ಸದಸ್ಯ:Anusha Sridhar/ನನ್ನ ಪ್ರಯೋಗಪುಟ
ಶಾರಂಗಧರ ಸಂಹಿತೆ ೧೪ನೇ ಶತಮಾನದಲ್ಲಿ ಆಚಾರ್ಯ ಶಾರಂಗಧರ ರವರಿಂದ ಬರೆಯಲ್ಪಟ್ಟಿದೆ. ಆಯುರ್ವೇದದಲ್ಲಿ ಈ ಗ್ರಂಥವು ಲಘುತ್ರಯೀಗಳಲ್ಲಿ ಒಂದು. ಈ ಸಂಹಿತೆಯಲ್ಲಿ ಆಯುರ್ವೇದದ ಇತರ ಮಾಹಿತಿಗಳೊಂದಿಗೆ ಔಷಧಿ ತಯಾರಿಸುವ ವಿಭಾಗವಾದ ಭೈಷಜ್ಯಕಲ್ಪನಕ್ಕೆ ಹೆಚ್ಚು ಒತ್ತು ನೀಡಲಾಗಿದೆ.[೧]
ಆಚಾರ್ಯ ಶಾರಂಗಧರ
ಬದಲಾಯಿಸಿಆಚಾರ್ಯ ಶಾರಂಗಧರರ ತಂದೆಯ ಹೆಸರು ದಾಮೋದರ ಮತ್ತು ತಾತನ ಹೆಸರು ರಾಘವದೇವ(ಇವರು ಮಹಾಗಣಪತಿ ಸ್ತೋತ್ರದ ಲೇಖಕರು). ತಂದೆ ದಾಮೋದರರು ಕಾಶ್ಮೀರ ರಾಜ ಹಮ್ಮಿರನ ಆಸ್ಥಾನದಲ್ಲಿ ದೊಡ್ಡ ಕವಿಗಳು.
ಸಂಹಿತೆ
ಬದಲಾಯಿಸಿಈ ಸಂಹಿತೆಯನ್ನು ಮೂರು ಭಾಗಗಳಾಗಿ ವಿಂಗಡಿಸಲಾಗಿದೆ. ಅವುಗಳನ್ನು ಖಂಡಗಳೆಂದು ಕರೆಯುತ್ತಾರೆ. ೩೨ ಅಧ್ಯಾಯಗಳೊಂದಿಗೆ ೨೬೦೦ ಶ್ಲೋಕಗಳನ್ನು ಹೊಂದಿದೆ.[೨]
ಪೂರ್ವಖಂಡ
ಬದಲಾಯಿಸಿಈ ಖಂಡವು ೭ ಅಧ್ಯಾಯಗಳನ್ನು ಒಳಗೊಂಡಿದೆ. ಇದರಲ್ಲಿ ನಾಡಿ ಪರೀಕ್ಷೆ,ರೋಗಗಳ ಸಂಖ್ಯೆ, ಮಾನ ಪರಿಭಾಷಾ, ಅರಿಷ್ಟ ಲಕ್ಷಣ,ರಚನಾಶಾಸ್ತ್ರ,ಕ್ರಿಯಾಶಾಸ್ತ್ರ, ಮುಂತದವುಗಳ ಬಗ್ಗೆ ವಿವರಿಸಲಾಗಿದೆ.
ಮಧ್ಯಮಖಂಡ
ಬದಲಾಯಿಸಿಈ ಖಂಡವು ೧೨ ಅಧ್ಯಾಯಗಳನ್ನು ಒಳಗೊಂಡಿದೆ. ಇದು ಪಂಚವಿಧ ಕಷಾಯ ಕಲ್ಪನ( ಸ್ವರಸ,ಕಲ್ಕ,ಶೃತ,ಶೀತ,ಫಾಂಟ) , ಚೂರ್ಣಕಲ್ಪನ,ಲೇಹ ಕಲ್ಪನ,ಆಸವ-ಅರಿಷ್ಟಕಲ್ಪನ(ಸಂಧಾನಕಲ್ಪನ) ಧಾತು ಶೋಧನ ಇವುಗಳ ಬಗ್ಗೆ ವಿವರಿಸುತ್ತದೆ.
ಉತ್ತರಖಂಡ
ಬದಲಾಯಿಸಿಈ ಭಾಗವು ೧೩ ಅಧ್ಯಾಯಗಳನ್ನು ಒಳಗೊಂಡಿದೆ. ಇದು ಪಂಚಕರ್ಮವಿಧಿಗಳು(ವಮನ,ವಿರೇಚನ,ಆಸ್ಥಾಪನಬಸ್ತಿ,ಅನುವಾಸನಬಸ್ತಿ,ನಸ್ಯ),ನೇತ್ರಚಿಕಿತ್ಸೆ,ಸ್ವಸ್ಥವೃತ್ತ ಮುಂತಾದವುಗಳನ್ನು ವಿವರಿಸುತ್ತದೆ.
ವಿಶೇಷತೆಗಳು
ಬದಲಾಯಿಸಿ- ಈ ಗ್ರಂಥದಲ್ಲಿ ಋತುಗಳನ್ನು ರಾಶಿಗಳ ಆಧಾರದ ಮೇಲೆ ವಿಂಗಡಿಸಲಾಗಿಸದೆ.
- ವಿವಿಧ ಕರ್ಮಗಳಾದ ದೀಪನ,ಪಾಚನ ಮುಂತದವುಗಳಿಗೆ ವ್ಯಾಖ್ಯಾನ ನೀಡಲಾಗಿದೆ.
- ದೋಷಗಳ ಚಲನೆ,ಧಾತುಗಳ ಪೋಷಣೆ,ಶ್ವಾಸಕ್ರಿಯೆಯಲ್ಲಿ ವಾತದೋಷದ ಪ್ರಾಮುಖ್ಯತೆಯನ್ನು ಹೇಳಲಾಗಿದೆ.
- ರೋಗಗಳ ಸಂಖ್ಯೆಯ ಬಗ್ಗೆ ವಿವರಿಸಲಾಗಿದೆ.
- ಏಕಮೂಲಿಕ ಪ್ರಯೋಗವನ್ನು ವಿವರಿಸಲಾಗಿದೆ.
ಟೀಕಾಕಾರರು
ಬದಲಾಯಿಸಿ- ಆಢಮಲ್ಲ-ದೀಪಿಕ.
- ರುದ್ರಭಟ್ಟ-ಆಯುರ್ವೇದ ದೀಪಿಕ.
- ಕಾಶಿರಾಮ್ ವೈದ್ಯ-ಗೂಡಾರ್ಥದೀಪಿಕ.[೩]