~~ಕುಟುಂಬ~~

ಅನುಷ . ಟಿ.ಆರ್ ಆದ ನಾನು ೭/೦೫/೧೯೯೭ ರಲ್ಲಿ ಬೆಂಗಳೂರಿನಲ್ಲಿ ವಿ.ರಾಜಪ್ಪ ಮತ್ತು ವೆಂಕಟಮ್ಮ ಎಂಬ ದಂಪತಿಗಳಿಗೆ ಹುಟ್ಟಿದೆನು.ನನ್ನ ಕುಟುಂಬದಲ್ಲಿ ನನ್ನ ಅಕ್ಕ ಸೇರಿದಂತೆ ನಾಲ್ಕು ಮಂದಿ ಇದ್ದೇವೆ.ನನ್ನ ಅಕ್ಕನ ಹೆಸರು ಟಿ.ಆರ್.ಪವಿತ್ರ.

                                                                                                                 ~~ವಿದ್ಯಾಭ್ಯಾಸ~~

೧೮ನೆಂಟು ಪ್ರಾಯದವಳಾದ ನಾನು ನನ್ನ ಶಾಲಾ ವಿದ್ಯಾಭ್ಯಾಸವನ್ನು ಸೆಂಟ್.ಫ್ರಾನ್ಸಿಸ್.ಡೀಸೇಲ್ಸ್ ಶಾಲೆಯಲ್ಲಿ ಮಾಡಿದೆನು.ಎಲ್.ಕೆ.ಜಿಯಿಂದ ಹತ್ತನೆಯ ತರಗತಿಯ ವರೆಗೆ ಅಲ್ಲಿಯೇ ಓದಿದೆನು.ನಂತರ ನನ್ನ ಪ್ರಥಮಾ ಹಾಗೂ ದ್ವಿತೀಯ ಪಿ.ಯೂ.ಸಿಯನ್ನು ಜಯನಗತರದ ೯ನೇ ಹಂತದಲ್ಲಿರುವ ಜೈನ್ ಕಾಲೇಜಿನಲ್ಲಿ ಓದಿದೆನು.ಪ್ರಸ್ತುತದಲ್ಲಿ ನಾನು ಭಾರಯತದಲ್ಲೇ ಉತ್ತಮ ಶಿಕ್ಷಣ ನೀಡುವ ಕಾಲೇಜುಗಳಲ್ಲಿ ನಾಲ್ಕನೇ ಪಟ್ಟಿಯಲ್ಲಿರುವ ಕ್ರೈಸ್ಟ್ ಕಾಲೇಜಿನಲ್ಲಿ ಬಿ.ಕಾಂ ಪದವಿ ಮಾಡುತ್ತಿದ್ದೇನೆ.

                                                                                                              ~~ ಜೀವನದ ಗುರಿ~~

ಉತ್ತಮ ವಿದ್ಯಾಭ್ಯಾಸ ಮಾಡಿ ಒಳ್ಳೆಯ ಸಂಸ್ಥೆಯಲ್ಲಿ ಕೆಲಸ ಮಾಡಿ ಸಮಾಜಕ್ಕೆ ಒಳಿತನ್ನು ಮಾಡುವುದು,ನನ್ನಲ್ಲಿರುವ ವಿದ್ಯೆಯನ್ನು ಬೇರೆಯವರ ಜೊತೆ ಹಂಚಿಕೊಂಡು ವಿದ್ಯಾಭ್ಯಾಸದ ಬೆಳಕನ್ನು ಎಲ್ಲರಿಗೂ ಸಿಗುವಂತೆ ಮಾಡುವುದು ನನ್ನ ಜೀವನದ ಗುರಿಯಾಗಿದೆ.ಸಮಾಜಕ್ಕೆ ಒಳಿತನ್ನು ಮಾಡಬೇಕೆಂಬುದು ನನಗೆ ಚಿಕ್ಕ ವಯಸ್ಸಿನಿಂದಲೂ ಅನಿಸಿತು. ಅದರಂತೆಯೇ ನಾನು ನನ್ನ ಕಾಲೇಜಿನಲ್ಲಿ ಸಮಾಜಕ್ಕೆ ಸೇವೆಯನ್ನು ಮಾಡುವ ಸಂಸ್ಥೆಯಲ್ಲಿ ಸದಸ್ಯಳಾಗಿ ಕಾರ್ಯ ನಿರ್ವಹಿಸುತ್ತಿದ್ದೇನೆ.ಮಕ್ಕಳ್ಳೇ ನನ್ನ ಪ್ರೇರಣೆ. ಅವರಲ್ಲಿರುವ ಉತ್ಸಾಹ, ಪುಂಡಾಟಿಕೆ, ಪ್ರಶ್ನಿಸುವ ವೈಕರಿ,ಯಾವಾಗಲೂ ಹುಮ್ಮಸಿನಲ್ಲಿರುವುದು, ಬಿದ್ದರೂ ಗಾಯವಾದರೂ ಎದ್ದು ಉತ್ಸಾಹದಿಂದ ಓಡುವುದು ನನ್ನಲ್ಲಿರುವ ಉತ್ಸಾಹವನ್ನು ಹಿಮ್ಮುಡಿಸುತ್ತದೆ.ಮಕ್ಕಳ್ಳಿಂದ ನಾವು ಎಷ್ಟೋ ಅಂಶಗಳ್ಳನ್ನು ನಾವು ಕಲಿಯಬೇಕಾಗಿದೆ.

                                                                                                               ~~ನನ್ನ ಹವ್ಯಾಸಗಳು~~

ನನಗೆ ಚಿತ್ರಕಲೆಯಲ್ಲಿ ಆಸಕ್ತಿಯಿದ್ದು ಚಿತ್ರಗಳನ್ನು ಬಿಡಿಸುವುದು ನನ್ನ ಹವ್ಯಾಸ. ಅದರಲ್ಲೂ ಪ್ರಾಕೃತಿಕ ಚಿತ್ರಗಳ್ಳನ್ನು ಬಿಡಿಸುವುದು ನನಗೆ ಬಹಳಾ ಇಷ್ಟ.ಇದಲ್ಲದೇ ಪುಸ್ತಕಗಳ್ಳನ್ನು ಓದುವ ಹವ್ಯಾಸ ನನಗಿದ್ದೂ,ಸಂಬಂಧಳ ಕುರಿತು ರಚಿಸಲ್ಪಟ್ಟಿರುವ ಪುಸ್ತಕಗಳ್ಳನ್ನು ಓದುವುದು ನನ್ನ ಹವ್ಯಾಸ. ಈಗಲೂ ಸಹ ನಾನುಸಮಯ ಸಿಕ್ಕಾಗೆಲ್ಲಾ ಅದರ ಬಗ್ಗೆ ಸಂಶೋಧನೆ ಮಾಡುತ್ತಿರುತ್ತೇನೆ.ಪದವಿ ಶಿಕ್ಷಣ ಮಾಡುತ್ತಿರುವ ನಾನು ಕಾಲೇಜಿನ ಸಿ.ಎಸ್.ಎ ಎಂಬ ಸೇವಾ ಸಂಸ್ತೆಯಲ್ಲಿ ಕುಪೋಷಣೆ,ಹೆಂಗಸರ ಮೇಲೆ ನಡೆಯುವ ದೌರ್ಜನ್ಯ,ಮಹಿಳಾ ಸಬಲೀಕರಣ,ಮಕ್ಕಳ ಹಕ್ಕು ಮುಂತಾದ ವಿಷಯಗಳ ಕುರಿತು ಅರಿವನ್ನು ಮೂಡಿಸುವ ಕಾರ್ಯದಲ್ಲಿ ನನ್ನನು ತೊಡಗಿಸಿಕೊಂಡಿದ್ದೇನೆ.ಅದಲ್ಲದೇ ಹೊಸ ಉದ್ಯಮಗಳ ಕುರಿತು ಸಂಶೋಧನೆ ಮಾಡುವ ಹವ್ಯಾಸವು ನನ್ನದಾಗಿದೆ.

                                                                                                                  ~~ಸಾಧನೆದಗಳು~~

ಶಾಲೆಯಲ್ಲಿ ಓದುತ್ತಿರುವಾಗ ಒಂದರಿಂದ ಐದನೇ ತರಗತಿಯವರೆಗೆ ಉತ್ತಮ ವಿದ್ಯಾರ್ಥಿನಿಯ ಪ್ರಶಸ್ತಿಯನ್ನು ಪಡೆದೆನು.ನಂತರ ಹತ್ತನೇಯ ತರಗತಿಯಲ್ಲಿ ನನ್ನ ಕಲೆಯನ್ನು ಮೆಚ್ಚಿದ ಶಿಕ್ಷಕಿಯೊಬ್ಬರು ನಾನು ಭವಿಷ್ಯದಲ್ಲಿ ಒಳ್ಳೆ ಕಲಾವಿದೆಯಾಗಬಹುದೆಂದು ನನಗೆ ಬರವಸೆ ನೀಡಿದರು.ಆದರೆ ನಾನು ಪಿ.ಯೂ.ಸಿಯಲ್ಲಿ ಶಿಕ್ಷಣ ಪಡೆಯುತ್ತಿರುವಾಗ,ನನಗೆ ಶೇರು ಮಾರ್ಕೆಟರಲ್ಲಿ ಆಸಕ್ತಿ ಹೆಚ್ಚಾಯಿತು.ಇದು ನನ್ನನ್ನು ಶೇರು ಮಾರ್ಕೆಟಿನ ಬಗ್ಗೆ ಹೆಚ್ಚು ಮಾಹಿತಿ ಪಡೆಯುವ ಆಸಕ್ತಿಯನ್ನು ಹೆಚ್ಚು ಮಾಡಿತು.

that pride moment posing with one of my achieved trophies

https://commons.wikimedia.org/wiki/File:Myself_with_achieved_trophy.jpg

ONE OF MY ACHIEVED TROPHIES IN JAIN COLLEGE

https://commons.wikimedia.org/wiki/File:ACHIEVED_TROPHY_IN_JAIN_COLLEGE.jpg

This user is a member of WikiProject Education in India
This user is a member of WikiProject Education in India



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Anusha chinnu



ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Anusha chinnu