ಸದಸ್ಯ:Anvesh.arey/sandbox
ಖಾಸಗಿ ಉದ್ದಿಮೆಯ ಮೇಲೆ ಆಧರಿಸಿದ ಆರ್ಥಿಕ ವ್ಯವಸ್ಥೆ ಪ್ರಜಾಪ್ರಭುತ್ವ ತತ್ವಗಳಿಗೆ ವಿರುದ್ದವಾದದ್ದು ಎಂದು ಅವರು ಸ್ಪಷ್ಟ ವಾಗಿ ತಿಳಿದಿದ್ದರು. ಖಾಸಗಿ ಉದ್ದಿಮಯು ಅದರ ಮೂಲದಲ್ಲಿ ಸಂಪತ್ತು ಮತ್ತು ತನ್ಮೂಲಕ ಅಧಿಕಾರವನ್ನು ಖಾಸಗಿ ವ್ಯಕ್ತಿಗಳ ಕೈಯಲ್ಲಿ ಕೇಂದ್ರೀಕರಿಸುತ್ತದೆ. ಇದು ಅನಿವಾರ್ಯವಾಗಿ ಬದುಕಿರಲು ದುಡಿಯಲೇಬೇಕಾದ ಜನರ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ. ಮಾಲಿಕ ತಪ್ಪು ಮಾಡಿದ್ದರೂ ಕೆಲಸಗಾರ ಪ್ರಶ್ನಿಸಲಾಗದು. ಪ್ರಶ್ನಿಸಿದರೆ ಅವನು ತನ್ನ ಕೆಲಸ ಕಳೆದುಕೊಳ್ಳಬಹುದು! ಅವರು ಹೇಳುತ್ತಾರೆ: "ಖಾಸಗಿ ಉದ್ದಿಮೆ ಮತ್ತು ವ್ಯೆಯಕ್ತಿಕ ಲಾಭಗಳಿಕೆಯನ್ನು ಆಧರಿಸುವ ಸಾಮಾಜಿಕ ಅರ್ಥವ್ಯವಸ್ಥೆಯನ್ನು ಅಭ್ಯಾಸ ಮಾಡುವ ಯಾರಾದರೂ ಇದು ಹೇಗೆ ಪ್ರಜಾಪ್ರಭುತ್ವ ದ ಮೂಲಾಧಾರವಾದ 'ವ್ಯಕ್ತಿಗಳ ಹಕ್ಕು'ಗಳನ್ನು ಕಿತ್ತುಕೊಳ್ಳದಿದ್ದರೂ ಬಹಳ ಮಟ್ಟಿಗೆ ಮೊಟಕುಗೊಳಿಸುತ್ತದೆ ಅನ್ನುವುದನ್ನು ಮನಗಾಣುವರು. ಜೀವನೋಪಾಯಕ್ಕಾಗಿ ಎಷ್ಟ್ಟು ಜನ ತಮ್ಮ ಹಕ್ಕುಗಳನ್ನು ಜನ ಖಾಸಗಿ ಮಾಲಿಕರಿಂಡಾ ಆಳಿಸಿಕಳ್ಳಲು ಸಿದ್ದರಾಗಬೇಕು?"
ಮೂಲ ಮತ್ತು ಪ್ರಮುಖ ಉದ್ದಿಮೆಗಳ ಒಡೆತನ ಮತ್ತು ನಿರ್ವಹಣೆ ರಾಷ್ಟ್ರ್ದದ (ಸರ್ಕಾರದ )ಕೈಯಲ್ಲಿರಬೇಕು; ವಿಮೆಯು ರಾಷ್ಟ್ರ್ದದ ಏಕಸ್ವಾಮ್ಯದಲ್ಲಿರಬೆಕು; ಪ್ರತಿಯೊಬ್ಬ ವಯಸ್ಕನಿಗೂ ಅದು (ವಿಮಾಪಾಲಿಸಿ) ಕಡ್ಡಾಯವಾಗಿದ್ದು ಅವನ ವೇತನಕ್ಕೆ ಅನುಗುನಣವಾಗಿ ಇರತಕ್ಕದ್ದು; ಕೃಷಿಯು ರಾಷ್ಟ್ರೀಕೃತ ಉದ್ದಿಮೆಯಾಗಿರಬೇಕು; ಖಾಸಗಿ ವ್ಯಕ್ತಿಗಳ ಕೈಯಲ್ಲಿರುವ ಇಂತಹ ಉದ್ದಿಮೆ; ವಿಮೆ ಮತ್ತು ಕೃಷಿ ಭೂಮಿಯನ್ನು ರಾಷ್ಟ್ರ್ದ (ಸರ್ಕಾರ ) ಅವುಗಳ ಮೌಲ್ಯಕ್ಕೆ ಅನುಗುನಣವಾಗಿ ಡಿಬೆಂಚರುಗಳ ಮೂಲಕ ಪರಿಹಾರ ನೀಡಿ ರಾಷ್ಟ್ರ್ದ (ಸರ್ಕಾರ ), ಅವುಗಳಲ್ಲಿ ನಿರ್ಣಾಯಕ ಹಕ್ಕುಗಳನ್ನು ಪಡೆದುಕೊಳ್ಳಬೇಕು; ಕೃಷಿಯನ್ನು ಸಾಮೂಹಿಕ ಉದ್ದಿಮೆಯಾಗಿ ಸಂಘಟಿಸಬೇಕು; ಸರ್ಕಾರ ಸ್ವಾಧೀನಪಡಿಸಿಕೊಂಡ ಭೂಮಿಯನ್ನು ಒಂದೇ ಪ್ರಮಾಣದ ಫಾರ್ಮಗಳನ್ನಾಗಿ ವಿಂಗಡಿಸಿ ಜಾತಿ ಜನಾಂಗಗಳ ಭೇದವಿಲ್ಲದಂತೆ ಹಳ್ಳಿಗರಿಗೆ ಗುತ್ತಿಗೆ ಮೇಲೆ ಸಾಮೂಹಿಕ ಕೃಷಿಗಾಗಿ ಬಿಟ್ಟುಕೊಡಬೇಕು, ತಾನು ಒದಗಿಸವ ಭೂಮಿಗೆ ಬಾಡಿಗೆ, ಕೃಷಿ ಸಲಕರಣೆಗಳು, ಒಳಸುರಿ ಮತ್ತು ಸಾಲಕ್ಕೆ ಪ್ರತಿಯಾಗಿ ಅವರು ಸರ್ಕಾರಕ್ಕೆ ಹಣ ಪಾವತಿ ಮಾಡತಕ್ಕದ್ದು - ಹೀಗಿತ್ತು ಅವರ ಪ್ರಸ್ತಾವನೆ.
ಸಂವಿಧಾನದ ಕಾರ್ಯದ ನಿರ್ವಹಣೆಯ ೬೦ ವರ್ಷಗಳ ಲೆಕ್ಕ ತೆಗೆದರೆ ಈ ನಿರ್ದೆಶಕ ತತ್ವಗಳನ್ನು ನಿರ್ಭಯವಾಗಿ ತುಳಿದು ಆಡಳಿತದ ನೀತಿ ನಿರೂಪಣೆ ಮಾಡಿರುವುದನ್ನು ಕಾಣುತ್ತೇವೆ. ಉದಾಹರಣೆಗೆ, ಜಾಗತೀಕರಣಕ್ಕೆ ಸಂಬಂಧಿಸಿದ ಇಡೀ ನೀತಿ ನಿರೂಪಣೆಯು ಸಂಪೂರ್ಣವಾಗಿ ಈ ನಿರ್ದೇಶಕ ತತ್ವಗಳ ಉಲ್ಲಂಘನೆ ಎಂದು ಪರಿಗಣಿಸಬಹುದು.