ಪರಿಚಯ
ನನ್ನ ಹೆಸರು ಆಶಿತ, ನನ್ನ ತಂದೆಯ ಹೆಸರು ಗಣೇಶ್ ಹಾಗೂ ತಾಯಿಯ ಹೆಸರು ಹೇಮಲತ, ಜನನ ೨೮/೧೦/೧೯೯೭ ನಾನು ಮಂಗಳೂರಿನ ಕಾವೂರು ನಿವಾನಿ, ನಾನು ಪ್ರಸ್ತುತ ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪದವಿ ಶಿಕ್ಷಣ ಮಾಡುತ್ತಿದ್ದೇನೆ, ನಾನು ನನ್ನ ಪ್ರಾರ್ಥಮಿಕ ಶಿಕ್ಷಣವನ್ನು ಪಂಜಿಮೊಗರು ಪ್ರಾರ್ಥಮಿಕ ಶಾಲೆಯಲ್ಲಿ ಮಾಡಿರುತ್ತೇನೆ. ನಾನು ನನ್ನ ಹೈಸ್ಕೂಲ್ ಶಿಕ್ಷಣ ಹಾಗೂ ಪಿ.ಯು.ಸಿ. ಯನ್ನು ಎಂ.ಜಿ.ಸಿ ಬೊಂದೇಲ್ ಇಲ್ಲಿ ಮಾಡಿರುತ್ತೇನೆ. ನಾನು ನನ್ನ ಪಿ.ಯು.ಸಿ ಯಲ್ಲಿ ನಡೆದ ಚರ್ಚಾ ಸ್ಪರ್ಧೆ-ಕನ್ನಡ, ಇಂಗ್ಲಿಷ್, ಕನ್ನಡ ಭಾಷಣದಲ್ಲಿ ಮೊದಲ ಸ್ಥಾನವನ್ನು ಪಡೆದಿರುತ್ತೇನೆ. ನಾನು ಪಿ.ಯು ಕಾಲೇಜಿನಲ್ಲಿ ನಡೆದ ಕ್ರೀಡಾ ಚಟುವಟಿಕೆಗಳಲ್ಲೂ ಭಾಗವಹಿಸಿರುತ್ತೇನೆ. ಉದ್ದ ಜಿಗಿತ - ೨ನೇ, ಗುಂಡು ಎಸೆತ ಹಾಗೂ ೮೦೦ ಮೀಟರ್ಸ್ ಓಟದಲ್ಲಿ ೩ನೇ ಸ್ಥಾನವನ್ನು ಪಡೆದಿರುತ್ತೇನೆ. ನಾನು ದ್ವಿತೀಯ ಪಿ.ಯು.ಸಿ ಯಲ್ಲಿ ೯೪% ಅಂಕಗಳನ್ನು, ಪ್ರಥಮ ಪಿ.ಯು.ಸಿ ಯಲ್ಲಿ ೮೮% ಅಂಕಗಳನ್ನು ಪಡೆದು ಉತ್ತೀರ್ಣಳಾಗಿರುತ್ತೇನೆ. ನನ್ನ ಹವ್ಯಾಸಗಳೆಂದರೆ ಕಥೆ ಪುಸ್ತಕ, ದಿನ ಪತ್ರಿಕೆಗಳನ್ನು ಓದುವುದು, ಡ್ಯಾನ್ಸ್ ಇತ್ಯಾದಿ ನನ್ನ ಗುರಿ ಎಂ.ಕೋಮ್ ಮಾಡಿ ಶಿಕ್ಷಕಿಯಾಗಬೇಕೆಂಬುವುದು. ಇದು ನನ್ನ ಚಿಕ್ಕ ಪರಿಚಯ.