ಸದಸ್ಯ:Akshathachinni/ನನ್ನ ಪ್ರಯೋಗಪುಟ
ಶಿವನಿಮರ ಈ ಸಸ್ಯೌವು ಮೆಲಿನ ಆರ್ಬೊರಿಯ [Gmelina arborea Roxb.]ಎಂಬ ವೈಜ್ಞಾನಿಕ ಹೆಸರನ್ನು ಹೊಂದಿದೆ, ವೆರ್ಬಿನೆಸಿ [verbenaceae] ಎಂಬ ಕುಟುಂಬಕೆ ಹೊಳಗೊಂಡಿದೆ.
ಕನ್ನಡದ ಇತರ ಹೆಸರುಗಳು
ಬದಲಾಯಿಸಿ- ಕಾಶ್ಮಿರಿ
- ಕುಂಬಲ್
- ಕುಂಭುದಿ
- ಕುಮುಲು
- ಕುಸ
- ಕೂಲೆ
- ಗಾಂಧಾರಿಗಿಡ
- ಗುಪ್ಸಿ
- ಗುಂಭಾರಿ
- ಗುಮ್ಮಿ
ಇತರ ಭಾಷೆಯ ಹೆಸರುಗಳು
ಬದಲಾಯಿಸಿ- ಸಂ.-ಶ್ರೀಪರ್ಣಿ
- ಕಾಸ್ಮಾರಿ
- ಗಂಭಾರಿ
- ಗುಂಭಾರಿ
- ಭದ್ರಪರ್ಣೆ
- ಮಧುಪರ್ಣಿಕ
- ಹಿಂ.-ಗುಮಾರಿ
- ಗುಂಭಾರ್
- ತ.-ಕುಂಪ್ಲಿ
- ಪೆರುಂಗುಂಪ್ಲಿ
- ಕಟ್ಟಾನಂ
- ಗುಮ್ಮಡಿಟೇಕು
- ಇಂ.-ಮೆಲೈನ ಟ್ರೀ
ಸಸ್ಯ ವರ್ಣನೆ
ಬದಲಾಯಿಸಿಈ ಮರ ಬೆಸಿಗೆಯಲ್ಲಿ ಎಲೆಯುದುರುವ ಮಲೆನಾಡಿನ ಮತ್ತು ಮೈದಾನ ಸೀಮೆಯ ಒಣ ಸಸ್ಯಾವರಣ ಹಾಗೂ ಕಳ್ಳಿ ಕುರುಚಲು ಗಿಡಗಳನ್ನು ಒಳಗೊಂಡ ಸಸ್ಯ.ಉದ್ದತೊಟ್ಟಿನ ಎಲೆ ಆಗಿರುತ್ತದೆ.ಬಲಿತ ಮೇಲೆ ಅವುಗಳ ಮೇಲಿನ ತುಪ್ಪಳ ಉದುರಿಹೋಗಿ ಹೊಳಪಾಗುತ್ತದೆ ಎಲೆಯ ಉದ್ದ ೧೮-೨೫ ಸೆ.ಮೀ. ಇರುತ್ತದೆ. ಜೂನ್ ಮತ್ತು ನವೆಂಬರ್ ತಿಂಗಳುಗಳಲ್ಲಿ ಈ ಮರ ಹೂ ಬಿದುತ್ತದೆ. ಹೂಗಳ ಹೊರಭಾಗ ಕಂದು ಮಿಶ್ರಿತ ಹಳದಿ. ಒಳಭಾಗವು ಹಳದಿಯಾಗಿರುತ್ತದೆ. ಹಣ್ಣುಗಳು ಗೋಳಾಕಾರ. ಬಲಿತಾದ ಹಳದಿ ಬಣ್ಣ. ಪ್ರತಿ ಹಣ್ಣಿನಲ್ಲಿ ೧-೨ ಬೀಜಗಳಿರುತ್ತದೆ.
ಉಪಯೋಗಗಳು
ಬದಲಾಯಿಸಿ- ಜ್ವರದಿಂದ ತಲೆನೊವು ಬಂದಾಗ ಎಲ್ಲೆಗಳನ್ನು ಅರೆದು ಹಣೆಗೆ ಪಟ್ಟೂ ಹಾಕುವುದರಿಂದ ತಲೆನೋವು ಗುಣವಾಗುತ್ತದೆ.
- ಬೆರಿನ ಗಂಧ,ಕಷಾಯ ಅಥವಾ ಚುರ್ಣ ಸೇವನೆಯಿಂದ ಅಜೀರ್ಣ ಮತ್ತು ಮೂಲವ್ಯಾದಿ ಗುಣವಾಗುತ್ತವೆ.
- ಈ ಮರದ ಫಲಸೇವನೆಯೀಂದ ಅತಿಯಾದ ದಾಹ ಹೃದಯಸಂಬಂಧದ ರೋಗ ಮತ್ತು ಕ್ಷಯರೋಗಗಳು ಗುಣವಾಗುತ್ತವೆ.
- ಎಲೆಯ ರಸವನ್ನು ಹಾಲು ಸಕ್ಕರೆಯೊಡನೆ ಸೇವಿಸುವುದರಿಂದ ಮೂತ್ರಾಂಗದ ಉರಿ,ಊತ ಮತ್ತು ಪ್ರಮೆಹವ್ಯಾದಿ ಗುಣವಾಗುತ್ತದೆ.
- ಈ ಮರದ ಫಲಸೇವನೆಯೀಂದ ಎದೆಹಾಲು ಹೆಚ್ಚಾಗಿ ಉತ್ಪತ್ತಿಯಾಗುತ್ತದೆ.