ನಾನು ನಾನಾಗಿದ್ದೆ.... ನನಗಾಗಿ ನಾನಿದ್ದೆ

ನಗುವು ನನ್ನದಾಗಿತ್ತು
ಅಳುವು ನನ್ನದಾಗಿತ್ತು
ಜ್ಞಾನವು ನನ್ನದು

ಅಜ್ಞಾನವು ನನ್ನದು

ನಾನೆ ಕವಿಯಾಗಿದ್ದೆ
ನಾನೇ ವಿಮರ್ಶಕನಾಗಿದ್ದೆ
ಮಾತು ನನ್ನದಾಗಿತ್ತು
ಮೌನವು ನನ್ನದಾಗಿತ್ತು
ಕಾಣದ ಕೈಯನ್ನು ನಂಬಿದೆ
ಕಾಣದಾದಾಗ ಕುಗ್ಗಿದೆ
ಯಾರಿಗಾಗಿ ನಾನಾದೆ
ಎಂಬುದು ತಿಳಿಯದಾದೆ

--ಸುಮ್ನೆ-ಗೀಚಿದ್ದು