್ಕೆ ತಕ್ಕ ಬುನಾಧಿಯನ್ನು ಹಾಕಿ ಉದ್ಘಾಟಿಸಿದ ಪ್ರಥಮಿಗರು ಕುಂದಣಗಾರು. ಕೋಲ್ಹಾಪುರದೊಳಗಿನ ಪ್ರಾಚೀನ ಕಾಲದ ನಾಣ್ಯಗಳೂ, ಆಂಧ್ರದ ನಾಣ್ಯಗಳೂ, ಪ್ರಾಚೀನ ಕನ್ನಡ ನಾಡಿನ ನಾಣ್ಯ ಪದ್ದತಿ ಮುಂತಾದವು ತೀರಾ ಅಪರೂಪದ ಬರಹಗಳು. ಈ ನಾಣ್ಯಗಳ ಆಧಾರದಿಂದ, ಕ್ರಿ.ಶ. 2ನೇ ಶತಮಾನದಲ್ಲಿ ಕರ್ನಾಟಕವು ಬೌಧ ಧರ್ಮ ಬೀಡಾಗಿದ್ದಿತ್ತು ಎಂಬ ತೀರ್ಮಾನವನ್ನು ನೀಡಿದ ಮೊಟ್ಟ ಮೊದಲ ಸಂಶೋಧಕರು ಕುಂದಣಗಾರರು. ವಿಧ್ವತ್ತಿನ ಅಂಜನ ಹಚ್ಚಿದ ಅವರ ಕಣ್ಣುಗಳಿಗೆ ನೆಲದ ಮರೆಯ ನಿಧಾನ ನಿಚ್ಚಳವಾಗಿ ಕಾಣುತ್ತಿತ್ತು. ಭಾರತ ಮತ್ತು ರೋಮ್ ನಡುವೆ ಇದ್ದ ಬಾಂದವ್ಯದ ಸ್ವರೂಪದ ಮೇಲೆ ಬೆಳಕು ಬೀರಿದ, ರೋಮನ್ ಸಮುದ್ರ ದೇವತೆಯ ಹಿತ್ತಾಳೆಯ ಅಪರೂಪದ ಮೂರ್ತಿಯನ್ನು, ತಮ್ಮ ಉತ್ಖನನದಿಂದ ಹೊರ ತೆಗೆದ ಕೀರ್ತಿಯು ಅವರಿಗೆ ದೊರೆಯಿತು. ಜನಪದ ಸಾಹಿತ್ಯದ ಅಧ್ಯಯನ ಮತ್ತು ಆಸಕ್ತಿ ಇನ್ನೂ ವಿಶ್ವವಿದ್ಯಾಲಯಗಳ ಗದ್ದುಗೆ ಏರಿರದ ಆ ಕಾಲದಲ್ಲಿ, ಪಿ.ಹೆಚ್.ಡಿ ಪದವಿಗಾಗಿ ಕನ್ನಡ ಜನಪದ ಗೀತೆಗಳು ಎಂಬ ವಿಷಯವನ್ನು ಗದ್ದಗಿಮಠ ಅವರಿಗೆ ಕೊಟ್ಟು ಮಾರ್ಗದರ್ಶನ ಮಾಡಿದ ಶ್ರೇಯವು ಕುಂದಣಗಾರರಿಗೆ ಸಂಧಿತು. ಕನ್ನಡದ ಪ್ರಪ್ರಥಮ ಪಿ.ಹೆಚ್.ಡಿ ಮಹಾ ಪ್ರಬಂಧ ಇದೆ ಎಂಬುವುದು ಇನ್ನೊಂದು ಹೆಚ್ಚಳ. ಡಿ. ಎಸ್. ಕರ್ಕಿ ಅವರ ಕನ್ನಡ ಛಂದೋವಿಕಾಸ ಮಹಾಪ್ರಬಂಧವು ಕುಂದಣಗಾರರ ಮಾರ್ಗದರ್ಶನದಲ್ಲಿ ಸಿದ್ದವಾದದ್ದು. ಕುಂದಣಗಾರರಿಗೆ ಜೈನ ಸಾಹಿತ್ಯ ಮತ್ತು ವೀರಶೈವ ಸಾಹಿತ್ಯ ಕರತಲಾಮಲಿಕೆವಾಗಿತ್ತು.ಈ ಎರಡು ಧರ್ಮಗಳ ಸಾರ,ವೈಶಿಷ್ಟ,ಸ್ವೋಪಜ್ಞತೆ,ಗುರುತಿಸಿದ್ದರು.ಜಿನವಿಜಯ ಮತ್ತು ವಾಗ್ಘೂಷಣ ಎಂಬ ಎರಡು ಆದರ್ಶ ಪತ್ರಿಕೆಗಳ ಸಂಪದಾಕರಾಗಿದ್ದ ಕುಂದಣಗಾರರು ಆಪ್ರಕಟಿತ ಒಲೆಗರಿ ಹಸ್ತ ಪ್ರತಿಗಳನ್ನು ಆಳವಾಗಿ ಓದಿ ತಲಸ್ಪರ್ಶಿಯಾದ ಪಾಂಡಿತ್ಯವನ್ನು ಗಳಸಿದ್ದರು. ಸಂಸ್ಕøತ,ಪ್ರಾಕೃತ ಸಾಹಿತ್ಯದ ಕವಿ ಮತ್ತು ಕಾವ್ಯಗಳ ಮಹತ್ವ,ಕನ್ನಡದ ಸಂದರ್ಭಲ್ಲಿ ಎಷ್ಟು ಮುಖ್ಯ ಎಂಬುದನ್ನು ಎತ್ತಿ ಹೇಳಿದ್ದಾರೆ.ಪಂಪ,ನಾಗಚಂದ್ರ,ಜನ್ಮ,ನೇಮಿಚಂದ್ರ,ರತ್ನಕರವರ್ಣಿ,ಮುಂಗರಸ ಮುಂತಾದ ಕಾವ್ಯ ಸೂಕ್ಷ್ಮಗಳಿಗೆ ಸ್ಪಂದಿಸುವ ಮೌಲಿಕವಾದ ಬರವಣಿಗೆ ಮಾಡಿದ್ದಾರೆ.ಅವರ ಸಮಕಾಲೀನ ಸಾಹಿತ್ಯ ಸಂದರ್ಭದಲ್ಲಿ,ಅಪೂರ್ವಮತ್ತು ಶ್ಲಾಘನೀಯವೆನಿಸುವ ವಿಮರ್ಶತ್ಮಕ ಲೇಖನಗಳನ್ನು ಬರೆದಿದ್ದಾರೆ.ಈ ಬಗೆಯ ಬರಹಗಳಲ್ಲಿ ಮಾಗಿದ ಅಭಿರುಚಿಯೊಂದಿಗೆ ಆಯಾ ಹಳೆಗನ್ನಡ ಕಾವ್ಯಗಳ ಶ್ರೇಷ್ಟ ಭಾಗವನ್ನು,ಮುಖ್ಯ ಕಾಣಿಕೆಯನ್ನು ಕಾಣುವ ಆಧುನಿಕ ದೃಷ್ಟಿಕೋನವೊಂದು ಕ್ರಿಯಾಶೀಲವಾಗಿರುವುದನ್ನು ಮನಗಾಣಬಹುದು.ರತ್ನಾಕರನ ಭರತೇಶ ವೈಭವ ಕಾವ್ಯದ ಭಿನ್ನ ಪಾತಳೀಗಳನ್ನು ವಿವೇಚಿಸುತ್ತಾ ಪತಿತ್ವ,ಭಾತೃತ್ವದ ಭಾಂದವ್ಯ ಭಾವ ಪ್ರಕಟಗೊಂಡು ಕೆನೆ ಕಟ್ಟಿರುವ ಪರಿಯನ್ನು ನೃತ್ಯ ನಿರೂಪಣಿಯಲ್ಲಿ ಹೆಣೆದುಕೊಂಡಿರುವ ನಟ್ಟುವರ ಮಾಹಿತಿಯನ್ನು ಬಯಲುಗೊಳಿಸಿದ್ದಾರೆ.ಮಾಘಣಂದಿ ಮತ್ತು ಅಚಣ್ಣ,ಆದಿಪಂಪನು ಸಮುದಾಯದ ಮಾಘಣಂದಿಯೂ,ಪಂಪನು ಜಿನ ಸೇನಾಚಾರ್ಯರನ್ನು ಅನುಸರಿಸದ್ದಾನೆ ಎಂಬಿತ್ಯಾದಿ ಲೇಖನಗಳಲ್ಲಿ ಕುಂದಣಗಾರರು ತಳೆದಿದ್ದ ತೌಲನಿಕ ಪ್ರಜ್ಞೆಯ ಹೊಳಪುಗಳು ಹರಳುಗೊಂಡಿವೆ,ಸಮುದಾಯದ ಮಾಘಣಂದಿಯು ಶಾಸ್ತ್ರಸಾರ ಸಮಚ್ಚಯ ಎಂಬ ಕೃತಿಯಲ್ಲಿ ಸಂಸ್ಕøತ ವೃತ್ತಗಳಿಗೆ ಕನ್ನಡ ವೃತ್ತಿಯನ್ನು ಬರೆದಿದ್ದಾನೆ.ಮಾಘಣಂದಿಯು ಉದಾರರಿಸಿರುವ ಪದ್ಯಗಳಲ್ಲಿ ಪಂಪನ ಆದಿಪುರಾಣ ಮತ್ತು ಆಚ್ಚಣ ಕವಿಯ ವರ್ಧಂಆನ ಪುರಾಣದಿಂದ ಆರಿಸಿ ಪದ್ಯಗಳು ಸೇರಿರುವ ಸಂಗತಿಯನ್ನ ಸಂಶೋದಿಸಿದ ಹಿರಿಮೆ ಕುಂದಣಗಾರರದು.ಸೋಮದೇವ ಕವಿಯ ಸಂಸ್ಕøತ ನೀತಿ ವಾಕ್ಯಮೃತ ಕೃತಿಯಿಂದ ಆರಿಸಿದ ಕನ್ನಡ ಪದಗಳು,ಕುರುವಂಶದ ಬಗೆಗೆ ಜೈನ ವಿಚಾರ, ಗೊಮ್ಮಟ ಶಬ್ದದ ಉತ್ಪತ್ತಿ ಮುಂತಾದ ರಚನೆಗಳು ಕುಂದಣಗಾರರ ಅಸಕ್ತಿಯ ವ್ಯಾಪಕತೆಗೆ ಸಾಕ್ಷಿಯಾಗಿವೆ.ಜೈನ ಕಾವ್ಯಗಳಿಗೆ ಕುಂದಣಗಾರರು ಹೇಗೆ ಪ್ರತಿಕ್ರಯಿಸಿದರೆಂಬುದನ್ನು ಮನಗಾಣಲು ವಿವಿಧ ಕಾಲಮಾನದಲ್ಲಿ ಬರೆದ ಈ ಬಗೆಯ ಬಿಡಿಬರಹಗಳ ಜೊತೆಗೆ ಅವರು ಸಂಪಾದಿಸಿದ ಜೈನ ಕಾವ್ಯಗಳನ್ನು ಅವುಗಳಿಗೆ ಸೇರಿರುವ ಪ್ರಸ್ತಾವನೆಯನ್ನು ಓದಬೇಕು.ಅವರು ಎಂ.ಎ ತರಗತಿಗೆ ಕಲಿಯುತ್ತಿದ್ದಾಗ ಈ ಪರಿಶ್ರಮ ನಡೆಯಿತು.ದ್ರವ ಸ್ಥೀತಿಯಲ್ಲಿದ್ದ ಜೈನ ಸಾಹಿತ್ಯದ ಆಸಕ್ತಿ ಘನ ಸ್ಥಿತಿ ತಲುಪಿದ್ದು ಕೊಲ್ಲಾಪುರದಲ್ಲಿ ಸಿಕ್ಕ ಉಪಾಧ್ಯೆಯವ ಒಡನಾಟದಿಂದ. ಎರಡು ದಶಕಗಳ ದೀರ್ಘಕಾಲಿಕ ಸ್ನೇಹ ಸಾಹಚರ್ಯದಿಂದ ಜೈನ ಧರ್ಮದ ಮತ್ತು ಸಾಹಿತ್ಯದ ಅರಿವು ಪಡೆದು ಹಿಡಿತವನ್ನು ಸಂಪಾದಿಸಿದರು.ಜೊತೆಗೆ ಚಂದ್ರಕಾಂತ ಲಿಂಗರಾಜ ಪಾಟೀಲ ತಿಗಡೊಳ್ಳಿ ಮತ್ತು ಅಣ್ಣಪ್ಪ ಪಡೆಪ್ಪ ಚೌಗುಲೆ ಬೆಳಗಾವಿ ಇವರ ಸಂಪರ್ಕದಿಂದ ಈ ತಿಳುವಳಿಕೆ ಮತ್ತಷ್ಟು ಮನಚುಗೊಂಡಿತು.ತತ್ಪಲವಾಗಿ ಜೈನ ಶಾಸ್ತ್ರ ಗ್ರಂಥ ಹಾಗೂ ಕಾವ್ಯಗಳ ವಿಷಯದಲ್ಲಿ ಅಧಿಕೃತ ವಕ್ತಾರನಾಗುವ ಶಕ್ತಿಯು ಪ್ರಬುತ್ವವು ದೊರೆಯಿತು ಸೃಜನ ಶೀಲ ಸಾಹಿತಿಯು ಆಗಿದ್ದ ಕುಂದಣಗಾರರು `ಸರಸ್ವತಿ’ ಎಂಬ ಕಾದಂಬರಿಯನ್ನು ಹಾಸ್ಯ ಪೂರಿತ ಪ್ರಬಂಧಗಳನ್ನು ಅಕ್ಕಮಹಾದೇವಿಯನ್ನು ಕುರಿತ ಜೀವನ ಚರಿತ್ರೆಯನ್ನು ರಚಿಸಿದ್ದಾರೆ.ಸಂಸ್ಕøತದಿಂದ ರತ್ನಾವಳಿ ನಾಗಾನಂದ ಎಂಬ ನಾಟಕಗಳನ್ನು ಕನ್ನಡಕ್ಕೆ ಭಾಷಾಂತರಿಸಿದ್ದಾರೆ. ಕೊಲ್ಲಾಪುರದಿಂದ ನಿವೃತ್ತಿಯ ಆ ನಂತರ ಬೆಳಗಾವಿಯ ರಾಣಿ ಪಾರ್ವತಿ ದೇವಿ ಕಾಲೇಕಿನಲ್ಲಿ[ಆರ್.ಪಿ.ಡಿ] 1948 ರಿಂದ 1965 ರವರೆಗೆ ಪ್ರಾಧ್ಯಪಕರಾಗಿದ್ದ ಕುಂದಣಗಾರರು ಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿ ಸೇವೆ ಅವಿಸ್ಮರಣೀಯ. ಸ್ವಯಂ ಜ್ಞಾನ ಭಂಡಾರವಾಗಿದ್ದರಿಂದ ಅವರು ಶಿಷ್ಯರ ಪಾಲಿಗೆ ಕಲ್ಪವೃಕ್ಷ ಕಾಮಧೇನು ಆಗಿದ್ದರೆಂದು ಅವರಲ್ಲಿ ಕಲಿತ ಹಲವು ಹಿರಿಯರು ಮುಕ್ತ ಕಂಟರಾಗಿ ನುಡಿದಿದ್ದಾರೆ.ಕನ್ನಡದಲ್ಲಿನ ಉನ್ನತ ಶಿಕ್ಷಣಕ್ಕಾಗಿ ಕೊಲ್ಲಾಪುರಕ್ಕೆ ಬರುತ್ತಿದ್ದ ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಅವರ ಮನೆಯ ಯಾತ್ರ ಸ್ಥಳ ,ಕಾಶಿ.ಬೆಳಗಿನ ಜಾವದಲ್ಲಿ ತಾವೇ ಕುದ್ದಾಗಿ ನಿಂತು ವಿದ್ಯಾರ್ಥಿಗಳನ್ನು ಏಳಿಸುತ್ತಿದ್ದರು.ಯೋಗಕ್ಷೇಮ ವಿಚಾರಿಸುತ್ತಿದ್ದರು.ಉಚಿತ ಊಟ ಉಪಹಾರ ವಸತಿ ಸೌಕರ್ಯ ಅವರ ಮನೆಯಲ್ಲಿ ವಿದ್ಯಾರ್ಥೀಗಳಿಗೆ ಮೀಸಲು. ಆಹಾರ,ಪೀಸು ಕಟ್ಟಲು ಹಣ, ಬಟ್ಟೆ ಬರೆ, ಪುಸ್ತಕಗಳು ಎಲ್ಲಾ ಪುಕ್ಕಟೆಯಾಗಿ ಹಂಚುತ್ತಿದ್ದರು. ಕನ್ನಡ ಕಲಿಯಲು ಬಂದ ಛಾತ್ರರಿಗೆ ಕುಂದಣಗಾರರು.ಪ್ರಾಧ್ಯಪಕರು ಪಾಲಕರು ಪೋಷಕರು ಗೆಳೆಯರು ತತ್ವಜ್ಞಾನಿಯೂ ಮಾರ್ಗದರ್ಶಕರು ಆಗಿದ್ದರು. ಕುಂದಣಗಾರರು ಗುರು ಅವರ ಮನೆ ಗುರುಕುಲ,ಗ್ರಂಥಾಲಯ ಮತ್ತು ಕನ್ನಡ ಜಾಗೃತಿಯ ಕಮ್ಮಟ. “ಕುಂದಣಗಾರರು ವಾತ್ಸಲ್ಯದ ಸಾಕರಮೂರ್ತಿ.ವಿದ್ಯಾರ್ಥಿಗಳೆಲ್ಲರು ಅವರಿಗೆ ಮನೆಯ ಮಕ್ಕಳಂತೆ. ಬಡ ವಿದ್ಯಾರ್ಥಿಗಳಿಗೆ ಎಲ್ಲಾ ದೃಷ್ಟಿಯಿಂದಲೂ ತಮ್ಮ ಶಕ್ತಾನುಸಾರ ಸಹಾಯ ಮಾಡುತ್ತಿದ್ದರು.ಅಂತೇಯೇ ಸಹಸ್ರರು ವಿದ್ಯಾರ್ಥಿಗಳು ಪದವಿಧರದಾಗಿ ಜೀವನದ ನಾನ ಕ್ಷೇತ್ರಗಳಲ್ಲಿ ಮುಂದೆ ಬಂದು ಕಾರ್ಯ ಮಾಡುತ್ತಿರುವವರು. ಇವರ ಹೆಸರು ಹೇಳಿ ಅವರು ಮನೆಗೆ ದೀಪ ಮೂಡಿಸುತ್ತಿರುವವರು. ಇಷ್ಟು ಅಪರಾವಾಗಿದೆ.ಅವರ ವಾತ್ಸಲ್ಯ ಭಾವನೆ ನಾಡು ನುಡಿಗಳ ಪ್ರೇಮ” ( ಆರ್.ಸಿ ಹಿರೇಮಠ. ಕುಂದಣದ ಸಂಪಾದಕೀಯ) ಭಾರತದ ರಾಷ್ಟ್ರಪತಿಯಿಂದ ಹಿಡಿದು ವಿಶ್ವವಿದ್ಯಾಲಯದ ಕುಲಪತಿಗಳು ಕಾಲೇಜುಗಳ ಪ್ರಾಂಶುಪಾಲರು,ಪ್ರಾಧ್ಯಪಕರು ಹೀಗೆ ಒಂದು ದೊಡ್ಡ ಪಾಳೀಯೆ ಇದೆ.. ಕುಂದಣಗಾರರ ಶಿಷ್ಯ .ಸಮುದಾಯದ ಪ್ರಭಾವಳಿಯನ್ನ ಬೆಳಗಿಸಲು, ಈ ನಾಡಿನ ಉದ್ದಗಲಗಳಲ್ಲಿ ಹೆಸರು ಗಳಿಸಿದ ಕುಂದಣಗಾರರ ವಿಧ್ಯಾರ್ಥಿ ಮಹೋದಯರಲ್ಲಿ ಕೆಲವರು ಇಂಚಲ ಎಸ್.ಜಿ. ಡಿಎಸ್ ಕರ್ಕಿ, ಕುಲಕರ್ಣಿ ವಿ,ಜಿ,ಗದ್ದಗಿ ಮಠ, ಬಿಡಿ ಜತ್ತಿ, ಜಾಧವ್ ಆರ್.ಬಿ, ಕೆ.ಹೆಚ್ ಪಾಟೀಲ್, ಡಿ,ಸಿ ರ್ಯಾಂಗಲರ್ ಪಾವಟೆ, ಎಂಜಿ ಬಿರಾದಾರ,ಭಾಗೋಜಿ ಪಿ.ಕೆ.ಭೂಸನೂರ ಮಠ, ಸ,ಸ ಮಾಳವಾಡ.ರಂ,ಶ್ರೀ ಮುಗುಳಿ, ಲಗಳಿ, ಹೆಚ್ ಕೆ ವೆಂಕಟೇಶ್ ಸಾಂಗಲಿ ,ಶಂಕರರವ,ಜಿ,ಬಿ ಶಹಷೇಟಿ, ಏಸ್.ಬಿ ಸದಾನಂದ ನಾಯಕ, ಸಾಸನೂರ,ಎ,ಟಿ ಸಾಸನೂರ,ಬಿ,ಟಿ ಸಾಸನೂರ, ಎಚ್,ಟಿ,ಸುಂಕಾಪುರ,ಎಂ,ಎಸ್,ಹಿರೇಮಠ,ಆರ್,ಸಿ,ಹಿರೇಮಲ್ಲೂರ್,ಈಶ್ವರನ್ ಮುಂತಾದವರು.ಕುಂದಣಗಾರರಿಗೆ ಶಿಷ್ಯ ವಾತ್ಸಲ್ಯ,ಪುಸ್ತಕ ಪ್ರೀತಿ, ಇವು ಎರಡು ಶ್ವಾಸಕೋಶಗಳು. ಸಾಲಮಾಡಿ ಪುಸ್ತಕ ಕೊಳ್ಳುತ್ತಿದ್ದರು. ಅವರ ವೈಯಕ್ತಿಕ ಪುಸ್ತಕ ಭಂಡಾರ ಬಹಳ ದೊಡ್ಡದಿದ್ದು ಅದು ವಿಧ್ಯಾರ್ಥಿಗಳಿಗೆ ಮುಕ್ತವಾಗಿತ್ತು. ಅವರಿಗೆ ಕುಳಿತುಕೊಳ್ಳಲು ಒಳ್ಳೆಯ ಕುರ್ಚಿ ಇರದಿದ್ದರೂ ಪುಸ್ತಕಳಿಗೆ ಮಾತ್ರ ಸಾಗುವಾನಿಯ ದೊಡ್ಡ ಕಪಾಟುಗಳನ್ನು ಮಾಡಿಸಿದ್ದರು. ಪುಸ್ತಕಗಳ ಮಹತ್ವವನ್ನು ಶಿಷ್ಯರಿಗೆ ತಿಳಿಸಿದ್ದಲ್ಲದೆ ಪುಸ್ತಕವನ್ನು ವಿದ್ಯಾರ್ಥಿಗಳಿಗೆ ತಾವೇ ಖುದ್ದಾಗಿ ಒಯ್ದು ಮಟ್ಟಿಸುತ್ತಿದ್ದುದು ಅವರ ಘನ ವ್ಯಕ್ತಿತ್ವದ ಒಂದು ಮುಖ. ಎರಡು ಉದಾಹರಣೆಯಿಂದ ಈ ಅಂಶವನ್ನು ಸಾಬೀತು ಪಡಿಸಬಹುದು. ಜಾತಿ-ಮತ ಪ್ರದೇಶಗಳ ತಾರತಮ್ಯವಿಲ್ಲದೆ ಇಡೀ ವಿದ್ಯಾರ್ಥಿ ಜಾತಿಯನ್ನೆ ತಮ್ಮ ಮನೆಯ ಮಕ್ಕಳನ್ನಾಗಿಸಿಕೊಂಡು ಅವರ ಉತ್ಕರ್ಷಕ್ಕೆ ಕಾರಣರಾದ ಮಹಾನ್ ಪ್ರಧ್ಯಾಪಕ ,ಆಚಾರ್ಯ ಈ ಪ್ರೊ.ಕುಂದಣಗಾರ! ವಿದ್ಯಾರ್ಥಿಗಳ ಮೇಲಿನ ಪ್ರೀತಿಯ ಪ್ರತೀಕವಾಗಿ,ನನ್ನೊಂದಿಗೆ ನಡೆದ ಘಟನೆಯೊಂದನ್ನು ಉಲ್ಲೇಖೀಸುವುದು ಅವಶ್ಯವೆನಿಸಿದೆ. ನನ್ನ ಪಿಹೆಚ್‍ಡಿ ಅಧ್ಯಯನಕ್ಕೆ ಆಕಾರ ಗ್ರಂಥವಾಘಿ ಜಿನ ಸೇನ ಆಚಾರ್ಯರ ಪೂರ್ವ ಪುರಾಣ ಬೇಕಾಯಿತು ಅದು ಬೆಳಗಾವ್‍ದಿಂದ ನಾಲ್ಕು ಮೈಲು ದೂರದ ಒಂದು ಜೈನ ಮಠದಲ್ಲಿದ್ದುದನ್ನು ತಿಳಿಸಿದರು.ಅಲ್ಲದೆ ಮುಂಜಾನೆ ಬೇಗ ಬನ್ನಿ ,ಸ್ವಾಮಿಗಳಿಗೊಂದು ಪತ್ರ ಕೊಡುವೆ ತರುವಿರಂತೆ ಎಂದು ಹೇಳಿದರು. ನಾನು ಅವರ ಆದೇಶದಂತೆ ಮುಂಜಾನೆ ಮನೆಗೆ ಹೋದಾಗ ಅವರಿರಲಿಲ್ಲ. ನಸುಕಿನಲ್ಲಿ ಹೋದವರು ಇನ್ನು ಬಂದಿಲ್ಲವೆಂದು ತಾಯಿಯವರು ಹೇಳಿದರು.ನಾನು ವಿಚಾರಿಸುತ್ತ ತಿಲಕವಾಡಿಯ ಬಸ್ ನಿಲುಗಡೆಯ ಸ್ಥಳಕ್ಕೆ ಬಂದೆ. 15-20 ನಿಮಿಷ ಕಾದಿರಬೇಕು ಆಗ ಹೆಗಲ ಮೇಲೊಂದು ದೊಡ್ಡ ಗಂಟು ಒತ್ತು ಕೊಂಡು ಗುರುಗಳು ಬಸ್ಸಿನಿಂದ ಹಿಳಿದರು. ಏನು ತಂದಿದ್ದಾರೂ ಎಂದು ಒತ್ತಾಯದಿಂದ ತೆಗೆದುಕೊಂಡೆ.ನೀವು ಹೋದರೆ ಅವರು ಕೊಡಲಿಕ್ಕಿಲ್ಲ ಎಂದು ನಾನು ನಸುಕಿನಲ್ಲೇ ಎದು ವಾಕಿಂಗ್ ಹೋದೆ.ಮುಂತಾಗಿ ಹೇಳುತ್ತಿರುವಾಗ ಆ ಗಂಟಿನಲ್ಲಿದ್ದುದ್ದು ತಕ್ಕಗೆ ಸಿಕ್ಕದ ಗ್ರಂಥ ಪೂರ್ವ ಪುರಾಣ ಎಂದು ಅರಿವಾಯಿತು. ಗುರುವಿನ ಈ ಕಾರ್ಯಕ್ಕೂ ಆ ಗಾತ್ರದ ಕೃತಿಗೂ ಏನು ವ್ಯತ್ತಾಸ ಕಾಣಲಿಲ್ಲ. ಅವರ ಸಾತ್ವಿಕ, ಸರಳ, ಉದಾರ, ವಿನಮ್ರ ಜೀವನದ ಪ್ರಬಲವಾದ ಪ್ರಭಾವ ಇಂದಿಗೂ ನನ್ನೊಳಗೆಗುನುಗುಣಿಸುತ್ತಾ ನಿನಾದ ಮಾಡುತ್ತಿದೆ. ಅವರಂಥವರು ಅವರು. ಯಾವಾಗಲೂ ಮೊಗದಲ್ಲಿ ನಗೆ, ಮಾತಿನಲ್ಲಿ ಜೇನು, ಕೈಯಲ್ಲಿ ಉಪಕಾರ, ಕಾಲೇಜಿನ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ನನಗೆ ಉಪಯುಕ್ತವಾಗುವ ನಾಲ್ಕೆಂಟು ದೊಡ್ಡ ದೊಡ್ಡ ಪುಸ್ತಕಗಳನ್ನು ಹೊತ್ತುಕೊಂಡು ನಮ್ಮ ಹಾಸ್ಟೇಲಿಗೆ ಬಂದು, ಆ ಗ್ರಂಥಗಳಲ್ಲಿ ನಾವು ಓದಬೇಕಾದ ವಿಷಯಗಳನ್ನೆಲ್ಲ ಗುರುತುಹಾಕಿಕೊಟ್ಟು ತಮ್ಮ ಮನೆಗೆ ಹೋಗುತ್ತಿದ್ದರು. ಬಹುಮಟ್ಟಿಗೆ ನನಗೆ ಕೊಟ್ಟಗ್ರಂಥಗಳನ್ನು ತಿರುಗಿ ವಾಚನಾಲಯಕ್ಕೆ ಮುಟ್ಟಿಸುವವರೂ ಅವರೆ ! ಅಭ್ಯಾಸದಲ್ಲಿ ಮುಳುಗಿದಂತಿದ್ದ ನನ್ನ ಹೊತ್ತು ವಾಚನಾಲಯದ ದಂದುಗದಲ್ಲಿ ವ್ಯರ್ಥವಾಗಿ ಕಳೆದುಹೋಗಬಾರದೆಂಬುದೆ ಗುರುಗಳಾದ ಕುಂದಣಗಾರರ ಉತ್ಕಟ ಉತ್ಸಾಹ ಭಾವ” [ಸಂ. ಶಿ. ಭೂಸನೂರ ಮಠ : ‘ಕುಂದಣದ ಬೆಳೆ’ (ಸಂ) ಪ್ರಕಾರ ಕೋಟಿನ ತೋಟ: 1995 : 22-23] ವಿದ್ಯಾರ್ಥಿಗಳೇ ತಮ್ಮ ಪ್ರಥಮ ದೈವವೆಂದು ನಂಬಿ ನಡೆದ ಕುಂದಣಗಾರರು ಎಂಥ ಪರಿಸ್ಥಿತಿಯಲ್ಲಿಯೂ ರಜೆ ಹಾಕಿದವರಲ್ಲ, ತರಗತಿ ತಪ್ಪಿಸಿದವರಲ್ಲ. ಪೂರ್ವಸಿದ್ಧತೆ ಇರದೆ ತರಗತಿಗೆ ಬಂದವರಲ್ಲ. ಅಧ್ಯಯನ, ಅಧ್ಯಾಪನ, ಸಂಶೋಧನ- ಇವುಗಳಲ್ಲಿ ಆನಂದ ಪಡೆದರು, ಬಿಡುಗಡೆ ಕಂಡರು. ‘ಬಹು ಜನಪ್ರಿಯ’ ಎಂಬ ಮಾತು ಹಾಗಿರಲಿ, ‘ತುಸು ಜನಪ್ರಿಯ’ ಕೂಡ ಆಗಿರಲಿಲ್ಲ. ಸಾರ್ವಜನಿಕ ಸಭೆ ಸಮಾರಂಭದ ವೇದಿಕೆಗಳು ಅವರಿಗೆ ದೂರ. ಹೀಗಾಗಿ ಅವರ ಭೌದ್ಧಿಕ ಎತ್ತರಗಳ ಪರಿಚಯ ವ್ಯಾಪಕವಾಗಿ ಹಬ್ಬಲಿಲ್ಲ. ಅಲ್ಲದೆ ಅವರ ಸಂಶೋಧನೆ ಪ್ರಬಂಧಗಳ ಅಲಭ್ಯತೆಯೂ ಕಾರಣವಾಗಿ, ಅವರ ಹುಡುಕಾಟದ ಹೊನ್ನಗೆರೆಗಳನ್ನು ಗುರುತಿಸಲು ಸಾಧ್ಯವಾದದ್ದು ತಡವಾಗಿ, ಕರ್ನಾಟಕದ ವಿದ್ವತಿನ ಬಾಂದಳದ ಈ ಬೆಳ್ಳಿನಕ್ಷತ್ರ ಜಂಗಮ ವಿಶ್ವಕೋಶವೆಂದು ತಿಳಿದದ್ದು ಕೆಲವು ಶಿಷ್ಯರಿಗೆ ಮಾತ್ರ. ಕೀರ್ತಿ ಗಳಿಸಬಹುದು. ಪ್ರಾಮಾಣಿಕರೆಂದು, ಸಚ್ಚಾರಿತ್ರ್ಯ ಶುಭರೆಂದು ಹೆಸರು ಗಳಿಸುವುದು ಅಪರೂಪ. ಕುಂದಣಗಾರರಲ್ಲಿ ಸಣ್ಣತನಗಳು ಇರಲಿಲ್ಲ. ಅಕಳಂಕವಾದ ಪಾರದರ್ಶಕ ಸನ್ನಡತೆಯಿಂದ, ತಲಸ್ಪರ್ಶಿಯಾದ ತುಂಬು ಪಾಂಡಿತ್ಯದಿಂದ, ಬಿಂಕ ಬಿಗುಮಾನಗಲಿರದ ಸರಳಜೀವನದಿಂದ ಅಪರೂಪದವರೆನಿಸಿದವರು. ತಮ್ಮ ಜನ್ಮಸ್ಥಳವಾದ ಕೌಜಲಗಿಯಲ್ಲಿ ಮಾದರಿ ಶಿಕ್ಷಣ ಸಂಸ್ಥೆಯು ನಡೆಸುತ್ತಿದ್ದ ಶಾಲೆಯು ಹಣಕಾಸಿನ ತೊಂದರೆಯಿಂದಾಗಿ ಮುಚ್ಚುವಂತಹ ಪರಿಸ್ಥಿತಿ ಎದುರಾಯಿತು. ಪೊ. ಕುಂದಣಗಾರರ ಕರುಳು ಕಿತ್ತು ಬಂದಂತಾಯಿತು. ಕೈಯಲ್ಲಿ ಕಾಸಿಲ್ಲ. ಕೂಡಲೆ ಕೌಜಲಗಿಯಲ್ಲಿದ್ದ ಮನೆಯನ್ನು ಮಾರಿ ಬಂದ ಮೂರುಸಾವಿರ ರೂಪಾಯಿಗಳನ್ನು 1933ರಲ್ಲಿ ನೀಡಿ ಹಳ್ಳಿಯ ಏಕೈಕ ಶಾಲೆಯನ್ನು ಉಳಸಿದರು! ಕೇಳುವವ ಬಡವನಲ್ಲದೆ ನೀಡುವವ ಬಡವನೆ ಎಂಬಂತೆ ಅವರ ಹೃದಯ ಶ್ರೀಮಂತಿಕೆ, ಜನಪರ ಕಾಳಜಿ, ಜೀವಪರ ಮಿಡಿತ ಪ್ರಕಟವಾಯಿತು. ಕುಂದಣಗಾರರು ಕೊಂಡಾಟಗಳಿಗೆ ಬಾಯಿ ಬಿಡಲಿಲ್ಲ, ತೆಗಳಿಕೆಗೆ ಮೊಗ ಮುರುಕಿಸಲಿಲ್ಲ. ಹಿಡಿದ ಕೆಲಸಗಳನ್ನು ಶ್ರದ್ಧೆಯಿಂದ ತುದಿ ಮುಟ್ಟಿಸಿದರು. ಆತ್ಮವಂಚನೆಯಿಲ್ಲದ ಬದುಕನ್ನು ಬಾಳಿದರು. ಇತಿಹಾಸವೆನ್ನುವಂಥ ಜೀವನವನ್ನು ನಡೆಸಿ ಕರ್ನಾಟಕ ಸಂಸ್ಕøತಿಯ ಇತಿಹಾಸ ಬರೆದರು. ಜೇಡವು ತನ್ನ ಒಡಲಿನಿಂದ ಬರುವ ಎಳೆಗಳಿಂದಲೇ ತನ್ನ ಬಲೆ ನೇಯುವಂತೆ ಕುಂದಣಗಾರರು ತಮಗೆ ತಾವೆ ಓಜರಾದರು. ವಿದ್ವತ್ತಿನ ಎತ್ತರಗಲನ್ನು ಏರುತ್ತ ತಮ್ಮ ತರುವಾಯದ ತಲೆಮಾರಿನವರಿಗೆ ಶೃಂಗಗಳನ್ನು ಏರುವ ದಾರಿ ತೋರಿದರು, ಸ್ವಯಂ ತಾವೇ ದೊಡ್ಡ ಶೃಂಗವಾದರು. ಬೆಳೆಗಾಗಿ ನಾನೆದ್ದು ಯಾರಾರ ನೆನೆಯಲಿ ಎದ್ದೊಂದು ಗಳಿಗೇಲೆ ಕಲ್ಲಪ್ಪ ಗಿರಿಯಪ್ಪ ಕುಂದಣಗಾರರ ನೆನೆದೇನ ಎದೆತುಂಬಿ ||