ಮೆಲ್ಬೋರ್ನ್ ನಲ್ಲಿ ಇತಿಹಾಸ ನಿರ್ಮಿಸಿದ ಧೋನಿ ಪಡೆ ಬದಲಾಯಿಸಿ

ಮೆಲ್ಬೋರ್ನ್ ಅಂಗಳದಲ್ಲಿ ಧೋನಿ ಪಡೆ ಇತಿಹಾಸ ನಿರ್ಮಾಣ ಮಾಡಿದೆ.
ಹಿಂದಿನ ವಿಶ್ವಕಪ್ ಗಳಲ್ಲಿ ಸಾಧ್ಯವಾಗದ್ದನ್ನು ಮಾಡಿ ತೋರಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧ ಭರ್ಜರಿ 130 ರನ್ ಗಳ ಜಯ ಗಳಿಸಿದ್ದು ಹೊಸ ಇತಿಹಾಸ ಬರೆದಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಗೆಲುವಿನ ನಂತರ ಭಾರತ ಬಿ ಗುಂಪಿನಲ್ಲಿ ಅಗ್ರಸ್ಥಾನಿಯಾಗಿ ಹೊರಹೊಮ್ಮಿದೆ.
ಭಾರತದ ಗೆಲುವಿಗೆ ಟ್ವಿಟ್ಟರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅಭಿನಂದನೆ ಸಲ್ಲಿಸಿದ್ದಾರೆ.
ಟಾಸ್ ಗೆದ್ದ ಭಾರತ ಬ್ಯಾಟಿಂಗ್ ಆಯ್ಕೆಮಾಡಿಕೊಂಡು ಶಿಖರ್ ಧವನ್ ಶತಕ ಮತ್ತು ರಹಾನೆ ಅರ್ಧಶತಕದ ನೆರವಿನಿಂದ 307 ರನ್ ಗಳ ಮೊತ್ತ ಕಲೆಹಾಕಿತ್ತು.
ಇದನ್ನು ಬೆನ್ನು ಹತ್ತಿದ ದಕ್ಷಿಣ ಆಫ್ರಿಕಾ ಯಾವ ಹಂತದಲ್ಲೂ ಭಾರತಕ್ಕೆ ಸವಾಲಾಗಿ ಪರಿಣಮಿಸಲಿಲ್ಲ.
ಭಾರತದ ಬೌಲರ್ ಗಳು ಆಫ್ರಿಕನ್ನರನ್ನು ಕಟ್ಟಿಹಾಕಲು ಯಶಸ್ವಿಯಾದರು.
ಆರ್. ಅಶ್ವಿನ್ ಮತ್ತು ಮೋಹಿತ್ ಶರ್ಮಾ ಉತ್ತಮ ಬೌಲಿಂಗ್ ದಾಳಿ ಸಂಘಟಿಸಿದರು.
ಶಮಿ ವೇಗ ಮತ್ತು ಅಶ್ವಿನ್ ಸ್ಪಿನ್ ಗೆ ಮಂಕಾದ ದಕ್ಷಿಣ ಆಫ್ರಿಕಾ 177 ರನ್ ಗಳಿಸಿ ಆಲೌಟ್ ಆಯಿತು.