ಸದಸ್ಯ:A j mahalaxmi/ನನ್ನ ಪ್ರಯೋಗಪುಟ3

ಪಾರ್ಶ್ವನಾಥ ಸ್ವಾಮಿ ಬೆಟ್ಟದ ಬಸದಿ


ಸ್ಥಳ ಬದಲಾಯಿಸಿ

ಕಾರ್ಕಳದ ಶ್ರೀ ಬಾಹುಬಲಿ ಸ್ವಾಮಿಯ ಬೆಟ್ಟದ ಮೇಲಿರುವ ಪ್ರಾಂಗಣಕ್ಕೆ ಪ್ರವೇಶಿಸುವ ದ್ವಾರದ ಬಳಿ ಇರುವ ಬಲಗಡೆಯಗೋಪುರದಲ್ಲಿ ಈ ಚಿಕ್ಕ ಬಸದಿ ಇದೆ.

ಆರಾದನೆಯ ದ್ವೆವ ಬದಲಾಯಿಸಿ

ಇಲ್ಲಿಆರಾಧಿಸಲ್ಪಡುವ ಶ್ರೀ ಪಾರ್ಶ್ವನಾಥ ಸ್ವಾಮಿ.

ಶಿಲವಿನ್ಯಾಸ ಬದಲಾಯಿಸಿ

ಈ ಮೂರ್ತಿಯು ಕರಿಶಿಲೆಯಿಂದ ಮಾಡಲ್ಪಟ್ಟಿದ್ದು ಖಡ್ಗಾಸನ ಭಂಗಿಯಲ್ಲಿದೆ. ಚಿಕ್ಕದಾಗಿರುವ ಒಂದು ಪದ್ಮಪೀಠದ ಮೇಲೆ ಸ್ವಾಮಿ ನಿಂತುಕೊಡಿದ್ದು ಕಾಲಿನ ಬಳಿಯಲ್ಲಿ ಶ್ರೀ ಪದ್ಮಾವತಿದೇವಿ ಮತ್ತು ಧರಣೇಂದ್ರ ಯಕ್ಷರು ನಿಂತುಕೊಂಡಿರುವ ಬಿಂಬಗಳಿವೆ. ಸ್ವಾಮಿಯತಲೆಯ ಮೇಲ್ಗಡೆ ಏಳು ಹೆಡೆಗಳ ನಾಗಫಣವಿದೆ. ಸುಮಾರು ೪ ಅಡಿ ಎತ್ತರ ಇರುವ ಈ ಬಿಂಬಕ್ಕೆ ಶಿಲೆಯಿಂದ ಮಾಡಲ್ಪಟ್ಟ ಪ್ರಭಾವಳಿಯು ಅಭೇದ್ಯವಾಗಿ ಇದೆ. ಇದರಲ್ಲಿ ಸುಂದರವಾದ ಮಕರ ತೋರಣದ ಅಲಂಕಾರವಿದೆ. ನಾಗಫಣದ ಮೇಲ್ಗಡೆ  ಕೀರ್ತಿ ಮುಖವಿದೆ. ಪ್ರಸನ್ನ ಮುಖಮುದ್ರೆಯ ಸ್ವಾಮಿಯ ಚೆಂದವನ್ನು ಈ ಅಲಂಕೃತ ಪ್ರಭಅವಳಿಯು  ಇಮ್ಮಡಿಗೊಳಿಸಿದೆ. ಸ್ವಾಮಿಯ ಎರಡೂ ಬದಿಗಳಲ್ಲಿ ಅಂಕಣಗಳನ್ನು ಹೊಂದಿದ ಕಮಬದಂತಹ ರಚನೆಗಳಿವೆ. ಇವು ಈ ಜಿನಬಿಂಬವನ್ನು ವಿಜಯನಗರ ಸಾಮ್ರಾಜ್ಯದ ಕಾಲಕ್ಕೆ ಸೇರಿದ್ದೆಂಬುದನ್ನು ಸ್ಪಷ್ಟಪಡಿಸುತ್ತಿದೆ.

ಒಳ ವಿನ್ಯಾಸ ಬದಲಾಯಿಸಿ

ಗರ್ಭಗೃಹದ ಮುಚ್ಚಿಗೆಯು ಮಧ್ಯದಲ್ಲಿ ಚೌಕಾಕಾರವಾಗಿದ್ದು ಶಿಲೆಯ ಅಧೋಮುಖ ಕಮಲವನ್ನು ಹೊಂದಿದೆ. ಈ ಗರ್ಭಗೃಹದೊಳಗೆ ಹೆಚ್ಚಿನ ಯಾವುದೇ ಮೂರ್ತಿಗಳಿಲ್ಲ. ಗರ್ಭಗೃಹದಿಂದ ಹೊರಗೆ ಬರುವಾಗ ಸಿಗುವ ಶಿಲೆಯ ದ್ವಾರ ಬಂಧವು ಹಲವಾರು ಅಲಂಕೃತ ಕೆತ್ತನೆಗಳನ್ನೊಳ ಗೊಂಡಿದೆ. ಇದರ ಮೇಲ್ಗಡೆ ಮಧ್ಯದಲ್ಲಿಒಂದು ಪರ್ಯಂಕಾಸನದ ಜಿನಬಿಂಬದ ಕೆತ್ತನೆ ಇದೆ. ಎದುರಿನ ಜಗಲಿಯ ಕಂಬಗಳು ಪಟ್ಟಕಗಳನ್ನು ಹೊಂದಿಕೊಂಡು ವಿಜಯನಗರ ಕಾಲದ ಕಂಬಗಳನ್ನು ನೆನಪಿಸುವಂತಿವೆ. ಇವುಗಳ ಮೇಲ್ಗಡೆ ಬೋದಿಗೆಗಳಿದ್ಚು ಅವು ಶಿಲೆಯ ಮೇಲ್ಛಾವಣೀಯನ್ನು ಒಳಗಡೆ ಅಧೋಮುಕ ಕಮಲಗಳಿದ್ದು ಇವು ಈ ಭಾಗದ ಗೋಪುರವನ್ನುಪ್ರಾರ್ಥನಾ ಮಂಟಪವನ್ನಾಗಿ ರೂಪಿಸಿವೆ. ಬಸದಿಗೆ ಮೇಗಿನ ನೆಲೆಯಿಲ್ಲ.