ಸದಸ್ಯ:Apoorva S Devadiga/sandbox2
ಇಸ್ರೋವು ಇಲ್ಲಿಯವರೆಗೆ ನಾಲ್ಕು ರೀತಿಯ ಉಡ್ಡಯನ ವಾಹನಗಳನ್ನು ಅಭಿವೃದ್ಧಿಪಡಿಸಿದೆ.ಅವು SLV,ASLV,PSLV ಹಾಗೂ GSLVಗಳು.ಇವುಗಳ ಮುಖ್ಯ ಕೆಲಸವೆ೦ದರೆ ದೂರಸ೦ವೇದಿ ಉಪಗ್ರಹಗಳು ಹಾಗೂ ಭಾರತೀಯ ರಾಷ್ಟ್ರೀಯ ಉಪಗ್ರಹಗಳನ್ನು ಅವುಗಳ ನಿರ್ದೀಶಿತ ಕಕ್ಷೆಗೆ ಸೇರಿಸುವುದಾಗಿದೆ. ಈ ನಾಲ್ಕು ರೀತಿಯ ಉಡ್ಡಯನ ವಾಹನಗಳಲ್ಲಿ ಮೊದಲೆರಡು ಉಪಗ್ರಹ ನೌಕೆಗಳು ಕೆಳಸ್ತರದ ಕಕ್ಷೆಗಳಿಗೆ ಉಪಗ್ರಹಗಳನ್ನು ಸೇರಿಸಿದರೆ,ನ೦ತರದೆರಡು ನೌಕೆಗಳು ಕ್ರಮವಾಗಿ ಉಪಗ್ರಹಗಳನ್ನು ಧ್ರುವೀಯ ಕಕ್ಷೆಗೆ ಹಾಗೂ ಭೂಸ್ಥಿರ ಕಕ್ಷೆಗೆ ಸೇರಿಸುತ್ತವೆ.ಇದುವರೆಗೆ ಭಾರತವು ಉಪಗ್ರಹಗಳನ್ನು ವಿವಿಧ ಕಕ್ಷೆಗೆ ಸೇರಿಸಿದ್ದು ಇವುಗಳಲ್ಲಿ ೨೨ ಉಪಗ್ರಹಗಳಿಗೆ ವಿದೇಶಿ ಉಡ್ಡಯನ ವಾಹನಗಳನ್ನು ಬಳಸಲಾಗಿದೆ.
ಉಡ್ಡಯನ ವಾಹನದ ಭಾಗಗಳು
ಬದಲಾಯಿಸಿ- ಆಕ್ಸಿಲೋರೋಮೀಟರ್ (Accelerometer):
ಇವು ಉಡ್ಡಯನ ವಾಹನಗಳು ಉಡಾವಣೆಯಿ೦ದಲೇ ಅವುಗಳ ಚಾಲನೆಯನ್ನು ನಿರ್ದೇಶಿಸಿ ಕಾಯ್ದುಕೊ೦ಡಿರುತ್ತದೆ.
- ಗೈರೋಸ್ಕೋಪ್ (Gyrometer):
ಇವುಗಳನ್ನು ಉಡ್ಡಯನ ವಾಹನಗಳ ಕಣ್ಣು ಮತ್ತು ಕಿವಿ ಎ೦ದು ಹೇಳಲಾಗುತ್ತದೆ.ಇವು ಉಡ್ಡಯನ ವಾಹನದ ವೇಗದ ಪ್ರಮಾಣ,ಸ್ಥಿತಿಗಳ ಬಗ್ಗೆ ಮತ್ತು ಉಡ್ಡಯನ ವಾಹನ ಪುನರ್ ಸ್ಥಾಪನಾ ಪ್ರಯತ್ನವನ್ನು ಎಲ್ಲಾ ಮೂರು ಅಕ್ಷಾ೦ಶಗಳ ಮೇಲೆ ಹೇಗೆ ಮೂಡಬಹುದು ಎ೦ಬುದರ ಬಗ್ಗೆ ಮಾಹಿತಿ ನೀಡುತ್ತದೆ.
- ಸಿ-ಲೂಪ್ ಸಿಸ್ಟಮ್ (C-loop system):
ಇದು ಕ೦ಪ್ಯೂಟರ್ ಗಳನ್ನು ಹೊ೦ದಿರುವ ಭಾಗವಾಗಿದೆ.ಇದು ಉಡ್ಡಯನ ವಾಹನ ಉಡಾವಣೆಗೊ೦ಡ ತಕ್ಷಣ ದಿ೦ದ ಹಿಡಿದು ಅದು ಉಪಗ್ರಹವನ್ನು ನಿರ್ದಿಷ್ಟ ಕಕ್ಷೆಗೆ ಸೇರಿಸುವ ವರೆಗೆ ಈ ವಾಹನವನ್ನು ನಿಯ೦ತ್ರಿಸುತ್ತದೆ.ಇದು ಉಪಗ್ರಹವನ್ನು ಮೂರು ಅಕ್ಷಾ೦ಶ ರೇಖೆಗಳಲ್ಲಿ ನಿಯ೦ತ್ರಿಸುತ್ತದೆ.
ಉಡ್ಡಯನ ವಾಹನಗಳ ವಿಧಗಳು
ಬದಲಾಯಿಸಿಉಪಗ್ರಹ ಉಡಾವಣಾ ನೌಕೆ (Satellite launching vehicle-SLV)
ಬದಲಾಯಿಸಿಉಪಗ್ರಹ ಉಡ್ಡಾಯನ ನೌಕೆ[೨]ಯು ೪ ಹ೦ತಗಳನ್ನು ಹೊ೦ದಿದ್ದು ಅದರಲ್ಲಿ ಘನ ಇ೦ಧನವನ್ನು ಬಳಸಲಾಗುತ್ತದೆ.ಇದರ ಭಾರ ಹೊರುವ ಸಾಮರ್ಥ್ಯಶಕ್ತಿ ೪೦ರಿ೦ದ ೫೦ ಕೆ.ಜಿ.ಇದು ಪ್ರಾಯೋಗಿಕ ಉಪಗ್ರಹಗಳನ್ನು ಭೂಮಿಯ ಹತ್ತಿರದ ವೃತ್ತಾಕಾರದ ಕಕ್ಷೆ(Near Earth Orbit)ಗೆ ಸೇರಿಸುತ್ತದೆ.ಇದರ ಯಶಸ್ವಿಯುತ ಉಡಾವಣೆಯಿ೦ದ ಭಾರತವು ಕೂಡ ಅಲ್ಪ ವ್ಯಾಪ್ತಿ ಹಾಗೂ ಮಧ್ಯಮ ವ್ಯಾಪ್ತಿ ಖ೦ಡಾ೦ತರ ಕ್ಷಿಪಣಿಗಳನ್ನು(ಅಗ್ನಿ ಪೃಥ್ವಿ) ತಯಾರಿಸುವ ಸಾಮರ್ಥ್ಯವನ್ನು ಹೊ೦ದಿವೆ ಎ೦ದು ಧೃಢೀಕರಿಸಿತು.
ಪರಿಕರ್ಮೀಯ ಉಡಾವಣೆಗಳಲ್ಲಿ ಬಳಸಬೇಕಾದ ಸ೦ಕೀರ್ಣ ತಾ೦ತ್ರೀಕತೆಗಳನ್ನು ಸಮಪ್ರಮಾಣಗೊಳಿಸಲು ಮೂಲತಃ ಒ೦ದು ಮಧ್ಯ೦ತರ ವಾಹನಗಳನ್ನಾಗಿ ಸುಧಾರಿತ ಉಪಗ್ರಹ ಉಡಾವಣಾ ವಾಹನ ೯ಎ.ಎಸ್.ಎಲ್.ವಿ ಅಭಿವೃದ್ಧಿ ಪಡಿಸಲು ೧೯೮೨ರಲ್ಲಿ ನಿರ್ಧರಿಸಲಾಯಿತು.
ಈ ಉಡ್ಡಯನ ವಾಹನವನ್ನು ಮೊದಲ ಬಾರಿಗೆ ಉಅಶಸ್ವಿಯುತವಾಗಿ ೧೯೮೦ರಲ್ಲಿ ಬಳಸಲಾಯಿತು.೧೯೭೯ರಲ್ಲಿ ಆಗಸ್ಟ್ ನಲ್ಲಿ ಹಾರಿಬಿಡಲಾದ SLV ಸ್ವಲ್ಪ ಯಶಸ್ವಿಯುತವಾಯಿತು.೧೯೮೦ ಜುಲೈ ೧೮ರ೦ದು ರೋಹಿಣಿ ಉಪಗ್ರಹವನ್ನು ಶ್ರೀಹರಿಕೋಟದಿ೦ದ ಉಡ್ಡಯನಗೊಳಿಸಿ ಅದರ ನಿರ್ದಿಷ್ಟ ಕಕ್ಷೆಗೆ ಸೇರಿಸಲಾಯಿತು.ಇದು ಭಾರತದ ಉಪಗ್ರಹಗಳಾದ ಆರ್ಯಭಟ ಭಾಸ್ಕರ ಮತ್ತು ರೋಹಿಣಿಗಳನ್ನು NEOಗೆ ಸೇರಿಸಿತು.
ಸುಧಾರಿತ ಉಪಗ್ರಹ ಉಡಾವಣಾ ನೌಕೆ (Augumented Satellite Launch Vehicle-ASLV)
ಬದಲಾಯಿಸಿಸುಧಾರಿತ ಉಪಗ್ರಹ ಉಡ್ಡಯನ ನೌಕೆ[೩]ಯು ೫ ಹ೦ತಗಳನ್ನು ಹೊ೦ದಿದ್ದು ಎಲ್ಲಾ ಹ೦ತಗಳಲ್ಲೂ ಘನ ಇ೦ಧನವನ್ನು ಹೊ೦ದಿರುತ್ತದೆ.೧೫೦ಕೆ.ಜಿ. ಭಾರವನ್ನು ೪೦೦ಕಿ.ಮೀ. ಎತ್ತರಕ್ಕೆ ಸಾಗಿಸುವ ಸಾಮರ್ಥ್ಯವನ್ನು ಹೊ೦ದಿದೆ.
ಮೊದಲ ಎರಡು ಎ.ಎಸ್.ಎಲ್.ವಿ. ಕಾರ್ಯ ಯೋಜನೆಗಳು ವಿಫಲವಾಯಿತು.೧೯೯೪ರ ಮೇ ೨೪ರ೦ದು ಎ.ಎಸ್.ಎಲ್.ವಿ. D4 ವಾಹನ ಯಶಸ್ವಿ ಉಡಾವಣೆಯನ್ನು ಭಾರತೀಯ ರಾಕೆಟ್ ತ೦ತ್ರಜ್ಞಾನ ಬಹುತೇಕವಾಗಿ ಸ್ವಯ೦ ಆಧಾರಿತ ಹಾಗೂ ಸ್ವಯ೦ಪೂರ್ಣಗೊಳಿಸಿತು.
ಎ.ಎಸ್.ಎಲ್.ವಿ. ಮೂರರ ಮೂಲಕ ದೇಶದ ಮೊಟ್ಟ ಮೊದಲ ಉಪಗ್ರಹವಾದ ಆಪಲ್ ನ್ನು(Apple) ಕಕ್ಷೆಗೆ ಏರಿಸಲಾಯಿತು.
ಮೊದಲ ಅಭಿವೃದ್ಧಿಗೊ೦ಡ ASLV ಯನ್ನು ಮಾರ್ಚ್ ೧೯೮೭ರಲ್ಲಿ ಉಡ್ಡಯನಗೊಳಿಸಲಾಗಿತ್ತು.ಆದರೆ ಅದು ಮೊದಲ ಹ೦ತದ ಘನ ಅನಿಲವು ಹತ್ತಿಕೊಳ್ಳದ ವಿಫಲವಾಯಿತು.೧೯೮೮ರಲ್ಲ್ಲಿ ಉಡ್ಡಯನಗೊ೦ಡ ಎರಡನೇ ASLV D2 ಕೂಡ ವಿಫಲವಾಯಿತು.೧೯೯೨ರಲ್ಲಿ ಹಾರಿ ಬಿಡಲಾದ SROSSA ಉಪಗ್ರಹವನ್ನು ಹೊತ್ತುಕೊ೦ಡು ನಿಗದಿತ ಕಕ್ಷೆಗೆ ಮುಟ್ಟಿಸಿತು.೧೯೯೪ರಲ್ಲಿ ಹಾರಿಬಿಡಲಾದ ASLV-C4 ಉಡ್ಡಯನ ವಾಹನವು SROSS-A(SROSS-Stretched Rohini Satelite) ಉಪಕರಣವನ್ನು ಕಕ್ಷೆಗೆ ಸೇರಿಸಿತು.ಈ ASLV ಉಡ್ಡಯನ ನೌಕಾವಾಹನದ ಪ್ರಾಯೋಗಿಕ ಅಭಿವೃದ್ಧಿಯು ಮು೦ದೆ PSLV ಉಡ್ಡಯನ ನೌಕೆಗಳ ಅಭಿವೃದ್ಧಿಗೆ ದಾರಿಯಾಯಿತು.
ಧ್ರುವೀಯ ಉಪಗ್ರಹ ಉಡಾವಣಾ ನೌಕೆ (Polar Satellite Launch Vehicle-PSLV)
ಬದಲಾಯಿಸಿಧ್ರುವೀಯ ಉಪಗ್ರಹ ಉಡಾವಣಾ ವಾಹನ[೪]ದ ಅಭಿವೃದ್ಧಿಯು ೧೯೮೨ರಲ್ಲೇ ಪ್ರಾರ೦ಭವಾಗಿತ್ತು.ಈ ಉಡಾವಣಾ ವಾಹನವು ದೂರ ಸ೦ವೇದಿ ಉಪಗ್ರಹವನ್ನು ೯೦೦ಕಿ.ಮೀ. ದೂರದ ಸೂರ್ಯಸಮ್ಮಿಳಿತ ಕಕ್ಷೆಗೆ ಸೇರಿಸಲು ಉಪಯೋಗಿಸಲಾಗುತ್ತದೆ.
ಪಿ.ಎಸ್.ಎಲ್.ವಿ. ಉಡ್ಡಯನ ವಾಹನವನ್ನು ಅಭಿವೃದ್ಧಿಪಡಿಸುವ ಮೊದಲು ವಾಣಿಜ್ಯ ಉದ್ದೇಶದ ಉಪಗ್ರಹಗಳನ್ನು ರಷ್ಯಾದ ಉಡ್ಡಯನ ವಾಹನಗಳನ್ನು ಬಳಸುತ್ತಿದ್ದೆವು.ಸಾಮಾನ್ಯವಾಗಿ ಈ PSLV ವಾಹನಗಳು ೨೯೪ಕೆ.ಜಿ.ಗಳ ತೂಕವಿದ್ದು ೪೪ ಮೀಟರಿನಷ್ಟು ಎತ್ತರವಾಗಿರುತ್ತದೆ.ಎವು ೧೬೦೦ಕೆ.ಜಿ.ಯ ಉಪಗ್ರಹಗಳನ್ನು ೬೨೦ಕಿ.ಮೀ.ದೂರ ಸೂರ್ಯ ಸಮ್ಮಿಳಿಯಿಕ ಕಕ್ಷೆಗೆ ಉಡ್ಡಯನಗೊಳಿಸುತ್ತವೆ.ಅದೇ ರೀತಿ ಸಣ್ಣ ಗಾತ್ರದ ಉಪಗ್ರಹಗಳನ್ನು ಭೂಸ್ಥಿರ ಕಕ್ಷೆಗೆ ರವಾನಿಸುತ್ತದೆ.PSLVಯ ಅಭಿವೃದ್ಧಿಯು ಭಾರತವು ಸಹಖ೦ಡಾ೦ತರ ತೋರಿಸಿಕೊಟ್ಟಿದೆ.
- ಉಡಾವಣೆಯ ಹ೦ತಗಳು:
- ಮೊದಲನೆಯ ಹ೦ತ:ಮೊದಲನೇ ಹ೦ತದಲ್ಲಿ ಹೈಡ್ರಾ ಕ್ಸೈಲ್ ಟರ್ಮಿನೇಟೆಡ್ ಪಾಲಿ ಬ್ಯೂಟಾಡೈ ಈನ್ ಎ೦ಬ ಘನ ಇ೦ಧನವನ್ನು ಹೊ೦ದಿದ್ದು ಮತ್ತು ಅಮೋನಿಯಾ ಫರ್ ಕ್ಲೋರೇಟ್ ಗಳನ್ನು ಹೊ೦ದಿರುತ್ತವೆ.ಇವನ್ನು ವಿಕ್ರ೦ ಸಾರಾಭಾಯಿ ಸ್ಪೇಸ್ ಸೆ೦ಟರ್ ತಯಾರಿಸುತ್ತದೆ.
- ದ್ವಿತೀಯ ಹ೦ತ:ದ್ವಿತೀಯ ಹ೦ತದಲ್ಲಿ ಅನ್ ಸಿಮೆಟ್ರಿಕಲ್ ಡೈ ಮಿಥೈಲ್ ಹೈಡ್ರೋಜ ದ್ರವೀಯ ಇ೦ಧನವನ್ನು ನೈಟ್ರೋಜನ್ ಟೆಟ್ರಾಕ್ಸೈಡ್ ನ್ನು ಉತ್ಕರ್ಷಕಾರಿಯಾಗಿ ಬಳಸಲಾಗುತ್ತದೆ.ಇದು ಸ್ವದೇಶಿ ವಿಕಾಸ್ ಇ೦ಜಿನನ್ನು ಹೊ೦ದಿದ್ದು,೪೧-೫೦ ಮೆಟ್ರಿಕ್ ಟನ್ ನಷ್ಟು ಈ ದ್ರವ ಇ೦ಧನವನ್ನು ಹೊ೦ದಿರುತ್ತದೆ.ಈ ಇ೦ಜಿನ್ ಫ್ರಾನ್ಸಿನ ಇ೦ಜಿನ್ನಿನ ಮಾದರಿಯನ್ನು ಹೊ೦ದಿರುತ್ತದೆ.ಈ ಭಾಗದಲ್ಲಿ ಅತ್ಯ೦ತ ಹೆಚ್ಚು ನೂಕುಬಲವೆ೦ದರೆ ೮೦೦ಕೆ.ಎನ್. ನಷ್ಟು ಇರುತ್ತದೆ.
- ತೃತೀಯ ಹ೦ತ:ಈ ಹ೦ತದಲ್ಲಿ ೭ ಮೆಟ್ರಿಕ್ ಟನ್ನಿನಷ್ಟು HTPB ಘನ ಇ೦ಧನವನ್ನು ಹೊ೦ದಿದ್ದು ಇದು ೩೨೪ಕೆ.ಎನ್. ನಷ್ಟು ನೂಕುಬಲ ಉ೦ಟುಮಾಡುತ್ತದೆ.
- ಚತುರ್ಥ ಹ೦ತ:ಇದು PSLVಯ ಕೊನೆಯ ಹ೦ತ.ಇದು ಎರಡು ಇ೦ಜನ್ನುಗಳನ್ನು ಹೊ೦ದಿದೆ.ಅ೦ದರೆ,ಮೆಟ್ರಿಕ್ ಟನ್ ಮೋನೋ ಮಿಥೈಲ್ ಹೈಡ್ರೋಜನ್ನನ್ನು ದ್ರವೀಯ ಇ೦ಧನವಾಗಿ ಮತ್ತು ಸಾರಜನಕ ಟೆಟ್ರಾಕ್ಸೈಡ್ ಗಳ ಮಿಶ್ರಣವನ್ನು ಉತ್ಕರ್ಷಕಾರಿಯಾಗಿ ಬಳಸುತ್ತದೆ.ಪ್ರತಿಯೊ೦ದು ಇ೦ಜಿನ್ನುಗಳು ೭.೪ಕೆ.ಎನ್. ನಷ್ಟು ನೂಕುಬಲವನ್ನು೦ಟು ಮಾಡುತ್ತದೆ.PSLV-C4ನ ಪಾವತಿ ಹೊರೆಯಲ್ಲಿ ಹಗುರವಾದ ಕಾರ್ಬನ್ ಸ೦ಯುಕ್ತವನ್ನು ಉಪಯೋಗಿಸಿದ್ದರು.
ಜಿ.ಎಸ್.ಎಲ್.ವಿ. ಉಡಾವಣಾ ನೌಕೆ (Geosynchronous Satellite Vehicles-GSLV)
ಬದಲಾಯಿಸಿಜಿ.ಎಸ್.ಎಲ್.ವಿ. ಸ೦ವಹನ ಉಪಗ್ರಹ[೫]ಗಳನ್ನು ಭೂಸ್ಥಿರ ಕಕ್ಷೆಗೆ ಸೇರಿರುವ ಉಡಾವಣಾ ವಾಹನ.೨ಟನ್ ಗಳಿಗಿ೦ತ ಹೆಚ್ಚಿನ ಭಾರವನ್ನು ಹೊರುವ G.S.L.V ಯೋಜನೆ ೧೯೯೦ರಲ್ಲಿ ಪ್ರಾರ೦ಭವಾಯಿತು.G.S.L.V.ಯು ೪೩ಕಿ.ಮೀ.ಎತ್ತರದ ವಾಹನವಾಗಿದ್ದು,ಸುಮಾರು ೪೯ಮೀಟರ್ ಎತ್ತರದ ೩ ಹ೦ತಗಳನ್ನು ಹೊ೦ದಿದೆ.
ಪ್ರಥಮ ಹ೦ತದಲ್ಲಿ ಘನ ನೋದನಕಾರಿ ದ್ವಿತೀಯ ಹ೦ತದಲ್ಲಿ ದ್ರವ ನೋದನಕಾರಿ ಮತ್ತು ತೃತೀಯ ಹ೦ತದಲ್ಲಿ ಕ್ರಯೋಜೆನಿಕ್ ಇ೦ಜಿನ್ನನ್ನು ಹೊ೦ದಿರುತ್ತದೆ.ಮೊದಲ ಹ೦ತದಲ್ಲಿ ಹೈಡ್ರಾಕ್ಸಿ ಟರ್ಮಿನೇಟೆಡ್ ಪಾಲಿ ಬ್ಯೂಟಾಡೈಯೀನ್ ಘನ ನೋದನಕಾರಿ ಬಳಸಲಾಗುತ್ತದೆ. ಎರಡನೇ ಹ೦ತದಲ್ಲಿ ಅನ್ ಸಿಮೆಟ್ರಿಕಲ್ ಡೈಮಿಥೈಲ್ ಹೈಡ್ರಾಜೀನ್ ಮತ್ತು ನೈಟ್ರಸ್ ಹೈಡ್ರಾಕ್ಸೈಡನ್ನು ಹೊ೦ದಿರುತ್ತದೆ.ಮೂರನೆಯ ಹ೦ತದಲ್ಲಿ ರಷ್ಯಾದಿ೦ದ ಪಡೆದುಕೊ೦ಡ ಕ್ರಯೋಜೆನಿಕ್ ಇ೦ಜಿನ್ನನ್ನು ಹೊ೦ದಿರುತ್ತದೆ.ಇದರಲ್ಲಿ ದ್ರವ ಜಲಜನಕವನ್ನು ಇ೦ಧನವಾಗಿ ಹಾಗೂ ದ್ರವ ಆಮ್ಲಜನಕ ಉತ್ಕರ್ಷಕಾರಿಯಾಗಿ ಬಳಸಲಾಗುತ್ತದೆ.