ನಿಗೂಢ ಸುಂದರ ಬನ

ಈ ಕಾಡಿಗೆ ಸುಂದರ ಬನ ಎಂಬ ಹೆಸರು ಬಂದದ್ದು ಅಲ್ಲಿ ಹೇರಳವಾಗಿದ್ದ 'ಸುಂದರಿ' ವ್ರಕ್ಷಗಳಿಂದ ಇವು ಮ್ಯಾಂಗ್ರೋ ಕಾಡುಗಳಲ್ಲಿ ವಿಶಾಲವಾಗಿ ಹರಡಿಕೊಂಡಿವೆ. ಪಶ್ಚಿಮ ಬಂಗಾಳದ ಕರಾವಳಿ ತೀರ ಸಮೀಪಿಸುತ್ತಿದ್ದಂತೆಯೇ ಸುಂದರ ಬನದ ದ್ವೀಪಗಳು ಕಾಣಿಸಿಕೊಳ್ಳುತ್ತವೆ. ಕಲ್ಕತ್ತದಿಂದ ೧೦೦ ಕಿ.ಮೀ ದೂರ. ಈ ಪ್ರದೇಶದಲ್ಲಿ ಒಟ್ಟು ೫೬ ದ್ವೀಪಗಳನ್ನು ಕಾಣಬಹುದು. ಈ ದ್ವೀಪಗಳು ಮ್ಯಾಂಗ್ರೋ ಕಾಡುಗಳಿಂದ ಸುತ್ತುವರಿದಿದ್ದು ಅಲಲ್ಲಿ ಮಾಪ‍ಟ್ಟಿರುವ ಸಹಸ್ರಾರು ಕೊರಕಲುಗಳ ಮುಖಾಂತರ ಉಪ್ಪು ನೀರು ಹರಿಯುತ್ತದೆ. ಸಾಜೆನ್ಕಲಿ ಎನ್ನುವ ಪ್ರದೇಶ ಪ್ರವಾಸಿಗರಿಗೆ ಅಚ್ಚುಮೆಚ್ಚು.

ಗಂಗಾ, ಬಹ್ರ್ಮಪುತ್ರ, ಮೇಘಾನ ನದಿಗಳು ಇಲ್ಲಿ ವಿಶಾಲ ಮುಖಜ ಭೂಮಿಯನ್ನು ಸ್ರಷ್ಠಿವೆ. ಸುಂದರ ಬನ ಪ್ರಪಂಚದ ಅತೀ ದೊಡ್ಡ ಕಾಡು. ಆದರೆ ಪರಿಸರ ಪ್ರಿಯರು ಸಾಹಸಿಗಳು ಇಲ್ಲಿಗೆ ಲಗ್ಗೆ ಇಡುತ್ತಲ್ಲೇ ಇದ್ದಾರೆ.

ಸುಂದರ ಬನದ ಕಾಡುಗಳಲ್ಲಿ ಮೊಸಳೆ ಶಾಕ್ ಮತ್ತು ವಿಷಕಾರಿ ಹಾವುಗಳಿವೆ. ಕಡಲ್ಗಳ್ಳರಿಗೆ ಇದು ಸ್ವಗ‍ಸದ್ರಶ ಜಾಗ. ಅಪರೂಪದ ಪಕ್ಷಿಗಳನ್ನೂ ನೋಡಬಹುದು. ಸಾಮಾನ್ಯವಾಗಿ ಕಿಂಗ್ ಫಿಶರ್ ಮತ್ತು ರಣಹದ್ದುಗಳು ಹೇರಳವಾಗಿ ಕಾಣಸಿಗುತ್ತದೆ. ೨೦ನೇ ಶತಮಾನದ ಆರಂಭದಲ್ಲಿ ಈ ಕಾಡನ್ನು ವ್ರಜಾನಿಕವಾಗಿ ಬೆಳೆಸುವುದರ ಬಗ್ಗೆ ಚಿಂತಿಸಲಾಯಿತು ೧೯೭೩ರಲ್ಲಿ ಸುಂದರಬನವನ್ನು ಹುಲಿ ರಕ್ಷಿತಾರಣ್ಯ ಎಂದು ಘೋಷಿಸಲಾಯಿತು. ಇದೀಗ ವಿಶ್ವ ಪಾರಂಪರಿಕ ಪಟ್ಟಿಗೆ ಸೇರಿದೆ.

ನವೆಂಬರ್ ನಿಂದ ಫೆಬ್ರವರಿ ತಿಂಗಳವೆರೆಗೆ ಇಲ್ಲಿ ನದ್ದು ಹಿತಕರ ಹವಾಮಾನ. ಮಾಚ್ ತಿಂಗಳಲ್ಲಿ ಸುಡು ಬಿಸಿಲು (೩೫ರಿಂದ ೪೦ ಡಿಗ್ರಿ ಸಿ.) ಜೂನ್ ತಿಂಗಳಿನಲ್ಲಿ ಮಳೆ ಶುರುವಾಗುವುದರಿಂದ ಸೆಪ್ಟೆಂಬರ್ ವರೆಗೂ ಅಲ್ಲಿಗೆ ಪ್ರಯಾಣ ಬೆಳೆಸುವುದು ಕಷ್ಟ. ಸೊಳ್ಳೆಗಳ ಕಾಟ ಹೆಚ್ಚು. ವಿದ್ಯುತ್ ಸಂಪಕ‍ವೂ ಇಲ್ಲ. ರೆಸಾಟ್ ಗಳಲ್ಲಿ ಸೋಲಾರ್ ಬೆಳಕು ಇಲ್ಲವೇ ಜನರೇಟರ್ ಬಳಸುತ್ತಾರೆ.