ಸದಸ್ಯ:Anoosha k/sandbox3
ಟೆಲಿಟೆಕ್ಸ್ಟ್ ಮತ್ತು ವಿಡಿಯೋಟೆಕ್ಸ್ಟ್
ಬದಲಾಯಿಸಿಟೆಲಿಟೆಕ್ಸ್ಟ್ ಹಾಗೂ ವಿಡಿಯೋಟೆಕ್ಸ್ಟ್ ಇವುಗಳು ದೂರಸಂಪರ್ಕಗಳ ಆಧುನಿಕ ವಿಧಾನ. ಅವುಗಳ ಗಣಕಯಂತ್ರ ಸಂಪರ್ಕವು ಯಂತ್ರಜ್ಞಾನದ ಅಧ್ಯಯನ ಮತ್ತು ಮುನ್ನಡೆಗಳ ಪರಿಣಾಮವಾಗಿ ಆಗಿವೆ. ದೂರದರ್ಶನದ ಸಂಕೇತದ ಮೇಲೆ ಅಂಕಿ ಅಂಶದ ವಹನವನ್ನು ಮೇಲಿರಿಸಿದಾಗ ಅದನ್ನು ಟೆಲಿಟೆಕ್ಸ್ಟ್ ಎಂದು ಕರೆಯಲಾಗಿದೆ. ವಿಡಿಯೋಟೆಕ್ಸ್ಟ್'ನಲ್ಲಿ ಉಪಯೋಗಿಸಿದ ಸಂಪರ್ಕ ಮಾಧ್ಯಮವು ಸಾರ್ವಜನಿಕ ದೂರವಾಣಿಜಾಲ ಅಥವಾ ಸಾರ್ವಜನಿಕ ಒತ್ತುಗುಂಡಿಯ ದೂರವಾಣಿ ಜಾಲವಾಗಿರುತ್ತದೆ. ಟೆಲಿಟೆಕ್ಸ್ಟ್ ವಿಷಯದಲ್ಲಿ ವೀಕ್ಷಕನು ಅಂಕಿಅಂಶಗಳನ್ನು ದೂರದರ್ಶನದ ಪರದೆಯ ಮೂಲಕ ನೋಡುತ್ತಾನೆ, ಆದರೆ ವಿಡಿಯೋಟೆಕ್ಸ್ಟ್'ನಲ್ಲಿ ಅವನು ದೂರವಾಣಿ ಕರೆಯನ್ನು ಮಾಡಿ ವಿಡಿಯೋಟೆಕ್ಸ್ಟ್ ಪ್ರಾಧಿಕಾರದ ಗಣಕಯಂತ್ರ ವ್ಯವಸ್ಥೆಯೊಂದಿಗೆ ತಾತ್ಕಾಲಿಕ ಸಂಬಂಧವನ್ನು ಹೊಂದುತ್ತಾನೆ. ಗಣಕಯಂತ್ರವು ದೂರವಾಣಿಯಿಂದ ಮಾಹಿತಿಯನ್ನು ಕಳುಹಿಸಿದಾಗ ಅದು ದೂರದರ್ಶನದ ಪರದೆಯ ಮೇಲೆ ಪ್ರದರ್ಶಿಸಲ್ಪಡುತ್ತದೆ.
ಬೆಳವಣಿಗೆಯ ಇತಿಹಾಸ
ಬದಲಾಯಿಸಿಆರ್.ಸಿ.ಎ. ಕಾರ್ಪೋರೇಷನ್ ಸಂಸ್ಥೆಯು ೧೯೬೦ರ ಮಧ್ಯದಲ್ಲಿ ಒಂದು ಪ್ರಯೋಗಾತ್ಮಕ ವ್ಯವಸ್ಥೆಯನ್ನು ರೂಪಿಸಿ ಅದರಿಂದ ಲಂಬ ಶೂನ್ಯ ಅಂತರದಲ್ಲಿ ಅನಲಾಗ್ ರೂಪದಲ್ಲಿ ಮೂಲಪಾಠವನ್ನು ಕಳುಹಿಸುವಂತೆ ಮಾಡಿತು. ಡಿಜಿಟಲ್ ವಹನವು ೧೯೯೫ರಲ್ಲಿ ಬಿ.ಬಿ.ಸಿ.ಯಿಂದ ಮೊದಲು ಪ್ರಾರಂಭಿಸಲ್ಪಟ್ಟಿತು. ಬಿ.ಬಿ.ಸಿ.ಯು ಅದಕ್ಕೆ ಸೀಫಾಕ್ಸ್ ಎಂದು ಹೆಸರಿಟ್ಟಿತು. ನಂತರ ಅದನ್ನು ಐಟಿವಿಯು ಪ್ರಾರಂಭಿಸಿ ಅದಕ್ಕೆ ಓರಾಕ್ಲ್ ಎಂದು ಹೆಸರಿಟ್ಟಿತು. ಈ ಎರಡೂ ಕೂಡ ವಿಸ್ತಾರವಾದ ಶ್ರೋತೃಗಳಿಗೆ ಉದ್ದೇಶಿಸಲಾಗಿತ್ತು. ಈ ಸೇವೆಗಳು ಸ್ಟಾಕ್ ವಿನಿಮಯ ಕೇಂದ್ರದಲ್ಲಿ ಶೇರು ಮಾರುಕಟ್ಟೆಯ ವಿವರಗಳು, ಹವಾಮಾನ ವರದಿಗಳು, ರಾಷ್ಟ್ರದ ಅರ್ಥಮಂಡಲದ ಅಂಕಿಅಂಶಗಳನ್ನು ಒದಗಿಸುತ್ತಿದ್ದವು. ಬಿಬಿಸಿಯು ಟೆಲಿಟೆಕ್ಸ್ಟ್'ನ ಎರಱ್ಡು ವಹನಸಾಧನವನ್ನು ಹೊಂದಿತ್ತು. ಈ ಸೇವೆಗಳು ಚಂದಾದಾರರಿಗೆ ಅಪೇಕ್ಷಿಸಿದ ಮಾಹಿತಿಗಳನ್ನು ಒದಗಿಸುತ್ತಿತ್ತು. ನಂತರ ಕೆಲವು ರಾಷ್ಟ್ರಗಳು ಅಂದರೆ ಅಮೆರಿಕಾ, ಸೌತ್ ಈಸ್ಟ್ ಏಷ್ಯಾ ಮತ್ತು ಜಪಾನುಗಳಲ್ಲಿ ಟೆಲಿಟೆಕ್ಸ್ಟ್ ಅನ್ನು ಆರಂಭಿಸಲಾಯಿತು.
ಭಾರತದಲ್ಲಿ ಟೆಲಿಟೆಕ್ಸ್ಟ್ ಸೇವೆಯನ್ನು ೧೯೮೬ರಲ್ಲಿ ಪ್ರಾರಂಭಿಸಲಾಯಿತು. ಇವುಗಳಿಗೆ ಇನ್'ಟೆಕ್ಸ್ಟ್ ಸೇವೆಗಳು ಎಂದು ಹೆಸರು.
ಟೆಲಿಟೆಕ್ಸ್ಟ್
ಬದಲಾಯಿಸಿಟೆಲಿಟೆಕ್ಸ್ಟ್[೧]ನಲ್ಲಿ, ದೂರದರ್ಶನ ಪ್ರಸಾರ ಕೇಂದ್ರದಲ್ಲಿ ಗಣಕಯಂತ್ರ ವ್ಯವಸ್ಥೆಯಿಂದ ಮಾಹಿತಿಯನ್ನು ಶೇಖರಿಸಲಾಗುತ್ತದೆ. ಇದಕ್ಕೆ ಅಂಕಿಅಂಶ ಮೂಲ ಅಥವಾ ಡಾಟಾಬೇಸ್ ಎಂದು ಹೆಸರು. ಈ ಅಂಶಗಳನ್ನು ಪುಟದಲ್ಲಿ ವ್ಯವಸ್ಥೆಗೊಳಿಸಿ ಪ್ರತಿಯೊಂದು ಪುಟವನ್ನು ಸಂಪೂರ್ಣವಾಗಿ ಸಂಪಾದಿಸಲಾಗುತ್ತದೆ. ಅದನ್ನು ಚಕ್ರೀಯ ರೀತಿಯಲ್ಲಿ ವಹನ ಮಾಡಿ, ಅಂಕಿಅಂಶ ಮೂಲದಲ್ಲಿ ಶೇಖರಿಸಲ್ಪಟ್ಟ ಪ್ರತಿಯೊಂದು ಪುಟವನ್ನು ಪ್ರತೀ ೧೫-೨೦ ಸೆಕೆಂಡುಗಳಲ್ಲಿ ಪುನರ್ ಪ್ರಸಾರ ಮಾಡಲಾಗುತ್ತದೆ. ವೀಕ್ಷಕನು ಪುಟವನ್ನು ಶೇಖರಿಸುವುದಕ್ಕೆ ಜ್ಞಾಪಕಶಕ್ತಿಯಿರುವ ಡಿಕೋಡರ್'ಅನ್ನು ಮತ್ತು ಟೆಕ್ಸ್ಟ್'ಗೆ ಅಥವಾ ರೇಖಾಕೃತಿ ರೂಪದೊಳಕ್ಕೆ ಪಡೆದ ಸಂಕೇತಗಳನ್ನು ಬದಲಾಯಿಸುವುದಕ್ಕೆ ಪ್ರೊಸೆಸರ್'ಅನ್ನು ಉಪಯೋಗಿಸಬೇಕು. ವೀಕ್ಷ್ಕನು ತನಗೆ ಆಸಕ್ತಿಯಿರುವ ಪುಟವನ್ನು ಆರಿಸಿಕೊಳ್ಳಲು ಕೈಯಲ್ಲಿ ಹಿಡಿದ ಸಂಖ್ಯೆಗಳ ಕೀಲಿ ಪ್ಯಾಡಿನ ಉಪಯೋಗವನ್ನು ಪಡೆಯುತ್ತಾನೆ. "ಡಿಕೋಡರ್" ಎಂಬುದು ಪರದೆಯ ಮೇಲೆ ಪ್ರದರ್ಶಿಸಲು ಪುಟವನ್ನು ತನ್ನ ನೆನಪಿನಲ್ಲಿ ಶೇಖರಿಸುತ್ತದೆ.
ಬ್ರಿಟಿಷ್ ಟೆಲಿಟೆಕ್ಸ್ಟ್ ಗುಣಮಟ್ಟದಲ್ಲಿ ಒಂದು ಸಾಲಿನಲ್ಲಿ ೪೦ ಅಕ್ಷರಗಳಿರುವ ೨೪ ಸಾಲುಗಳು ಒಂದು ಪುಟದಲ್ಲಿರುತ್ತದೆ. ಆಕರ್ಷಕ ಪರದೆ ರೂಪವನ್ನು ಕೊಡಲು ಕೆಲವು ಅಕ್ಷರಗಳು ಖಾಲಿ ಇರಬಹುದು.
ಟೆಲಿಟೆಕ್ಸ್ಟ್ ಪ್ರಸಾರವನ್ನು ದೂರದರ್ಶನ ಕಾರ್ಯಕ್ರಮದ ಜೊತೆಯಲ್ಲಿ ಮಿಶ್ರ ಮಾಡಬಹುದು. ವಹನದ ಸಮಯದಲ್ಲಿ ಸ್ವಿಚ್ ಅನ್ನು ಅದುಮಿದರೆ ಟಿ.ವಿ ಪರದೆಯ ಪ್ರತಿ ಎರಡು ಚಕ್ರಗಳಿಗೆ ೬೨೫ ಸಾಲುಗಳಂತೆ ಮಾಹಿತಿಗಳನ್ನು ಬಳಿಯುತ್ತದೆ. ಪರದೆಯ ಮೇಲಿನ ೬೨೫ ಸಾಲುಗಳಲ್ಲಿ ಪ್ರತಿ ಚಕ್ರದಲ್ಲಿ ೩೧೨ ಸಾಲುಗಳು ಸ್ಥಳ ಬಿಟ್ಟಿರುವ ರೀತಿಯಲ್ಲಿ ಬರೆದಿರುತ್ತದೆ. ಈ ೩೧೨ ಸಾಲುಗಳಲ್ಲಿ, ೨೮೦ ಮಾತ್ರ ವೀಕ್ಷಿಸಲ್ಪಡುತ್ತದೆ. ಉಳಿದವು ದೂರದರ್ಶನ ಪರದೆಯ ಮೇಲಿನ ಅಥವಾ ಕೆಳಗಿನ ಅಂಚುಗಳಲ್ಲಿ ಉಳಿಯುತ್ತದೆ.
ಟೆಲಿಟೆಕ್ಸ್ಟ್ ಎಂಬುದು ಇತ್ತೀಚಿನ ಮಾಹಿತಿಗಳನ್ನು ಪಡೆಯಲು ವರ್ತಮಾನ ಏಜೆನ್ಸಿಗಳಿಗೆ ಉಪಯುಕ್ತವಾಗಿದೆ. ಪ್ರಪಂಚದ ಘಟನೆಗಳನ್ನು ಟೆಲಿಟೆಕ್ಸ್ಟ್'ನ ಸಹಾಯದಿಂದ ವರ್ತಮಾನ ಏಜೆನ್ಸಿಜಳಿಗೆ ರವಾನಿಸಿ ಅಲ್ಲಿ ಅದನ್ನು ಸಂಗ್ರಹಿಸಿ, ಪರಿಷ್ಕರಿಸಲಾಗಿತ್ತದೆ. ವರ್ತಮಾನ ಏಜೆನ್ಸಿಯು, ಸಮಾಚಾರಗಳನ್ನು ಮುದ್ರಣಾಲಯಕ್ಕೆ ಕಳುಹಿಸುವುದರ ಮೂಲಕ ಪತ್ರಿಕೆಗಳ ರೂಪದಲ್ಲಿ ಮುದ್ರಿಸಲ್ಪಡುತ್ತದೆ. ಭಾರತದಲ್ಲಿ "ಹಿಂದೂ"[೨] ಪತ್ರಿಕೆಯನ್ನು ಟೆಲಿಟೆಕ್ಸ್ಟ್ ಸಹಾಯದಿಂದ ಮುದ್ರಿಸಲಾಗುತ್ತದೆ.
ಪ್ರಾರಂಭದಲ್ಲಿ ಸಮಾಚಾರ ತಲೆಬರಹಗಳನ್ನು ಉಪಶಿರೋನಾಮೆ(ಸಬ್ ಟೈಟಲ್ಸ್)ಯನ್ನು ಉಪಯೋಗಿಸಿ ಪ್ರದರ್ಶಿಸಲು ಟೆಲಿಟೆಕ್ಸ್ಟ್ ಅನ್ನು ಬಳಸಲಾಗುತ್ತಿತ್ತು. ಈಗ ರೈಲುಗಳ ಮತ್ತು ವಿಮಾನಗಳ ಹೊರಡುವ ಸಮಯಗಳ ಬಗ್ಗೆ ಮಾಹಿತಿಗಳನ್ನು ಪ್ರದರ್ಶಿಸುತ್ತದೆ. ಹವಾಮಾನ, ಕ್ರೀಡೆ, ಸಿನಿಮಾ ಮುಂತಾದವುಗಳ ಮಾಹಿತಿಗಳನ್ನು ಇದು ಕೊಡುತ್ತದೆ.
ವಿಡಿಯೊಟೆಕ್ಸ್ಟ್
ಬದಲಾಯಿಸಿವಿಡಿಯೋಟೆಕ್ಸ್ಟ್ ಹಾಗೂ ಟೆಲಿಟೆಕ್ಸ್ಟ್ ಹೆಚ್ಚಾಗಿ ಒಂದನ್ನೊಂದು ಹೋಲುತ್ತವೆ. ಇವುಗಳ ಒಂದೇ ಒಂದು ವ್ಯತ್ಯಾಸವೆಂದರೆ, ವಿಡಿಯೋಟೇಕ್ಸ್ಟ್ ಸಂಪರ್ಕ ಜಾಲವಾಗಿ ಸಾರವಜನಿಕ ದೂರವಾಣಿ ಜಾಲವನ್ನು ಉಪಯೋಗಿಸಿಕೊಳ್ಳುತ್ತದೆ. ಇದರಲ್ಲಿ ಚಂದಾದಾರನು ಒಂದು ದೂರವಾಣಿ ಕರೆಯನ್ನು ಮಾಡಿ, ವಿಡಿಯೋಟೆಕ್ಸ್ಟ್ ಪ್ರಾಧಿಕಾರದ ಗಣಕಯಂತ್ರ ವ್ಯವಸ್ಥೆಯ ಜೊತೆಯಲ್ಲಿ ತಾತ್ಕಾಲಿಕ ಕೊಂಡಿಯನ್ನು ಸ್ಥಾಪಿಸಿಕೊಳ್ಳುತ್ತಾನೆ. ಗಣಕಯಂತ್ರವು ದೂರವಾಣಿಯ ಮೂಲಕ ಮಾಹಿತಿಯನ್ನು ಕಳುಹಿಸುತ್ತದೆ. ಅದನ್ನು ಒಂದು ಅಯಸ್ಕಾಂತ ಟೇಪಿನ ಮೇಲೆ, ಡಿಕೋಡರ್'ನಿಂದ ಅನುವಾದಿಸಿ ದೂರದರ್ಶನ ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ. ಮಾಹಿತಿಯನ್ನು ಬಣ್ಣ ಮತ್ತು ಕಪ್ಪು ಬಿಳುಪು ದೂರದರ್ಶನಗಳೆರಡರ ಮೇಲೂ ಪ್ರದರ್ಶಿಸಬಹುದು. ವೀಕ್ಷಕನು ವಿಡಿಯೋಟೆಕ್ಸ್ಟ್ ಸೇವೆಯನ್ನು ಪೂರ್ಣಗೊಳಿಸಿದ ಮೇಲೆ, ದೂರವಾಣಿ ಮಾರ್ಗವು ತನ್ನಷ್ಟಕ್ಕೆ ತಾನೇ ಕಡಿದು ಹೋಗುತ್ತದೆ.
ವಿಡಿಯೋಟೆಕ್ಸ್ಟ್ ಸೌಲಭ್ಯವನ್ನು ಉಪಯೋಗಿಸುವವನು ಯಾವುದೇ ಮಾಹಿತಿಗಳನ್ನು ಸುಲಭವಾಗಿ ಪಡೆಯಬಹುದು. ವಾಸ್ತವವಾಗಿ ಅಂಕಿ ಅಂಶ ಮೂಲವು ಈ ಎಲ್ಲಾ ವಿಷಯಗಳ ಬಗ್ಗೆ ಆ ಸಮಯದವರೆಗಿನ ಮಾಹಿತಿಗಳನ್ನು ಇಟ್ಟುಕೊಂಡಿರುತ್ತದೆ. ಮತ್ತು ದೂರವಾಣಿ ಕರೆಯನ್ನು ಕೊಟ್ಟಾಗ ಗಣಕಯಂತ್ರವು, ಅಂಕಿ ಅಂಶದ ಮೂಲದಿಂದ ಮಾಹಿತಿಯನ್ನು ಹುಡುಕಿ ಅದನ್ನು ದೂರವಾಣಿ ಮೂಲಕ ಕಳುಹಿಸುತ್ತದೆ ಮತ್ತು ಕೆಲವೇ ಸೆಕೆಂಡುಗಳಲ್ಲಿ ಚಂದಾದಾರನು ಅದನ್ನು ಪಡೆಯುತ್ತಾನೆ.
ವಿಡಿಯೋಟೆಕ್ಸ್ಟ್ ಮತ್ತು ವಿಡಿಯೋಟೆಕ್ಸ್ಟ್ ಗಳ ನಡುವಿನ ಹೋಲಿಕೆ
ಬದಲಾಯಿಸಿಟೆಲಿಟೆಕ್ಸ್ಟ್ ಅನ್ನು ವಿಡಿಯೋಟೆಕ್ಸ್ಟ್ ನ ತಮ್ಮ ಎಂದು ಪರಿಗಣಿಸಲಾಗಿದೆ.