ಸದಸ್ಯ:Annet Lopes/sandbox
ಪ್ರಕೃತಿಯ ಒಡಲಲ್ಲಿ ಒಂದಾಗಿ ಸಾಗರದ ಅಲೆಗಳಿಗೆ ತಾಣವಾಗಿರುವ ಕರ್ನಾಟಕ ಐತಿಹಾಸಿಕ ನಾಡು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ. "ನೆನೆಯುವುದೆನ್ನ ಮನ ಬನವಾಸಿಯಂ" ಎಂಬ ಪಂಪನ ಮಾತಿನಂತೆ ಮನದಲ್ಲಿ ಮನಸ್ಸಲ್ಲಿ ಹಚ್ಚಾಗಿ ಉಳಿದಿರುವ ನನ್ನ ತಾಯಿನಾಡಾದ ಕಾಸರಗೋಡು ಎಂಬ ಪುಟ್ಟ ಗ್ರಾಮದಲ್ಲಿ ಆಗ್ನೆಲ್ ಲೋಪಿಸ್ ಮತ್ತು ಪ್ರೆಸಿಲ್ಲ ಲೋಪಿಸ್ ರವರಿಗೆ ಜುನ್ ೩೦ ೧೯೮೬ ರಂದು ಹುಟ್ಟಿದ ಎರಡನೇಯ ಮಗಳೇ ನಾನು ಆನೆಟ್ ಲೋಪಿಸ್.
ದೇವರ ನಿರಂತರ ಆರ್ಶೀವಾದಗಳಿಂದ ತುಂಬಿದ ಮನೆಯಲ್ಲಿ ಬೆಳೆದು ನಾನು ನನ್ನ ಪ್ರಾಥಮಿಕ, ಪೂರ್ವ ಪ್ರಾಥಮಿಕ ವಿಧ್ಯಭ್ಯಾಸ ಹಾಗೂ ಪ್ರೌಢ ಶಾಲೆಯನ್ನು ನನ್ನ ಊರಿನಲ್ಲಿ ಇರುವ ಹೊಲಿ ರೊಜರಿ ಕಾನ್ವೆಂಟ್ ನಲ್ಲಿ ಶಿಕ್ಷಣ ಪಡೆದೆನು. 'ಆರಿಸಿಕೊಂಡವರು ಅನೇಕರಾದರು ಆಯ್ಕೆಯಾದವರು ಕೆಲವರು' ಎಂಬ ದೈವ ನುಡಿಯಂತೆ ದೇವರ ಕರೆಗೆ ಓಗೊಟ್ಟು ಸನ್ಯಾಸ ಜೀವನ ನಡೆಸಲು ನಾನು ಕಾರ್ಮೆಲ್ ಸಭೆಯ ಕನ್ಯಾಸ್ತ್ರಿಯರ ಮಠವನ್ನು ಸೇರಿಧೆ. ಶಿಕ್ಷಣ ಮತ್ತು ವೃತ್ತಿ: ನನ್ನ ಉನ್ನತ ಶಿಕ್ಷಣವನ್ನು ೨೦೦೮ರಲ್ಲಿ ಮೈಸೂರಿನ ತೇರಿಸಿಯನ್ ಕಾಲೆಜಿನಲ್ಲಿ ಮುಗಿಸಿ, ಕನ್ಯಾಸ್ತ್ರೀಯಾಗಲು ಬೇಕಾದ ಇನ್ನು ಹೆಚ್ಚಿನ ಮಾರ್ಗದರ್ಶನವನ್ನು ತರಬೇತುದಾರರಿಂದ ಪಡೆದೆನು. ೨೦೦೯ರಲ್ಲಿ ನನ್ನ ಮೊದಲ ಸೇವೆಯನ್ನು ಸಕ್ಕರೆಯ ನಾಡಾದ ಮಂಡ್ಯದ ಸಂತ ಜೋಸೆಫರ ಕಾನ್ವೆಂಟಿನಲ್ಲಿ ಸಲ್ಲಿಸಿದೆನು. ತದನಂತರ ೨೦೧೨ರಲ್ಲಿ ಸಿಲಿಕಾನ್ ಸಿಟಿಯಾದ ಬೆಂಗಳೂರಿನ 'ನೊರ್ಟಡೆಮ್ ಜುನಿಯರ್ ಕಾಲೆಜ್ ಆಫ್ ಎಡುಕೆಶನ್ 'ನಲ್ಲಿ ಡಿ.ಎಡ್ ವೃತಿ ಶಿಕ್ಷಣವನ್ನು ಮುಗಿಸಿ ಎರದು ವರ್ಷಗಳ ಕಾಲ ಕಾರವರದ ಹಾಗೂ ಅರಮನೆ ನಗರಿಯಾದ ಮೈಸೂರಿನ ಸಿ.ಕೆ.ಸಿ ಕಾನ್ವೆಂಟಿನಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದ್ದೇನೆ. ಏಪ್ರಿಲ್ ೨೪, ೨೦೧೫ರಲ್ಲಿ ನಾನು ನನ್ನ ಧಾರ್ಮಿಕ ಜೀವನದ ಕೊನೆಯ ಸನ್ಯಾಸ ಪಟ್ಟವನ್ನು ಸ್ವೀಕರಿಸಿದೆನು. ಜೀವನವು ಹರಿಯುವ ನೀರಿನಂತೆ, ನೀರು ಎಲ್ಲಾ ಕಡೆಯೂ ಹರಿದು ಪರಿಸರವನ್ನು ಹಸನು ಮಾಡುವಂತೆ ನಾನು ಸಹ ನನ್ನ ಜೀವನ ಎಂಬ ಪಯಣದಲ್ಲಿ ಬೇರೆಯವರಿಗೆ ಮಾರ್ಗದರ್ಶಕಿಯಾಗಿ ಬಾಳಲು ಹಾಗೂ ಕ್ರಿಸ್ತನು ಬಾಳಿದ ಹಾಗೂ ಅನುಸರಿಸಿದ ಮೌಲ್ಯಗಳನ್ನು ನನ್ನ ಜೀವನದಲ್ಲಿ ಅಳವಡಿಸಿ ಅದನ್ನು ಪರರಲ್ಲಿ ಹಂಚಿಕೊಂಡು ದೀಪವು ತನಗೊಸ್ಕರ ತಾನು ಉರಿಯದೆ ಇತರರಿಗೆ ಬೆಳಕು ಕೊಡುವಂತೆ, ನಾನು ನನ್ನ ಜೀವನವನ್ನು ನಿಸ್ವಾರ್ಥತೆಯಿಂದ ಬಾಳಿದ್ದೇನೆ. ಪ್ರಸ್ತುತ ನಾನು ನನ್ನ ಉನ್ನತ ಶಿಕ್ಷಣವಾದ ಬಿ.ಎ ಯನ್ನು ಸಾಂತ ಆಲೋಷಿಯಸ್ ಕಾಲೆಜಿನಲ್ಲಿ ಮುಂದುವರೆಸುತಿದ್ದೇನೆ.
ನನ್ನ ಹವ್ಯಾಸಗಳು: ಕತೆ ಪುಸ್ತಕ ಓದುವುದು, ಹೂತೋಟವನ್ನು ಬೆಳೆಸುವುದು, ಅಡುಗೆ ಮಾಡುವುದು, ದಿನನಿತ್ಯದ ಸುದ್ದಿಗಳನ್ನು ಸಂಗ್ರಹಿಸುವುದು ಇತ್ಯಾದಿ. ನನ್ನ ಆಸಕ್ತಿ: ಬಡವಿದ್ಯಾರ್ಥಿಗಳಿಗೆ ವಿದ್ಯಾರ್ಜನೆ ನೀಡುವುದು, ಸಂಗಿತ ಕಲಿಯುವುದು, ಹೊಸ ವಿಷಯಗಳನ್ನು ಕಲಿಯುವುದು ಇತ್ಯಾದಿ.
'life is to be lived and lived to the fullest' ಎಂಬ ಇಂಗ್ಲಿಷ್ ನುಡಿಯಂತೆ ನನ್ನ ಬದುಕೆಂಬ ಬಂಡಿಯು ಪರಿಪೂರ್ಣತೆಯನ್ನು ಪಡೆಯಲು ನಿರಂತರ ಸಾಗುತ್ತಲಿದೆ.