ಸದಸ್ಯ:Amogha.tagadur.nagendra
ಪರಿಚಯ
ಬದಲಾಯಿಸಿನನ್ನ ಹೆಸರು ಅಮೋಘ ತಗಡೂರ್ ನಾಗೇಂದ್ರ. ತಗಡೂರು, ಮೈಸೂರು ಜಿಲ್ಲೆಯ, ನಂಜನ ಗೂಡು ತಾಲೂಕಿನ ಒಂದು ಗ್ರಾಮ. ತಗಡೂರು ಗ್ರಾಮ, ಸ್ವಾತಂತ್ರ್ಯ ಹೊರಾಟದಲ್ಲಿ ಒಳ್ಳೆಯ ಕೊಡುಗೆಯನ್ನು ನೀಡಿದೆ. ಇದು ನನ್ನ ತಂದೆ ಟಿ.ಆರ್.ಎನ್.ಶರ್ಮಾ ಅವರು ಹುಟ್ಟಿ ಬೆಳೆದ ಜಾಗ. ಇನ್ನು ನನ್ನ ತಾಯಿ ಲತಾರವರು ಕರ್ನಾಟಕದ ಕಾಫಿ ಉಗಮಧಾನವಾದ ಚಿಕ್ಕಮಗಳೂರಿನವರು. ಚಿಕ್ಕಮಗಳೂರು ನೈಸರ್ಗಿಕವಾಗಿ ಹಾಗು ಪುಣ್ಯಕ್ಷೇತ್ರಗಳ ತವರೂರಾಗಿ ಕರ್ನಾಟಕ ರಾಜ್ಯದಲ್ಲಿ ತನ್ನದೇ ಆಸ್ಥಾನವನ್ನು ಪಡೆದಿದೆ. ನಾನು ಹುಟ್ಟಿ ಬೆಳೆದದ್ದು ಬೆಂಗಳೂರಿನಲ್ಲಿ.
ವಿದ್ಯಾಭ್ಯಾಸ
ಬದಲಾಯಿಸಿನನ್ನ ತಂದೆ ತಾಯಿ, ಉದ್ಯೊಗ ಹಾಗು ವೈಯಕ್ತಿಕ ಉನ್ನತಿಗಾಗಿ ಬೆಂಗಳೂರಿಗೆ ಬಂದವರು. ನನ್ನ ತಂದೆ ಸಾರ್ವೆತಿಕ ಬ್ಯಾಂಕೊಂದರಲ್ಲಿ ಉನ್ನತ ಹುದ್ದೆಯಲ್ಲಿದ್ದಾರೆ. ನನ್ನ ತಾಯಿಯವರು ಪ್ರತುಷ್ಟಿತ ಖಾಸಗಿ ಕ್ಷೇತ್ರದ ಒಂದು ಕಂಪನಿಯಲ್ಲಿ ಒಳ್ಳೆಯ ಪದವಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ನನಗಿಂತಾ ಮೊದಲು ನಮ್ಮ ಕುಟುಂಬದಲ್ಲಿ ನನ್ನ ಅಣ್ಣ ಕಾಲಿರಿಸಿದನು. ನಾನು ಬೆಂಗಳೂರಿನಲ್ಲಿ ನನ್ನ ಶಿಶುಹಾರ, ಪ್ರಾಥಮಿಕ ಹಾಗು ಮಾಧ್ಯಮಿಕ ಶಾಲಾ ವ್ಯಾಸಂಗವನ್ನು ಜೆ.ಪಿ.ನಗರದಲ್ಲಿರುವ "ಕ್ಲಾರೆನ್ಸ್ ಪಬ್ಲಿಕ್ ಸ್ಕೂಲ್"ನಲ್ಲಿ ಕಳೆದೆನು. ಮಾಧ್ಯಮಿಕ ಶಾಲೆಯ ಬಳಿಕ, ನಾನು ನನ್ನ ಪಿ.ಯು.ಸಿ. ಹಾಗು ಸ್ನಾತಕ ಪದವಿಗೆ, ಬೆಂಗಳೂರಿನ ಪ್ರಸಿದ್ದ "ಕ್ರೈಸ್ಟ್ ವಿಶ್ವವಿದ್ಯಾಲಯ"ದಲ್ಲಿ ದಾಖಲಾದೆನು. ನಾನು ಪಿ.ಯು.ಸಿ. ವ್ಯಾಸಂಗದಲ್ಲಿ ವೈಗ್ನಾನಿಕ ವಿಷಯಗಳನ್ನು ಆರಿಸಿಕೊಂಡು, ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದೆನು. ಆದರೆ, ನನ್ನ ಮನೋಕಾಂಕ್ಷೆ ಕಲಾತ್ಮಕ ವಿಷಯಗಳಲ್ಲಿ ಕೇಂದ್ರಿ ಕ್ರುವತವಾಗಿತ್ತು. ಆದ್ದರಿಂದ, ನಾನು ನನ್ನ ಪಿ.ಯು.ಸಿ. ತೇರ್ಗದಡೆಯಾದ ಬಳಿಕ, ಸ್ನಾತಕದ ಪದವಿಗೆ, ಕಲಾತ್ಮಕ ವ್ಯಾಸಂಗವನ್ನು ಆಯ್ಕೆ ಮಾಡಿದೆ. ಇದಕ್ಕೆ ನನ್ನ ತಂದೆ ತಾಯಿಯರ ಬೆಂಬಲವಿತ್ತು. ಅದರಂತೆಯೇ ನಾನು, ಈಗ, ಸ್ನಾತಕ ಪದವಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಕಲಾತ್ಮಕ ವಿಷಯಗಳಾದ ಮನೋವಿಗ್ನಾನ, ಸಾಮಾಜಿಕಶಾಸ್ತ್ರ ಹಾಗು ಆಂಗ್ಲ ಭಾಷೆಗಳನ್ನು ವಿಷಯಗಳನ್ನಾಗಿ ಆರಿಸಿಕೊಂಡು ನನ್ನ ಸ್ನಾತಕ ಪದವಿಯನ್ನು ಮುಂದುವರಿಸುತ್ತಿದ್ದೇನೆ.
ಹವ್ಯಾಸಗಲು
ಬದಲಾಯಿಸಿನಾನು ಮೊದಲೇ ಹೇಳಿದ ಹಾಗೆ, ನನ್ನ ವೈಯಕ್ತಿಕ ಅಭಿರುಚಿ ಕಲಾತ್ಮಕ ವಿಷಯಗಳಲ್ಲಿ. ನನಗೆ ಸಂಗೀತ, ನಾಟ್ಯ, ನಟನೆ, ಇತ್ಯಾದಿಗಳಲ್ಲಿ ಅಭಿರುಚಿಯಿದೆ. ಇದಕ್ಕೆ ನನ್ನ ಪೋಶಕರ ಬೆಂಬಲವೂ ಇದೆ. ಈ ನಿಟ್ಟಿನಲ್ಲಿ ನಾನು ನನ್ನ ಸ್ನಾತಕ ಪದವಿಯನ್ನು ಮುಂದುವರಿಸಿ, ಕರ್ನಾತಕ ಶಾಸ್ತ್ರೀಯ ಸಂಗೀತ ಹಾಗು ಭರತನಾಟ್ಯ ವಿಭಾಗಗಳಲ್ಲಿ ವ್ಯಾಸಂಗವನ್ನು ಮುಂದುವರೆಸುತ್ತಿದ್ದೆನೆ.
"ನೀನು ಏನಾದರು ಆಗು, ಒಳ್ಳೆಯ ಪ್ರಜೆಯಾಗು" ಎಂದು ಹಿತವಚನವನ್ನು ಕೇಳಿ ಬೆಳೆದವಳು ನಾನು. ಅದರಂತೆಯೇ ನನ್ನ ಪ್ರಯತ್ನವನ್ನು ಮುಂದುವರಿಸುತ್ತಿದ್ದೇನೆ. ನನಗೆ ನನ್ನ ಹವ್ಯಾಸಗಳಾದ ಕಲೆ, ಸಂಗೀತ, ನಾಟ್ಯ ಇವುಗಳ ಜೊತೊಗೆ ಐ.ಎ,ಎಸ್. ಅಧಿಕಾರಿ ಆಗಬೇಕೆಂಬ ಕನಸಿದೆ. ಆ ಕನಸನ್ನು ನನಸಾಗ ಬೇಕೆಂದು ಪ್ರಯತ್ನ ಪಡುತ್ತಿದ್ದೇನೆ.
This user is a member of WikiProject Education in India |
ಉಪಪುಟಗಳು
ಬದಲಾಯಿಸಿIn this ಸದಸ್ಯspace:
Amogha.tagadur.nagendra |