ಸದಸ್ಯ:Anand.ks/sandbox
ಇಂದು ಮನಸ್ಸು ಏಕೇ ಸಂಕೋಚದ ಮಡುವಾಗಿ ಕೂತಿದೆ. ಮಧ್ಯಾಹ್ನದ ಊಟ ಮಾಡಿ ಬಂದು ಗಣಕಯಂತ್ರದ ಮುಂದೆ ಕುಳಿತವನಿಗೆ ಇರುವ ಕೆಲಸವ ದೂರ ತಳ್ಳುವಂತೆ ನಿದ್ರಾದೇವಿ ಆಕ್ರಮಿಸುತ್ತಿದ್ದಾಳೆ. ಕನ್ನಡ ವೀಕಿಪಿಡಿಯ ಬಗ್ಗೆ ವಿಶೇಷ ಉಪನ್ಯಾಸ ನೀಡಲು ಬಂದಿದ್ದ ಪ್ರೋ.ಪವನಜರ ಬಾಯಿಯಿಂದ ಬಂದ ಸುಪ್ರಭಾತ ಪದಗಳಿಗೆ ಸೊಪ್ಪಾಕಲು ಮುಂದಾದ ನಿದ್ರಾದೇವಿ ಏನೋ ನನ್ನಿಂದ ದೂರಾದಳು ಆದರೆ, ಆದರೆ ತರಗತಿಯಲ್ಲಿನ ಸಹಪಾಠಿಗಳ ಮುಂದೆ ನಾನೋಬ್ಬ ಕೆಲಸಕ್ಕೆ ಬಾರದ ಅಯೋಗ್ಯ ಎಂಬುದನ್ನು ನಿರೂಪಿಸಿದ ನಿದ್ರಾದೇವಿಯನ್ನು ಬಯ್ಯುತ್ತಾ ಗಂಗಾದೇವಿಯನ್ನು ಕಾಣಲು ವಾಷಿಂಗ್ ರೂಂನತ್ತ ದಾಪುಗಾಲು ಹಾಕಿದೆ.
ನನ್ನ ದುರಾದೃಷ್ಟವೋ? ಅಥವಾ ಜಲಮಂಡಳಿ ಇಲಾಖೆಯ ಬೇಜಾವಬ್ದಾರಿತನವೋ? ಏನೋ ಗಂಗಾದೇವಿಯನ್ನು ಕಾಣಲು ಕೊಳದ ಬಳಿ ಹೋದವನಿಗೆ ಸಿಕ್ಕಿದ್ದು ನಿರಾಶೆಯ ಉತ್ತರ. ಯಾರನ್ನು ದೂಷಿಸಬೇಕೆಂದು ತಿಳಿಯದೆ ಕರಗಳಿಂದಲೇ ಮುಖ ತೀಡಿಕೊಂಡು ಒಳ ಬಂದರೆ ತರಗತಿ ಮುಕ್ತಾಯದ ಹಂತ ತಲುಪಿ ನಿಂತಿದೆ!. ಇಂದು ಏನನ್ನಾದರೂ ಕಲಿತು ಎಲ್ಲವನ್ನು ಸಾಧಿಸಿ ಬಿಡುತ್ತೇನೆಂದು ಹಾಸ್ಟೆಲ್ನಿಂದ ಹೊರ ಬಂದವನಿಗೆ ಕೊನೆಗೂ ಉಳಿದಿದ್ದು, ನಿರಾಶೆಯ ಪ್ರತಿಉತ್ತರ ಒಂದೇ?.. ತರಗತಿಯನ್ನು ಅರ್ಥಕ್ಕೆ ಬಿಟ್ಟು ಹೊರಬಂದವನಿಗೆ ಏನೋ ನೆನಪಾದಂತಾಗಿ ಗ್ರಂಥಾಲಯಕ್ಕೆ ಓಡಿದೆ. ನೆನ್ನೆ ಅರ್ಧ ಓದಿ ಆಗೆಯೇ ಬಿಟ್ಟಿದ್ದ ವೇಶ್ಯೆಯೊಬ್ಬಳ ಆತ್ಮಕಥಾ ಪುಸ್ತಕವನ್ನು ಇಂದಾದರೂ ಪೂರ್ತೀಗೊಳಿಸೋಣವೆಂದು ಓಳ ಓಡಿದೆ. ಯಾರೂ ಓದ ಬಾರದೆಂದು ಪುಸ್ತಕವನ್ನು ಕಬೋರ್ಡೂಗಳ ಮದ್ಯೆ ಇಟ್ಟುಬಂದಿದೆ. ಇಂದು ಹೋಗಿ ನೋಡುವಷ್ಟರಲ್ಲಿ ಪುಸ್ತಕ ತನ್ನ ತಾಣವನ್ನು ಬದಲಾಯಿಸಿ ಬಿಟ್ಟಿದ್ದಳು. ಪುಸ್ತಕವನ್ನಾದರೂ ಓದಬಹುದೆಂಬ ನಿರೀಕ್ಷೆಯಿಂದ ಒಳಬಂದವಿಗೆ ಕೊನೆಗೂ ಸಿಕ್ಕಿದ್ದು ನಿರಾಸೆಗಳ ಬುತ್ತಿ ಮಾತ್ರ. ಇಂದೇಕೋ ನನ್ನ ಟೈಮ್ ಸರಿಇಲ್ಲ ಎಂದು ಕೊಂಡು ಹಾಸ್ಟೆಲ್ ರೂಮ್ನ ಕಡೆ ಮುಖಮಾಡಿದೆ. ಎಂದಿಗಿಂತ ಅಂದೇಕೋ! ಗಂಗೊತ್ರಿಕ್ಯಾಂಪಸ್ ನನ್ನನ್ನು ತನ್ನ ತೆಕ್ಕೆಯಿಂದ ದೂರ ತಳ್ಳುತ್ತಿದ್ದಾಳೆಂಬ ಭಾವನೆ ಮನಸ್ಸನ್ನು ಕಸಿವಿಸಿ ಎಡೆಗೆ ತಂದು ಕೂರಿಸಿತ್ತು.