ಸದಸ್ಯ:Asha Rani N563/ನನ್ನ ಪ್ರಯೋಗಪುಟ
ನನ್ನ ಪುಟ್ಟ ಸಂಸಾರ
ನಾನು ಆಶಾ ರಾಣಿ ಎನ್. ನಾನು , ನನ್ನ ತಾಯಿ ,ನನ್ನ ತಂದೆ ,ಹಾಗು ನನ್ನ ಸಹೋದರ ತುಂಬು ಸಂಸಾರದಂತೆ ಒಟ್ಟಿಗೆ ವಾಸಿಸುತ್ತಿದೇವೆ . ನನ್ನ ತಾಯಿ ಲಲಿತ,ನನ್ನ ತಂದೆ ನಾಗರಾಜು ಹಾಗು ನನ್ನ ಸಹೋದರ ಸುನಿಲ್. ನನ್ನ ತಾಯಿಯು ನನ್ನನ್ನು ಅತ್ಯಂತ ಪ್ರೀತಿಯಿಂದ ಸಾಕಿ ಸಲಹಿದ್ದಾರೆ. ನನ್ನ ಆಗು -ಹೋಗುಗಳಿಗೆ ಭುಜಕೊಟ್ಟು ಸಲಹಿದ್ದಾಳೆ. ಆಕೆಯ ಅಪಾರ ತ್ಯಾಗಕ್ಕೆ ನಾನು ಸಾದಾ ಚಿರಋಣಿ. ನನ್ನ ಅಚ್ಚು ಮೆಚ್ಚಿನ ತಂದೆ ಬರವಸೆಯ ಸಾಗರವನ್ನು ಇಟ್ಟಿದ್ದಾರೆ. ದಿನವೂ ನನ್ನ ಇಷ್ಟಕಷ್ಟಗಳಿಗೆ ಸಹಾನುಭೂತಿಯಿಂದ ಸಹಕರಿಸಿ ಅಪಾರ ಕೊಡುಗೆಗೆ ಭಾಗಿಯಾಗಿದ್ದಾರೆ . ನನಗೂ ಸಹ ಅವರ ಮೇಲೆ ಗೌರವ , ಪ್ರೀತಿ ಹೆಚ್ಚಿನ ಮಟ್ಟದಲ್ಲಿ ಇದೆ . ನಾವಿಬ್ಬರು ಸಂಪೂರ್ಣ ಸಸ್ಯ - ಹಾರಿಗಳು . ಸೊಪ್ಪು , ತರಕಾರಿಗಳನ್ನು ಸೇವಿಸುತ್ತಾ ಮಾಂಸ ಆಹಾರವನ್ನು ದ್ವೇಷಿಸುತ್ತಾ ಸಾಗುತಿರುವೆವು. ಇನ್ನು ನನ್ನ ಸಹೋದರನ ಬಗ್ಗೆ ಹೇಳುವುದಾದರೆ ಆತ ತುಸು ತುಂಟ ಸ್ವಭಾವಿ.ನಮ್ಮಿಬ್ಬರ ಮಧ್ಯೆ ತುಂಬಾ ಕೋ ಪ ಮುನಿಸುಗಳಿದ್ದರು ಅನುಸರಿಸಿಕೊಂಡು ಸಂತೋಷವಾಗಿರುತೇವೆ. ಆತನು ಸಹ ನನ್ನ ಸರಿ ತಪ್ಪುಗಳನ್ನು ಗುರುತಿಸಿ ,ತಿದ್ದಿ ,ತೀಡಿ ನನ್ನ ಸಾಧನೆಗೆ ಸಹಕರಿಸಿದ್ದಾನೆ.ನನ್ನ ಈ ಪುಟ್ಟ ಸಂಸಾರದ ಜವಾಬ್ದಾರಿಯನ್ನು ಆತನೆ ನಿರ್ವಹಿಸುತಿದ್ದಾನೆ. ಆತನಿದ್ದರೆ ಸಾಕು ಮನೆಯಲ್ಲಿ ಸಂತೋಷದ ವಾತಾವರಣವು ತುಂಬಿರುತ್ತದೆ.ನನ್ನ ಜೀವನದ ಹಾದಿಯಲ್ಲಿ ನನ್ನ ಸ್ನೇಹಿತರು ಕೂಡ ನನ್ನ ಆಗುಹೋಗುಗಳಿಗೆ ಸಹಾಯಮಾಡುತ್ತಾ , ನನ್ನ ಕಷ್ಟಗಲನ್ನು ಸಮಾನವಾಗಿ ಹಂಚಿಕೊಳ್ಳುತ್ತಾ ಸಾಗಿದ್ದಾರೆ.
ನನ್ನ ದೇವಾಲಯ
ನನ್ನ ಬಾಲ್ಯದ ವಿದ್ಯಾಭ್ಯಾಸವನ್ನು ಬೆಂಗಳೂರು ಜಿಲ್ಲಾಯ ದೊಮ್ಮಸಂದ್ರ ಗ್ರಾಮದಲ್ಲಿರುವ ಶ್ರೀ ಸರಸ್ವತಿ ವಿಧ್ಯಾನಿಕೆತನದಲ್ಲಿ ಮುಗಿಸಿರುವೆ. ಹಾಗೆ ನನ್ನ ಪದವಿ ಪೂರ್ವ ವಿದ್ಯಾಬ್ಯಾಸವು ಅಲ್ಲೇ ಮುಗಿಸಿದೆ.ಸುಂದರ ಕ್ಷಣಗಳನ್ನು ಸಂಪೂರ್ಣವಾಗಿ ನನ್ನ ಸ್ನೇಹಿತರು ಹಾಗು ನನ್ನ ಬಂದುಭಗಿನಿಯರ ಜೊತೆಯಲ್ಲಿ ಅತ್ಯಂತ ಸುಂದರ , ರಮಣೀಯವಾಗಿ ಕಳೆದಿದ್ದೇನೆ . ನನ್ನ ಬಾಲ್ಯವನ್ನು ಅತಿ ಹೆಚ್ಚು ಶಾಲ್ಲೆಯಲ್ಲಿಯೇ ಕಳೆದಿರುವೆನು. ನಾನು ಸ್ವಲ್ಪ ಸಂಕೋಚ ಮನಸ್ಸಿನವಳು. ಚಿಕ್ಕವಳಿರುವಾಗ ಆಡುತ್ತಾ ನಕ್ಕುನಲಿಯುತ್ತಾ ಎಲ್ಲರ ಜೊತೆಯಲ್ಲಿ ಬೆರೆಯಲು ಆರಂಭಿಸಿದೆ .ಅನಂತರವೇ ಹೆಚ್ಚಿನ ವಿಷಯಗಳು ಹಾಗು ಅನೇಕ ಸಂಗತಿಗಳನ್ನು ತಿಳಿದುಕೊಳ್ಳಲು ದಾರಿಯಾಯಿತು. ದಿನೇ ದಿನೇ ಅನೇಕ ಮಹತ್ವದ ವಿಷಯವನ್ನು ಒಳಗೂಡಿಸಿಕೊಂಡು, ನನ್ನ ಬಾಲ್ಯ ದಿನಗಳನ್ನು ಸಾಗಿಸುತ್ತಾ ನಡೆದೇ .
ನಾನು ಸರಸ್ವತಿ ವಿದ್ಯಾನಿಕೇತನ ಶಾಲೆಯಲ್ಲಿ ಓದಿದ ಪ್ರತಿ ಕ್ಷಣಗಳನ್ನೂ ನನ್ನ ಜೀವನದಲ್ಲಿ ನಾನು ಎಂದೂ ಮರೆಯಲಾರೆನು. ನಾನು ೭ ನೇ ತರಗತಿ ಓದುತ್ತಿದ್ದಾಗ, ಶಾಲೆ ವಾರ್ಷಿಕೋತ್ಸವದಲ್ಲಿ ರಾಮಾಯಣದ ಸೀತಾ ಪಾತ್ರವನ್ನು ನಿರ್ವಹಿಸಿದ್ದೆನು. ಆ ಪಾತ್ರಕ್ಕೆ ನನಗೆ ಎಲ್ಲರೂ ತುಂಬ ಪ್ರಶಂಸೆ ಕೊಟ್ಟಿದ್ದಾರೆ. ನಾನು ೧೦ ನೇ ತರಗತಿಯಲ್ಲಿ ಓದುತ್ತಿದ್ದಾಗ ಶಾಲೆಯ ಪ್ರವಾಸ ಕರೆದುಕೊಂಡು ಹೋಗಿದ್ದರು . ಮಹಾರಾಷ್ಟ್ತ್ರ ,ಶಿರಡಿ ,ಹಂಪೆ , ಶನಿಸಿಂಗನಾಪುರ ,ಪುಣೆ , ಪಂಡರಾಪುರ, ಐಹೊಳೆ, ಪಟ್ಟದಕಲ್ಲು ಇನ್ನೂ ಇತ್ಯಾದಿ ಊರುಗಳನ್ನು ವೀಕ್ಶಿಸಿದೆವು . ಪ್ರವಾಸವನ್ನು ನಾನು ತುಂಬಾ ಆನಂದದಿಂದ ಕಳೆದೆ. ನಮ್ಮ ಶಾಲೆಯಲ್ಲಿ ೧೦ ನೇ ತರಗತಿಗೆ ರಾತ್ರಿಯು ಓದಿಕೊಳ್ಳುವುದಕ್ಕೆ ಮತ್ತು ಎಲ್ಲಾ ವಿದ್ಯಾರ್ಥಿಗಳು ಪ್ರಥಮ ಧರ್ಜ್ಜೆಯಲ್ಲಿ ತೇರ್ಗಡೆಯಾಗಲು ನಮ್ಮ ಶಿಕ್ಶಕರು ನಮಗೆ ತುಂಬ ಸಹಾಯ ಮಾಡಿದ್ದಾರೆ. ರಾತ್ರಿಯ ವೇಳೆ ಓದುವಾಗ ನಮಗೆ ಹಾಲು, ಊಟ, ಬಿಸ್ಕೆಟ್, ಇನ್ನಿತರ ಪಾನೀಯಗಳನ್ನು ನಮಗೆ ಕೊಟ್ಟು ಉತ್ತಮ ಧರ್ಜ್ಜೆಯಲ್ಲಿ ತೇರ್ಗಡೆಯಾಗಲು ನಮಗೆ ತುಂಬಾ ಸಹಾಯ ಮಾಡಿದ್ದಾರೆ. ನಮ್ಮ ಶಾಲೆಯಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿಯನ್ನು ಆಚರಿಸುತ್ತಾರೆ . ಶಿಶು ವಿಹಾರದಿಂದ ೭ ನೇ ತರಗತಿಯ ವರೆಗೆ ಎಲ್ಲಾ ಮಕ್ಕಳು ರಾಧೇ, ಕೃಷ್ಣರ ವೇಷ ಧರಿಸುತ್ತಾರೆ.ಅದರಲ್ಲೂ ನಾನು ಕೂಡ ಬಾಗವಹಿಸಿರುವೆ. ಹಾಗೆಯೇ ಪ್ರತೀ ಕಾರ್ತಿಕ ಪೌರ್ಣಮಿಯಂದು ಸಾಮೂಹಿಕ ಶ್ರೀ ಸತ್ಯನಾರಾಯಣ ಸ್ವಾಮಿ ಪೂಜೆಯನ್ನು ನಿರ್ವಹಿಸುತ್ತಾರೆ ಹಾಗೆಯೇ ಎಲ್ಲಾ ಹಬ್ಬಗಳನ್ನು ನಮ್ಮ ಶಾಲೆಯಲ್ಲಿ ಆಚರಿಸುತ್ತೆವೆ. ನಮ್ಮ ಶಾಲೆಯು, ನಮ್ಮ ಸಂಸ್ಕೃತಿ ಹಾಗು ವೈವಿಧ್ಯತೆಗಳಿಗೆ ಹಾಗು ದೇಶಪ್ರೇಮಕ್ಕೆ ಮುಖ್ಯ ಪ್ರಾಮುಖ್ಯತೆಯನ್ನು ಕೊಡುತ್ತದೆ . ಹೀಗಾಗಿ ನಮ್ಮ ಶಾಲೆ ಹಾಗು ನಮ್ಮ ಶಿಕ್ಷಕರು ನನಗೆ ತುಂಬ ಅಚ್ಚು- ಮೆಚ್ಚು.
ನನ್ನ ಪ್ರಿಯಕರವಾದ ಕ್ರೀಡೆ
ಇನ್ನು ಹೆಚ್ಚಿನ ವಿಷಯ ಎನೆoದರೆ ನಾನು ಒಬ್ಬ ಕ್ರೀಡಾಪಟು , ಕಬ್ಬಡಿ ಆಟದ ಚಾಲೂಕಿನ ಆಟಗಾರತಿ . ಕಬ್ಬಡಿ ಒಂದು ನನ್ನ ಅತ್ಯಂತ ಇಷ್ಟವಾದ ಆಟವಾದರೆ, ಆ ಆಟದಲ್ಲಿ ನನ್ನ ಸ್ನೇಹಿತರ ಜೊತೆ ತಂಡದಲ್ಲಿ ಆಡುವುದು ಸಂತೋಷ ನೀಡುವ ಸಂಗತಿ . ಏಳು ಜನರ ತಂಡದಲ್ಲಿ ಆಡುವಾಗ ಎಲ್ಲರೂ ಸರಿಸಮವಾಗಿ ಒಬ್ಬರನನ್ನೊಬ್ಬರು ಸಂಪೂರ್ಣರಾಗಿ ಅರ್ಥ ಮಾಡಿಕೊಂಡು ಚಾಣುಕ್ಯ ತೋರುತ್ತ ಆಡುವ ಆಟ . ಕಬ್ಬಡಿ ಆಟದಲ್ಲಿ ಜಿಲ್ಲಾ ಮಟ್ಟದ ಪ್ರಶಸ್ತಿಗಳನ್ನು ಪಡೆದಿರುತ್ತೇನೆ .ಈ ಆಟದಲ್ಲಿ ನಾನು ಪ್ರಶಸ್ತಿಯನ್ನು ಪಡೆಯಲು ನನ್ನ ಶಾಲೆಯ ಕ್ರೀಡಾ ಗುರುಗಳು ನನಗೆ ತುಂಬಾ ಸಹಾಯ ಮಾಡಿದ್ದಾರೆ .ನಾನು ೬ ನೇ ತರಗತಿಯಿಂದ ವಾಲಿಬಾಲ್, ಕಬ್ಬಡಿ , ಖೋಖೋ , ಇನ್ನೂ ಮುಂತಾದ ಆಟವನ್ನು ಕಲಿತಿದ್ದೇನೆ . ನನ್ನ ಜೀವನದಲ್ಲಿ ೧ನೆ ತರಗತಿಯಿಂದ ದ್ವಿತೀಯ ಪಿ.ಯು.ಸಿ.ಸಿವರೆಗಿನ ಶಾಲೆಯ ಎಲ್ಲಾ ಚಟುವಟಿಕೆಗಳಿಗೆ ನಮ್ಮ ಶಾಲೆಯು ನನಗೆ ತುಂಬ ಪೂರಕವಾಗಿದೆ .
ನನ್ನ ಸ್ಪೂರ್ತಿದಾಯಕ ವ್ಯಕ್ತಿ
ನನಗೆ ಪುಸ್ತಕಗಳನ್ನು ಓದುವುದು ಎಂದರೇ ತುಂಬಾ ಇಷ್ಟ ಅದರಲ್ಲೂ ಕ್ರೀಡಾಪಟುಗಳ ಸಾಧನೆ , ಹಾಗು ನಮ್ಮ ಕವಿಗಳು ಬರೆದಿರುವಂತಹ ಪುಸ್ತಕಗಳು ಹಾಗು ನಮ್ಮ ವಿಜ್ಞಾನಿಗಳು ಅನ್ವೇಷಣೆ ಮಾಡಿರುವಂತಹ ವಿಷಯಗಳು ಬಗ್ಗೆ ಓದಿ ತಿಳಿದುಕೊಳ್ಳುವುದು ನನಗೆ ತುಂಬಾ ಇಷ್ಟ . ನನ್ನ ಹವ್ಯಾಸಗಲು ಓದುವುದು , ಮತ್ತು ಪ್ರವಾಸ ಮಾಡುವುದು.
ನಾನು ನಮ್ಮ ವಿಜ್ಞಾನಿಯಾದ ಡಾ.ಎ.ಪಿ.ಜೆ ಅಬ್ಬುಲ್ ಕಲಾಂರ ಪುಸ್ತಕಗಳನ್ನು ತುಂಬಾ ಓದುತ್ತೇನೆ .ಅವರ ಸಾದನೆ ಹಾಗು ಅವರ ಪರಿಶ್ರಮ , ಆತ್ಮವಿಶ್ವಾಸ ಇವೆಲ್ಲವೂ ನನಗೆ ನನ್ನ ಜೇವನದಲ್ಲಿ ಅತಿ ದೃಢನಂಬಿಕೆಯನ್ನು ತಂದುಕೊಟ್ಟಿದೆ . ನಾನು ಅವರು ಹೇಳಿರುವ ಆತ್ಮವಿಶ್ವಾಸದ ಮಾತುಗಳನ್ನು ನನ್ನ ಜೇವನದಲ್ಲಿ ಅಳವಡಿಸಿಕೊಂಡಿದ್ದೇನೆ ಇದರಿಂದ ನನಗೆ ತುಂಬ ಸಂತೋಷ ಹಾಗೂ ಆತ್ಮವಿಶ್ವಾಸ ಬೆಳೆದಿದೆ . ಹಾಗಾಗಿ ನನಗೆ ಡಾ. ಎ .ಪಿ.ಜೆ,ಅಬ್ಬುಲ್ ಕಲಾಂರವರು ಆದರ್ಶ ವೈಕ್ತಿಯಾಗಿದ್ದಾರೆ .ಅವರು ಹೇಳಿರುವ ಬೋಧನೆಗಳನ್ನು ಅಳವಡಿಸಿಕೊಂಡು ಜೀವನದ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದೆನೆ. ಎಷ್ಟೋ ಜನರು ಅವರ ಮಾರ್ಗದರ್ಶನವನ್ನು ಅನುಸರಿಸಿ ಉತ್ತಮ ಹಾದಿಯಲ್ಲಿ ವಿಜಯ ಫಲಕವನ್ನು ಗಲ್ಲಿಸಿದ್ದಾರೆ.
ನನ್ನ ನೆಚ್ಚಿನ ನಟ ಡಾ.ರಾಜ್ ಕುಮಾರ್ . ಅವರು ನಮ್ಮ ಕನ್ನಡ ಚಿತ್ರ ರಂಗದ ಅತ್ಯುನ್ನತ ಹಾಗು ಶ್ರೆಷ್ಟವಾದ ನಟ.ಅವರ ಸದನೆ ಗಗನಕು ಮೀರಿದು . ಕನ್ನಡ ಚಿತ್ರಾ ರಂಗದ ದ್ರುವತಾರೆ ಎoದೆ ಹೆಸರಾದ ಪ್ರಸಿದ್ದ ನಟ.೨೦೦ ಕೂ ಹೆಚ್ಚು ಚಿತ್ರ ಗಳಲ್ಲಿ ನಟೀಸಿದರೆ .