ಸದಸ್ಯ:2341212AnushikaSJ/ನನ್ನ ಪ್ರಯೋಗಪುಟ

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಅನುಷಿಕ ಎಸ್.ಜೆ. ಪ್ರಸ್ತುತ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ)ಯಲ್ಲಿ, ಎರಡನೇ ವರ್ಷದ ಬಿಎಸ್ಸಿ (ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ)ದಲ್ಲಿ ವ್ಯಾಸಂಗ ಮಾಡುತ್ತಿದ್ದೇನೆ.ನನ್ನ ತಂದೆಯ ಹೆಸರು ಶ್ರಿನಿವಾಸ್.ನನ್ನ ತಾಯಿಯ ಹೆಸರು ಜಯಂತಿ.ನನಗೆ ಒಬ್ಬ ತಮ್ಮ ಇದಾನೆ.ಅವನ ಹೆಸರು ಆಕಾರ್ಶ್ ಎಸ್.ಜೆ.ನಾನು ಹುಟ್ಟಿದು ಬೆಳದಿದ್ದು ಎಲ್ಲ ಬೆಂಗಳೂರು,ಕರ್ನಾಟಕದಲ್ಲಿ. ನನ್ನ ತಂದೆ-ತಾಯಿ ಮೂಲತಹ ಬೆಂಗಳೂರಿನವರು. ನನ್ನ ಮಾತೃಭಾಷೆ ಕನ್ನಡ.ನಾನು ನನ್ನ ಪ್ರಾಥಮಿಕ ಶಿಕ್ಷಣ ಹಾಗು ಪ್ರೌಢ ಶಾಲಾ ಶಿಕ್ಷಣವನ್ನು, ನನ್ನ ಮನೆಯ ಸಮೀಪದಲ್ಲಿರುವ ಜಿ.ವಿ.ಎಸ್. ಶಾಲೆಯಲ್ಲಿ ಮುಗಿಸಿದ ನಂತರ, ನನ್ನ ಉನ್ನತ ಪ್ರೌಢ ಶಿಕ್ಷಣವನ್ನು ಅಂದರೆ ನನ್ನ ಪ್ರಥಮ ಹಾಗು ದ್ವೀತಿಯ ಪಿ.ಯು.ಸಿ ಯನ್ನು ಕೋರಮಂಗಲದಲ್ಲಿರುವ ಜ್ಯೋತಿ ನಿವಾಸ್ ಪೂರ್ವ ವಿಶ್ವವಿದ್ಯಾಲಯದಲ್ಲಿ ಮುಗಿಸಿದೆ. ನಾನು ಹನ್ನೆರಡು ವರ್ಷ ಓದಿದ, ಪ್ರಾಥಮಿಕ ಪ್ರೌಢ ಶಿಕ್ಷಣ ಮುಗಿಸಿದ ಶಾಲೆ ಸಹ ಶಿಕ್ಷಣ ವ್ಯವಸ್ಥೆಯನ್ನು ಪಾಲಿಸುತ್ತಿದೆ ಹಾಗು ನಾನು ಎರಡು ವರ್ಷ ಓದಿದ ಪೂರ್ವ ವಿಶ್ವವಿದ್ಯಾಲಯವು ಕೇವಲ ಹುಡುಗಿಯರ ಕಾಲೇಜಾಗಿದ್ದು, ನನಗೆ ಎರಡು ವಾತಾವರಣದ ಸಮತೋಲಿತ ಅನುಭವವಾಯಿತು.ನನ್ನ ಶಾಲಾ ಸಮಯದಲ್ಲಿ, ಓದುವುದರಲ್ಲಿ ಮುಂದಿದೆ. ನಾನು ಶಾಲೆಯಲ್ಲಿ ಖೊ-ಖೋ, ಕಬ್ಬಡಿ ಮುಂತಾದ ಕ್ರೀಡಾ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿದ್ದೆ.ನನ್ನ ಶಾಲಾ ವಾರ್ಷಿಕೋತ್ಸವ ಸಂದರ್ಭದಲ್ಲಿ, ಪ್ರತಿ ವರ್ಷ ನನ್ನ ಸ್ನೇಹಿತರೊಂದಿಗೆ ನೃತ್ಯದಲ್ಲಿ ಭಾಗವಹಿಸುತ್ತಿದ್ದೆ.ಪ್ರತಿ ವರ್ಷ,ನನ್ನ ಶಾಲೆಯು ಒಂದು ದಿನ,ಮೂರು ದಿನಗಳ ಕಾಲಕ್ಕೆ ತುಂಬಾ ಸುಂದರವಾದ ಜಾಗಗಳಾದ ಮಡಿಕೇರಿ, ಜೋಗ ಜಲಪಾತ,ತಲಕಾವೇರಿ ಮುಂತಾದ ಜಾಗಗಳಿಗೆ ಪ್ರವಾಸಕ್ಕೆ ಕರೆದುಕೊಂಡು ಹೋಗುತ್ತಿದ್ದರು.ಆದರೆ ನನ್ನ ತಂದೆ-ತಾಯಿ,ನನ್ನ ಬಗ್ಗೆ ಅತಿಯಾದ ಕಾಳಜಿವಹಿಸುತ್ತಿದ್ದರಿಂದ,ನನ್ನನು ಪ್ರವಾಸಕ್ಕೆ ಕಳಿಸುತಿರಲಿಲ್ಲ.ಆದರೆ ಒಂದು ಸಲ ನಾನು ಏಳನೇ ತರಗತಿಯಲ್ಲಿ ಓದುತ್ತಿದ್ದಾಗ, ನನ್ನ ಒತ್ತಾಯಕ್ಕೆ ಒಂದು ದಿನಕ್ಕೆ ಲಾಲ್ ಬಾಗ್,ಎಚ್.ಎ.ಎಲ್ ಹಾಗು ಜವಾಹರಲಾಲ್ ತಾರಾಲಯಕ್ಕೆ ಏರ್ಪಡಿಸಿದ ಪ್ರವಾಸಕ್ಕೆ ಕಳಿಸಿದರು.ನಾನು ಹತ್ತನೇ ತರಗತಿಗೆ ಬಂದಾಗ,ಮಹಾಮಾರಿ ಕೊರೊನಾವೈರಸ್ ಸಾಂಕ್ರಾಮಿಕ ಕಾಯಿಲೆ ಹರಡಲು ಶುರುವಾಯಿತು.ಆಗ ಎಲ್ಲಕಡೆ ಲಾಕ್ ಡೌನ್ ಮಾಡಲಾಯಿತು.ಇದರಿಂದಾಗಿ ನನ್ನ ಪರಿಕ್ಷೆಗಳನ್ನು ಮುಂದೂಡಲಾಗಿತ್ತು.ಕೊನೆಗೆ ನಮ್ಮ ಕರ್ನಾಟಕ ರಾಜ್ಯ ಸರ್ಕಾರ ಹತ್ತನೇ ತರಗತಿ ವಿದ್ಯಾರ್ಥಿಗಳಿಗೆ ಬಹು ಆಯ್ಕೆ ಪ್ರಶ್ನೆಗಳ ಮಾದರಿಯಲ್ಲಿ ಪರೀಕ್ಷೆಗಳನ್ನು ನಡೆಸಿದರು.ನನ್ನ ಹತ್ತನೇ ತರಗತಿ ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣವಾದೆ.ಇನ್ನು ನಾನು ಪ್ರಥಮ ಹಾಗು ದ್ವೀತಿಯಾ ಪಿ.ಯು.ಸಿ ಓದುತ್ತಿದ್ದಾಗ,ಮಹಾಮಾರಿ ಕೊರೊನಾವೈರಸ್ ಸಾಂಕ್ರಾಮಿಕ ಕಾಯಿಲೆ ಹೆಚ್ಚಾಗಿ ಹರಡುತ್ತಿದ್ದರಿಂದ, ಒಂದೂವರೆ ವರ್ಷಗಳ ಕಾಲ ಆನ್ ಲೈನ್ ತರಗತಿಗಳನ್ನು ಕೇಳಿಸಿಕೊಳ್ಳಬೇಕಾದ ಪರಿಸ್ಥಿತಿ ಉಂಟಾಯಿತು.ನಂತರ ವೈರಸ್ ಹರಡುವ ವೇಗ ಕಡಿಮೆಯಾಗ ತೊಡಗಿದಾಗ,ಮತ್ತೆ ಕಾಲೇಜನ್ನು ಪುನಃ ಆರಂಭಿಸಿದರು.ಆದರೂ ನಾವು ಈ ಸಾಂಕ್ರಾಮಿಕ ಕಾಯಿಲೆಯಿಂದ ನಮ್ಮನ್ನು, ನಮ್ಮವರನ್ನು ಕಾಪಾಡಿಕೊಳ್ಳಲು ಮಾಸ್ಕ್ ಧರಿಸಬೇಕಿತ್ತು. ಇದರಿಂದಾಗಿ ಮುಕ್ತವಾಗಿ ಎಲ್ಲರೊಂದಿಗೆ ಬೆರೆಯುಲು,ಮಾತನಾಡಲು ಆಗುತ್ತಿರಲಿಲ್ಲ.ಈ ಕೆಟ್ಟ ಸಮಯದಲ್ಲೂ ನನಗೆ ನನ್ನ ಕಾಲೇಜಿನಲ್ಲಿ ಒಳ್ಳೆಯ ಸ್ನೇಹಿತೆಯರು ಸಿಕ್ಕರು,ಶಿಕ್ಷರು ತುಂಬಾ ಚೆನ್ನಾಗಿ ಪಾಠ ಹೇಳಿಕೊಡುತ್ತಿದ್ದರು.ಅದರಲ್ಲೂ ನನ್ನ ಗಣಿತದ ಶಿಕ್ಷಕಿ,ನಾನು ಕಷ್ಟ ಎಂದು ಭಾವಿಸುತ್ತಿದ್ದ ಗಣಿತದ ವಿಷಯವನ್ನು ತುಂಬಾ ಸುಲಭ ಎನಿಸುವ ರೀತಿಯಲ್ಲಿ ಹೇಳಿಕೊಡುತ್ತಿದ್ದರು.ನನ್ನ ಹವ್ಯಾಸಗಳೆಂದರೆ ಕಿವಿಗೆ ಇಂಪಾದ,ಮನಸ್ಸಿಗೆ ಸಂತೋಷ ಕೊಡುವ ಹಾಡುಗಳನ್ನು ಕೇಳಿಸಿಕೊಳ್ಳುವುದು,ಚಲನಚಿತ್ರಗಳನ್ನು ವೀಕ್ಷಿಸುವುದು,ಚಿತ್ರಗಳನ್ನು ಬಿಡಿಸುವುದು, ನನ್ನ ತಾಯಿಗೆ ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದು,ನನ್ನ ಕುಟುಂಬದೊಂದಿಗೆ ಹೊರಗಡೆ ಪ್ರಯಾಣಿಸುವುದು.ನನಗೆ ನನ್ನ ಕುಟುಂಬವೇ ನನ್ನ ಜಗತ್ತು, ಅವರೊಂದಿಗೆ ನನ್ನ ಎಲ್ಲಾ ಕಷ್ಟ-ಸುಖ,ನೋವು-ನಲಿವು,ಸೋಲು-ಗೆಲುವಿನ ವಿಷಯಗಳನ್ನು ಯಾವುದೇ ಮುಚ್ಚು-ಮರೆಯಿಲ್ಲದೆ ಅಂಚಿಕೊಳ್ಳುತ್ತೇನೆ. ನನ್ನ ಕುಟುಂಬದೊಂದಿಗೆ ಹೊರಗಡೆ ಪ್ರಯಾಣಿಸುವುದು ನನಗೆ ತುಂಬಾ ಇಷ್ಟ, ಅವರೊಂದಿಗೆ ಕಾಲ ಕಳೆಯುತ್ತಾ, ಮಾತನಾಡುತಿದ್ದರೆ ಸಮಯ ಕಳೆಯುವುದು ಗೊತ್ತಾಗುವುದಿಲ್ಲ.ಮುಖ್ಯವಾಗಿ ನನ್ನ ತಮ್ಮನೊಂದಿಗೆ ಆಟ ಆಡುವುದು,ಅವನಿಗೆ ಪಾಠ ಹೇಳಿಕೊಡುವುದು,ಅವನಿಂದ ನನಗೆ ತಿಳಿಯದ ವಿಷಯಗಳನ್ನು ತಿಳಿದುಕೊಳ್ಳೂತ್ತೇನೆ.ನಮ್ಮ ನಡುವೆ ಜಗಳ ಆಗುವುದು, ಕೋಪ ಮಾಡಿಕೊಳ್ಳುವುದು ಸಹಜ. ಆದರೆ ನಮ್ಮ ಜಗಳವನ್ನು ಬೇರೆಯವರ ತರ ತುಂಬ ಎಳೆಯದೆ ಒಂದಿಷ್ಟು ಗಂಟೆಗಳಲ್ಲಿ ನಮ್ಮ ತಪ್ಪುಗಳನ್ನು ಅರಿತುಕೊಂಡು ಒಬ್ಬರಿಗೊಬ್ಬರು ಕ್ಷಮೆ ಕೇಳಿಕೊಂಡು,ಪ್ರೀತಿಯಿಂದ ಮಾತಾಡಿಕೊಂಡು, ನಾವು ಜಗಳ ಆಡದೆ ಸಂತೋಷವಾಗಿರುವುದನ್ನು ಹಾಗು ಒಗಟ್ಟನ್ನು ಕಂಡು ನಮ್ಮ ತಂದೆ-ತಾಯಿ ಖುಷಿ ಪಡುತ್ತಾರೆ.ನನ್ನ ಇಷ್ಟಗಳ ಬಗ್ಗೆ ಹೇಳಬೇಕೆಂದರೆ,ನನಗೆ ಇಷ್ಟವಾದ ತಿಂಡಿ ಮಸಾಲ ದೋಸೆ,ಇಷ್ಟವಾದ ಬಣ್ಣ ನೀಲಿ,ಇಷ್ಟವಾದ ಸಿಹಿತಿಂಡಿ ಸೋನ್ ಪಾಪ್ಡಿ,ಇಷ್ಟ ಪಟ್ಟು ಮುಂದೊಂದು ದಿನ ಪ್ರಯಾಣ ಮಾಡಬೇಕಾದ ಜಾಗದ ಹೆಸರು ದಕ್ಷಿಣ ಕೊರಿಯಾ.ನನಗೆ ಯಾರಾದರೂ ಕಷ್ಟದಲ್ಲಿದ್ದಾರೆಂದು ಗೊತ್ತಾದಾಗ ಅವರಿಗೆ ಸಹಾಯ ಮಾಡಬೇಕೆನ್ನುವ ಮನೋಭಾವನೆಯಿದೆ. ನಾನು ಸಂದರ್ಶನದಲ್ಲಿ (ಇಂಟರ್ವ್ಯೂ) ಪಾಸ್ ಆಗಿ ಕ್ರೈಸ್ಟ್ (ಡೀಮ್ಡ್ ಟು ಬಿ ಯುನಿವರ್ಸಿಟಿ)ಯಲ್ಲಿ ಪ್ರವೇಶ ಪಡೆದೆ. ಇಲ್ಲಿ ಬೇರೆ-ಬೇರೆ ದೇಶಗಳಿಂದ,ರಾಜ್ಯಗಳಿಂದ ವಿದ್ಯಾರ್ಥಿಗಳು ಸೇರಿಕೊಳ್ಳುತ್ತಾರೆ.ಅವರೊಂದಿಗೆ ಮಾತನಾಡುತ್ತಿದ್ದರೆ, ಅವರ ಭಾಷೆ,ಸಂಪ್ರದಾಯ ಹಾಗು ಜೀವನ ಶೈಲಿಯ ಬಗ್ಗೆ ತಿಳಿದುಕೊಳ್ಳುತ್ತಿದ್ದೇನೆ. ನನ್ನ ಮೊದಲನೆಯ ವರ್ಷದ ಬಿಎಸ್ಸಿ (ಜೈವಿಕ ತಂತ್ರಜ್ಞಾನ, ರಸಾಯನಶಾಸ್ತ್ರ) ಪರೀಕ್ಷೆಗಳಲ್ಲಿ ಒಳ್ಳೆಯ ಅಂಕಗಳನ್ನು ಪಡೆದು ಉತ್ತೀರ್ಣವಾದೆ.ನಂತರ ಬೇಸಿಗೆ ರಜೆಗಳಲ್ಲಿ ಕೆ.ಆರ್.ಮಾರ್ಕೆಟ್ ಅಲ್ಲಿರುವ ವಿಕ್ಟೋರಿಯಾ ಆಸ್ಪತ್ರೆಯ ಸೂಕ್ಷ್ಮ ಜೀವವಿಜ್ಞಾನ ಪ್ರಯೋಗಾಲಯದಲ್ಲಿ ಒಂದು ತಿಂಗಳ ಕಾಲ ಇಂಟರ್ನ್ಶಿಪ್ ಮಾಡಿದೆ.ನನ್ನ ಕಿರುಪರಿಚಯ ಮಾಡಿಕೊಡಲು ಅವಕಾಶ ಕೊಟ್ಟಿದಕ್ಕೆ ನಿಮಗೆ ವಂದನೆಗಳು.....