ಸದಸ್ಯ:Ananth subray/ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬

ಈ ಪುಟವು ಕ್ರೈಸ್ಟ್ ವಿಶ್ವವಿದ್ಯಾಲಯದ ೨೦೧೬-೧೭ನೆಯ ಶೈಕ್ಷಣಿಕ ವರ್ಷದ ವಿಕಿಪೀಡಿಯ ಶಿಕ್ಷಣ ಯೋಜನೆ ಬಗ್ಗೆ ಇದೆ. ಕನ್ನಡ ವಿಕಿಪೀಡಿಯ/ವಿಕಿಸೋರ್ಸ್ ಸಮುದಾಯ ಮತ್ತು ಸಿಐಎಸ್-ಎ೨ಕೆ ಜೊತೆಗೂಡಿ ಕ್ರೈಸ್ಟ್ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಈ ಯೋಜನೆಯನ್ನು ನಡೆಸಲಾಗುತ್ತಿದೆ.

ಕ್ರೈಸ್ಟ್ ವಿಶ್ವವಿದ್ಯಾಲಯ ಬದಲಾಯಿಸಿ

ಕ್ರೈಸ್ಟ್ ವಿಶ್ವವಿದ್ಯಾಲಯವು ಒಂದು ಖಾಸಗಿ ವಿಶ್ವವಿದ್ಯಾಲಯವಾಗಿದೆ. ೨೦೦೮ರ ತನಕ ಇದು ಕ್ರೈಸ್ಟ್ ಕಾಲೇಜು ಎಂದು ಪ್ರಸಿದ್ಧವಾಗಿತ್ತು. ೨೦೦೮ರಲ್ಲಿ ಇದು ವಿಶ್ವವಿದ್ಯಾಲಯವೆಂದು ಮಾನ್ಯತೆ ಗಳಿಸಿತು. ಈ ಖಾಸಗಿ ವಿಶ್ವವಿದ್ಯಾಲಯದಲ್ಲಿ ಹಲವು ವಿಭಾಗಗಳಲ್ಲಿ ಸ್ನಾತಕ (ಡಿಗ್ರಿ), ಸ್ನಾತಕೋತ್ತರ (ಪೋಸ್ಟ್ ಗ್ರಾಜುವೇಟ್), ಎಂಫಿಲ್, ಪಿಎಚ್ ಡಿ ಇತ್ಯಾದಿ ಕೋರ್ಸುಗಳು ನಡೆಯುತ್ತಿವೆ ಈ ಯೋಜನೆಯಲ್ಲಿ ಬಿ.ಎ, ಬಿ.ಎಸ್ ಸಿ., ಬಿಕಾಂ ಕೋರ್ಸುಗಳ ಮೊದಲ ಮತ್ತು ಎರಡನೆಯ ಸೆಮೆಸ್ಟರ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‍ನಲ್ಲಿ ಲೇಖನ ಬರೆಯುವ ಅಸೈನ್‌ಮೆಂಟ್ ಮಾಡುತ್ತಾರೆ. ಕನ್ನಡ ಭಾಷೆಯನ್ನು ಎರಡನೆಯ ಭಾಷೆಯಾಗಿ ಆಯ್ಕೆ ಮಾಡಿಕೊಂಡ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‍ನಲ್ಲಿ ಸೇರ್ಪಡೆಯಾಗಿರುವ ಪಿಡಿಎಫ್ ಕಡತಗಳಿಗೆ ಪಠ್ಯವನ್ನು ಕನ್ನಡ ಯುನಿಕೋಡ್‍ನಲ್ಲಿ ಟೈಪ್ ಮಾಡಿ ಸೇರಿಸುತ್ತಾರೆ.

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭(ಮೊದಲ ವರ್ಷದ ವಿದ್ಯಾರ್ಥಿಗಳು ) ಬದಲಾಯಿಸಿ

ಮೊದಲನೇ ವರ್ಷದ ವಿದ್ಯಾರ್ಥಿಗಳು ಕನ್ನಡ ವಿಕಿಸೋರ್ಸ್‌ನಲ್ಲಿ ಲೇಖನಗಳನ್ನು ಪರಿಶೀಲಿಸುವ ಕೆಲಸ ಮಾಡುತ್ತಾರೆ.

ಕ್ರೈಸ್ಟ್ ವಿಶ್ವವಿದ್ಯಾಲಯ ವಿಕಿಪೀಡಿಯ ಶಿಕ್ಷಣ ಯೋಜನೆ-೨೦೧೬-೧೭(ಎರಡನೆ ವರ್ಷದ ವಿದ್ಯಾರ್ಥಿಗಳು) ಬದಲಾಯಿಸಿ

ಈ ಯೋಜನೆಯಲ್ಲಿ ಬಿ.ಎ, ಬಿ.ಎಸ್ ಸಿ., ಬಿಕಾಂ ಕೋರ್ಸುಗಳ ಮೂರನೆಯ ಮತ್ತು ನಾಲ್ಕನೆಯ ಸೆಮಿಸ್ಟರ್‍ನಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಕನ್ನಡ ವಿಕಿಪೀಡಿಯಕ್ಕೆ ಲೇಖನ ಸೇರಿಸುವ ಅಸೈನ್‍ಮೆಂಟ್ ಮಾಡುತ್ತಾರೆ.

ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಮತ್ತು ಅವರ ಲೇಖನಗಳು ಬದಲಾಯಿಸಿ

ಮೂರನೆಯ ಸೆಮಿಸ್ಟರ್ ವಿದ್ಯಾರ್ಥಿಗಳು ಅವರಿಗೆ ಇಷ್ಟವಿರುವ ವಿಷಯಗಳನ್ನು ಆರಿಸಿ ಅಧ್ಯಾಪಕರಿಂದ ಒಪ್ಪಿಗೆ ಪಡೆದು ನಂತರ ತಮ್ಮ ಪ್ರಯೋಗಪುಟದಲ್ಲಿ ಲೇಖನಗಳನ್ನು ರಚಿಸುತ್ತಾರೆ.

ಕೈಜೋಡಿಸುವವರು ಬದಲಾಯಿಸಿ

ಈ ಯೋಜನೆಯಲ್ಲಿ ಕೈಜೋಡಿಸುವವರು


ಸಿಐಎಸ್-ಎ೨ಕೆ ತಂಡ ಬದಲಾಯಿಸಿ

  1. ಪವನಜ (ಚರ್ಚೆ)
  2. ರಹಮಾನುದ್ದೀನ್ (ಚರ್ಚೆ)
  3. ತನ್ವೀರ್ ಹಸನ್ (ಚರ್ಚೆ)
  4. ಅನಂತ್ (ಚರ್ಚೆ)