ಓಂಕಾರೇಶ್ವರ ದೇವಾಲಯದ ಇತಿಹಾಸ 
                                                                         ಮತ್ತು 
                                                           ಕಾವೇರಿ ಸಂಕ್ರಮಣದ ಮಹತ್ವ

ಕೊಡಗನ್ನು ಆಳಿದ ಮೊದಲ ದೊರೆ ದೊಡ್ಡ ವೀರ ರಾಜೇಂದ್ರ ಒಡೆಯರು.ಇವರು ರೈತರಿಗೆ ವ್ಯವಸಾಯಕ್ಕೆ ಭೂಮಿ,ಬೀಜ,ದವಸ,ಧಾನ್ಯ ಕೊಡುತ್ತಿದ್ದರು. ನಾಲ್ಕು ನಾಡು ತಾಲೂಕು ಹೆಗ್ಗ್ಗಳಕ್ಕೆ ಸಮೀಪವಾಗಿರುವಂತೆ ಬೆಟುವಳಿಯಂಬಲ್ಲಿ ವೀರ ರಾಜೇಂದ್ರ ಪೇಟೆಯಲ್ಲಿ ಇವರಿಗೆ ಅಂಗಡಿಗಳನ್ನು ಕಟಿಸಿ ಕೊಟ್ಟ್ಟು ಅರಮನೆಯಿಂದ ಮುಂಗಡ ಕೊಡಿಸಿ ಮೂರು ವರ್ಷ್ ಪರಸ್ಪರ ವ್ಯಪಾರ ದಿಂದ ಬರುವ ಸುಂಕ ವಸೂಲಿ ಮಾಡುವ ಕ್ರಮವಿತ್ತು.

ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಯ ಅಗಸ್ತೇಶ್ವರನ ದೇವಾಲಯಕ್ಕೆ ಆಕಳ ತುಪ್ಪ್ಪದಿಂದ ನಂದಾ ದೀಪ ಹಚ್ಚಬೇಕೆಂದು ಒಡೆಯರು ತಮ್ಮ ಶಾಸನದಲ್ಲಿ ಬರೆದಿದ್ದಾರೆ ಹಾಗು ಬಾಗಮಂಡಲದಲ್ಲಿ ಬ್ರಹ್ಮ , ವಿಷ್ನು ,ಮಹೇಶ್ವರ ತ್ರಿಮೂರ್ತಿಗಳು ,ಹಾಗು ತ್ರಿವೇಣಿ ಸಂಗಮದಲ್ಲಿ ಕನ್ನಿಕೆಯನ್ನು ಪ್ರತಿಷ್ಟ್ಟಾಪಿಸಿದ್ದಾರೆ.

ದೊಡ್ಡ ವೀರ ರಾಜೇಂದ್ರರ ಕಾಲದಲ್ಲಿ ಕೊಡಗಿನ ಹಲವಾರು ಮನೆತನದವರೆಗೆ ಊಳಲು ಭೂಮಿ ,ಗದ್ದೆಗಳನ್ನು ಉದಾರವಾಗಿ ನೀಡಿರುತ್ತಾರೆ. ಈಗಲೂ ಅವರ ಮನೆತನದವರು ತಮ್ಮ ಜೀವನವನ್ನು ಆ ಭೂಮಿ ಗದ್ದೆಯ ಬೆಳೆಯಿಂದಲೇ ಜೀವನ ನಿರ್ವಹಣೆ ಮಾಡುತ್ತಿದ್ದಾರೆ

ಇವರ ನಂತರ ೨ನೇ ಲಿಂಗ ರಾಜೇಂದ್ರ ಒಡೆಯರ ಆಳಕೆ ಪ್ರರಂಭವಾಯಿತು.

ಇವರ ಆಳಿಕೆಯಲ್ಲಿ ಇವರು ತಮ್ಮ ರಾಜ್ಯದ ಜನ ಜೀವನ ಹಾಗು ಆರೋಗ್ಯದ ಬಗ್ಗೆ ತುಂಬ ಕಾಳಜಿ ವಹಿಸುತಿದ್ದರು.ಜನರು ತಮ್ಮ ಜಾತಿಯ ಕಟ್ಟು ಕಟ್ಟಳೆಗಳನ್ನು ಅನುಸರಿಸಲು ತಪ್ಪಿದರೆ ಅದಕ್ಕೆ ಜಾತಿ ಕಟ್ಟಳೆ ಮೊರೆ ಶುದ್ದ ಮಾಡಿಸಕೊಳ್ಳಬೇಕಾಗಿತ್ತು.

ಕೊಡವರ ಪ್ರಮುಖ ಹಬ್ಬವಾದ ಹುತ್ತರಿ ಹಬ್ಬದಲ್ಲಿ ಗುಂಡು ಹೊಡೆಯುವ ಪದ್ದತಿ ಇತ್ತು..ಅದು ಇಂದಿಗೂ ನಡೆದುಕೊಂಡು ಬಂದಿದೆ..ಹುತ್ತರಿ ಹಾಬ್ಬದಲ್ಲಿ ಮೊದಲು ಕದಿರು ತೆಗೆಯುವ ಮುಹೂರ್ತದಲ್ಲಿ..ಮದ್ಯ ದಾರಿಯಲ್ಲಿ..ಹಾಗು ಅರಮನೆ ಮೆಟ್ಟಲು ಹತ್ತುವಾಗ ಹೀಗೆ ಮೂರು ಬಾರಿ ಗುಂಡು ಹೊಡೆಯುವ ಪದ್ದತಿ ಇದೆ.

ಹುತ್ತರಿ ಹಬ್ಬದಂದು ನಾಲ್ಕು ನಾಡು ಅರಮನೆಯಲ್ಲಿ ಊಟ ಮಾಡಿಸಿ ಕಳುಹಿಸುವ ಪದ್ದತಿ ಇದೆ. ಲಿಂಗ ರಾಜೇಂದ್ರ ಒಡೆಯರು ಎಳು ಸಾವಿರ ಸಿಮೆಯ ಬ್ರಹ್ಮಣರಿಗೆ ಭೂಮಿಯನ್ನು ಬಹುಮಾನವಾಗಿ ಕೊಟ್ಟಿರುವುದು ನಿರೂಪದಿಂದ ಕಂಡುಬರುತದೆ.

ಇವರ ನಂತರ ಆಳಿಕೆ ನಡೆಸಿದವರು ಮೂರನೇ ಲಿಂಗ ರಾಜೇಂದ್ರ ಒಡೆಯರ. ಇವರ ಕಾಲದಲ್ಲಿ ಮಡಿಕೇರಿಯ ಪ್ರಸಿದ್ದ ದೇವಾಲಯವಾದ ಓಂಕಾರೇಶ್ವರ ದೇಗುಲವನ್ನು ಕಟ್ಟಲು ಆರಂಬಿಸಲಾಯಿತು. ೧-೦೬-೧೮೧೭ ರಲ್ಲಿ ಕಟ್ಟಲು ಪ್ರರಂನಭಿಸಿದ ಓಂಕಾರೇಶ್ವರ ದೇವಾಲಯ,ಎರಡು (೨) ವರ್ಷ, ಒಂಬತ್ತು (೯) ತಿಂಗಳು , ಇಪ್ಪತೈದು (೨೫) ದಿನಗಳಲ್ಲಿ ಪೂರ್ಣಗೊಂಡಿತು. ಈ ದೇಗುಲ ನಿರ್ಮಾಣದ ಹಿಂದೆ ಒಂದು ಮಹತ್ವದ ಕಥೆ ಇದೆ..

ಪುತ್ತೂರು ಕಡೆಯಿಂದ ತಾನಾಗಿ ರಾಜನಿಗೆ ತನ್ನ ಮಗಳನ್ನು ಮಾಡಿಕೊಡಲು ಬಂದ ಬ್ರಾಹ್ಮಣನ ಕನ್ಯೆಯನ್ನು ರಾಜನು ಮದುವೆಯಾಗಲು ಅಡ್ಡಿಯಾದ ಕರಣಿಕ ನೌಬ್ಬರಸ್ಸಯ್ಯನನ್ನು ರಾಜ ದಹನ ಮಾಡಿಸಿದನಂತೆ. ಅವನು ಬ್ರಹ್ಮರಕ್ಕಸನಾಗಿ ರಾಜನನ್ನು ಕಾಡಲು ಆರಂಭಿಸಿದನು..ಇದಕ್ಕೆ ಪರಿಹಾರವಾಗಿ ರಾಜನು ಈ ದೇವಾಲಯವನ್ನು ನಿರ್ಮಿಸಿದನಂತೆ.

ಎರಡನೆ ಕಥೆ ಹೀಗಿದೆ- ವೀರ ಶೈವ ಜಂಗಮನೊಬ್ಬ ರಾಜನ ಆಸ್ತಾನಕ್ಕೆ ಬಂದಾಗ ರಾಜರು ಅವರನ್ನು ಅನಾಧರಿಸಿ ಗೌರವ ನೀಡದ ಕಾರಣ ಜಂಗಮನು ರಾಜನನ್ನು ಶಪಿಸಿದನಂತೆ. ಆಗ ರಾಜನು ಪ್ರಾರ್ಥಿಸಲು,ಶಾಪದ ನಿರಸನಕ್ಕಾಗಿ ಜಂಗಮನೇ ದೇಗುಲ ಒಂದನ್ನು ನಿರ್ಮಿಸುವಂತೆ ಸಲಹೆ ನೀಡಿದನಂತೆ. ಇಂತಹ ದೇಗುಲದಲ್ಲಿ ಮುಖ್ಯ ದೇವರು ಶ್ರೀ ಓಂಕಾರೇಶ್ವರ ಪರಿವಾರದ ದೇವತೆಗಳಾದ ಗಣಾದೀಶ್ವರ ,ಕುಮಾರೇಶ್ವರ , ನಂದೀಶ್ವರ ಹೀಗೆ ಶಿವನ ಸುತರು ಶಿವ ಲಿಂಗ ಇಲ್ಲಿ ನೆಲೆನಿಂತಿದೆ. ಈ ದೈವ ಸಮೂಹಕ್ಕೆ ದೈನಂದಿನ ತ್ರಿಕಾಲ ಪೂಜೆ ,ನೈವೇದ್ಯ ,ನಂದಾದೀಪ ,ಅಭಿಷೇಕ ,ಅರ್ಚನೆ ,ಅಮೃತ ಪಡಿಯಿಂದ ಹಿಡಿದ ತೀಥಿ , ವಾರ , ಪಕ್ಷ ,ಮಾಸಿಕ ,ವಾರ್ಷಿಕ ಹಬ್ಬ ಉತ್ಸವಾದಿಗಳು ನಡೆಯುತ್ತವೆ. ದೇಗುಲದ ದೇವಪರಿವಾರಕ್ಕೆ ಚೈತ್ರ ಮಾಸದಿಂದ ವೈಶಾಖ್ ಮಾಸದ ವರೆಗೆ ವಸಂತ ಪೂಜೆ ,ನವರಾತ್ರಿ , ಕಾರ್ತಿಕ ಮಾಸ ಪೂಜೆ ,ದೀಪಾವಳಿ , ಶಿವರಾತ್ರಿ ,ದೀಪೋತ್ಸವ ಇತ್ಯಾದಿ ಮಾಸಿಕ ಪೂಜೆ ಪುನಸ್ಕಾರಗಳಿಗೆ ರಾಜರು ಅಡುಗೆ ಬಟ್ಟರು ,ಅರ್ಚಕರು ,ಪುರೋಹಿತ ವರ್ಗ ,ಪಾದ್ರಿಗಳು ,ಪಾರುವತ್ಸಗಾರ ,ಶಿವನಿಗೆ ಪ್ರಿಯವಾದ ಬಿಲ್ವಪತ್ರೆ ,ತಾಳ ಮೇಳದವರು ,ಶಂಖ್ ಜಾಗಟೆ ,ಡೋಲು ವಾದ್ಯದವರು , ಮುಂತಾದವರನ್ನು ನೇಮಿಸುತಿದ್ದರು.

ರಾಜರ ಕಾಲದಲ್ಲಿ ಉಪಯೋಗಿಸುತ್ತಿದ್ದ ನಾಣ್ಯಗಳ ಸಂಕೇತದಲ್ಲಿ ೯ ಎಂಬುದು ವರಹದ ಚಿಹ್ನಯಾಗಿ ಬಳಕೆಯಾಗುತ್ತಿತ್ತು. ಓಂಕಾರೇಶ್ವರ ದೇವಾಲಯದಲ್ಲಿ ನಂದಾದೀಪಕ್ಕೆ ಹಸುವಿನ ತುಪ್ಪವನ್ನೇ ಬಳಸಲಾಗುತ್ತೀತ್ತೂ.

ಕೊಡಗಿನಲ್ಲಿ ಪವಿತ್ರವಾದ ಸ್ಥಳವಂದರೆ ಕಾವೇರಿ. ಕಾವೇರಿ ಎಂಬ ಶಬ್ಧ ಕಿವಿಯ ಮೇಲೆ ಬೀಳುತ್ತೀದ್ದಂತೆಯೇ ಕೊಡಹಗಿನ ವನಸಿರಿಯ ವೈಭವದ ಜಲನಿದ್ಧಿಯ ಅನುಭವವಾಗುತ್ತದೆ. ಈ ಕೊಡಗಿನ ನೆಲದಲ್ಲಿ ಹುಟ್ಟಿದ ಪವಿತ್ರವಾದ ಕಾವೇರಿ ತಾಯಿಯು ಹೆಸರುವಾಸಿಯಾಗಿದ್ದಾಳೆ. ತುಲಾ ಮಾಸದ ತುಲಾ ಸಂಕ್ರಮಣದಂದು ತಲ ಕಾವೇರಿಯಲ್ಲಿ ವಿಷೇಶ ಉತ್ಸವವೊಂದು ನೆರವೇರುತ್ತದೆ. ಈ ವಿಷೇಶ ದಿನದಂದು ಪುರೋಹಿತರು ನಿಸ್ಛಯಿಸಿದ ಸಮಯಕ್ಕೆ ಸರಿಯಾಗಿ ಕಾವೇರಿಯ ಸನ್ನಿದ್ದಿಯಲ್ಲಿ ಜಲ ಉದ್ಬವವಾಗುತ್ತದೆ. ಇದನ್ನು ವೀಕ್ಶಿಸಲು ದೇಶದ ಎಲ್ಲೆಡೆಯಿಂದ ಜನರು ಬರುತ್ತಾರೆ. ಕಾವೇರಿಯ ಜಲವೈಭವದ ಪವಿತ್ರ ಸನ್ನಿದಿ ಕಾಣುತ್ತದೆ.

ಹಚ್ಚ ಹಸುರಿನ ಮದ್ಯದಲ್ಲಿ ಮಳೆಗಾಲದಲ್ಲಿ ಕಾಯಕ ನಡೆಸಿ , ನಂತರ ವಿರಾಮದ ಸಮಯದಲ್ಲಿ ಬೇಟೆಯ ಖುಷಿಯನ್ನು ಪಡೆದು ಆನಂತರ ತುಲಾ ಮಾಸದಲ್ಲಿ ಸಂಕ್ರಮಣ ಹಬ್ಬದ ಸಿದ್ಧತೆ ನಡೆಸುವುದು ಕೊಡಗಿನವರಿಗೆ ಬಂದ ಪ್ರಾಚೀನ ಪದ್ಧತಿ. ಕನ್ನಡ ನಾಡಿನ ಸಹ್ಯದ್ರಿ ಶ್ರೇಣಿಯಲ್ಲಿನ ಬ್ರಹ್ಮಗಿರಿ ಇದಕ್ಕೆ ಮೈ ಚಾಚಿಕೊಂಡು ಕೊಡಗಿನ ನೆಲದಲ್ಲಿ ಹುಟ್ಟಿದ ಕೊಡವರೇ ದ್ಧನ್ಯರು. ಕೊಡಗಿನ ಗ್ರಹ ದೇವತೆ ಕಾವೇರಿ ತಾಯಿಯಾಗಿದಾಳೆ. ಕಾವೇರಿ ತೀರ್ಥ ಉಧ್ಬವದಂದು ಈಗಲೂ ಸಾವಿರಾರು ಸಂಖೆಯಲ್ಲಿ ಕೊಡವರು ಹಾಗು ವಿವಿದೆಡೆಯಿಂದ ಜನರು ಆಗಮಿಸುತ್ತಾರೆ.

ತುಲಾ ಸಂಕ್ರಮಣದ ಹಬ್ಬ ಕೊಡಗಿನವರಿಗೆ ಎರಡು ದಿನದ ಹಬ್ಬ. ಮೊದಲನೆಯ ದಿನ ಕೊಡವ ಜನಂಗದವರು "ಬೊತ್ತ್" ಅಂದರೆ ನಿಶಾನಿಯನ್ನು ಚ್ಚುಚ್ಚಿ ಇದುತ್ತಾರೆ. ಇದನ್ನು ಗದ್ದೆ ,ತೋಟ ,ಭಾವಿ ,ದನದ ಕೊಟ್ಟಿಗೆ ಹಾಗು ಕೆರೆಗಳಲ್ಲಿ ಬಿದಿರಿನ ಮರದ ಕೋಲುಗಳನ್ನು ಕತ್ತರಿ ಆಕಾರದಲ್ಲಿ ನಿಲ್ಲಿಸಿರುತ್ತಾರೆ. ಇದು ಪಾಂಡವರ ಕಾಲದಿಂದಲೂ ನಡೆದು ಬಂದಿದೆಯಂತೆ. ಕೊಡವರು ಪಾಂಡವರ ವಂಶಸ್ತ್ತರಲ್ಲವೇ..

ಕಾವೇರಿ ತೀರ್ಥೊದ್ಬವಕ್ಕೆ ತಮಿಳುನಾಡಿನಿಂದ ಬರುವವರು ಹೆಚ್ಚು. ಈ ನಡುವೆ ದೊಡ್ಡ ಪುಷ್ಕ್ ರಣಿಯಲ್ಲಿ ದಂಪತಿಗಳು ಇಳಿದು ಹೋಗಿ ಕುಂಡಿಕೆಯ ಬಳಿ ತೀರ್ಥ ಪ್ರೋಕ್ಷಣೆ ಮಾಡಿಸಿಕೊಳುತ್ತಾರೆ.

ಕೊಡಗಿನಲ್ಲಿ ಗಿಲಿನೆಲೆ ಎಂಬ ಗಿರಿಕ್ಷತ್ರವಿದೆ. ಇಲ್ಲಿ "ಕುದುರೆ ಬೋಡು ಕಳಿ" ಹಾಗು "ಬೆತ್ತಲೆ ಕಳಿ" ಎಂಬ ಹರಕೆಗಳಿವೆ..ಕಲೆಗಳ ಪ್ರದರ್ಶನ ಕುತೂಹಲಕಾರಿಯಾಗಿ ಇರುತ್ತವೆ. ಗಿರಿಯ ಮೇಲಿರುವ ಮಹಾದೇಶವನಿಗೆ ಕಾವೇರಿಯ ತೀರ್ಥವನ್ನು ತಂದು ಅಭಿಷೇಕ ಮಾಡಲಾಗುತ್ತದೆ. ಪೂಜೆ , ಜಾತ್ರೆ , ಜನಪದ ಕಲೆಗಳೂ ನಡೆಯುತ್ತದೆ.