ಸದಸ್ಯ:A j mahalaxmi/ನನ್ನ ಪ್ರಯೋಗಪುಟ1
ಪಾರ್ಶ್ವನಾಥ ಸ್ವಾಮಿ, ಪದ್ಮಾವತಿ ಅಮ್ಮನವರ ಬೆಟ್ಟದ ಬಸದಿ
ಸ್ಥಳ
ಬದಲಾಯಿಸಿಶ್ರೀ ಪಾರ್ಶ್ವನಾಥ ಸ್ವಾಮಿ ಮತ್ತು ಪದ್ಮಾವತಿ ಅಮ್ಮನವರ ಬಸದಿ ಕಾರ್ಕಳದಲ್ಲೇ ಅತ್ಯಂತ ಪ್ರಸಿದ್ಧವಾದ ದೇವಿ ಮಂದಿರವಾಗಿದೆ ಎನ್ನಬಹುದು.
ಆರಾದನೆಯ ದ್ವೆವ
ಬದಲಾಯಿಸಿಇಲ್ಲಿ ಪೂಜಿಸಲ್ಪಡುವ ಮೂಲ ನಾಯಕ ಭಗವಾನ್ ಪಾರ್ಶ್ವನಾಥ ಸ್ವಾಮಿ.
ಮಾರ್ಗ
ಬದಲಾಯಿಸಿಕಾರ್ಕಳದ ಭಗವಾನ್ ಬಾಹುಬಲಿಯ ಏಕಶಿಲಾ ವಿಗ್ರಹದಿಂದ ಅಲ್ಲಿಗೆ ಹೋಗುವ ದಾರಿಯ ಬದಿಯಲ್ಲಿದೆ. ವಿರಾಜಮಾನವಾಗುತ್ತದೆ. ಇದು ಬಸದಿಯಿಂದ ೨೦೦ ಮೀಟರ್ ದೂರದಲ್ಲಿದೆ.
ಇತಿಹಾಸ
ಬದಲಾಯಿಸಿಈ ಬಸದಿಯನ್ನು ರೆಂಜಾಳ ಮನೆತನದವರು ಸಾಮಾನ್ಯ ೩೦೦ ವರ್ಷಗಳ ಹಿಂದೆ ಕಟ್ಟಿಸಿದರು ಎನ್ನಲಾಗುತ್ತಿದೆ. ಜೀರ್ಣೋದ್ಧಾರವಾಗಿ ೩೦ ವರ್ಷವಾಯಿತು. ಮಾತೆ ಪದ್ಮಾವತಿ ಅಮ್ಮನವರ ಬಸದಿಯಲ್ಲಿ ವಿಶೇಷವಾದ ಕಾರಣ ಶಕ್ತಿಯಿದೆ. ಪ್ರತಿ ಶುಕ್ರವಾರವೂ ಇಲ್ಲಿ ಪಾರ್ಶ್ವನಾಥ ಸ್ವಾಮಿಗೆ ವಿಶೇಷ ಪೂಜೆ ನಡೆಯುತ್ತದೆ. ನವರಾತ್ರಿಯಲ್ಲಿ ೧೦ ದಿನದ ವಿಶೇಷ ಪೂಜೆ ನಡೆಯುತ್ತದೆ. ಈ ಬಸದಿಗೆ ಮೇಗಿನ ನೆಲೆ ಇಲ್ಲ. ಇಲ್ಲಿ ೨೪ ತೀರ್ಥಂಕರರ ಶಿಲಾಮೂರ್ತಿಗಳಿವೆ. ಈ ಬಸದಿಯ ಎದುರು ಎದುರು ಮಾನಸ್ತಂಭವಿಲ್ಲ. ಬಸದಿಯ ಬಳಿಯಲ್ಲಿ ಒಂದು ಪಾರಿಜಾತ ಹೂವಿನ ಗಿಡ ಹಾಗೂ ಅಂಗಳದಲ್ಲಿ ದಾಸವಾಳ, ಗುಲಾಬಿ ಮುಂತಾದ ಹೂವಿನ ಗಿಡಗಳಿವೆ.</ref>[೧]
ಒಳಾಂಗಣ ಶಿಲವಿನ್ಯಾಸ
ಬದಲಾಯಿಸಿಬಸದಿಯನ್ನು ಪ್ರವೇಶಿಸುವಾಗ ಸಿಗುವ ಎಡ ಬಲ ಬದಿಗಳಲ್ಲಿರುವ ಗೋಪುರವನ್ನು ಪ್ರವಾಸಿಗರು ಕುಳಿತುಕೊಳ್ಳಲು ಉಪಯೋಗಿಸುತ್ತಾರೆ. ಇಲ್ಲಿ ಬಸದಿಯ ಕಾರ್ಯಾಲಯವಿಲ್ಲ. ಪ್ರಾರ್ಥನಾ ಮಂಟಪದಲ್ಲಿ ಜಯಘಂಟೆ ಜಾಗಟೆಗಳನ್ನು ತೂಗಿ ಹಾಕಲಾಗಿದೆ. ಬಸದಿಯ ಎದುರಿನ ಪ್ರಾರ್ಥನಾ ಮಂಟಪಕ್ಕೆ ಹತ್ತುವಲ್ಲಿ ಗೋಡೆಯ ಮೇಲೆ ಪೈಂಟ್‌ನಿಂದ ಮಾಡಿದ ದ್ವಾರಪಾಲಕರ ಚಿತ್ರಗಳಿವೆ. ಈ ಬಸದಿಯಲ್ಲಿ ಗರ್ಭಗುಡಿ, ತೀರ್ಥಂಕರ ಮಂಟಪ ಹಾಗೂ ಘಂಟಾ ಮಂಟಪವಿದೆ. ಇದರಲ್ಲಿ ಗಂಧಕುಟಿಯಿದ್ದು ಒಳಗೆ ಮಾತೆ ಪದ್ಮಾವತಿ ದೇವಿಯ ಮೂರ್ತಿಗೆ ಸೀರೆ ಉಡಿಸಿ, ಬಳೆಗಳನ್ನು ಹಾಕಿ, ಹೂವಿನಿಂದ ಅಲಂಕಾರ ಮಾಡಿ ಪೂಜೆ ಮಾಡಲಾಗುತ್ತದೆ. ಈ ಅಮ್ಮನವರ ಮೂರ್ತಿ ಉತ್ತರಕ್ಕೆ ಮುಖ ಮಾಡಿಕೊಂಡಿದೆ. ಅಮ್ಮನವರ ಕಾಲಿನ ಬಳಿಯಲ್ಲಿ ಕುಕ್ಕುಟ ಸರ್ಪವಿದೆ. ಪದ್ಮಾವತಿ ಅಮ್ಮನವರ ಬಸದಿಯಲ್ಲಿ ಹೂ ಹಾಕಿ ನೋಡುವ ಕ್ರಮ ತುಂಬಾ ಪ್ರಸಿದ್ಧಿಯನ್ನು ಪಡೆದಿದೆ. ಈ ಬಸದಿಯ ಎದುರುಗಡೆ ಇನ್ನೊಂದು ಬೆಟ್ಟದಲ್ಲಿ ಚತುರ್ಮುಖ ಬಸದಿ ಇದೆ. ಇದು ಸುಮಾರು ೩೦೦ ಮೀಟರ್ ದೂರದಲ್ಲಿದೆ. ಇದರ ಹಿಂಭಾಗದಲ್ಲಿ ಒಂದು ಕೆರೆಯಿದೆ. ಇದು ತಾವರೆ ಕೆರೆಯಂದೇ ಪ್ರಸಿದ್ಧವಾಗಿದೆ. ಈ ಕೆರೆಯ ವಿಶೇಷತೆಯೆಂದರೆ ಇಲ್ಲಿ ಅರಳುವುದು ಶ್ವೇತಕಮಲ. ಪದ್ಮಾವತಿದೇವಿಯ ಪ್ರತಿರೂಪವಾಗಿ ಶ್ವೇತಕಮಲವು ರೂಪುಗೊಂಡಿತು ಎಂಬುದು ಇಲ್ಲಿಯ ಪ್ರತೀತಿ. ಈ ಶ್ವೇತ ಕಮಲವು ಯಾವುದೋ ಕಾರಣದಿಂದ ೩೫ ವರ್ಷ ಇಲ್ಲಿ ಆಗದೇ ಇತ್ತು. ನಂತರ ಈ ಬಸದಿಯ ಜೀರ್ಣೋದ್ಧಾರ ಆಗುವಾಗ ಪದ್ಮಾವತಿ ದೇವಿಯ ಅತಿಶಯದಿಂದ ಹೂ ಅರಳಿತು. ಈ ಶ್ವೇತ ಕಮಲದ ಆಯುಷ್ಯದ ಸಂಕೇತವೇ ಪದ್ಮಾವತಿ ಅಮ್ಮನವರ ಕಾರಣಿಕ ಪ್ರಾಮುಖ್ಯತೆ. ಈ ಬಸದಿಯ ಸ್ಥಾಪಕ ಜಿನದೇವ ಎಂಬವನು. ಇಲ್ಲಿರುವ ಬರವಣ ಗೆಗಳೆಲ್ಲವೂ ಪ್ರಾಚೀನ ಕಾಲದ್ದಾದರಿಂದ ನಶಿಸಿ ಹೋಗಿವೆ. ಈ ದೇವಿಯ ಮೂರ್ತಿಯ ಅಮೃತ ಶಿಲೆಯದ್ದಾಗಿದ್ದು, ೧೧/೨ ಅಡಿ ಎತ್ತರವನ್ನು ಹೊಂದಿದೆ. ರ‍್ಯಂಕಾಸನ ಭಂಗಿಯಲ್ಲಿದೆ.
ಪೂಜಾ ವಿಧಾನ
ಬದಲಾಯಿಸಿಮಾತೆಗೆ ದಿನವೂ ಕ್ಷೀರಾಭಿಷೇಕ, ಪಂಚಾಮೃತಾಭಿಷೇಕ ಹಾಗೂ ಜಲಾಭಿಷೇಕವನ್ನು ಮಾಡಲಾಗುತ್ತದೆ. ವಿಶೇಷವಾಗಿ ಪದ್ಮಾವತಿಗೆ ಷೋಢಶೋಪಾಚಾರ ಪೂಜೆಯನ್ನು ನಡೆಸಲಾಗುತ್ತದೆ. ಬಸದಿಯಲ್ಲಿ ನಾಗರ ಪಂಚಮಿ, ದಶಲಕ್ಷಣ ಪರ್ವ, ಜೀವದಯಾಷ್ಟಮಿ ಎಂಬ ವೃತಾಚರಣೆಗಳನ್ನು ನಡೆಸಲಾಗುತ್ತದೆ. ಬಸದಿಯ ಅಂಗಳದ ಎಡ ಮೂಲೆಯಲ್ಲಿ ಕ್ಷೇತ್ರಪಾಲನ ಸನ್ನಿಧಿ ಇದೆ. ಇಲ್ಲಿರುವ ಆಂಜನೇಯನ ಮೂರ್ತಿ ತ್ರಿಶೂಲ, ನಾಗರಕಲ್ಲು ಇವೆಲ್ಲವನ್ನೂ ಒಂದು ಪೀಠದ ಮೇಲೆ ಪ್ರತಿಷ್ಠಾಪಿಸಲಾಗಿದೆ. ಬಸದಿಯ ಸುತ್ತಲೂ ಪ್ರಾಕಾರ ಗೋಡೆ ಇದ್ದು. ಇದನ್ನು ಕರ್ಗಲ್ಲಿನಿಂದ ನಿರ್ಮಿಸಲಾಗಿದೆ. ಈ ಬಸದಿಗೆ ಆಚಾರ್ಯ ತರುಣ ಸಾಗರರು ವಿದ್ಯಾಸಾಗರರು ಹಾಗೂ ಅನೇಕ ಮುನಿಗಳು, ಭಟ್ಟಾರಕರು ಮತ್ತು ಗಣ್ಯ ವ್ಯಕ್ತಿಗಳು ಭೇಟಿ ನೀಡಿದ್ದಾರೆ. ಈ ಬಸದಿಗೆ ನೀರಿನ ಅನೂಕೂಲತೆಯಿದೆ. ಹೀಗೆ ಎಲ್ಲಾ ವಿಶೇಷತೆಯನ್ನೊಳಗೊಂಡ ಶ್ರೀ ಪದ್ಮಾವತಿ ಅಮ್ಮನವರ ದೇವಸ್ಥಾನವು ತುಂಬಾ ಹೆಸರುವಾಸಿಯಾಗಿದೆ. ಕಾರ್ಕಳದಲ್ಲೇ ತುಂಬಾ ಪ್ರಾಮುಖ್ಯತೆಯನ್ನು ಹೊಂದಿ ಜನಾದರಣೆಯನ್ನು ಪಡೆದುಕೊಂಡಿದೆ.
ಉಲ್ಲೇಖಗಳು
ಬದಲಾಯಿಸಿ- ↑ ಶೆಣೈ, ಉಮಾನಾಥ ವೈ. ಕರಾವಳಿ ಕರ್ನಾಟಕ ಜಿನ ಮಂದಿರಗಳ ದರ್ಶನ.