ಐಶ್ವರ್ಯ.ಕೆ.ಎಸ್
ಜನನ
ಕೋಲಾರದ ಮುಳಬಾಗಿಲು
ರಾಷ್ಟ್ರೀಯತೆಭಾರತೀಯರು
ಇತರೆ ಹೆಸರುಐಶು
ವಿದ್ಯಾಭ್ಯಾಸಬಿ.ಕಾಂ
Titleಐಶ್ವರ್ಯ.ಕೆ.ಎಸ್

ನನ್ನ ಹೆಸರು ‍ಐಶ್ವ‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‌‍ರ್ಯ.ಕೆ.ಎಸ್. ನನ್ನ ಜನ್ಮಸ್ಥಳ ಚಿನ್ನದ ಗಣಿ ಎನಿಸಿಕೊಂಡಿರುವ ಕೋಲಾರ ಜಿಲ್ಲೆಯ ಮುಳಬಾಗಿಲು. ನಾನು ೧೦ ಸೆಪ್ಟೆಂಬರ್ ೧೯೯೭ ರಂದು ಜನಿಸಿದೆ. ಮೊದಲು ನನ್ನ ಕುಟುಂಬದ ಬಗ್ಗೆ ತಿಳಿಸಲು ಆಶಿಸುತ್ತೇನೆ. ನಮ್ಮ ಮನೆಯಲ್ಲಿ ನನ್ನ ಅಜ್ಜ, ಅಜ್ಜಿ, ತಂದೆ, ತಾಯಿ ಹಾಗೂ ನನ್ನ ತಂಗಿ ವಾಸಿಸುತ್ತಾರೆ. ನನ್ನ ತಂದೆ ಕೆ.ಸುಬ್ರಮಣ್ಯಂರವರು ಆಹಾರ ಯೋಗ್ಯ ಎಣ್ಣೆಯನ್ನು ಮಾರುವ ವ್ಯಾಪಾರಿ. ನನ್ನ ತಾಯಿ ಕೆ.ಎಸ್.ಅನುಪಮರವರು ಗೃಹಿಣಿ. ನನ್ನ ತಂಗಿ ಪ್ರಸ್ತುತ ದ್ವಿತೀಯ ಪದವಿ ಪೂರ್ವ ಶಿಕ್ಷಣವನ್ನು ಮಾಡುತ್ತಿದ್ದಾಳೆ.

ವಿದ್ಯಾಭ್ಯಾಸ:

ಬದಲಾಯಿಸಿ

ನನ್ನ ಪ್ರಾಥಮಿಕ ಶಿಕ್ಷಣವನ್ನು ಲೂರ್ದು ಆಂಗ್ಲ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಾಡಿದೆ. ಈ ಶಾಲೆ ನಮ್ಮ ಊರಿನ ಅತಿ ಹಳೆಯ ಹಾಗೂ ದೊಡ್ಡ ಶಾಲೆ. ಇಲ್ಲಿ ನನ್ನ ಬಾಲ್ಯದ ಅನೇಕ ಸಿಹಿ ನೆನಪುಗಳು ಹಾಗೂ ಕೆಲವು ಕಹಿ ನೆನಪುಗಳು ನಡೆದಿವೆ. ಈ ಶಾಲೆಯಲ್ಲೆ ನನ್ನ ಜೀವನದ ಆಪ್ತಮಿತ್ರರನ್ನು ಪಡೆದೆ. ಇದರ ನಂತರ ನನ್ನ ಪ್ರೌಢ ಶಿಕ್ಷಣವನ್ನು ಸೈಂಟ್.ಆನ್ಸ್ ಹಿರಿಯ ಶಾಲೆಯಲ್ಲಿ ಮುಗಿಸಿದೆ. ಈ ಶಾಲೆಯು ನನ್ನ ಪ್ರಾಥಮಿಕ ಶಾಲೆಯ ಮತ್ತೊಂದು ಶಾಖೆ. ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ನನಗೆ ಶೇಕಡ ೯೩.೨೮ರಷ್ಟು ಪಡೆದೆ. ನಂತರ ಶ್ರೀ ಭಗವಾನ್ ಮಹಾವೀರ್ ಜೈನ್ ಕಾಲೇಜಿನಲ್ಲಿ ನನ್ನ ಪದವಿ ಪೂರ್ವ ಶಿಕ್ಷಣವನ್ನು ನಡೆಸಿದೆ. ದ್ವಿತೀಯ ಪದವಿ ಪೂರ್ವ ಪರೀಕ್ಷೆಯಲ್ಲಿ ಶೇಕಡ ೯೬.೬೪ರಷ್ಟು ಪಡೆದೆ. ಪ್ರಸ್ತುತ ಕ್ರೈಸ್ತ ವಿಶ್ವವಿದ್ಯಾಲಯದಲ್ಲಿ ನನ್ನ ಪದವಿ ಶಿಕ್ಷಣವನ್ನು ಮಾಡುತ್ತಿದ್ದೇನೆ. ನಾನು ಎರಡನೇ ಅರ್ಧವಾರ್ಷಿಕ ವ್ಯಾಸಾಂಗಾವಧಿಯನ್ನು ಬಿಕಾಂ ಬಿ ವಿಭಾಗದಲ್ಲಿ ನಡೆಸುತ್ತಿದ್ದೇನೆ.

ಹವ್ಯಾಸಗಳು:

ಬದಲಾಯಿಸಿ

ನನ್ನ ಹವ್ಯಾಸಗಳೆಂದರೆ ಪುಕ್ಕಚಂಡಾಟ(ಬ್ಯಾಡ್ಮಿಂಟನ್), ಕ್ಯಾರಮ್, ತೋಟಗಾರಿಕೆ, ವ್ಯಾಯಾಮ, ಅಡುಗೆ ಮಾಡುವುದು, ಭರತನಾಟ್ಯ ಆಡುವುದು ಹಾಗೂ ಸಂಗೀತ ಹಾಡುವುದು. ಇವೆಲ್ಲಕ್ಕಿಂತಲು ತುಂಬ ಇಷ್ಟವಾದ ಹವ್ಯಾಸವೆಂದರೆ ಪ್ರವಾಸಗಳಿಗೆ ಹೋಗುವುದು. ಇದುವರೆಗೆ ಭಾರತದ ಹಲವಾರು ಪ್ರವಾಸಿ ಹಾಗೂ ಐತಿಹಾಸಿಕ ಸ್ಥಳಗಳನ್ನು ಸಂದರ್ಶಿಸಿದ್ದೇನೆ. ಜೈಪೂರ್, ಅಹಮದಾಬಾದ್, ಬದ್ರಿನಾಥ್, ಕೆದಾರನಾಥ್, ಯಮುನೋತ್ರಿ, ಗಂಗೋತ್ರಿ, ನ್ಯೂ ಡೆಲ್ಲಿ, ಕಾಶಿ, ಗಯ, ಭುವನೆಶ್ವರ, ಪುಣೆ, ಶಿರಿಡಿ, ಹೈದರಬಾದ್, ವಿಶಾಕಪಟ್ನ, ತಿರುವನಂತಪುರ, ಚೆನ್ನೈ, ಕೊಚ್ಚಿನ್, ಕನ್ಯಾಕುಮಾರಿ, ಊಟಿ, ಕೊಡೈಕನಲ್, ಧರ್ಮಸ್ಥಳ, ಮಂಗಳೂರು, ಮೈಸೂರು, ಶ್ರವಣಬೆಳಗೊಳ, ವೇಲಾಂಗಿಣಿ, ಮದುರೈ, ಅಲಹಾಬಾದ್, ಆಗ್ರಾ, ಎಲ್ಲೋರ, ಮಹಬಲೇಶ್ವರ ಮುಂತಾದ ಸ್ಥಳಗಳಿಗೆ ಭೇಟಿ ನೀಡಿದ್ದೇನೆ. ಇದಲ್ಲದೆ ಭಾರತದ ನೆರೆಯ ದೇಶವಾದ ನೇಪಾಳಕ್ಕೆ ಹೋಗಿದ್ದೇನೆ. ಅಲ್ಲಿ ನೇಪಾಳದ ರಾಜಧಾನಿಯಾದ ಕಾಟಮಂಡು, ಮನೋಕಾಮ್ನ, ಭಕ್ತಿಪುರ್ ಮುಂತಾದ ಸ್ಥಳಗಳಿಗೆ ಹೋಗಿದ್ದೇನೆ. ಮೌಂಟ್ ಎವರೆಸ್ಟ್, ಮೌಂಟ್ ಕಾಂಚನಜುಂಗ, ಮೌಂಟ್ ಅನ್ನಪೂರ್ಣ, ಮೌಂಟ್ ದೌಲಗಿರಿ, ಮೌಂಟ್ ಗೌರಿಶಂಕರ್ ಮುಂತಾದ ಪರ್ವತಗಳನ್ನು ಕಂಡಿದ್ದೇನೆ. ಗಂಗ, ಯಮುನ, ಕಾವೇರಿ, ಗೋದಾವರಿ, ಸರಸ್ವತಿ ಮುಂತಾದ ನದಿಗಳನ್ನು ವೀಕ್ಷಿಸಿದ್ದೇನೆ.

ಸ್ಪರ್ಧೆಗಳು ಹಾಗೂ ಪ್ರಶಸ್ಥಿಗಳು:

ಬದಲಾಯಿಸಿ

ನಾನು ಚಿಕ್ಕಂದಿನಿಂದಲೇ ಬಹಳ ಚುರುಕಾಗಿ ಹಲವಾರು ಸ್ಪರ್ಧೆಗಳಲ್ಲಿ ಭಾಗವಹಿಸಿ ಅನೇಕ ಪ್ರಶಸ್ತಿಗಳನ್ನು ಪಡೆದಿದ್ದೇನೆ. ರಸಪ್ರಶ್ನೆ ಸ್ಪರ್ಧೆಯಲ್ಲಿ ಒಂದು ಸಲ ಮೊದಲನೆಯ ಸ್ಥಾನ ಹಾಗೂ ಎರಡು ಸಲ ಎರಡನೇ ಸ್ಥಾನ ಗಳಿಸಿದ್ದೇನೆ. ಅಡುಗೆ ಸ್ಪರ್ಧೆಯಲ್ಲಿ ಎರಡು ಬಾರಿ ಎರಡನೇ ಸ್ಥಾನ ಸ್ವೀಕರಿಸಿದ್ದೇನೆ. ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ ಎರಡನೇ ಸ್ಥಾನ, ಕನ್ನಡ ಚರ್ಚಾಸ್ಪರ್ಧೆಯಲ್ಲಿ ಮೂರನೇ ಸ್ಥಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ.ವಿದ್ಯಾಭ್ಯಾಸದಲ್ಲೂ ನನಗೆ ಅಷ್ಟೇ ಆಸಕ್ತಿ. ಅಲ್ಲಿಯೂ ಹಲವಾರು ಬಹುಮಾನಗಳನ್ನು ಸ್ವೀಕರಿಸಿದ್ದೇನೆ. ಏಳನೇ ತರಗತಿಯಲ್ಲಿ ನಮ್ಮ ಶಾಲೆಯಲ್ಲಿ ಪ್ರಥಮ ಸ್ಥಾನ ಗಳಿಸಿದೆ. ಆಗ ಅಂದಿನ ತಹಸೀಲದಾರರಾದ ಜಯಮಹದೇವ್ ರವರು ನನಗೆ ಬಹುಮಾನ ವಿತರಿಸಿದರು. ಹತ್ತನೇ ತರಗತಿಯಲ್ಲಿ ಜಿಲ್ಲೆಗೆ ಆರನೇ ಸ್ಥಾನ ಗಳಿಸಿದೆ. ದ್ವಿತೀಯ ಪದವಿ ಪೂರ್ವ ಶಿಕ್ಷಣದಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಪಡೆದೆ.

ಗುರಿ ಹಾಗೂ ಪ್ರೇರಣೆ:

ಬದಲಾಯಿಸಿ

ನನ್ನ ಜೀವನದ ಮುಖ್ಯ ಗುರಿ ಒಂದು ದೊಡ್ಡ ವಿದ್ಯಾಸಂಸ್ಥೆಯಲ್ಲಿ ಒಳ್ಳೆಯ ಶಿಕ್ಷಕಿಯಾಗಿ ಸೇವೆ ಸಲ್ಲಿಸುವುದಾಗಿದೆ. ನನ್ನ ಪ್ರಕಾರ ಯಾವುದೇ ವ್ಯಕ್ತಿ ಜೀವನದಲ್ಲಿ ಏನಾದರು ಸಾಧಿಸಬೇಕಾದರೆ ಇನ್ನೊಬ್ಬ ವ್ಯಕ್ತಿಯ ಜೀವನವನ್ನು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಆಗ ಆ ವ್ಯಕ್ತಿಗಿಂತಲೂ ಹೆಚ್ಚಾಗಿ ಸಾಧಿಸುವ ಯೋಚನೆಯಲ್ಲಿ ಅದಕ್ಕಿಂತಲೂ ಹೆಚ್ಚಾಗಿ ಸಾಧಿಸುವ ಅವಕಾಶ ಒದಗಿ ಬರುತ್ತದೆ. ಈ ರೀತಿಯಲ್ಲಿ ನನಗೆ ನನ್ನ ಅಜ್ಜ ಮಾದರಿ ಮನುಷ್ಯರು. ಅವರಿಗೆ ಇರುವ ಸಹನೆ, ಶಾಂತಿ, ವಿವೇಕತನೆಗಳು ನನಗೆ ಮಾದರಿಯಾಗಿವೆ.

ಕ್ರೈಸ್ಟ್ ವಿಶ್ವವಿದ್ಯಾಲಯ:

ಬದಲಾಯಿಸಿ

ಕ್ರೈಸ್ಟ್ ವಿಶ್ವವಿದ್ಯಾಲಯದ ಬಗ್ಗೆ ಹೇಳಬೇಕೆಂದರೆ ಇದು ಬೆಂಗಳೂರಿನಲ್ಲಿರುವ ಅತ್ಯಂತ ಉತ್ತಮವಾದ ವಿಶ್ವವಿದ್ಯಾಲಯ. ಇದು ಭಾರತದ ನಾಲ್ಕನೇ ಸ್ಥಾನದ ಅತಿ ದೊಡ್ಡ ವಿಶ್ವವಿದ್ಯಾಲಯ. ಇಲ್ಲಿ ಸೇರುವುದು ನನ್ನ ಕನಸಿನಂತ್ತಿದೆ. ನಮ್ಮ ಕಾಲೇಜು ೩೨ ಎಕರೆಯಷ್ಟು ಇದೆ. ಇಲ್ಲಿನ ವಾತಾವರಣ ಎಂತಹ ನೋವ್ವನ್ನಾದರು ಮರೆಸಬಲ್ಲದ್ದು. ಇದಕ್ಕಿಂತಲು ಮೊದಲು ನಾವು ನಮ್ಮ ಕನ್ನಡದ ನಿಯೋಜಿತ ಕಾರ್ಯವನ್ನು ವಿಕಿಸೋರ್ಸಿನಲ್ಲಿ ಮಾಡಿದ್ದೆವು. ಇದರಿಂದ ಮೊದಲನೆ ಬಾರಿ ನಾನು ಕನ್ನಡ ಅಕ್ಷರಗಳನ್ನು ಸೃಷ್ಟಿಸಲು ಕಲಿತೆ. ಇದು ನನಗೆ ತುಂಬ ಒಳ್ಳೆಯ ಅನುಭವವಾಗಿತ್ತು. ಇದೇ ರೀತಿ ವಿಕಿಪೀಡಿಯ ಕೂಡ ನನಗೆ ಒಳ್ಳೆಯ ಅನುಭವ ನೀಡುತ್ತದೆ ಎಂದು ಆಶಿಸುತ್ತೇನೆ.

 This user is a member of WikiProject Education in India

ಉಪಪುಟಗಳು

ಬದಲಾಯಿಸಿ

In this ಸದಸ್ಯspace:

ಸದಸ್ಯರ ಚರ್ಚೆಪುಟ:
Aishukandur