ಸದಸ್ಯ:Abhishek8762/ನನ್ನ ಪ್ರಯೋಗಪುಟ

                                                                            ಹಣದ ಅಪಮೌಲಿಕರಣ

ರೆನ್ಸಿ ಮೌಲ್ಯವು ಆ ದೇಶದ ಆರ್ಥಿಕತೆಗೆ ಹಿಡಿದ ಕೈಗನ್ನಡಿಯಂತೆ. ಅದು ದೇಶದ ಆರ್ಥಿಕ ಆಡಳಿತದ ಪರಿಣಾಮಗಳನ್ನು ಯಥಾವ ತ್ತಾಗಿ ಬಿಂಬಿಸುತ್ತದೆ. ಈ ಹಿಂದೆ ವಿದೇಶಗಳ ವಿಮಾನ ನಿಲ್ದಾಣಗಳಲ್ಲಿ ಮತ್ತು ಇತರ ವಿದೇಶಿ ವಿನಿಮಯ ಕೇಂದ್ರಗಳಲ್ಲಿ ಭಾರತದ ಕರೆನ್ಸಿಯಾದ ರೂಪಾಯಿ ಕಾಣಸಿಗುತ್ತಲೇ ಇರಲಿಲ್ಲ. ಕಳೆದ ಕೆಲವು ವರ್ಷಗಳಿಂದ, ಕೊಡು-ಕೊಳ್ಳುವಿಕೆಯಲ್ಲಿ ಅತ್ಯಂತ ಹೆಚ್ಚು ವ್ಯತ್ಯಾಸದೊಂದಿಗೆ (ಇಂಡೋನೇಶ್ಯದ ಕರೆನ್ಸಿಯೊಂದಿಗೆ) ಏಷ್ಯಾದ ಐದಾರು ದೇಶಗಳೊಂದಿಗೆ ಇದು ಕಾಣಸಿಗುತ್ತಿದೆ ಎಂಬುದೇ ಒಂದು ವಿಶೇಷ. ಆರ್ಥಿಕತೆಯಲ್ಲಿ ಅಳಿಯುತ್ತಿರುವ ರಷ್ಯಾವನ್ನು ಬಿಟ್ಟರೆ, ವಿಶ್ವದಲ್ಲೇ ಎರಡನೇ ಸ್ಥಾನದಲ್ಲಿರುವ ಚೀನದೊಂದಿಗೆ ಇಂದು ಭಾರತದ ಕರೆನ್ಸಿ ಪೈಪೋಟಿಗೆ ಮೊದಲಿಟ್ಟಿದೆ ಎಂಬುದು ಇನ್ನೊಂದು ಸಮಾಧಾನಕರ ವಿಷಯ. ಇಂತಹ ಪರಿಸ್ಥಿತಿಯಲ್ಲಿ, ಚೀನದ ಯುವಾನ್‌ ಅಪಮೌಲ್ಯದೊಂದಿಗೆ ಭಾರತವೂ ತನ್ನ ಕರೆನ್ಸಿಯನ್ನು ಅಪಮೌಲ್ಯಗೊಳಿಸಬೇಕಿತ್ತೇ ಎಂಬುದು ಚರ್ಚೆಯ ವಿಷಯ.