ಸದಸ್ಯ:Anaghaa k r/sandbox
ಜೇನ್ ಕುಕ್ ರೈಟ್ (" ಜೇನ್ ಜೋನ್ಸ್ ") (ನವೆಂಬರ್ ೩೦, ೧೯೧೯ - ಫೆಬ್ರುವರಿ ೧೯, ೨೦೧೩) ಕ್ಯಾನ್ಸರ್ ಸಂಶೋಧನೇಯಲ್ಲಿ ಮತ್ತು ಶಸ್ತ್ರಚಿಕಿತ್ಸೆಯಲ್ಲಿ ಅಗ್ರಗಣ್ಯರು. ಇವರು ಸ್ತನ ಕ್ಯಾನ್ಸರ್ ಮತ್ತು ಚರ್ಮ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಅಗ್ರಗಣ್ಯರು. ಡಾ.ರೈಟ್, ಕ್ಯಾನ್ಸರ್ ವಿರೋಧಿ ಔಷಧಿಗಳನ್ನು ವಿಶ್ಲೇಷಿಸುವುದರಲ್ಲಿ ಮತ್ತು ಅಂಗಾಂಶ ಕೃಷಿ ಪ್ರತಿಕ್ರಿಯೆಗೂ ಇರುವ ಸಂಬಂಧ ಅನ್ವೇಷಿಸುವಲ್ಲಿ ಮತ್ತು ಕ್ಯಾನ್ಸರ್ ಚಿಕಿತ್ಸೆಯ ನೋಡಿಕೊಳ್ಳುವ ಹೊಸ ತಂತ್ರಗಳನ್ನು ಕ್ಯಾನ್ಸರ್ ಸಂಶೋಧನೆಯಲ್ಲಿ ತಮ್ಮ ಗುರುತು ಮೂಡಿಸಿದರು .ಅವರು ಮನುಷ್ಯನ ರಾಸಾಯನಿಕ-ಚಿಕಿತ್ಸೆಯ ಔಷಧಗಳನ್ನು ಪರೀಕ್ಷಿಸಿದ ಮೊದಲ ಸಂಶೋಧಕರು.
ಜೇನ್ ಕುಕ್ ರೈಟ್
ಬದಲಾಯಿಸಿಜೇನ್ ಸಿ ರೈಟ್ ಜನನ ನವೆಂಬರ್ ೩೦, ೧೯೧೯ ಮ್ಯಾನ್ಹ್ಯಾಟನ್ ನ್ಯೂಯಾರ್ಕ್ ನಗರ, ನ್ಯೂಯಾರ್ಕ್ ನಗರ,ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ಮರಣ ಫೆಬ್ರುವರಿ ೧೯, ೨೦೧೩ ಗುಟೆನ್ಬರ್ಗ್,ನ್ಯೂಜೆರ್ಸಿ,ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕ ವೃತ್ತಿ ಕ್ಯಾನ್ಸರ್ ಸಂಶೋಧಕರು ರಾಷ್ಟ್ರೀಯತೆ ಅಮೆರಿಕನ್
ಪರಿವಿಡಿ ೧ ಆರಂಭಿಕ ಜೀವನ ಮತ್ತು ಶಿಕ್ಷಣ ೨ ವೃತ್ತಿಪರ ೩ ವೈಯಕ್ತಿಕ ಜೀವನಚರಿತ್ರೆ ೪ ಪ್ರಶಸ್ತಿಗಳು ೫ ಉಲ್ಲೇಖಗಳು
ಆರಂಭಿಕ ಜೀವನ ಮತ್ತು ಶಿಕ್ಷಣ
ಬದಲಾಯಿಸಿರೈಟ್ ಕಾರಿನ್ ಕುಕ್ ಮ್ಯಾನ್ಹಟನ್ ನಲ್ಲಿ ಜನಿಸಿದರು. ಅವರ ತಾಯಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕರಾಗಿದ್ದರು ಮತ್ತು ತಂದೆ ಲೂಯಿಸ್ ಟಿ ರೈಟ್ ಮೆಹರಿ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದವರು. ಅವರ ತಂದೆ ಲೂಯಿಸ್ ಟಾಂಪ್ಕಿನ್ಸ್ ರೈಟ್ ವೈದ್ಯಕೀಯ ಕುಟುಂಬದವರು. ರೈಟ್ ಮಗುವಾಗಿದ್ದಾಗ," ಎಥಿಕಲ್ ಸಂಸ್ಕೃತಿ " ಶಾಲೆ ಮತ್ತು ೧೯೩೮ ರಲ್ಲಿ "ಫೀಲ್ಡ್ ಸ್ಟನ್ ಶಾಲೆ"ಯಿಂದ ಪದವಿ ಪಡೆದರು. ಅವರು ೧೯೪೨ ರಲ್ಲಿ ಸ್ಮಿತ್ ಕಾಲೇಜಿನಿಂದ ಕಲಾ ಪದವಿ ಪಡೆದರು. ತದನಂತರ ನ್ಯೂಯಾರ್ಕ್ ವೈದ್ಯಕೀಯ ಕಾಲೇಜಿನಿಂದ ೧೯೪೫ ರಲ್ಲಿ ಹಾನರ್ಸ್ ಪದವಿ, ವೈದ್ಯಕೀಯ ಪದವಿ ಪಡೆದರು. ಸ್ಮಿತ್ ಕಾಲೇಜಿನಲ್ಲಿ ಕಲೆ ಅಧ್ಯಯನ ಮಾಡಲು ನಾಲ್ಕು ವರ್ಷದ ಶೈಕ್ಷಣಿಕ ವಿದ್ಯಾರ್ಥಿ ವೇತನ ನೀಡಿದರು ಹಾಗೂ ತನ್ನ ಕಿರಿಯ ವರ್ಷದಲ್ಲಿ ತನ್ನ ತಂದೆಯ ಕೋರಿಕೆಯ ಮೇರೆಗೆ ತನ್ನ ಪ್ರಮುಖ ಪೂರ್ವ ತರಗತಿಗೆ ಬದಲಾಯಿಸುಕೊಂಡರು. ಅವರು ನ್ಯೂಯಾರ್ಕ್ ಮೆಡಿಕಲ್ ಕಾಲೇಜಿನಲ್ಲಿ ವಿದ್ಯಾರ್ಥಿಯಗಿ ಸೇರಿಕೊಂಡರು. ಜೇನ್ ರೈಟ್ ತಮ್ಮ ವರ್ಗದ ಹಾನರ್ ಸೊಸೈಟಿಗೆ ಅಧ್ಯಕ್ಷರಾಗಿ ಮತ್ತು ಉಪಾಧ್ಯಕ್ಷರಾಗಿ ಆಯ್ಕೆಯಾದರು. ನಾಲ್ಕು ವರ್ಷಗಳ ನಂತರ ತನ್ನ ತಂದೆ, ಹಾರ್ಲೆಮ್ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಸಂಶೋಧನಾ ಸಂಸ್ಥೆಯ ನಿರ್ದೇಶಕರಾಗಿ ಸೇರಿದರು. ಅವರು ರಕ್ತಕ್ಯಾನ್ಸರ್ ನ ವಿವಿಧ ರಾಸಾಯನಿಕ ಏಜೆಂಟ್ ನ ಪ್ರಯೋಗವನ್ನು ಮಾಡಿದರು. ತನ್ನ ತಂದೆ ಜೊತೆ ಪ್ರಯೋಗಾಲಯದಲ್ಲಿ ರೋಗದ ಬಗ್ಗೆ ಪ್ರಯೋಗಿಸುತ್ತಿರುತ್ತಿದ್ದರು. ೧೯೪೯ರಿಂದ ರೈಟ್ಸ್ ಕ್ಯಾನ್ಸರ್ ವಿರೋಧಿ ಔಷಧಗಳನ್ನು ರೋಗಿಗಳಿಗೆ ಚಿಕಿತ್ಸೆಮಾಡಲು ಆರಂಭಿಸಿದರು.
thumb|right|250px|ಪ್ರಯೋಗಾಲಯದಲ್ಲಿ ಜೇನ್ ರೈಟ್
ವೃತ್ತಿಪರ
ಬದಲಾಯಿಸಿವೈದ್ಯಕೀಯ ಅಭ್ಯಾಸದ ನಂತರವಷ್ಟೆ ಅವರು , ಬೆಲ್ಲೆವ್ಯೂ ಆಸ್ಪತ್ರೆ ( ೧೯೪೫-೪೬ )ಯಲ್ಲಿ ಮತ್ತು ಹಾರ್ಲೆಮ್ ಆಸ್ಪತ್ರೆ (೧೯೪೭-೪೮) ಯಲ್ಲಿ ನಿವಾಸ ಮಾಡಿದರು. ಡಾ. ರೈಟ್ ೧೯೪೯ ರಲ್ಲಿ ಅವರ ಪ್ರಧಾನ ಕೆಲಸವನ್ನು ಆರಂಭಿಸಿದರು ಮತ್ತು ಅವರ ೪೦ ವರ್ಷದ ವೃತ್ತಿಜೀವನದಲ್ಲಿ ಅವರು ಕ್ಯಾನ್ಸರ್ ಚಿಕಿತ್ಸೆಯ ಬಗ್ಗೆ ನೂರು ಸಂಶೋಧನಾ ಪ್ರಬಂಧಗಳನ್ನು ಪ್ರಕಟಿಸಿದರು. ೧೯೪೯ ರಲ್ಲಿ, ಆಕೆ ಸಂಶೋಧನೆಯಲ್ಲಿ ಅವರ ತಂದೆ ಸಂಸ್ಥಾಪಿಸಿದ ಹಾರ್ಲೆಮ್ ಆಸ್ಪತ್ರೆ ಕ್ಯಾನ್ಸರ್ ಸಂಶೋಧನಾ ಕೇಂದ್ರದಲ್ಲಿ ತನ್ನ ತಂದೆಯವರ ಜೊತೆ ಸೇರಿ ಕೆಲಸ ಮಾಡಿದರು. ಅವರ ತಂದೆ ನಿರ್ದೇಶಕರಾಗಿ 1952 ರಲ್ಲಿ ತೀರಿಕೊಂಡರು. ಇವರು ೧೯೫೫ ರಲ್ಲಿ ಸರ್ಜಿಕಲ್ ಸಂಶೋಧನಾ ಮತ್ತು ಕ್ಯಾನ್ಸರ್ ಸಂಶೋಧನಾ ಕೇಂದ್ರಕ್ಕೆ ನಿರ್ದೇಶಕ ಅಸೋಸಿಯೇಟ್ ಪ್ರೊಫೆಸರ್ ಆಗಿ ನ್ಯೂಯಾರ್ಕ್ ವಿಶ್ವವಿದ್ಯಾಲಯದ ಬೆಲ್ಲೆವ್ಯೂ ಮೆಡಿಕಲ್ ಕೇಂದ್ರಕ್ಕೆ ಸಂಶೋಧಕರಾಗಿ ಅಪಾಯಿಂಟ್ಮೆಂಟ್ ಒಪ್ಪಿಕೊಂಡಿದ್ದರು. ರೈಟ್ ಸಂಶೋಧನೆಯಲ್ಲಿ ಗೆಡ್ಡೆಗಳಿಗೆ ವಿವಿಧ ಔಷಧಗಳ ಪರಿಣಾಮಗಳನ್ನು ಅಧ್ಯಯನದಲ್ಲಿ ಒಳಗೊಂಡಿರುವವರು ಮತ್ತು ಅವರು ಕ್ಯಾನ್ಸರ್ ಗೆಡ್ಡೆಗಳ ವಿರುದ್ಧ ಮೀಥೊಟ್ರೆಕ್ಸೇಟ್,ಕಿಮೊತೆರಪಿ ಔಷಧಗಳ್ಳನ್ನು ಗುರುತಿಸಿದ ಮೊದಲ ವ್ಯಕ್ತಿ. ರೈಟ್, ನಂತರ ಚಿಕಿತ್ಸೆಯ ಪ್ರಭಾವವನ್ನು ಹೆಚ್ಚಿಸಲು ಮತ್ತು ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಅನೇಕ ಔಷಧಗಳನ್ನು ಕಂಡುಹಿಡಿದರು. ತನ್ನ ವೃತ್ತಿಜೀವನದ ಅವಧಿಯಲ್ಲಿ, ಕುಕ್ ಮತ್ತೊಂದು ಆಫ್ರಿಕನ್ ಅಮೆರಿಕನ್ ಮಹಿಳೆ ಮತ್ತು ವಿಜ್ಞಾನಿಯನ್ನು ಗಮನಿಸಿದರು. ಅವರು ಸೆಲ್ ಜೀವಶಾಸ್ತ್ರಜ್ಞರಾಗಿದ್ದರು ಹಾಗೂ ಶರೀರ ಶಾಸ್ತ್ರದಲ್ಲಿ ಪ್ರವಿಣರು. ಅವರ ಹೆಸರು ಜ್ಯುವೆಲ್ ಪ್ಲಮ್ಮರ್ ಕಾಬ್ ಆಗಿತ್ತು. ೧೯೬೭ ರ ಹೊತ್ತಿಗೆ ಅವರು ಯುನೈಟೆಡ್ ಸ್ಟೇಟ್ಸ್ ವೈದ್ಯಕೀಯ ಸಂಸ್ಥೆಯ ಅತ್ಯುನ್ನತ ಶ್ರೇಣಿಯ ಆಫ್ರಿಕನ್ ಅಮೆರಿಕನ್ ಮಹಿಳೆಯಾಗಿದ್ದರು. ಸಂಶೋಧನೆ ಮತ್ತು ಕ್ಲಿನಿಕಲ್ ಕೆಲಸದ ಜೊತೆಗೆ ,ರೈಟ್ ವೃತ್ತಿಪರವಾಗಿ ಕ್ರಿಯಾಶೀಲರಾಗಿದ್ದರು. ೧೯೬೪ ರಲ್ಲಿ ಅವರು ಕ್ಲಿನಿಕಲ್ ಆಂಕಾಲಜಿ ಅಮೆರಿಕನ್ ಸೊಸೈಟಿಯ ಏಳು ಸಂಸ್ಥಾಪಕರಲ್ಲಿ ಒಬ್ಬರಾಗಿದ್ದರು ಮತ್ತು ೧೯೭೧ ರಲ್ಲಿ, ಅವರು ನ್ಯೂಯಾರ್ಕ್ ಕ್ಯಾನ್ಸರ್ ಸೊಸೈಟಿಗೆ ಮೊದಲ ಮಹಿಳ ಅಧ್ಯಕ್ಷರಾಗಿದ್ದರು. ರೈಟ್, ೧೯೬೭ ರಲ್ಲಿ ನ್ಯೂಯಾರ್ಕ್ ಮೆಡಿಕಲ್ ಕಾಲೇಜಿನಲ್ಲಿ ಕ್ಯಾನ್ಸರ್ ಕೀಮೋಥೆರಪಿ ಇಲಾಖೆಗೆ ಸಂಬಂಧಿಸಿದ ಸಂಸ್ಥಗೆ ನಿಯಮಿಸಲಾಯಿತು. ಆ ಸಮಯದಲ್ಲಿ ಒಂದು ಪ್ರಮುಖ ವೈದ್ಯಕೀಯ ಕಾಲೇಜಿನಲ್ಲಿ ಸ್ಪಷ್ಟವಾಗಿ ಅತ್ಯುನ್ನತ (ಆಫ್ರಿಕನ್-ಅಮೆರಿಕನ್) ವೈದ್ಯ ಸ್ಥಾನಪಡೆದರು. ಅವರು ೧೯೬೬ ರಿಂದ ೧೯೭೦ ರವರೆಗೂ, ಅಮೇರಿಕಾದ ಅಧ್ಯಕ್ಷ ಲಿಂಡನ್ ಜಾನ್ಸನ್ (ನ್ಯಾಷನಲ್ ಕ್ಯಾನ್ಸರ್ ಸಲಹಾ ಮಂಡಳಿಯ ಎಂದು ಕರೆಯಲಾಗುತ್ತದೆ)ನಲ್ಲಿ ಸೇವೆ ಸಲ್ಲಿಸಿದ್ದರು. ನ್ಯಾಷನಲ್ ಕ್ಯಾನ್ಸರ್ ಸಲಹಾ ಮಂಡಳಿಗೆ ನೇಮಕರಾದರು. ಅವರು ಕ್ಯಾನ್ಸರ್ ರೋಗಿಗಳಿಗೆ ಚಿಕಿತ್ಸೆ ಮಾಡುತ್ತಿದ್ದರು, ೧೯೬೧ರಲ್ಲಿ ಕೀನ್ಯಾ ಹಾಗೂ ೧೯೫೭ರಲ್ಲಿ ಘಾನಾದಲ್ಲಿ ಕೆಲಸಮಾಡಿದರು, ೧೯೭೩ ರಿಂದ ೧೯೮೪ ರವರೆಗೆ ಅವರು ಆಫ್ರಿಕನ್ ಸಂಶೋಧನೆ ಮತ್ತು ವೈದ್ಯಕೀಯ ಪ್ರತಿಷ್ಠಾನದಲ್ಲಿ ಉಪಾಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು .ರೈಟ್ ೧೯೮೫ ರಲ್ಲಿ ನಿವೃತ್ತರಾದರು. ಅವರು ಆಸ್ಪತ್ರೆಗಳು ಮತ್ತು ವೈದ್ಯಕೀಯ ಶಾಲೆಗಳಲ್ಲಿ ಹಲವಾರು ನೇಮಕಾತಿಗಳನ್ನು ವಹಿಸಿದರು ಮತ್ತು ಹಲವಾರು ಸಂಘಗಳಲ್ಲಿ ನಾಯಕತ್ವದ ಹುದ್ದೆಗಳನ್ನು ಮತ್ತು ಸದಸ್ಯತ್ವಗಳು ವಹಿಸಿದರು.
ವೈಯಕ್ತಿಕ ಜೀವನಚರಿತ್ರೆ
ಬದಲಾಯಿಸಿರೈಟ್ ಡೇವಿಡ್ ಡಿ.ಜೋನ್ಸ್ ವಕೀಲನನ್ನು ಮದುವೆಯಾದರು. ಇವರಿಗೆ ಹುಟ್ಟಿದ ಮಕ್ಕಳು ಜೇನ್ ರೈಟ್ ಜೋನ್ಸ್ ಮತ್ತು ಅಲಿಸನ್ ಜೋನ್ಸ್.
ಪ್ರಶಸ್ತಿಗಳು
ಬದಲಾಯಿಸಿಚಿಕಿತ್ಸೆಯ ಪರಿಣಾಮಕಾರಿತ್ವವನ್ನು ಮೌಲ್ಯಮಾಪನಕ್ಕಾಗಿ ಮಡೆಮ್ವೆಸೆಲ್ ಮ್ಯಾಗಜೀನ್ ನಿಂದ (೧೯೫೨)ರಲ್ಲಿ " ಮೆರಿಟ್ ಪ್ರಶಸ್ತಿ ". ಡ್ಯಾಮನ್ ರನ್ಯೋನ್ ಪ್ರಶಸ್ತಿ (೧೯೫೫). ಮೆಡಿಸಿನ್ ಆಲ್ಬರ್ಟ್ ಐನ್ಸ್ಟೀನ್ ಕಾಲೇಜ್ ನಿಂದ " ಸಾಧನೆ ಪ್ರಶಸ್ತಿ-ಸ್ಪಿರಿಟ್ " (೧೯೬೫). ಹಡನ್ಸ್ ಮೈರ್ಟೆಲ್ ಸಾಂಗ್ಸ್ ಪ್ರಶಸ್ತಿ (೧೯೬೭). ಸ್ಮಿತ್ ಕಾಲೇಜ್ ಸ್ಮಿತ್ ಪದಕ (೧೯೬೮). ಕ್ಯಾನ್ಸರ್ ರಿಸರ್ಚ್ ಅಮೆರಿಕನ್ ಅಸೋಸಿಯೇಷನ್ ಪ್ರಶಸ್ತಿ(೧೯೭೫). ಸ್ಮಿತ್ ಕಾಲೇಜ್ ನಿಂದ ಕ್ರೋಮ್ವೆಲ್ ಪ್ರಶಸ್ತಿ (೧೯೮೧). ಅವರ ನಾಯಕತ್ವ ಮತ್ತು ಆಪ್ತಸಲಹೆ ಹೆಚ್ಚು ಕ್ಯಾನ್ಸರ್ ಸಂಶೋಧನಾ ಕೇಂದ್ರಗಳನ್ನು ಸ್ಥಾಪಿಸಲು ಸಹಾಯವಾಗಿದೆ.
ಉಲ್ಲೇಖಗಳು
ಬದಲಾಯಿಸಿವಿಕಿಪೀಡಿಯ ಇಂದ ಜೀವನದ ಮಾಹಿತಿ] ಜೀವನಚರಿತ್ರೆ] ಉಲ್ಲೇಖಗಳು