ಸದಸ್ಯ:Amrutha A Poojari/ನನ್ನ ಪ್ರಯೋಗಪುಟ

'

ತೆನೆ ಹಬ್ಬ(ಹೊಸ್ತ್)

ಬದಲಾಯಿಸಿ
        ದಕ್ಷಿಣ ಕನ್ನಡ , ಉಡುಪಿ, ಕುಂದಾಪುರ ,ಭಟ್ಕಳ ಜಿಲ್ಲೆಗಳಲ್ಲಿ ಹೊಸ ಪೈರಿಗೆ ಪೂಜೆ ಸಲ್ಲಿಸುವ ಹಬ್ಬಕ್ಕೆ ತೆನೆ ಹಬ್ಬ ಅನ್ನುತ್ತಾರೆ.ವರ್ಷದ ಮೊದಲ ತೆನೆಗೆ ಪೂಜೆ ಸಲ್ಲಿಸಿ ,ಹೊಸಕ್ಕಿ ಇಂದ ಪಾಯಸ ಹಾಗು ಬಗೆ ಬಗೆಯ ಪದಾರ್ಥಗಳನ್ನು ಮಾಡಿ ಈ ಹಬ್ಬವನ್ನು ಆಚರಿಸುತ್ತಾರೆ.

ಆಚರಿಸುವ ರೀತಿ:-

ಬದಲಾಯಿಸಿ
       ಮಡಿಯುಟ್ಟು ಗದ್ದೆಗೆ ಹೋಗಿ ಭತ್ತದ ತೆನೆಗೆ ಪೂಜೆ ಮಾಡಿ ಅದನ್ನು ಮನೆಗೆ ತಂದು ದೇವರ ಮನೆಯಲ್ಲಿಟ್ಟು ಮತ್ತೊಮ್ಮೆ ಪೂಜೆ ಮಾಡಿ ನಂತರ ಅದರಿಂದ ಕೆಲವು ಕದಿರನ್ನು ತೆಗೆದು ಮಾವು ಹಾಗು ಹಲಸಿನ ಎಲೆಯ ನಡುವೆ ಇಟ್ಟು ಕಟ್ಟಿ ಅದನ್ನು ಬಾಗಿಲಿಗೆ, ಅಡಿಕೆ ಮರಕ್ಕೆ,ಕೊಟ್ಟಿಗೆಯ ಕಂಬಕ್ಕೆ,ಮನೆಯ ಕಂಬಕ್ಕೆ ,ಪಾಯಸದ ಮಡಿಕೆಗೆ ಹೀಗೆ ಹಲವು ಕಡೆ ಕಟ್ಟುತ್ತಾರೆ.ಭತ್ತದ ತೆನೆಯಿಂದ ೯ ಭತ್ತವನ್ನು ತೆಗೆದು ಅಕ್ಕಿಯಿಂದ ಪಾಯಸ ತಯಾರಿಸುತ್ತಾರೆ.[]
          ೫,೭,೯ ಅಥವಾ ೧೧ ರೀತಿಯ ಪದಾರ್ಥಗಳನ್ನು ಮಾಡಿ ಬಡಿಸುವ ಶಾಸ್ತ್ರ ಇದೆ .ಮದುವೆ ಆದ ಹೆಣ್ಣು ಮಕ್ಕಳು ಅಂದಿನ ದಿನ ತಮ್ಮ ಗಂಡನ ಮನೆಯಲ್ಲೆ ಹಬ್ಬದ ಊಟ ಮಾಡಬೇಕೆಂಬುದು ಸಂಪ್ರದಾಯ.ಕುಂದಾಪುರ ಹಾಗು ಭಟ್ಕಳದಲ್ಲಿ ಈ ಹಬ್ಬಕ್ಕೆ "ಹೊಸ್ತ್",ಹಾಗು ಉಡುಪಿ ಹಾಗು ದಕ್ಷಿಣ ಕನ್ನಡದ ಕಡೆ "ಕೊರಳ್ ಕಟ್ಟುನು" ಎಂದು ಕರೆಯುತ್ತಾರೆ.

ಮಾಡುವ ಪದಾರ್ಥಗಳು:

ಬದಲಾಯಿಸಿ
  • ಅನ್ನ
  • ಟೊಮೆಟೊ ಸಾರು
  • ಬೆಂಡೆಕಾಯಿ ಪಲ್ಯ,ಬೀನ್ಸ್ ಪಲ್ಯ,ಹೀರೆಕಾಯಿ ಪಲ್ಯ,ಕುಂಬಳಕಾಯಿ ಪಲ್ಯ,ಬದನೆಕಾಯಿ ಪಲ್ಯ ಇತ್ಯಾದಿ
  • ಹಾಗಲಕಾಯಿ ಹಾಗು ಅಮಟೆಕಾಯಿ ಗೊಜ್ಜು
  • ಹೊಸ ಅಕ್ಕಿ ಪಾಯಸ
  • ಪಾಯಸ...ಇತ್ಯಾದಿ
ಉಲ್ಲೇಖಗಳು
ಬದಲಾಯಿಸಿ