==ಮೈಲಾರಲಿಂಗನ ಆರಾಧನೆ===
 ಯಲ್ಲಮ್ಮ ಮಾದೇಶ್ವರ, ಮಂಟೆಸ್ವಾಮಿಯಂತೆ ಮೈಲಾರಲಿಂಗ ಮಧ್ಯಕರ್ನಾಟಕದ  ಪ್ರಮುಖ ಆರಾಧ್ಯ ದೈವ. ಯಲ್ಲಮ್ಮನಿಗೆ ಚೌಡಿಕೆಯರು, ಮಾದೇಶ್ವರನಿಗೆ ಕಂಸಾಳೆಯವರು, ಮಂಟೆಸ್ವಾಮಿಗೆ ನೀಲಗಾರರಿದ್ದಂತೆ ಮೈಲಾರಲಿಂಗನಿಗೆ ಗೋರವಾರು ಭಕ್ತರಾಗಿದ್ದರೆ, ಕರ್ನಾಟಕ ಮಹಾರಾಷ್ಟ, ಆಂಧ್ರಗಳಲ್ಲಿ ಮೈಲಾರಲಿಂಗ ಅಥವಾ ಖಂಡೋಬನಿಗೆ ಸಂಬಂದಿಸಿದ ಹತ್ತಾರು ಕ್ಷೇತ್ರಗಳಿವೆ. ಅವುಗಳಲ್ಲಿ ಮುಖ್ಯವಾದವುಗಳನ್ನು ಇಲ್ಲಿ ವಿವರಿಸಲಾಗಿದೆ
===ಮಣ್ಣು ಮೈಲಾರ===
ಬಳ್ಳಾರಿ ಜಿಲ್ಲೆಯ ಹೂವಿನ ಅಡಗಿಯಲ್ಲಿದೆ. ಮೈಲಾರಲಿಂಗನ ದೇವಾಲಯವಿರುವ ಈ ಸ್ಥಳವನ್ನು ಹೀರೆಮೈಲಾರವೆಂದು  ಕರೆಯುವುದು ವಾಡಿಕೆ  ಉಂಗ್ಲಾರ  ಕ್ಷೇತ್ರ, ಆದಿ ಮೈಲಾರ, ಮಣ್ಣು ಮೈಲಾರ ಕ್ಷೇತ್ರ ಇವುಗಳು ಇನ್ನಿತರ ಹೆಸರುಗಳು, ಮೈಲಾರಲಿಂಗನಿಗೆ ಸಂಬಂಧಿಸಿದಂತೆ ಇದು ಪ್ರಾಚೀನವಾದುದೆಂಬ ನಂಬಿಕೆಯಿದೆ. 

ದೇವರ ಗುಡ್ಡ ಬದಲಾಯಿಸಿ

ಬಳ್ಳಾರಿ ಜಿಲ್ಲೆ ರಾಣಿಬೆನ್ನೂರು ತಾಲೂಕಿನಲ್ಲಿ ಇದೆ. ಶ್ರೀ ಕ್ಷೇತ್ರ ಗುಡ್ಡಗುಡ್ಡೆಪುರ, ದೇವರಗುಡ್ಡ ಇತ್ಯಾದಿ ಹೆಸರುಗಳಿವೆ. ಮೈಲಾರಲಿಂಗನ ಸಂಪ್ರದಾಯಕ್ಕೆ ಸಂಬದಿಸಿದಂತೆ ಎರಡನೇ ಪ್ರಸಿದ್ದ ಸ್ಥಳವಿದು.
===ಕರಿಮನಿ ಕ್ಷೇತ್ರ===
ಇದು ಬೆಳಗಾಂ ಜಿಲ್ಲೆಯ ಸವದತ್ತಿ ತಾಲೂಕಿನ ಮುರಗೋಡಿನಿಂದ ದಕ್ಷಿಣಕ್ಕೆ ಸುಮಾರು ನಾಲ್ಕು ಕೀಲೋ ಮೀಟರ್ ದೂರದಲ್ಲಿದೆ. ಈ ದೇವರನ್ನು ಮಲ್ಲಯ್ಯ,  ಮಲ್ಲಿಕಾರ್ಜುನ ಎಂದೂ ಕೂಡಾ ಕರೆಯಲಾಗುತ್ತದೆ. ಬೆಳಗಾಂ ಜಿಲ್ಲೆಯ ಭಕ್ತರಿಗೆಲ್ಲ ಇದು ಪ್ರಸಿದ್ದವಾದ ಕ್ಷೇತ್ರ. ಇಲ್ಲಿ ಶೀಗೆ ಹುಣ್ಣಿಮೆಯಿಂದ ಭರತ ಹುಣ್ಣಿಮೆಯವರೆಗೆ ಜಾತ್ರೆ ನಡೆಯುತ್ತದೆ. 

ಗುಡೂರು ಹುಲ್ಲಪ್ಪನ ಕ್ಷೇತ್ರ ಬದಲಾಯಿಸಿ

 ಇದು ಬಿಜಾಪುರ ಜಿಲ್ಲೆಯ ಐಹೂಳೆ ಮತ್ತು ಪಟ್ಟದಕಲ್ಲು ಗ್ರಾಮಗಳಿಗೆ ಮದ್ಯದಲ್ಲಿ ಬಾದಾಮಿಯಿಂದ ಸುಮಾರು ೨೫ ಕಿ ಮೀ ದೂರದಲ್ಲಿದೆ. ಇಲ್ಲಿಯ ದೇವರನ್ನು ಹುಲ್ಲಪ್ಪನೆಂದು ಕರೆಯಲಾಗುತ್ತದೆ. ಅಗಿ ಹುಣ್ಣಿಮೆಗೆ ಮತ್ತು ನವರಾತ್ರಿ ಇಲ್ಲಿ ಜಾತ್ರೆಯಾಗುತ್ತದೆ. 
====ಯಾತಗಿರಿ ಮಲ್ಲಯ್ಯನ ದೇವಾಲಯ====

ಗುಲ್ಬರ್ಗ ಜಿಲ್ಲೆಯ ಯಾದವಗಿರಿ ಪಟ್ಟಣದಿಂದ ಆಗ್ನೇಯಕ್ಕೆ ಸುಮಾರು ಹದಿನೆಂಟು ಮೈಲು ದೂರದಲ್ಲಿ ಯಾತಗಿರಿ ಮೈಲಾರಲಿಂಗ ಹೊನ್ನಕೆರೆ ಮಲ್ಲಯ್ಯ ಇತ್ಯಾದಿ ಹೆಸರುಗಳಿಂದ ಈ ದೇವರನ್ನು ಕರೆಯಲಾಗುತ್ತದೆ.

ಹಿಪ್ಪರಿಗೆಯ ಮಲ್ಲಯ್ಯನ ದೇವಸ್ಥಾನ ಬದಲಾಯಿಸಿ

ಬಿಜಾಪುರದಿಂದ ಪೂರ್ವಕ್ಕೆ ಸುಮಾರು ೨೫ ಕಿ.ಮೀ. ದೂರದಲ್ಲಿರುವ ಹಿಪ್ಪರಗಿ ಗ್ರಾಮದಲ್ಲಿದೆ. ಹಿಪ್ಪರಗಿ ಮಲ್ಲಯ್ಯನೆಂದು ಕರೆಯುವ ಇದನ್ನು 'ಮಾರ್ತಾಂಡ ಕ್ಷೇತ್ರ' ಎಂದು ಪುನರ್ ನಾಮಕರಣ ಮಾಡಿರುವುದೂ ಇದೆ. ಆಶ್ವೀಜ ಶುದ್ಧ ಏಕಾದಶಿಯಂದು ಇಲ್ಲಿ ಉತ್ಸವ ನಡೆಯುತ್ತದೆ,

ಪ್ರೇಮಪುರ-ಮೈಲಾರ ಬದಲಾಯಿಸಿ

ಬೀದರ್ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಖಾನಾಪುರ ಗ್ರಾಮದಲ್ಲಿದೆ. 'ಶ್ರೀ ಮೈಲಾರ-ಮಲ್ಲಣ್ಣ ಕ್ಷೇತ್ರ', 'ದಕ್ಷಿಣಕಾಶಿ', 'ಪ್ರೇಮಾಪುರ' ಇತ್ಯಾದಿ ಹೆಸರುಗಳಿಂದ ಇದನ್ನು ಕರೆಯಲಾಗುತ್ತದೆ. ಮಾರ್ಗಶೀರ್ಷ ಅಮವಾಸ್ಯೆಯೆಂದು ಇಲ್ಲಿ ಜಾತ್ರೆ ನಡೆಯುತ್ತದೆ, ಕರ್ನಾಟಕದಲ್ಲಿ ಮಾತ್ರವಲ್ಲದೆ. ಮಹಾರಾಷ್ಟ್ರ ರಾಜ್ಯದಲ್ಲಿಯೂ ಮೈಲಾರಲಿಂಗನ ಸಂಪ್ರದಾಯವಿದ್ದು 'ಪಾಲಿ ಪೇಂಟರನ ಖಂಡೋಬ ದೇವಾಲಯ' ಇವುಗಳಲ್ಲಿ ಮುಖ್ಯವಾದದ್ದು. ಇದು ಸಾತಾರದಿಂದ ದಕ್ಷಿಣಕ್ಕೆ ಸುಮಾರು ೨೦,ಕಿ,ಮೀ ಅಂತರದಲ್ಲಿ ತಾರಳಿ ನದಿಯದಂಡೆಯ ಮೇಲಿದೆ. ಆಶ್ವೀಜ ಪ್ರತಿಪದೆಯಿಂದ ದಸರೆಯವರೆಗ ಇಲ್ಲಿ ಜಾತ್ರೆ ನಡೆಯುತ್ತದೆ.

ಜೆಜೂರಿ ಖಂಡೋಬ ದೇವಾಲಯ ಬದಲಾಯಿಸಿ

ಪುಣೆ ಜಿಲ್ಲೆಯ ಪುರಂದರ ತಾಲ್ಲೂಕಿನಲ್ಲಿದೆ, ಚೈತ್ರ ಶುದ್ಧ ದ್ವಾದಶಿಯಿಂದ ಹುಣ್ಣಿಮೆಯವರೆಗೆ ಮಾರ್ಗಶೀರ್ಷ ಅಮವಾಸ್ಯೆಯಿಂದ, ಪುಷ್ಯ ಶುದ್ಧ ದ್ವಾದಶಿಯಿಂದ ಹುಣ್ಣಿಮೆಯವರೆಗೆ, ಮಾಘಶುದ್ಧ ದ್ವಾದಶಿಯಿಂದ ಹುಣ್ಣಿಮೆಯವರೆಗೆ ಹಾಗೂ ಪ್ರತಿ ಸೋಮಮತಿ ಅಮವಾಸ್ಯೆಯೆಂದು ಇಲ್ಲಿ ಜಾತ್ರೆ ನಡೆಯುತ್ತದೆ.

ಮಂಗಸೂಳಿ ಮಲ್ಲಯ್ಯನ ದೇವಾಲಯ ಬದಲಾಯಿಸಿ

ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಂಗಸೂಳಿ ಗ್ರಾಮದಲ್ಲಿದೆ. ಆಶ್ವೀಜದ ನವರಾತ್ರಿಯಲ್ಲಿ ಮತ್ತು ಚೈತ್ರಶುದ್ಧ ದಶಮಿಯಲ್ಲಿ ಇಲ್ಲಿ ಜಾತ್ರೆಯಾಗುತ್ತದೆ. ಇವುಗಳಲ್ಲದೆ. ದಕ್ಷಿಣಕರ್ನಾಟದಲ್ಲಿ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನ ಮೈಲಾರಪಟ್ನ, ಬೆಂಗಳೂರು ಜಿಲ್ಲೆಯ ಆನೇಕಲ್ ತಾಲೂಕಿನ ಎಳ್ಳಾಗರ. ಮೈಸೂರು ಜಿಲ್ಲೆಯ ಮುಡುಕುತೊರೆ ಕ್ಷೇತ್ರಗಳು ಪ್ರಸಿದ್ಧವಾದವು. ಮುಡುಕುತೊರೆ ಕ್ಷೇತ್ರದ ಗೊರವರನ್ನು ಪಾರ್ವತಿಗುಡ್ಡರೆಂದು ಕರೆಯಲಾಗುತ್ತದೆ.

ಇತಿಹಾಸದಲ್ಲಿ ಉಲ್ಲೇಖಗಳು ಬದಲಾಯಿಸಿ

ಮೈಲಾರಲಿಂಗನ ಆರಾಧನೆಯ ಪ್ರಾಚೀನತೆಗೆ ಸಂಬಂಧಿಸಿದಂತೆ ನಮ್ಮಲ್ಲಿ ಅನೇಕ ಪುರಾವೆಗಳಿವೆ. ಕ್ರಿ.ಶ.೧೧೧೩ರ ನಯಸೇನನು'ತಂತಮ್ಮನೆ ಬಡೆದುಕೊಳ್ಳುವ ಅಚ್ಚುಳಾಯ್ಲರು' .ಮೈಲಾರನ ಗೊರವನಂತಿದ್ದರೆಂದು ಎಂದು ಹೇಳುತ್ತಾರೆ. ವಚನಕಾರರಲ್ಲಿಯೂ ಈ ಕುರಿತು ಉಲ್ಲೇಖಗಳಿವೆ ' ಕುದುರೆಯಾಗಿ ಕಟ್ಟಿಸನೆ' ಎಂಬುದು ಈ ಸಂಪ್ರದಾಯದ ಕುರಿತ ಕುರುಹೇ.' ನಾಯಗಿ ಬೊಗಳುವ' , 'ಬಾಯೊಳಗೆ ಮಸೆದ ಕೂರಲಗನಿಕ್ಕುವ' ,' ಪಿಂಬೇರ ಮೈಲುಗ ಮೇಳವಾಡುವ ಮಾತು' ಮೊದಲಾದವು ಶರಣರಲ್ಲಿ ಕಂಡುಬರುವ ಇನ್ನೀತರ ಉಲ್ಲೇಖಗಳು.ಉರಿಲಿಂಗ ಪೆದ್ದಿಯ ವಚನವೊಂದರಲ್ಲಿ.'ಕೊರಳಲ್ಲಿ ಕವಡೆ ಕಟ್ಟಿಕೊಳ್ಳುತ್ತಿದ್ದ ಗೊರವರ' ಪ್ರಸ್ತಾಪವಿದೆ. ಬ್ರಹ್ಮಶಿವ ಕವಿಯು ಮೈಲಾರ ಉಪವಾಸ ಆಚರಿಸುತ್ತಿದ್ದರ ಕುರಿತು ಹೇಳುತ್ತಾನೆ. ಇವೆಲ್ಲ ೧೨ನೇ ಶತಮಾನದ ವೇಳೆಗಾಗಲೇ ಮೈಲಾರನ ಜಾತ್ರೆ ಜರುಗುತ್ತಿದ್ದರ ಮತ್ತು ಆ ಹೊತ್ತಿಗಾಗಲೇ ಮೈಲಾರನ ಆರಾಧನೆ ಜನಪ್ರೀಯವಾಗಿದ್ದಕ್ಕೆ ಸ್ಪಷ್ಟ ನಿದರ್ಶನಗಳು. ೧೩ನೇ ಶತಮಾನದ ಕಾಲದಲ್ಲಿ ಶಿಬಾರ ಮಾಡಿಸುತ್ತಿದ್ದುದ್ದನ್ನು ದೋಣಿಯ ಶಾಸನ ಸ್ಪಷ್ಟಪಡಿಸುತ್ತದೆ. ನೇರಕಣಿಯ ಶಾಸನದಲ್ಲಿ ಈ ದೇವರಿಗೆ ಖಂಡೇರಾಯನೆನ್ನಲಾಗಿದೆ. 'ಶಂಕರದಾಸಿಮಯ್ಯನ ರಗಳೆಯಲ್ಲಿ ಎಲೆಚೆಂಚಿಯವರ ದೇವರಿಗೆ ವೀಳ್ಯೆಯ ಅರ್ಪಿಸುತ್ತಿದ್ದುದರ ಉಲ್ಲೇಖವಿದೆ ಇದೇ ಶತಮಾನದ ಮರಾಠಿ ಕೃತಿಗಳಲ್ಲಿ ಮಾಳಸದೇವಿ ಮತ್ತು ಮೈರಾಳದೇವರ ಹೆಸರುಗಳು; ದೇವಾಲಗಳ ಉಲ್ಲೇಖಗೊಂಡಿವೆ.