ಉತ್ತಮ ಆಡಳಿತ
ದರ  ಹೆಚ್ಚಳ- ಜನಜೀವನ

ವಿಶ್ವದಲ್ಲಿ ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ಭಾರತವು ಆಗ್ರಸ್ಥಾನದಲ್ಲಿದೆ. ನಮ್ಮ ದೇಶದ ಹೆಸರೇ ಹೇಳುವ ಹಾಗೆ ನಮ್ಮ ದೇಶವು ಅತ್ಯಂತ ಪ್ರಕಾಶಮಾನವಾಗಿದೆ. ಈ ದೇಶವು ಇನ್ನಷ್ಟು ಪ್ರಕಾಶಗೊಳ್ಳಲು ನಮ್ಮ ದೇಶವು ಸಾಮಾಜಿಕ ಸಮಸ್ಸೆಗಳಿಂದ ಹೊರಬರಬೇಕು. ದಿನದಿಂದ ದಿನಕ್ಕೆ ಎಲ್ಲಾ ಬೆಲೆಗಳು ವೃದ್ಧಿಸುತ್ತಾ ಇವೆ. ಅಸಾಮ್ಯಾನರ ಹಿತದೃಷ್ಟಿಯಿಂದ ನೋಡಿದರೆ ಸ್ಥೂಲ ಅರ್ಥಶಾಸ್ತ್ರದ ಹೆಜ್ಜೆಗಳು ಅನೇಕ ಅಪಾಯಗಳಿಂದ ಕೂಡಿದೆ. ಈಗಲೇ ಖಾದ್ಯ ತೈಲ, ತರಕಾರಿ ವಿದ್ಯುತ್, ನೀರು, ಹಾಲು ಹಾಗೂ ಸಾರಿಗೆ ದರಗಳಲ್ಲಿ ಇನ್ನಷ್ಟು ಕಷ್ಟವನ್ನು ಅನುಭವಿಸುತ್ತಾರೆ. ಚಿನ್ನಕ್ಕೆ ಮತ್ತು ಪೆಟ್ರೊಲ್ ಗೆ ಇನ್ನೂ ಜಾಸ್ತಿ ರೇಟ್ ಆಗುತ್ತದಂತೆ. ಆದರೆ ಜನರ ಆದಾಯ ಮಾತ್ರ ಏರುವುದಿಲ್ಲ. "ಹಾಸಿಗೆ ಇದ್ದಷ್ಟೇ ಕಾಲು ಚಾಚು" ಎನ್ನುವ ನಾನ್ನಡಿಯಿದೆ, ಆದರೆ ಈಗ ಇದನ್ನು ಸಾಧಿಸಲು ಸಾಧ್ಯವಿಲ್ಲ. ಒಟ್ಟಾರೆ ನಮಗೆ ಉಳಿಗಾಲವಿಲ್ಲ ಎನ್ನುವ ಭೀತಿ ಎಲ್ಲೆಡೆ ಹರಡಿತು ಮಾಡುವುದೇನು ಎಂದು ದಿಕ್ಕು ತೋಚದಾದರು. ಆತಂಕದಿಂದ ಟ.ವಿ ಪರದೆಯನ್ನು ನೋಡುತ್ತಾ ಸುಮ್ಮನೆ ಕುಳಿತು ಬಿಡುತ್ತಾರೆ. ಸ್ವಾತಂತ್ರ್ಯ ಸಿಕ್ಕ ಸಂದರ್ಭದಲ್ಲಿ ಅಮೇರಿಕಾ ಡಾಲರ್ಗೆ ವಿನಿಮಯ ದರ ರೂಪಾಯಿ ಇತ್ತಂತೆ. ಈ ಮಾಹಿತಿಯ ಬಗ್ಗೆಯೂ ಗೊಂದಲವಿದೆ. ಆ ಬಳಿಕ ನಿರಂತರ ಕೆಳಮುಖದ ಹಾದಿ. ಇದರಿಂದ ಎಲ್ಲಾ ಸಮಸ್ಯೆಗಳು ಉದ್ಭವಿಸುತ್ತದೆ.