ಶಿ.ಶಿ.ಬಸವನಾಳ

ಬದಲಾಯಿಸಿ

ಬಸವನಾಳರು ಎಂ.ಎ ಪದವಿಯನ್ನು ಪಡೆದರು.ಇವರು ಕಾಲೇಜುಗಳ ಸ್ಥಾಪನೆ,ಪಠ್ಯ ಪುಸ್ತಕಗಳ ರಚನೆ, ಪ್ರಾಚೀನ ಸಾಹಿತ್ಯ ಕೃತಿಗಳ ಪರಿಷ್ಕರಣ, ಅನುವಾದ ಹಾಗೂ ವೀರಶೈವ ಧರ್ಮಾಭಿವೃದ್ದಿಯ ಕ್ಷೇತ್ರಗಳಲ್ಲಿ ದುಡಿದಿದ್ದಾರೆ. ಬಸವನಾಳರು 1893ರ ನವೆಂಬರ್ ರಂದು ಹಾವೇರಿಯಲ್ಲಿ ಜನಿಸಿದರು. ತಂದೆ ಶಿವಯೋಗಪ್ಪ ರೈಲ್ವೆ ಇಲಾಖೆಯಲ್ಲಿ ಸ್ಟೇಷನ್ ಮಾಸ್ತರು. ಇಬ್ಬರು ಗಂಡು, ನಾಲ್ವರು ಹೆಣ್ಣು ಮಕ್ಕಳಲ್ಲಿ ಮೊದಲಿಗರು.ಇವರ ತಂದೆಯವರು ಕನ್ನಡ,ಸಂಸ್ಕ್ರತ.ಇಂಗ್ಲಿಷ್ ಭಾಷೆಗಳ ಜ್ಞಾನವನ್ನು ಹೇಳಿಕೊಟ್ಟರು. ಇದರೊಂದಿಗೆ ಬಳ್ಳಾರಿಯ ವಾರ್ಡಾ ಮಿಷನ್ ಸ್ಕೂಲಿನಲ್ಲಿ ಕಲಿಯಬೇಕಾಗಿ ಬಂದುದರಿಂದ ತೆಲುಗಿನ ಪರಿಚಯವೂ ಚೆನ್ನಾಗಿ ಆಯಿತು. ಮುಂದೆ ತಂದೆಗೆ ವಿಜಾಪುರಕ್ಕೆ ವರ್ಗವಾದ್ದರಿಂದ ಬಸವನಾಳರು ಧಾರವಾಡದ ಸರ್ಕಾರಿ ಪ್ರೌಢಶಾಲೆಯಲ್ಲಿ ಓದನ್ನು ಮುಂದುವರಿಸಿದರು. ಅವರ ಮುಂದಿನ ಕಾರ್ಯಕ್ಷೇತ್ರ ಪುಣೆಯ ಡೆಕ್ಕನ್ ಕಾಲೇಜು , ಬಸವನಾಳರ ಶೈಕ್ಷಣಿಕ ಜೀವನವನ್ನು ಚಂದಗಾಣಿಸಿತಲ್ಲದೆ ಮುಂದೆ ಆ ಮಾದರಿಯ ಅನೇಕ ಶಿಕ್ಷಣ ಸಂಸ್ಥೆಗಳನ್ನು ಹುಟ್ಟು ಹಾಕುವಲ್ಲಿ ಆದರ್ಶಪ್ರಾಯವಾಯಿತು. 1914ರಲ್ಲಿ ಬಸವನಾಳರು ಬಿ.ಎ ಪರೀಕ್ಷೆಲ್ಲಿ ಉನ್ನತವರ್ಗದಲ್ಲಿ ಉತ್ತೀರ್ಣರಾದರು. ಮನೆಯಲ್ಲಿ ಅತ್ಯಂತ ಕಷ್ಟಕರವಾದ ಪರಿಸ್ಥಿತಿ. ಇಂಥಹ ಸಂದರ್ಭದಲ್ಲಿ ಬಸವನಾಳರು ಇತಿಹಾಸ ಹಾಗೂ ಅರ್ಥಶಾಸ್ತ್ರ ವಿಷಯಗಳಲ್ಲಿ ಎಂ.ಎ ಪದವಿಯನ್ನು ಗಳಿಸಿದರು. ಹೆಚ್ಚಿನ ಸಾಧನೆಯನ್ನು ತೋರಿದ ತರುಣರನ್ನು ಪ್ರೋತ್ಸಾಹಿಸಲು ಅಥಣಿಯ ಮಹಾಜನ ಮಹಾದೇವಪ್ಪ ಹಾಗೂ ಮತ್ತಿತರರು ಸ್ಥಾಪಿಸಿದ “ವಿಕ್ಟೋರಿಯ ಜ್ಯುಬುಲಿ” ಪಾರಿತೋಷಕವನ್ನು ಅವರಿಗಿಂತಲೂ ಕಡಿಮೆ ದರ್ಜೆಯಲ್ಲಿ ತೇರ್ಗಡೆಯಾದ ಎಂ ಆರ್ ಸಾಖರೆಯವರೊಂದಿಗೆ ಬಸವನಾಳರು ಹಂಚಿಕೊಂಡರು.

ಆದರ್ಶ ಶಿಕ್ಷಣದತ್ತ

ಬದಲಾಯಿಸಿ

ಎಂ.ಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಹಾವೇರಿಯ ಬಂಧುಗಳೊಬ್ಬರ ಮನೆಗೆ ಹೋಗಿದ್ದ ಬಸವನಾಳರನ್ನು ಅಲ್ಲಿದ್ದೊಬ್ಬ ವೃದ್ದೆ “ತಮ್ಮ ಈ ಪರೀಕ್ಷೆ ಪಾಸು ಮಾಡಿರುವುದರಿಂದ ನಿನಗೆ ಕೋರ್ಟಿನ ಬೇಲೀಫ ನೌಕರಿ ಸಿಗುತ್ತದೇನು?” ಎಂದು ಮುಗ್ದವಾಗಿ ಪ್ರಶ್ನಿಸಿದಳಂತೆ!. ಪುಣೆಯ ಡೆಕ್ಕನ್ ಕಾಲೇಜಿನಂತಹ ಒಂದು ಆದರ್ಶ ಶಿಕ್ಷಣ ಸಂಸ್ಥೆಯನ್ನು ಆರಂಭಿಸಬೇಕೆಂಬ ಅವರ ಕನಸು 1916 ರಲ್ಲಿ ಸಮಾನ ಮನೋಧರ್ಮದ ಗೆಳೆಯರಾದ ಎಂ.ಆರ್ ಸಾಖರೆ, ಹುಚ್ಚಯ್ಯ ,ಕಟ್ಟಿಮನಿ,ಮಮದಾದಪುರ ಬಸಪ್ಪ ಹಂಚಿನಾಳ, ಪಂಡಿತಪ್ಪ ಚಿಕ್ಕೊಡಿ ಹಾಗೂ ಬಿ.ಎಲ್ ಪಾಟೀಲರ ಸಹಕಾರದಿಂದ ಸಕಾರಗೊಂಡಿತು.ಬೆಳಗಾವಿ, ಸೊಲ್ಲಾಪುರ, ಗುಲ್ಬರ್ಗ ಮುಂತಾದ ಪ್ರದೇಶಗಳಲ್ಲಿ ಪರಭಾಷೀಯರು ನಡೆಸುತ್ತಿದ್ದ ದಬ್ಬಾಳಿಕೆಯ ವಿರುದ್ದ ಕನ್ನಡಿಗರನ್ನು ಜಾಗೃತಗೊಳಿಸುವ ಪ್ರಧಾನ ಉದ್ದೇಶದಿಂದ ‘ಕರ್ನಾಟಕ ಲಿಂಗಾಯಿತ ಎಜುಕೇಶನ್ ಸೊಸೈಟಿ’ ಎಂಬ ಹೆಸರಿನಿಂದ ಆರಂಭವಾದ ಈ ಶಿಕ್ಷಣಸಂಸ್ಥೆಯು ಇಂದು ‘ಕರ್ನಾಟಕ ಲಿಬರಲ್ ಎಜುಕೇಶನ್ ಸೊಸೈಟಿ'ಎಂಬ ಹೆಸರಿನಿಂದ ನಾಡಿನಾದ್ಯಂತ ಖ್ಯಾತವಾಗಿದೆ. ಈ ಶಿಕ್ಷಣ ಸಂಸ್ಥೆಯ ಮೊದಲ ಶಾಲೆಯಾಗಿ ಆರಂಭವಾದ ಬೆಳಗಾವಿಯ ಗಿಳಗಂಚಿ ಅರ್ಟಾಳ ಹೈಸ್ಕೂಲಿನಲ್ಲಿ ಬಸವನಾಳರು ಅದ್ಯಾಪಕರಾಗಿ ಆನೇಕ ವರ್ಷಗಳ ಕಾಲ ಸೇವೆ ಸಲ್ಲಿಸಿದರು. ಮೆಟ್ರಿಕ್ ತರಗತಿಯೊಂದಕ್ಕೆ ಇಂಗ್ಲೀಷ್ ಭಾಷೆಯನ್ನು ಕಲಿಸುತ್ತಿದ್ದ ಮಾಸ್ತರ ಬಸವನಾಳರ ಎರಡು ಇಂಗ್ಲೀಷ್ ಶಬ್ಧಗಳ ಉಚ್ಚಾರ ತಪ್ಪೆಂದು ಸುಳ್ಳೇ ವಾದಿಸಿದ ಹೆಸ್ಕಿಲ್ ಎಂಬ ಆಂಗ್ಲ ಶಾಲಾ ಇನ್ಸ್ಪೆಕ್ಟರ್ ಮುಂದೆ ಆಕ್ಸಫರ್ಡ್ ನಿಘಂಟನ್ನು ತೆರೆದಿಟ್ಟು ತಮ್ಮ ಪ್ರಯೋಗವು ಶಾಸ್ತ್ರ ಸಮ್ಮತವಾಗಿದೆ ಎಂಬುದನ್ನು ನಿರೂಪಿಸುವುದರಟ್ಟರ ಮಟ್ಟಿಗೆ ಅವರ ವ್ಯಾಸಂಗದಲ್ಲಿ ನಿರ್ಧಿಷ್ಟತೆ ಬೆಳೆದಿತ್ತು. ಬೆಳಗಾವಿಯ ಹೈಸ್ಕೂಲ್ ತನ್ನ ಕಾಲ ಮೇಲೆ ತಾನು ನಿಲ್ಲುವ ಶಕ್ತಿಯನ್ನು ಪಡೆದಿದೆ ಎಂಬ ಅಂಶ ಖಾತ್ರಿಯಾದೊಡನೆ ಬಸವನಾಳರ ಅದಮ್ಯ ಚೇತನ ಮತ್ತೊಂದು ಶಿಕ್ಷಣ ಸಂಸ್ಥೆಯನ್ನು ಆರಂಭಿಸಿದರು.1922 ರಲ್ಲಿ ಧಾರವಾಡದಲ್ಲಿ ಮೊದಲಾದ ರಾಜಾ ಲಖಮಗೌಡ ಸರದೇಸಾಯಿ ಪ್ರೌಢಶಾಲೆ ಅವರದ್ದೇ ಪರಿಶ್ರಮದ ಫಲ. ಕೇವಲ ಪ್ರೌಢಶಾಲೆಯ ಮಟ್ಟದಲ್ಲಿ ಮಾತ್ರವಲ್ಲದೆ ಉಚ್ಚ ಶಿಕ್ಷಣದ ಹಂತದಲ್ಲಿಯೂ ವಿದ್ಯಾ ಪ್ರಸಾರವಾಗುವುದು ಅವಶ್ಯಕ ಎಂಬುದನ್ನು ಮನಗಂಡ ಅವರು 1933ರಲ್ಲಿ ಬೆಳಗಾವಿಯಲ್ಲಿ ಲಿಂಗರಾಜ ಕಾಲೇಜನ್ನು ಆರಂಭಿಸಿದರು. ತಾವು ಸಂಸ್ಥೆಯ ಸ್ಥಾಪಕರೆಂಬ ಕಾರಣದಿಂದ ಅದಕ್ಕೆ ಮುಖ್ಯಸ್ಥರಾಗುವುದು ಅವರಿಗೆ ಸಾಧ್ಯವಿತ್ತಾದರೂ ಆಗಷ್ಟೇ ಇಂಗ್ಲೆಡಿನಲ್ಲಿ ಉಚ್ಚಶಿಕ್ಷಣವನ್ನು ಮುಗಿಸಿ ಹಿಂತಿರುಗಿದ್ದ ತಮ್ಮ ಶಿಷ್ಯ ಡಾ. ಎಸ್.ಸಿ ನಂದಿಮಠರನ್ನು ಪ್ರಾಚಾರ್ಯರನ್ನಾಗಿ ಮಾಡಿ ತಾವು ಕೇವಲ ಒಬ್ಬ ಅಧ್ಯಾಪಕರಾಗಿ ಕಾರ್ಯನಿರ್ವಹಿಸಿದರು. ಪ್ರಮುಖವಾದ ಉದ್ಯಮವೊಂದನ್ನು ಕೈಗೆತ್ತಿಕೊಂಡಾಗ ಅವರ ಸಾಧನೆಗೆ ಪೂರಕವಾದ ಅನೇಕ ಅನುಷಂಗಿಕ ಅಂಶಗಳನ್ನು ಗಮನವಿಟ್ಟು ಬಸವನಾಳರು ಸಜ್ಜುಗೊಳಿಸುತ್ತಿದ್ದರು. ಕೆ.ಎಲ್.ಇ. ಸಂಸ್ಧೆಗಳಿಗೆ ಅವಶ್ಯಕವಾಗಿದ್ದ ಮುದ್ರಣಾ ಕಾರ್ಯಗಳಿಗೆ ಇತರ ಮುದ್ರಣಾಲಯಗಳವರ ಕೈಕಾಯುವುದರ ಬದಲಾಗಿ ಗದುಗಿನ ತೋಂಟದಾರ್ಯ ಸ್ವಾಮಿಗಳ ಪ್ರೆಸ್ ಎಂಬ ಮುದ್ರಣಾಲಯವನ್ನು ಧಾರವಾಡದಲ್ಲಿ ಸ್ಥಾಪಿಸಿದರು. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪಠ್ಯಪುಸ್ತಕಗಳನ್ನೇ ಅಲ್ಲದೆ, ಹಂಪಯ್ಯ ಹಲಗಲಿಯವರ ಜತೆಗೊಡಿ ಹಿಂದೂಸ್ಥಾನದ ಇತಿಹಾಸ ಹಾಗೂ ಇಂಗ್ಲೆಂಡಿನ ಪ್ರಾಚೀನ ಇತಿಹಾಸ ಎಂಬ ಪಠ್ಯಗಳನ್ನು ರಚಿಸಿದರು. ಶಿಕ್ಷಣಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಬಸವನಾಳರು ಮುಂಬೈ ವಿಶ್ವವಿದ್ಯಾಲಯದ ಸೆನೆಟ್ ಸದಸ್ಯರಾಗಿ ಚುನಾಯಿತರಾದರು. ಅಲ್ಲಿಯ ಕ್ರಮಿಕ ಪುಸ್ತಕಗಳ ನಿಯಾಮಕ ಸಮಿತಿಯ ಸದಸ್ಯರಾದ ನಂತರ ಅವರು ಮಾಡಿದ ಗಣನೀಯ ಕಾರ್ಯವೆಂದರೆ ಆವರೆಗೆ ಆವಜ್ಞೆಗೆ ಒಳಗಾಗಿದ್ದ ಪ್ರಮುಖವಾದ ಉದ್ಯಮವೊಂದನ್ನು ಕೈಗೆತ್ತಿಕೊಂಡಾಗ ಅದರ ಸಾಧನೆಗೆ ಪೂರಕವಾದ ಅನೇಕ ಅಂಶಗಳನ್ನು ಗಮನವಿಟ್ಟು ಬಸವನಾಳರು ಸಜ್ಜುಗೊಳಿಸುತ್ತಿದ್ದರು. ವಿದ್ಯಾರ್ಥಿಗಳಿಗೆ ಉಪಯುಕ್ತವಾದ ಪಠ್ಯಪುಸ್ತಕಗಳನ್ನೇ ಅಲ್ಲದೆ, ಹಂಪಯ್ಯ ಹಲಗಲಿಯವರ ಜತೆಗೂಡಿ ‘ಹಿಂದೂಸ್ಥಾನದ ಇತಿಹಾಸ’ ಹಾಗೂ ‘ಇಂಗ್ಲೆಂಡಿನ ಪ್ರಾಚೀನ ಇತಿಹಾಸ’ ಎಂಬ ಪಠ್ಯಗಳನ್ನು ರಚಿಸಿದರು. 1941ರಲ್ಲಿ ಬಸವನಾಳರ ಸಂಪಾದಕತ್ವದಲ್ಲಿ ಪ್ರಕಟವಾದ ‘ವೀರಶೈವತತ್ವದ ಪ್ರಕಾಶ’ ಎಂಬ ಕೃತಿಯು ಆಧರ್ಮದ ಉಗಮ ಮತ್ತು ವಿಕಾಸನಗಳನ್ನು ಕುರಿತಾದ ವಿವಿಧ ವಿದ್ವಾಂಸರ ಲೇಖನಗಳನ್ನು ಒಳಗೊಂಡ ಸಂಗ್ರಹ ಗ್ರಂಥ.ಶಿವಶರಣರ ಸಾಹಿತ್ಯವನ್ನು ಪ್ರಚಾರಗೊಳಿಸುವ ಸಲುವಾಗಿ ಬಸವನಾಳರು 1940ರಲ್ಲಿ ಕೆ.ಆರ್,ಶ್ರೀನಿವಾಸ ಅಯ್ಯಂಗಾರರ 'ಒಡಗೂಡಿ' ಎಂಬ ಬಸವಣ್ಣನವರ ವಚನಗಳ ಇಂಗ್ಲಿಷ್ ಅನುವಾದವು ಪ್ರಕಟವಾಗಿದೆ.ಎಂಬುದನ್ನು ‘ಎನಗಿಂತ ಕಿರಿಯರಿಲ್ಲ’ ಎಂಬ ಪ್ರಸಿದ್ಧವಾದ ವಚನದ ಅನುವಾದದ ಈ ಸಾಲುಗಳಲ್ಲಿ ಕಾಣಬಹುದು.

ಸಾಹಿತ್ಯ ಸೇವೆ

ಬದಲಾಯಿಸಿ

ಕ್ರಿ.ಶ 1918ರ ಸುಮಾರಿಗೆ ‘ಪ್ರಬೋಧ’ ಪತ್ರಿಕೆಯ ಸಂಪಾದಕತ್ವವನ್ನು ವಹಿಸಿಕೊಳ್ಳುವುದರೊಂದಿಗೆ ಬಸವನಾಳರ ಸಾಹಿತ್ಯ ವ್ಯವಸಾಯವು ಆರಂಭವಾಯಿತು. ಕೆಲಕಾಲದ ನಂತರ ಈ ಪತ್ರಿಕೆ ನಿಂತಿತಾದರೂ ಧಾರವಾಡದ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಧೆ ವತಿಯಿಂದ ಪ್ರಕಟವಾಗುತ್ತಿದ್ದ ‘ಸಾಹಿತ್ಯ ಸಮಿತಿ ಪತ್ರಿಕೆ’ಯೆಂಬ ತ್ರೈಮಾಸಿಕದ ಸಂಪಾದನೆಯ ಜಬಾಬ್ದಾರಿ ಅವರ ಹೆಗಲೇರಿತು.ಕೆ.ಎಲ್.ಇ ಶಿಕ್ಷಣ ಸಂಸ್ಧೆಯಿಂದ ನಿವೃತ್ತರಾದ ಮೇಲೆ ಧಾರವಾಡದಲ್ಲಿ ಬೆಳಗಾವಿ ರಾಮಚಂದ್ರರಾಯರ ‘ಕಲಾಸಿಂಧು ಮುದ್ರಣಾಲಯವನ್ನು ಕೊಂಡು ‘ದವೀಂದ್ರ ಮುದ್ರಣಲಯ’ವೆಂಬ ಹೆಸರಿನಿಂದ ಮುಂದುವರೆಸಿದರು. ಆಲೂರು ವೆಂಕಟರಾಯರಿಂದ ಆರಂಭವಾಗಿ ಆಗ ರಾಮಚಂದ್ರರಾಯರ ವಶದಲ್ಲಿಯೇ ಇದ್ದ ‘ಜಯ ಕನಾಟಕವೆಂಬ ಮಾಸಪತ್ರಿಕೆಯನ್ನು ಖರೀದಿಸಿ, ಅದೇ ಹೆಸರಿನ ಸಾಪ್ತಾಹಿಕವನ್ನು ಆರಂಭಿಸಿ ಮುನ್ನಡೆದರು. ಇವಲ್ಲದೆ ವಿದ್ಯಾವರ್ಧಕ ಸಂಘದ ಪ್ರಕಟಣೆಯಾದ ‘ವಾಗ್ಬೂಷಣ’ ಪತ್ರಿಕೆಯಲ್ಲಿಯೂ ಅವರು ಅನೇಕ ಲೇಖನಗಳನ್ನು ಬರೆದಿದ್ದಾರೆ.ಇದೇ ಸಮಯದಲ್ಲಿ ಲಕ್ಷ್ಮೀಶನ ‘ಜೈಮಿನಿಭಾರತ’ದಿಂದ ವಿರೂಪಾಕ್ಷ ಪಂಡಿತನು ಪ್ರಭಾವಿತನಾಗಿದ್ದನೋ ಅಥವಾ ವಿರೂಪಾಕ್ಷಪಂಡಿತನ ಪ್ರಭಾವವು ್ಲ ಲಕ್ಷ್ಮೀಶನ ಮೇಲೆ ಉಂಟಾಗಿದೆಯೋ? ಎಂಬ ವಿವಾದವೊಂದು ಹುಟ್ಟಿಕೊಂಡಿತು. ಆಗ ಬಸವನಾಳರ ವಿರೂಪಾಕ್ಷ ಪಂಡಿತನ ಚೆನ್ನಬಸವ ಪುರಾಣದೊಳಗಿನ ಕಾಮದಹನ, ಪಾರ್ವತಿ ತಪಸ್ಸು ಹಾಗೂ ಗಿರಿಜಾ ಕಲ್ಯಾಣವೆಂಬ ಸಂಧಿಗಳನ್ನು ಅನೇಕ ಪಾಠಗಳ ಆಧಾರದ ಮೇಲೆ ಪರಿಷ್ಕರಿಸಿ ಪ್ರಕಟಿಸಿದರು. ಈ ಗ್ರಂಥದ ಪ್ರಸ್ತಾವನೆಯಲ್ಲಿ ವಿರೂಪಾಕ್ಷ ಪಂಡಿತನೇ ಲಕ್ಷ್ಮೀಶನಿಗೆ ಸ್ಪೂರ್ತಿಯನ್ನು ನೀಡಿದನು ಎಂದು ತಮ್ಮ ವಾದವನ್ನು ಮಂಡಿಸಿದರು.

ಮುಂದೆ ಲಿಂಗಾಯತ ವಿದ್ಯಾಭಿವೃದ್ಧಿ ಸಂಸ್ಧೆಯ ಸಾಹಿತ್ಯ ಸಮಿತಿಯ ಕನ್ನಡದ ಪ್ರಾಚೀನ ಗ್ರಂಥಗಳನ್ನು ಪ್ರಕಟಿಸಲು ಆರಂಭಿಸಿದಾಗ ಬಸವನಾಳರು ಚೆನ್ನಬಸವ ಪುರಾಣವನ್ನೇ ಸಮಗ್ರವಾಗಿ ಸಂಪಾದಿಸಿ ಪ್ರಕಟಿಸಿದರು(1934). ಅನಂತರದಲ್ಲಿ ಚಾಮರಸನ ಪ್ರಂಭುಲಿಂಗಲೀಲೆ(1938) ನಾಗವರ್ಮನ ಕಾಮ್ಯಾಲೋಕನಂ(1939) ಷಡಕ್ಷರದೇವನ ಶಬರಶಂಕರ ವಿಳಾಸಂ (1939) ಕುಂಲಗಿಯಾಚ್ಯಾರರ ಕರ್ನಾಟಕ ಶಬ್ಧಾನುಶಾಸನ ಪ್ರಕಶಾಸಿಕೆ (1941) ಹರಿಹರನ ರೇವಣಸಿದ್ಧೇಶ್ವರ ದೇವರ ರಗಳೆ(1942) ರಕ್ಷಾಶತಕ ಮತ್ತು ಪಂಪಾಶತಕ ಬಾಲಲೀಲಾ ಮಹಾಂತ ಶಿವಯೋಗಿಗಳ ಕೈವಲ್ಯ ದರ್ಪಣ, ಮೈಲಾರದ ಬಸವಲಿಂಗ, ಶರಣರ ಕೃತಿಗಳು ಸರ್ಪ ಭೂಷಣ ಶಿವಯೋಗಿಗಳ ಕೈವಲ್ಯ ಕಲ್ಪವಲ್ಸರಿ ಹಾಗೂ ‘ಬಸವಣ್ಣನವರ ಷಟ್ ಸ್ಥಲದ ವಚನಗಳನ್ನು ಅವರು ಸಂಪಾದಿಸಿ ಪರಿಷ್ಕರಿಸಿ ಮುದ್ರಿಸಿದ್ದಾರೆ. ಬಸವಣ್ಣನವರ ಹೆಚ್ಚಿಗೆ ದೊರೆತ ವಚನಗಳು ಎಂಬ ಕೃತಿಯು ಅವರ ನಿಧನಾಂತರ 1954ರಲ್ಲಿ ಪ್ರಕಟವಾಗಿದೆ. ಕನ್ನಡದಲ್ಲಿ ಗ್ರಂಥ ಸಂಪಾದನಾ ಶಾಸ್ತ್ರವನ್ನು ಬೆಳೆಸಿದವರಲ್ಲಿ ಬಸವನಾಳರೂ ಒಬ್ಬರು. ಅವರ ಪಾಲಿಗೆ ಗ್ರಂಥ ಸಂಪಾದನೆಯ ಕೆಲಸ ಕೇವಲ ಹತ್ತಾರು ಪಾಠಗಳಲ್ಲಿ ಪ್ರಕಟಿಸುತ್ತಿದ್ದರು. ಬಸವಣ್ಣನವರ ವಚನವೊಂದರಲ್ಲಿ ‘ರಬ್ಬು’ ಎಂಬ ಶಬ್ದದ ಪಾಠವನ್ನು ಅನೇಕ ವಿದ್ವಾಂಸರು ಸಂದೇಹವಿಲ್ಲದೆ ಒಪ್ಪಿಕೊಂಡಿದ್ದರಾದರೂ ಬಸವನಾಳರು ‘ಕಬ್ಬು’ ಎಂಬ ಪಾಠವು ವಚನದ ಒಟ್ಟು ಅರ್ಥವ್ಯಾಪ್ತಿಯ ದೃಷ್ಟಿಯಿಂದ ಸರಿಯಾದ ಪಾಠವೆಂದು ಊಹಿಸಿ ಸಾಬೀತುಪಡಿಸಿದರು.