ಸದಸ್ಯ:Aiyappa aloy/sandbox
'ಉತ್ಪನ್ನಗಳನ್ನು ಮಾರಾಟ ಮಾಡುವ ಅಥವಾ ಯಾವುದಾದರೂ ಸೇವೆಯನ್ನು ಒದಗಿಸುವ ಸಂಬಂಧದ ಬಗ್ಗೆ ವಿಷಯಗಳನ್ನು ವ್ಯವಸ್ಥಿತವಾಗಿ ಸಂಗ್ರಹಿಸುವುದು, ಅವುಗಳ ಸೂಕ್ತ ದಾಖಲಾತಿ ಮಾಡುವುದು ಮತ್ತು ಸಂಗ್ರಹಿಸಿದ ದತ್ತಾಂಶಗಳನ್ನು ವಿಶ್ಲೇಷಣೆ ಮಾಡುವುದೇ ವ್ಯಾಪಾರೋದ್ಯಮ ಸಂಶೋಧನೆ . ಈ ಪದವನ್ನು ಸಾಮಾನ್ಯವಾಗಿ ಮಾರುಕಟ್ಟೆ ಸಂಶೋಧನೆ ಎಂಬುದಾಗಿಯೂ ಹೇಳಬಹುದು; ಆದರೆ ವೃತ್ತಿನಿರತ ತಜ್ಞರು ಇದರಲ್ಲಿ ವ್ಯತ್ಯಾಸದ ಗೆರೆ ಎಳೆಯುತ್ತಾರೆ.ಮಾರುಕಟ್ಟೆ ಸಂಶೋಧನೆಯು ಸ್ಪಷ್ಟವಾಗಿ ಮಾರುಕಟ್ಟೆಗಳಿಗೆ ಮಾತ್ರ ಸಂಬಂಧಿಸಿದರೆ, ವ್ಯಾಪಾರೋದ್ಯಮ ಸಂಶೋಧನೆಯು ನಿರ್ದಿಷ್ಟವಾಗಿ ಮಾರಾಟ ಪ್ರಕ್ರಿಯೆಯ ಬಗ್ಗೆಯಾಗಿರುತ್ತದೆ.[೧]
ವ್ಯಾಪಾರೋದ್ಯಮ ಸಂಶೋಧನೆಯನ್ನು ದರ್ಜೆಗನುಗುಣವಾಗಿ ಎರಡು ಜೋಡಿ ವಿಭಾಗಗಳಾಗಿ ವಿಂಗಡಿಸಬಹುದು, ಉದ್ಧೇಶಿತ ಮಾರುಕಟ್ಟೆಯ ಆಧಾರದಲ್ಲಿ:
ಗ್ರಾಹಕ ಸಂಬಂಧೀ ವ್ಯಾಪಾರೋದ್ಯಮ ಸಂಶೋಧನೆ, ಮತ್ತು ಬ್ಯುಸಿನೆಸ್-ಟು-ಬ್ಯುಸಿನೆಸ್ (B2B) ವ್ಯಾಪಾರೋದ್ಯಮ ಸಂಶೋಧನೆ
ಅಥವಾ ಕ್ರಮಬದ್ಧ ವಿಧಾನಗಳ ಆಧಾರದಲ್ಲಿ:
ಗುಣಾತ್ಮಕ ವ್ಯಾಪಾರೋದ್ಯಮ ಸಂಶೋಧನೆ, ಮತ್ ರಿಮಾಣಾತ್ಮಕ ವ್ಯಾಪಾಪಾರೋದ್ಯಮ ಸಂಶೋಧನೆ
ಗ್ರಾಹಕ ವ್ಯಾಪಾರೋದ್ಯಮ ಸಂಶೋಧನೆಯು ಅನ್ವಯಿಕ ಸಮಾಜಶಾಸ್ತ್ರದ ಒಂದು ರೂಪ, ಇದು ಮಾರುಕಟ್ಟೆ-ಆಧಾರಿತ ಅರ್ಥವ್ಯವಸ್ಥೆಯಲ್ಲಿನ ಗ್ರಾಹಕರ ಒಲವು, ವರ್ತನೆ ಮತ್ತು ನಡವಳಿಕೆಗಳ ಅರ್ಥೈಸುವಿಕೆಯನ್ನು ಕೇಂದ್ರೀಕರಿಸಿರುತ್ತದೆ ಹಾಗೂ ಇದು ವ್ಯಾಪಾರೋದ್ಯಮ ಕಾರ್ಯಾಚರಣೆಯ ಪರಿಣಾಮ ಮತ್ತು ತುಲನಾತ್ಮಕ ಯಶಸ್ಸನ್ನು ತಿಳಿಯುವ ಗುರಿಯನ್ನು ಹೊಂದಿರುತ್ತದೆ. ಅಂಕಿಅಂಶಗಳ ವಿಜ್ಞಾನವಾಗಿ ಆರ್ತುರ್ ನೈಲ್ಸನ್ 1923ರಲ್ಲಿ ACನೈಲ್ಸನ್ ಕಂಪೆನಿಯನ್ನು ಸ್ಥಾಪಿಸುವುದರೊಂದಿಗೆ ಗ್ರಾಹಕ ವ್ಯಾಪಾರೋದ್ಯಮ ಸಂಶೋಧನೆಯನ್ನು ಆರಂಭಿಸಿದನು.[೨]
ಸಮಸ್ಯೆಗಳ ಕ್ರಮಬದ್ಧ ಗುರುತಿಸುವಿಕೆ ಮತ್ತು ಪರಿಹಾರ,ಹಾಗೂ ವ್ಯಾಪಾರೋದ್ಯಮದಲ್ಲಿರುವ ಅವಕಾಶಗಳಿಗೆ ಸಂಬಂಧಿಸಿದಂತೆ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಆಡಳಿತ ನಿರ್ವಹಣೆಗೆ ಸಹಾಯ ಹಸ್ತ ಚಾಚುವುದು, ವ್ಯಾಪಾರೋದ್ಯಮ ಸಂಶೋಧನೆಯನ್ನು ಮಾಹಿತಿಯ ವ್ಯವಸ್ಥಿತ ಮತ್ತು ಉದ್ಧೇಶಿತ ಗುರುತಿಸುವಿಕೆ, ಸಂಗ್ರಹಿಸುವಿಕೆ, ವಿಶ್ಲೇಷಣೆ ಮಾಡುವಿಕೆ ಹಾಗೂ ಪ್ರಸರಿಸುವಿಕೆ ಎಂಬುದಾಗಿಯೂ ವಿವರಿಸಬಹುದು.[೩] ಉದ್ಯಮದ ಮಿಶ್ರಣಾಂಶಗಳು ಗ್ರಾಹಕರ ನಡವಳಿಕೆ ಬದಲಾಗುವುದರ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ಗುರುತಿಸುವುದು, ನಿರ್ಣಯಿಸುವುದು ಮತ್ತು ಮೌಲ್ಯಮಾಪನ ಮಾಡುವುದು ಈ ಸಂಶೋಧನೆಯ ಮುಖ್ಯ ಗುರಿ.