ಕಾತರಿನ್ ಬ್ರಾಡ್ಲಿ

ಮೈಕಲ್ ಫಿಲ್ಡ್ ಎಂಬ ಕಾವ್ಯ ನಾಮದ ಕೆಳಗೆ, ಕಾತರಿನ್ ಹಾರಿಸ್ ಬ್ರಾಡ್ಲಿ ಹಾಗು ಅವಳ ಅಕ್ಕನ ಮಗಳಾದ ಇಡಿತ್ ಎಮ್ಮಾ ಕೂಪರ್ ಒಟ್ಟಿಗೆ ೮ ಕವನ ಸಂಕಲನ ಹಾಗು ೨೭ ನಾಟಕಗಳನ್ನು ಪ್ರಕಟಿಸಿದ್ದಾರೆ.[೧] ೧೯ ನೇ ಶತಮಾನದ ಬ್ರಿಟನಲ್ಲಿ ಪ್ರಾಮುಖ್ಯತೆ ಪಡೆದ ಈ ದಂಪತಿ, ಮೈಕಲ್ ಫೀಲ್ಡ್ಸ್ ಎಂಬ ಹುಡುಗನ ಹೆಸರು ಉಪಯೋಗಿಸಲು ಕಾರಣ ಆಗಿನ ಸಮಾಜದಲ್ಲಿ ತಾವು ಬರೆಯುತ್ತಿದ್ದ ಕಾವ್ಯಗಳು ' ಹೆಂಗಸರ ಬಾಯಲ್ಲಿ' ಕೇಳಲಾರದಂತಹುದು ಎಂಬ ಅಭಿಪ್ರಾಯ ಪಡೆದಿದ್ದಾಗಿ ಕಾತರಿನ್ ತಮ್ಮ ಗುರು ಹಾಗು ಸ್ನೇಹಿತರಾದ ರಾಬರ್ಟ್ ಬ್ರವ್ನಿಂಗ್ಗೆ ಬರೆದ ಒಂದು ಪತ್ರದಲ್ಲಿ ಹೇಳುತ್ತಾರೆ. ಕಾತರಿನ್ ಮತ್ತು ಇಡಿತ್ ತಮ್ಮ ಕಾವ್ಯನಾಮವನ್ನು ಗುಟ್ಟಾಗಿ ಇಡಲು ಪ್ರಯತ್ನಿಸಿದರೂ, ತಮ್ಮ ಸ್ನೇಹಿತರಾದ ರಾಬರ್ಟ್ ಬ್ರವ್ನಿಂಗ್ ನಿಂದ ಗುಟ್ಟು ಹೊರ ಜನಾಂಗಕ್ಕೆ ತಿಳಿಯಿತು.[೨]

ಇಡಿತ್ ಕೂಪರ್

ಜನನ, ಜೀವನ, & ಸಾವು

ಬದಲಾಯಿಸಿ

ಕಾತರಿನ್ ಬ್ರಾಡ್ಲಿ ರವರು ಅಕ್ಟೊಬರ್ ೨೭, ೧೮೪೬ ರಲ್ಲಿ ಇಂಗ್ಲನ್ದ್ ನ ಬಿರ್ಮಿಂಗ್ ಹ್ಯಾಮ್ ನಲ್ಲಿ ಚಾರ್ಲ್ಸ್ ಬ್ರಾಡ್ಲಿ ಎಂಬ ತಂಬಾಕು ತಯಾರಿಕನಿಗೆ ಜನಿಸಿದಳು. ಅವರು 'ಕಾಲೆಜ್ ದೆ ಫ಼್ರಾನ್ಸ್' ಹಾಗು 'ನ್ಯು ನ್ಹಮ್ ಕಾಲೆಜ್' ನಲ್ಲಿ ಓದಿದರು.

ಬ್ರಾಡ್ಲಿ ಯ ಅಕ್ಕ, ಎಮ್ಮಾ, ಜೆಮ್ಸ್ ಕೂಪರ್ ನ ೧೮೬೦ ರಲ್ಲಿ ಮದುವೆಯಾದಳು. ಈ ದಂಪತಿಯ ಮೊದಲ ಮಗಳು ಜನ್ವರಿ ೧೨, ೧೮೬೨ ರಲ್ಲಿ ಜನಿಸಿದಳು. ತನ್ನ ಎರಡನೆ ಮಗಳ ಜನ್ಮದ ನಂತರ ಎಮ್ಮಾ ಅಂಗವಿಕಲಿ ಯಾದುದ ಕಾರಣ, ಕಾತರಿನ್ ತನ್ನ ಅಕ್ಕನ ಮಗಳನ್ನು ದತ್ತುಗೆ ತೆಗೆದುಕೊಂಡಳು.

೧೮೭೦ ಸುಮಾರರಿಗೆ, ಕಾತರಿನ್ ಮತ್ತು ಇಡಿತ್ ಒಟ್ಟಿಗೆ ಸಹ-ದಂಪತಿ ಹಾಗು ಸಹ-ಲೇಖಕರಾಗಿ ಜೀವಿಸಲು ಪ್ರಾರಂಭಿಸಿದರು. ಮೈಕಲ್ ಫಿಲ್ಡ್ಸ್ ಎಂಬ ಕಾವ್ಯನಾಮದಲ್ಲಿ ಇವರ ಮೊದಲ ಪುಸ್ತಕ "ಕಲೈರ್ಹೊ ಅಂಡ್ ಫ಼ೇರ್ ರೊಸಮಂಡ್", ೧೮೮೪.[೩]

ಈ ಸಮಯದ ಸುಮಾರಿಗೆ, ಮೈಕಲ್ ಫೀಲ್ಡ್ಸ್ ಸಾಹಿತ್ಯ ಲೋಕದಲ್ಲಿ ಖ್ಯಾತ ಕಂಡರು; ತಮ್ಮ ಸಹ ಲೇಖಕರ ಜೊತೆಯಿದ್ದ ಸಂಬಂಧ ಬೆಳೆಸಲು ಪ್ರಾರಂಭಿಸಿ ದರು; ಪ್ರಮುಖವಾಗಿ ಕಲೆಗಾರರಾದ ಚಾರ್ಲ್ಸ್ ರಿಕೆಟ್ಸ್ ಮತ್ತು ಚಾರ್ಲ್ಸ್ ಶಾನನ್. ದುರಾದೃಷ್ಟಕರವಾಗಿ, ಸಾಹಿತ್ಯ ಲೊಕದಲ್ಲಿ ಪರಿಚಿತರಿದ್ದರು ಸಹ, ತಮ್ಮ ಮುಂಚಿತ ನಿರ್ಣಾಯಕ ಯಶಸ್ಸನ್ನು ನಂತರ ಕಾಣಲಿಲ್ಲ. ತಮ್ಮ ಸಾಹಿತ್ಯ ಜೀವನವಲ್ಲದೆ, ಬೆರೆ ಕಾರ್ಯಕ್ಕೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದರು. ಇವರು ಬಹಳಷ್ಟು ಸೌಂದರ್ಯ ಪ್ರ‍ಜ್ಱೆ ಆಂದೊಲನದ ವ್ಯಕ್ತಿಗಳ ಪರಿಚೆಯವನ್ನು ಪಡೆದಿದ್ದರು, ಇದರಲ್ಲಿ ವಾಲ್ಟರ್ ಪೆಟರ್, ವೆರ್ನನ್ ಲೀ, ಜೆ. ಎ ಸಿಮಂಡ್ಸ್ ಮುಖ್ಯವಾದವರು.

ತಮ್ಮ ಪರಸ್ಪರ ಪ್ರೀತಿಯನ್ನು ಕವಿತೆಗಳ ಮೂಲಕ ಸಂವಹಿಸುತಿದ್ದರು. ಮೈಕಲ್ ಫಿಲ್ಡ್ ಎಂಬ ಹೆಸರು ತಮ್ಮ ಪರಸ್ಪರ ಬಿಡಿಸಲಾರದ ಬೆಸುಗೆಯನ್ನು ಘೋಶಿಸುವ ಮಾರ್ಗವಾಗಿದೆ.

ಇವರು ಪ್ರಾಣಿ ಪ್ರಿಯರಾಗಿದ್ದು, ತಮ್ಮ ನಾಯಿಯಾದ ವಿಮ್ ಚೌ ನ ಹೆಸರಲ್ಲಿ ಒಂದು ಕವನ ಸಂಕಲನವನ್ನು ಬರೆದಿದ್ದಾರೆ.

ಇಡಿತ್ ಕ್ಯಾನ್ಸರ್ ನಿಂದ ೧೯೧೩ ರಲ್ಲಿ ನಿಧನರಾದರು; ಕೇವಲ ಒಂದು ವರ್ಷದ ನಂತರದೊಳಗೆ ಕಾತರಿನ್ ಕೂಡ ಪರ ಲೋಕ ತಲುಪಿದರು.[೪]

ಕೃತಿಗಳು

ಬದಲಾಯಿಸಿ
  • ದ ನ್ಯು ಮಿನ್ಸಿಂಗರ್ ಅಂಡ್ ಅದರ್ ಪೊಮ್ಸ್
  • ಕಲೈರ್ಹೊ ಅಂಡ್ ಫ಼ೇರ್ ರೊಸಮಂಡ್
  • ದ ಫಾದರ್ಸ್ ಟ್ರಾಡಜಿ
  • ದ ಟ್ರಾಜಿಕ್ ಮೆರಿ
  • ಸೈಟ್ ಅಂಡ್ ಸಾಂಗ್
  • ಅಟಿಲಾ, ಮೈ ಅಟಿಲಾ [೫]

ಉಲ್ಲೇಖಗಳು

ಬದಲಾಯಿಸಿ