ಸದಸ್ಯ:Acharya ashwitha/ನನ್ನ ಪ್ರಯೋಗಪುಟ

                                              ಡಿಜಿಟಲ್ ಇಂಡಿಯಾ ಎಂದರೇನು? 
ಪ್ರಧಾನಿ ನರೇಂದ್ರ ಮೋದಿ 'ಡಿಜಿಟಲ್ ಇಂಡಿಯಾ' ಸಪ್ತಾಹಕ್ಕೆ ನವದೆಹಲಿ ಇಂದಿರಾ ಗಾಂಧಿ ಮೈದಾನದಲ್ಲಿ ಚಾಲನೆ ನೀಡಿದ್ದಾರೆ.

ಏರ್‌ಬಸ್ ಇಂಡಿಯಾ ಸಿಇಒ ಪೀಟರ್ ಗುಟ್ಸ್‌ಮೇಡ್‌, ರಿಲಯನ್ಸ್‌ನ ಮುಖೇಶ್ ಅಂಬಾನಿ, ಟಾಟಾ ಗ್ರೂಪ್‌ನ ಸೈರಸ್‌ ಮಿಸ್ಟ್ರಿ, ಭಾರ್ತಿ ಎಂಟರ್‌ಪ್ರೈಸಸ್‌ನ ಸುನೀಲ್ ಭಾರ್ತಿ ಮಿತ್ತಲ್‌, ವಿಪ್ರೋನ ಅಜೀಂ ಪ್ರೇಮ್‌ಜಿ, ಸ್ಟೆರ್‌ಲೈಟ್‌ನ ಅನಿಲ್ ಅಗರವಾಲ್‌, ಆದಿತ್ಯ ಬಿರ್ಲಾ ಗ್ರೂಪ್‌ನ ಕುಮಾರಮಂಗಲಂ ಬಿರ್ಲಾ ಸೇರಿದಂತೆ ಅನೇಕ ಕೈಗಾರಿಕೋದ್ಯಮಿಗಳು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಭಾರತವನ್ನು ಡಿಜಿಟಲೀಕರಣಗೊಳಿಸುವ ಸ್ಪಷ್ಟ ಯೋಜನೆಯನ್ನು ಪ್ರಧಾನಿ ಮೋದಿ ಪ್ರಸ್ತುತಪಡಿಸಿದರು. ಡಿಜಿಟಲ್ ಲಾಕರ್, ಇ-ಎಜುಕೇಷನ್ ಮತ್ತು ಇ-ಹೆಲ್ತ್‌ನಂಥ ವಿಭಿನ್ನ ಯೋಜೆಗಳಿಗೂ ನರೇಂದ್ರ ಮೋದಿ ಚಾಲನೆ ನೀಡಿದರು.
ಡಿಜಿಟಲ್ ಇಂಡಿಯಾ ಎಂದರೇನು? ಭಾರತದ ಪ್ರತಿಯೊಂದು ಗ್ರಾಮಗಳನ್ನು ಡಿಜಿಟಲೀಕರಣ ಮಾಡುವುದು ಯೋಜನೆಯ ಮುಖ್ಯ ಉದ್ದೇಶ ಯೋಜನೆಯ ಧ್ಯೇಯ
* ದೇಶದೆಲ್ಲೆಡೆ ಡಿಜಿಟಲ್ ಮೂಲ ಸೌಕರ್ಯ
  • ಜನರ ಇಚ್ಛೆಗೆ ಅನುಗುಣವಾದ ಪಾರದರ್ಶಕ ಆಡಳಿತ
* ಡಿಜಿಟಲ್ ಉದ್ಯಮ ಯೋಜನೆ ಏನೇನನ್ನು ಒಳಗೊಂಡಿದೆ?
* ಅತ್ಯುತ್ತಮ ದರ್ಜೆ ಹೆದ್ದಾರಿಗಳು 
  • ಅಂತಾರಾಷ್ಟ್ರೀಯ ಮಟ್ಟದ ದೂರ ಸಂಪರ್ಕ
* ಸಾರ್ವಜನಿಕ ಅಂತರ್ಜಾಲ ಸಂಪರ್ಕ ಸೇವೆ 
  • ಇ ಆಡಳಿತ, ತಂತ್ರಜ್ಞಾನದ ಮೂಲಕ ಆಡಳಿತ
  • ಇ ಕ್ರಾಂತಿ, ಎಲೆಕ್ಟ್ರಾನಿಕ್ ಮಾಧ್ಯಮದ ಮೂಲಕ ಎಲ್ಲ ಬಗೆಯ ಸಂಪರ್ಕ
* ಎಲ್ಲರಿಗೂ ಸಕಲ ಮಾಹಿತಿ 
  • ಎಲೆಕ್ಟ್ರಾನಿಕ್ ಉತ್ಪನ್ನ ತಯಾರಿಕೆಗೆ ವಿಶೇಷ ಒತ್ತು
* ಮಳೆ ನೀರು ಕೊಯ್ಲು ತಯೋಜನೆಗಳು 2019ಕ್ಕೆ ಡಿಜಿಟಲ್ ಎಫೆಕ್ಟ್
* ಎಲ್ಲ 2.5 ಲಕ್ಷ ಹಳ್ಳಿಗಳಲ್ಲಿ ಬ್ರಾಡ್ ಬ್ಯಾಂಡ್ ಸಂಪರ್ಕ
* ವಿದೇಶಗಳಿಂದ ಎಲೆಕ್ಟ್ರಾನಿಕ್ ವಸ್ತು ಆಮದು ಇಲ್ಲ 
  • 4 ಲಕ್ಷ ಸಾರ್ವಜನಿಕ ಅಂತರ್ಜಾಲ ಸಂಪರ್ಕ ಘಟಕ
  • ಶಾಲೆ, ಕಾಲೇಜು, ವಿಶ್ವವಿದ್ಯಾಲಯಗಳಿಗೆ ವೈ ಫೈ ಸಂಪರ್ಕ
  • ಆರೋಗ್ಯ ಶಿಕ್ಷಣ, ಬ್ಯಾಂಕಿಂಗ್ ಕ್ಷೇತ್ರಗಳು ಸಂಪೂರ್ಣ ಡಿಜಿಟಲೀಕರಣ