ಸದಸ್ಯ:Asha dsouza/sandbox
ಆಧುನಿಕ ಜಗತ್ತಿನಲ್ಲಿ ಜಾಹೀರಾತುಗಳ ಪ್ರಭಾವ
ಜಗತ್ತಿನಲ್ಲಿ ಉತ್ಪನ್ನವಾಗುವ ಪ್ರತಿಯೊಂದು ವಸ್ತುವಿಗೂ ಜಾಹಿರಾತು ಅವಶ್ಯಕ. ಏಕೆಂದರೆ ಅವರು ತಯಾರಿಸಿದ ವಸ್ತುವಿನ ಬಗ್ಗೆ ಜನರಿಗೆ ತಿಳಿಯಬೇಕಾದರೆ ಅವರಿಗೆ ಅದರ ಜಾಹೀರಾತು ನೀಡುವುದು ಅವಶ್ಯಕ ಹಾಗೂ ಅನಿವಾರ್ಯವಾಗಿದೆ. ಆದರೆ ಇಂದಿನ ಆಧುನಿಕ ಯುಗದ ಜನರು ಅವನ್ನು ಪ್ರಯೋಜನಕ್ಕಿಂತ ಜಾಸ್ತಿ ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಮುಖ್ಯವಾಗಿ ಹೇಳಬೇಕಾದರೆ ಜಾಹೀರಾತಿನ ಶೇ.೯೯ ಭಾಗ ಸುಳ್ಳು ತುಂಬಿಕೊಂಡಿರುತ್ತದೆ. ಇದಕ್ಕೊಂದು ಉದಾಹರಣೆ ಕೊಡಲು ಇಚ್ಚಿಸುತ್ತೇನೆ. ಹುಡುಗಿಯರ ಮುಖದ ಕಾಂತಿ ಹೆಚ್ಚಿಸಲು ಬಳಸುವ "ಫೇರ್ ಎಂಡ್ ಲವ್ಲಿ" ಕ್ರೀಮ್ ನ ಜಾಹೀರಾತಿನಲ್ಲಿ ಮೊದಲು ಒಬ್ಬಳು ಹುಡುಗಿಯ ಮುಖವು ಕಳೆಯಿಂದ ಕೂಡಿರುವುದಿಲ್ಲ ಆದರೆ ೧,೨,೩ ... ಹೀಗೆ ಏಳು ದಿನದಲ್ಲಿ ಅವಳು ಬಹಳ ಸುಂದರಿಯಾಗಿ ಬಿಟ್ಟಿರುತ್ತಾಳೆ.ಇದೆಲ್ಲಾ ನಿಜವೇ ಆದಲ್ಲಿ ಆಫ್ರಿಕಾದವರು ಇಂದು ಕಪ್ಪಾಗಿಯೇ ಉಳಿಯುತ್ತಿರಲಿಲ್ಲ. ಇದರಿಂದಲೇ ಎಷ್ಡು ಇವರ ಸತ್ಯ ತುಂಬಿದೆ ಎಂದು ಗೊತ್ತಾಗುತ್ತದೆ.