ಸದಸ್ಯ:2330706 Achyutmk/ನನ್ನ ಪ್ರಯೋಗಪುಟ
ನನ್ನ ಹೆಸರು ಅಚ್ಯುತ ಕುಲ್ಕರ್ಣಿ. ನಾನು ಗದಗ್ ಜಿಲ್ಲೆ, ಕರ್ನಾಟಕದಲ್ಲಿ ಹುಟ್ಟಿದ್ದೇನೆ. ನನ್ನ ತಂದೆಯವರು ಸರ್ಕಾರದ ಉದ್ಯೋಗಿ ಆದ್ದರಿಂದ, ನಾವು ತಾಲೂಕಿನಿಂದ ತಾಲ್ಲೂಕಿಗೆ ವರ್ಗಾವಣೆ ಪಡೆಯುತ್ತಿದ್ದರು. ಗದಗ್ ಜಿಲ್ಲೆಯಿಂದ ವರ್ಗಾವಣೆ ಪಡೆದುಕೊಂಡು ಧಾರವಾಡ ಜಿಲ್ಲೆಯಲ್ಲಿ ೧೦ ವರ್ಷ ಕಾಲ ವರೆಗೂ ಇದ್ದೆವು. ಈ ಕಾರಣದಿಂದ, ನಾನು ಧಾರವಾಡ ಜಿಲ್ಲೆಯಲ್ಲಿ 10 ವರ್ಷ ಶಿಕ್ಷಣವನ್ನು ಪಡೆದಿದ್ದೇನೆ. ಎಂಟನೆಯ ತರಗತಿಯವರೆಗೆ ಧಾರವಾಡದಲ್ಲಿ ಓದಿದ್ದು, ನಂತರ ನನ್ನ ತಂದೆಯ ವರ್ಗಾವಣೆ ಆಯಿತು. ಈ ಬಾರಿ, ನಾವು ಶಿರಸಿ ಮಲೆನಾಡು ತಾಲ್ಲೂಕಿಗೆ ಹೋಗಿದ್ದು, ಅಲ್ಲಿ ನಾನು ಪಿಯು (PU) ತರಗತಿಯನ್ನು ತೆಗೆದುಕೊಂಡೆ. ಆರು ವರ್ಷ ಶಿರಸಿಯಲ್ಲಿದ್ದೆವು.
ಈ ವರ್ಗಾವಣೆಯ ಕಾರಣದಿಂದ, ನಾನು ಧಾರವಾಡದಲ್ಲಿ ಹೆಚ್ಚಿನ ಸ್ನೇಹಿತರನ್ನು ಪಡೆದಿಲ್ಲ ಮತ್ತು ಶಿರಸಿಯಲ್ಲಿ ಹೆಚ್ಚು ಸಮಯ ಒಂಟಿಯಾಗಿ ಇರುತ್ತಿದ್ದೇನು. ಆದರೆ ಈ ಸಮಯದಲ್ಲಿ, ನಾನು ಹಲವು ಉಪಯುಕ್ತ ಪಾಠಗಳನ್ನು ಕಲಿತೇನೆ. ಶಿರಸಿಯಲ್ಲಿ, ನಾನು ಮಿತ್ರರನ್ನು ಹೇಗೆ ಮಾಡಿಕೊಳ್ಳುವುದು, ಗುರುಗಳು ಮತ್ತು ಶಿಕ್ಷಕರಿಗೆ ಗೌರವವನ್ನು ಹೇಗೆ ವ್ಯಕ್ತಪಡಿಸಬೇಕು ಎಂಬುದನ್ನು ಕಲಿತುಕೊಂಡೆ . ಈ ರೀತಿಯ ಅನುಭವವು ನನ್ನ ವ್ಯಕ್ತಿತ್ವವನ್ನು ಶ್ರೇಷ್ಟವಾಗಿ ರೂಪಿಸಿದೆ.
ನನ್ನ ಪಿ ಯು ಶಿಕ್ಷಣದ ನಂತರ ನಾನು ಮೊದಲು ಮೈಸೂರಿನಲ್ಲಿ ಮಹಾರಾಜ ಕಾಲೇಜ್, ಮೈಸೂರು ವಿಶ್ವವಿದ್ಯಾಲಯದಲ್ಲಿ ಕಲಿಯಲು ಹೋದೆನು. ಮೈಸೂರಿನಲ್ಲಿ ಆರು ತಿಂಗಳು ಮಾತ್ರ ನಾನು ಅಲ್ಲಿ ಶಿಕ್ಷಣವನ್ನು ತೆಗೆದುಕೊಂಡು ಆಮೇಲೆ ನಾನು ಮಹಾರಾಜ ಕಾಲೇಜ್ ಬಿಟ್ಟು ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಂದನು. ಈ ಒಂದು ಕಾರಣದಿಂದ ನನ್ನ ವಯಸ್ಸಿನಲ್ಲಿ ಒಂದು ವರ್ಷದ ಅಂತರವಿದೆ. ಮೈಸೂರಿನಲ್ಲಿ ಮಹಾರಾಜ ಕಾಲೇಜ್ ಶಿಕ್ಷಕರು ಒಳ್ಳೆಯ ರೀತಿಯಲ್ಲಿ ಕಲಿಸುತ್ತಿರಲಿಲ್ಲ ಮತ್ತೆ ಶಿಕ್ಷಕರು ಪಾಠವು ಮಾಡುತ್ತಿರಲಿಲ್ಲ ಮತ್ತೆ ಅಲ್ಲಿರುವ ವಾತಾವರಣವು ನನಗೆ ಹೊಂದಲಿಲ. ಅದಕ್ಕಾಗಿ ನಾನು ಆರು ತಿಂಗಳ ಮಾತ್ರ ಮೈಸೂರು ವಿಶ್ವವಿದ್ಯಾಲಯ ಮಹಾರಾಜ ಕಾಲೇಜಿನಲ್ಲಿ ಕಲಿತು ಬಿಟ್ಟೆ. ಇಂತಹ ಪರಿಸ್ಥಿತಿಯಲ್ಲಿಯು ನಾನು ಸ್ವಲ್ಪ ಸ್ನೇಹಿತರನ್ನು ಮಾಡಿಕೊಂಡೆ. ಈ ಗೆಳೆಯರು ನನ್ನ ಜೀವನದ ಕಷ್ಟ ಸಮಯದಲ್ಲಿಯೂ ನನ್ನ ಜೊತೆ ಇದರು. ನಾನು ಯಾವಾಗ ಕಾಲೇಜ್ ಬಿಡ್ಡುವ ಪರಿಸ್ಥಿತಿಯಲ್ಲಿಯೂ ಅವರು ನನ್ನನ್ನು ಬೆಂಬಲಿಸಿದರು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದಂತೆ ಉತ್ತಮ ಕಾಲೇಜುಗಳನ್ನು ಹುಡುಕಲು ಸಹಾಯ ಮಾಡಿದರು.
ಈ ಬೆಂಗಳೂರು ಕ್ರೈಸ್ಟ್ ವಿಶ್ವವಿದ್ಯಾಲಯವು ನನಗೆ ನನ್ನ ಪ್ರತಿಭೆಯನ್ನು ಪ್ರದರ್ಶಿಸಲು ಮತ್ತು ನನ್ನ ಗುರಿಯನ್ನು ಪತ್ತೆಹಚ್ಚಲು ಸಾಕಷ್ಟು ಅವಕಾಶಗಳನ್ನು ನೀಡಿತು. ನಾನು ಕ್ರೀಡಾ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದೇನೆ. ನನ್ನ ಸ್ನೇಹಿತರು ಜೊತೆ ಫುಟ್ಬಾಲ್ ಆಟವಾಡಬಹುದು ಮತ್ತು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ನನಗೆ ಆರೋಗ್ಯಕರವಾದ ಪರಿಸರವನ್ನು ಅನುಭವಿಸಿದೆ. ಇದರಿಂದ ನಾನು ಅರ್ಥಮಾಡಿಕೊಂಡೆ, ವಿಶ್ವವಿದ್ಯಾಲಯವು ವ್ಯಕ್ತಿಯ ಜೀವನದಲ್ಲಿ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೆ ಎಂಬುದನ್ನು ಮತ್ತು ಸ್ವಯಂ-ವಿಕಾಸ ಮತ್ತು ಉತ್ತಮೀಕರಣಕ್ಕಾಗಿ ಉತ್ತಮ ವಿಶ್ವವಿದ್ಯಾಲಯವನ್ನು ಆಯ್ಕೆ ಮಾಡುವುದು ಎಷ್ಟು ಮುಖ್ಯ ಎಂದು.
ಈಗ ನಾನು ಬೆಂಗಳೂರಿನಲ್ಲಿ ನನ್ನ ಶಿಕ್ಷಣವನ್ನು ಮುಂದುವರಿಸುತ್ತಿದ್ದೇನೆ ಮತ್ತು ಯುಪಿಎಸ್ಸಿ (UPSC) ಪರೀಕ್ಷೆಗೆ ತಯಾರಿ ಮಾಡುತ್ತಿದ್ದೇನೆ. ನನ್ನ ಜೀವನದ ಉದ್ದೇಶವು IAS ಅಧಿಕಾರಿ ಆಗುವುದು. ನನ್ನ ತಂದೆಯು ತಹಶೀಲ್ದಾರ್ ಆಗಿದ್ದಾರೆ ಅದನ್ನು ನೋಡಿ ನಾನು ಪ್ರೋತ್ಸಾಹಿಸಿಕೊಂಡು ಐಎಎಸ್ ಅಧಿಕಾರಿ ಆಗಬೇಕು ಅಂದುಕೊಂಡಿದ್ದೇನೆ. ಶಿರಸಿಯಲ್ಲಿದ್ದಾಗ, ನಾನು ಜೀವನದ ಹಲವು ಪ್ರಮುಖ ಪಾಠಗಳನ್ನು ಕಲಿತೇನೆ ಮತ್ತು ಇದರಿಂದ ನನ್ನ ಗುರಿಯನ್ನು ಸಾಧಿಸಲು ಹೆಚ್ಚಿನ ಪ್ರೇರಣೆಯನ್ನು ಪಡೆದುಕೊಳ್ಳುತ್ತೇನೆ. ಈ ಒಂದು ಕಾರಣದಿಂದ ಶಿರಸಿಯು ನನಗೆ ಪ್ರಮುಖ ಸ್ಥಳ ವಾಗಿದೆ.
ಚಿಕ್ಕ ವಯಸ್ಸಿನಿಂದಲೇ ನನಗೆ ಫುಟ್ಬಾಲ್ ಆಟದ ಮೇಲೆ ವಿಶೇಷ ಹವ್ಯಾಸವಿದೆ ಮತ್ತು ಇದು ನನ್ನ ಜೀವನದ ಪ್ರಮುಖ ಅಂಗವಾಗಿದೆ. ನಾನು ಗಿಟಾರ್ ವಾದನೆ ಮತ್ತು ನುಡಿಸಲು ಕೂಡ ಬಹಳ ಇಷ್ಟಪಡುವೆ. ನನ್ನ ಕುಟುಂಬದಲ್ಲಿ ನಾಲ್ಕು ಜನ ಇದ್ದೇವೆ ನನ್ನ ತಂದೆ, ತಾಯಿ, ನನ್ನ ಅಣ್ಣ ಮತ್ತು ನಾನು. ನನ್ನ ತಂದೆ ಸರ್ಕಾರಿ ಅಧಿಕಾರಿ, ಮತ್ತು ನನ್ನ ತಾಯಿ ಗೃಹಿಣಿ, ಮತ್ತೆ ನನ್ನ ಅಣ್ಣ ಇಂಜಿನಿಯರಿಂಗ್ ಶಿಕ್ಷಣವನ್ನು ಮುಗಿಸಿ ಅವನು ಸಹ ಯುಪಿಎಸ್ಸಿ ಪರೀಕ್ಷೆಗೆ ತಯಾರಿ ಮಾಡುತ್ತಿದ್ದಾನೆ. ನನ್ನ ಅಣ್ಣ ನನ್ನ ಕಷ್ಟ ಸಮಯದಲ್ಲಿ ನನ್ನ ಜೀವನದಲ್ಲಿ ಬಹಳ ಸಹಾಯ ಮಾಡಿದ್ದಾನೆ ಅದು ಮೈಸೂರಿನಲ್ಲಿ ಆಗಿರಬಹುದು ಅಥವಾ ನನ್ನ ಗುರಿಯನ್ನು ನಿರ್ದಿಸುವಲ್ಲಿ ತುಂಬಾ ಸಹಾಯ ಮಾಡಿದ್ದಾನೆ. ನನ್ನ ಅಣ್ಣನ ಜೊತೆಗೆ ನನ್ನ ತಂದೆ ತಾಯಿ ನಿನ್ನ ಕಷ್ಟ ಸಮಯದಲ್ಲಿ ಬಹಳ ಸಹಾಯ ಮಾಡಿದ್ದಾರೆ ಅದಕ್ಕಾಗಿ ನಾನು ನನ್ನ ಜೀವನದಲ್ಲಿ ಒಂದು ದೊಡ್ಡ ಗುರಿಯನ್ನು ಮುಟ್ಟಬೇಕು ಅಂದು ಒಂದು ಆಸೆ ಇದೆ. ಈ ಆಸೆಯನ್ನು ಈಡೇರಿಸಲು ಈ ವಿಶ್ವವಿದ್ಯಾಲಯ, ನನ್ನ ಮಿತ್ರರು, ಹಾಗೂ ತಂದೆ ತಾಯಿ ಮತ್ತು ಅಣ್ಣ ಎಲ್ಲರೂ ನನಗೆ ಸಹಾಯ ಮಾಡುತ್ತಾರೆ ಎಂದು ಅನಿಸುತ್ತದೆ. ಈ ಎಲ್ಲಾ ಅನುಭವಗಳು ಮತ್ತು ಪಾಠಗಳು ನನಗೆ ನನ್ನ ಗುರಿಯತಲುಪಲು ಮತ್ತು ಜೀವನವನ್ನು ಉತ್ತಮ ಮಾರ್ಗದಲ್ಲಿ ಸಾಗಿಸಲು ಪ್ರೇರಣೆಯಾಗಿ ಕಾರ್ಯನಿರ್ವಹಿಸುತ್ತವೆ. ಇತ್ತೀಚಿಗೆ ನನ್ನ ಜೀವನದಲ್ಲಿ ಏನು ಮಾಡಬೇಕು ಎಂಬುದರಲ್ಲಿ ಈಗ ನಾನೇನೋ ಗೊಂದಲದಲ್ಲಿದ್ದೇನೆ. ಈ ವಿಶ್ವವಿದ್ಯಾಲಯ ನನಗೆ ದಾರಿ ಕಂಡುಹಿಡಿಯಲು ಸಹಾಯ ಮಾಡುತ್ತದೆ ಎಂದು ಆಶಿಸುತ್ತೇನೆ. ಹೆಚ್ಚಿನ ಶಿಕ್ಷಣಕ್ಕಾಗಿ ನಾನು ವಿದೇಶಕ್ಕೆ ಹೋಗಲು ಬಯಸುತ್ತೇನೆ. ಈ ಎಲ್ಲ ಶಿಕ್ಷಣ ಆದ ನಂತರ ನಾನು ಒಂದು ಒಳ್ಳೆಯ ಕೆಲಸವನ್ನು ನೋಡಿಕೊಂಡು ಆ ಕೆಲಸವನ್ನು ಮಾಡುತ್ತಾ ನನ್ನ ತಂದೆ ತಾಯಿ ಮತ್ತು ಅಣ್ಣ ಎಲ್ಲರನ್ನು ಸಂತೋಷದಿಂದ ನೋಡಲು ಬಯಸುತ್ತೇನೆ. ನಾನು ಬರೆದಿದ್ದು ಇದೆಲ್ಲವೂ ನನ್ನ ಬಗ್ಗೆ ನನ್ನ ಜೀವನದ ಬಗ್ಗೆ ಹಾಗೂ ನನ್ನ ತಂದೆ ತಾಯಿ ಅಣ್ಣನ ಬಗ್ಗೆ ಇತ್ತು, ಧನ್ಯವಾದಗಳು.