ಸದಸ್ಯ:Akshay Padiyammanda/sandbox
ಡಾ|| ಎಚ್.ನಾಗವೇಣಿ: (ಜನನ : ೨೯-೧೧-೧೯೬೨): ಆಧುನಿಕ ಕನ್ನಡ ಸಾಹಿತ್ಯದ ಮಹತ್ವದ ಲೇಖಕಿಯರಲ್ಲಿ ಎಚ್. ನಾಗವೇಣಿ ಒಬ್ಬರು. ನಾಗವೇಣಿಯವರು ಮಂಗಳೂರಿನ ಹೊನ್ನಕಟ್ಟೆ ಎಂಬಲ್ಲಿ ಜನಿಸಿದರು. ಮಾಹಿತಿ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದು ಕೋಲ್ಕತ್ತಾದ ರಾಷ್ಟ್ರೀಯ ಗ್ರಂಥಾಲಯದ ಕೇಂದ್ರೀಯ ಪರಾವರ್ತನೆಯಲ್ಲಿ ಸೇವೆ ಸಲ್ಲಿಸಿ ಈಗ ಹಂಪಿ ಕನ್ನಡ ವಿ.ವಿಯಲ್ಲಿ ಮುಖ್ಯ ಗ್ರಂಥಪಾಲಕಿ ಆಗಿದ್ದಾರೆ. ಹೊಸ ಕಥನ ಶೈಲಿಯನ್ನು ರೂಢಿಸಿಕೊಂಡಿರುವ ನಾಗವೇಣಿಯವರು ಕರಾವಳಿಯ ಪರಿಸರವನ್ನು ತಮ್ಮ ಕಥನಗಳಲ್ಲಿ ಆಪ್ತವಾಗಿ ಚಿತ್ರಿಸಿದ್ದಾರೆ. ಗಾಂಧಿ ಬಂದ ಕಾದಂಬರಿ, ನಾಕನೇ ನೀರು, ಮೀಯುವ ಆಟ ಇವರ ಕಥಾಸಂಕಲನಗಳು, ವಸುಂಧರೆಯ ಗ್ಯಾನ ಪ್ರಬಂಧಗಳ ಸಂಕಲನ, ಸೂರ್ಯನಿಗೊಂದು ವೀಳ್ಯ ಅಂಕಣ ಬರಹಗಳ ಸಂಗ್ರಹ, ನವೋದಯದ ಕತೆಗಾರ್ತಿ ಗೌರಮ್ಮ, ರಂಗಸಂಪನ್ನ ಕಂಬಾರ, ಸಾರ-ವಿಸ್ತಾರ, ತಿರುಳು ತೋರಣ ಇವುಗಳು ಇವರ ಇನ್ನಿತರ ಪ್ರಮುಖ ಕೃತಿಗಳು. ಇವರ 'ಗಾಂಧಿ ಬಂದ' ಕಾದಂಬರಿಯು ರಂಗಕೃತಿಯಾಗಿ ರೂಪಾಂತರಗೊಂಡು ಜನಪ್ರೀತಿ ಗಳಿಸಿದೆ. ಕನ್ನಡ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಎಸ್.ಎಸ್ ಭೂಸನೂರಮಠ ಪ್ರಶಸ್ತಿ, ಗೀತಾ ದೇಸಾಯಿ ಪ್ರಶಸ್ತಿ ಇನ್ನೂ ಮುಂತಾದ ಪುರಸ್ಕಾರಗಳು ಇವರಿಗೆ ಸಂದಿವೆ.