ದೈತ್ಯ ಕಪ್ಪು ಕುಳಿಗಳ ಜನ್ಮ [೧]

ದೂರದಿಂದ ಕಂಡಾಗ, ನಮ್ಮ ' ಮಿಲ್ಕಿ ವೇ' ನಕ್ಷತ್ರಪುಂಜವು, ಒಂದು ಚಮಚ ಕರಗುತ್ತಿರುವ ಬೆಣ್ಣೆಯನ್ನು ರೊಟ್ಟಿಯ ಮದ್ಯದಲ್ಲಿ ಇಟ್ಟಿರುವಂತ್ತಿರುತ್ತದೆ. ಆ ರೊಟ್ಟಿಯೂ ನಕ್ಷತ್ರಪುಂಜದ ತೆಳ್ಳನೆಯ ಚಕ್ರ ಮತ್ತು ಬೆಣ್ಣೆ,‌‌ ಮದ್ಯದಲ್ಲಿನ ಬೃಹತ್ ಚುಕ್ಕಿಗಳ ಉಬ್ಬನ್ನು ಪ್ರತಿನಿಧಿಸುತ್ತದೆ. ಅದರ ಮಧ್ಯೆದಲ್ಲಿ ಒಂದು ಕಪ್ಪು ರಂದ್ರವಿದೆ, ಸೂರ್ಯನಿಗಿಂತ ದಶಲಕ್ಷ ಪಟ್ಟಷ್ಟು ಬಾರವಿರುವಂತಹದು.

ದೈತ್ಯ ಕಪ್ಪು ಕುಳಿ

ಖಗೋಳಶಾಸ್ತ್ರಜ್ಞರ‌ ನಂಬಿಕೆಯ ಪ್ರಕಾರ ಪ್ರತಿಯೊಂದು ನಕ್ಷತ್ರಪುಂಜದ ಮಧ್ಯೆದಲ್ಲಿನ ಚುಕ್ಕಿಗಳ ಉಬ್ಬಿನ ಜೊತೆಗೆ ದೈತ್ಯ ಕಪ್ಪು ಕುಳಿಯೂ ಸಹ ಇರಬಹುದು. ಅವರ ವೀಕ್ಷಣೆಯಿಂದ ಸೂಚಿಸುವ ಮೂಲಕ ಕಪ್ಪು ಕುಳಿಯ ಅಂಶ ಭಾರಕ್ಕು ಮತ್ತು ಉಬ್ಬಿನ ನಕ್ಷತ್ರ ಹಾಗು ಅನಿಲದ ಸಮಸ್ತ ಅಂಶ ಭಾರಕ್ಕು ನೇರ ಸಂಬಂಧವಿದೆ. ಕಪ್ಪು ಕುಳಿಯ ಸ್ವರೂಪ ನಿರ್ಮಾಣಕ್ಕು ಮತ್ತು ಮಧ್ಯದ ಉಬ್ಬಿನದಕ್ಕೂ ಸಂಬಂಧವಿರಬಹುದೆಂಬುದು, ಸಂಶೋಧನಾಕಾರರನ್ನು ದೈತ್ಯ ಕಪ್ಪು ಕುಳಿಗಳೆಡೆಗೆ ಇನ್ನಷ್ಟು ಸೆಳೆಯುತ್ತಿದೆ.

ಖಗೋಳಶಾಸ್ತ್ರಜ್ಞರು ಬಹಳಷ್ಟು ದೈತ್ಯ ಕಪ್ಪು ಕುಳಿಗಳನ್ನ ನಕ್ಷತ್ರಪುಂಜಗಳ ನಾಭಿಗಳಲ್ಲಿ ಪತ್ತೆಹಚ್ಚಿದ್ದಾರೆ. ಕಪ್ಪು ಕುಳಿಗಳು ಸುರುಳಿ ಆಕಾರದ ನಕ್ಷತ್ರಪುಂಜಗಳ ಮಧ್ಯೆದಲ್ಲಿ, ದೊಡ್ಡ ಉಬ್ಬಿನ ಚುಕ್ಕಿಗಳಿರುವ, ನಮ್ಮ 'ಮಿಲ್ಕಿ ವೇ'ಯ ಹಾಗೆ ಅಥವಾ ಕೇವಲ ಉಬ್ಬುಗಳು, ಯಾವುದೇ ಸುತ್ತುವರೆಯುವ ಚಕ್ರಗಳ್ಳಿಲ್ಲದಿರುವ ನಕ್ಷತ್ರಪುಂಜಗಳಲ್ಲಿ ಗೋಚರಿಸುತ್ತವೆ. ಖಗೋಳಶಾಸ್ತ್ರಜ್ಞರಿಗೆ ದೈತ್ಯ ಕಪ್ಪು ಕುಳಿಗಳು ಬರಿ ಚಕ್ರಗಳ ನಕ್ಷತ್ರಪುಂಜಗಳ ತಿರುಳಿನಲ್ಲಿ ಕಂಡುಬರಲಿಲ್ಲ, ಇವುಗಳಲ್ಲಿ ಚುಕ್ಕಿಗಳ ಉಬ್ಬು ಇರುವುದಿಲ್ಲ.

ಕಪ್ಪು ಕುಳಿಗಳು ಹಾಗು ನಕ್ಷತ್ರದ ಉಬ್ಬುಗಳ ಅಂಶ ಭಾರವನ್ನು ಅಳತೆ ನೋಡುವ ಮೂಲಕ, ಖಗೋಳಶಾಸ್ತ್ರಜ್ಞರು ಇವೆರಡರ ನಡುವಿನ ಗಾಢ ಸಂಬಂಧವನ್ನು ಕಂಡು ಹಿಡಿದಿದ್ದಾರೆ. ಕಪ್ಪು ಕುಳಿಯ ಅಂಶ ಭಾರವು ಮೊತ್ತ ಉಬ್ಬಿನ ಅಂಶ ಭಾರದ ೦.೧೫ ಪರ್ಸೆಂಟ್ರಷ್ಟು ಇರುತ್ತದೆ.

ಈ ಕಪ್ಪು ಕುಳಿಗಳ ಮಾದರಿಯು ಎಷ್ಟು ದೊಡ್ಡದಿರುವುದೆಂದರೆ, ಈ ಸಂಬಂಧವು ಕೇವಲ ಅಸಂಭವನೀಯವಾದ ಕಾಕತಾಳೀಯಾಗಿ ಕಾಣುತ್ತದೆ. ಅದರ ಬದಲು, ಕಪ್ಪು ಕುಳಿಯ ಹುಟ್ಟಿಗೂ ಮತ್ತು ತಾರಮಂಡಲದ ಹುಟ್ಟಿಗು ಆಳವಾದ ಸಂಬಂಧವಿರುತ್ತದೆ ಎಂದು ನಂಬಿದ್ದರು.

ಖಗೋಳಶಾಸ್ತ್ರಜ್ಞರು ಎರಡು ಸಿದ್ಧಾಂತಗಳಲ್ಲಿ ಈ ಸಂಬಂಧವನ್ನು ವಿವರಿಸಿದ್ದಾರೆ.

ಮೊದಲಿನ ಸಿದ್ಧಾಂತ ಹೇಳುತ್ತದೆ, ನಮ್ಮ ಕ್ಷಿಪ್ರ ಸೃಷ್ಟಿಯಲ್ಲಿ, ತಾರಮಂಡಲಗಳು ತಕ್ಕಮಟ್ಟಿಗೆ ಪುಟ್ಟದಾಗಿದ್ದವು ಮತ್ತು ೦.೧೫ ಪರ್ಸೆಂಟ್ರಷ್ಟು ಅಂಶ ಭಾರವಿರುವ ಕಪ್ಪು ಕುಳಿಗಳನ್ನು ಆಧರಿಸಿಧವು. ಈ ನಕ್ಷತ್ರ ಮಂಡಲದ ಚೂರುಗಳು ಬೇಗ ಒಂದಾಗಿ ಬೃಹತ್ ತಾರಮಂಡಲಗಳನ್ನು ಸೃಷ್ಟಿಸುತ್ತವೆ. ಹೀಗೆ ಆಗುವಾಗ ತಿರುಳಿನಲ್ಲಿನ ಕಪ್ಪು ಕುಳಿಗಳು ಸಹ ಒಂದಕ್ಕೊಂದು ಸೇರಿದವು. ಕಪ್ಪು ಕುಳಿ ಮತ್ತು ಸಮಸ್ತ ಅನಿಲ, ನಕ್ಷತ್ರಗಳ ಅಂಶ ಭಾರದ ಅನುಪಾತವನ್ನು ಪಾಲಿಸಿದವು.

ಎರಡನೆಯ ಸಿದ್ಧಾಂತದ ಪ್ರಕಾರ, ಕಪ್ಪು ಕುಳಿಗಳು ಆರಂಭದಿಂದಲ್ಲೂ ಪುಟ್ಟದಾಗಿ, ಸೃಷ್ಟಿ ಮತ್ತು ತಾರಾ ಮಂಡಲಗಳು ಬೆಳೆಯುತ್ತಿದ್ದಂತೆ ಅವುಗಳೊಡನೆ ವಿಸ್ತರಿಸಿದವು. ಹೇಗಾದರೂ, ಕಪ್ಪು ಕುಳಿಗಳು ಗಾತ್ರದಲ್ಲಿ ವಿಸ್ತರಿಸುವ ಕ್ರಮದಲ್ಲಿ ಯಥೇಚ್ಛ ಪ್ರಮಾಣದ ಊರ್ಜಸ್ವಿತೆಯನ್ನು ತಾರಾಗಣಕ್ಕೆ ಬಿಟ್ಟುಕೊಡುತ್ತದೆ. ಈ ಊರ್ಜಸ್ವಿತೆಯು ನಕ್ಷತ್ರಮಂಡಲದೊಡನೆ ಕೂಡಿ, ಅವು ತಾರೆಗಳನ್ನು ಉದ್ಪತ್ತಿಸುವ ಸಾಮರ್ಥ್ಯವನ್ನು ಕ್ರಮಗೊಳಿಸುತ್ತದೆ. ಈ ಊರ್ಜಸ್ವಿತೆಯ ಬಿಡುಗಡೆಯೂ ಕಪ್ಪು ಕುಳಿಯ ಉದ್ದೀಪಕವನ್ನು ಅಂತ್ಯಗೊಳಿಸುತ್ತದೆ. ಇದು ಸುತ್ತಲಿನ ಅನಿಲ ಹಾಗು ಧೂಳಿನ ಮೋಡಗಳನ್ನು ಸರಿಸುವುದರಿಂದಾಗುತ್ತದೆ.

ಬೇರೆ ಮಾತುಗಳಲ್ಲಿ ಹೇಳುವುದಾದರೆ, ಕಪ್ಪು ಕುಳಿ ಅಂಶ ಭಾರಕ್ಕು, ನಕ್ಷತ್ರಪುಂಜದ ಅಂಶ ಭಾರಕ್ಕು ಇರುವ ನಿರ್ಧಿಷ್ಟ ಅನುಪಾತದಲ್ಲಿ, ರಂಧ್ರವು ಪರಿಣಾಮಕಾರಿಯಾಗಿ ತನ್ನನ್ನು ಮತ್ತು ತಾರಾಗಣವು‌ ಇನ್ನು ಹೆಚ್ಚು ಅಗಲಿಸುವುದರಿಂದಾಗಿ ನಿಲ್ಲಿಸುತ್ತದೆ. ಈ ಅಧ್ಬುತವಾದ ಘಟನೆಯೂ ಅನುಪಾತ ೦.೧೫ ಪರ್ಸೆಂಟ್ ಇರುವುದರಲ್ಲಿ ನಡೆಯುತ್ತದೆ.

ಗಣಕಯಂತ್ರ ಪ್ರತ್ಯನುಕರಣೆ ಹಾಗು ವೀಕ್ಷಣೆಗಳು ಕಳೆದ ೧೦ ವರ್ಷದಲ್ಲಿ ಸೂಚಿಸುವುದರ ಪ್ರಕಾರ ಎರಡನೆಯ ಸಿದ್ಧಾಂತವನ್ನು ಅನುಗ್ರಹಿಸುತ್ತದೆ. ಇದರ ಪ್ರಕಾರ, ನಮ್ಮ ಕ್ಷಿಪ್ರ ಜಗತ್ತಿನಲ್ಲಿ ಸೃಷ್ಠಿಯಾದ ' ಬೀಜ'ದಂತಹ ಕಪ್ಪು ಕುಳಿಗಳು ಸುತ್ತಲಿನ ಅನಿಲದ ಮೋಡಗಳಿಗೆ ಗುರುತ್ವಾಕರ್ಷಣೆಯ ' ಬೇರು'ಗಳಂತೆ ಕೆಲಸಮಾಡುತ್ತವೆ. ಆ ಅನಿಲ ಮೋಡವು ಒಳಗಇನತ್ತ ಕುಸಿದರಿಂದ, ಸ್ವಲ್ಪ ಅಂಶ ಭಾರವು ಕಪ್ಪು ಕುಳಿಯ ಒಳಗೆ ಸೆಳೆದುಕೊಂಡಿತು.

ಈ ವಿಧಾನದಲ್ಲಿ, ಕಪ್ಪು ಕುಳಿಯ ಸುತ್ತ ಅನಿಲವು ಅಗಲದ, ತೆಳ್ಳನೆಯ ಚಕ್ರವಾಗಿ ವಿಸ್ತರಿಸುತ್ತದೆ. ಈ ಚಕ್ರವು ಸಾವಿರ, ಕೋಟಿ ಡಿಗ್ರೀಸ್ ವರೆಗೆ ಬಿಸಿಯಾಗಿ ಹೆಚ್ಚಿನ ಪ್ರಮಾಣದಲ್ಲಿ ಊರ್ಜಸ್ವಿತೆಗಳು ಅಂದರೆ, 'ಎಕ್ಸ್ - ರೇ' ಎನರ್ಜಇಯಂಬಂತಎ ಉತ್ಪಾದಿಸಲಾಯಿತು. ಈ ವಿಧಾನಗಳನ್ನ ' ಕ್ವಸಾರ್' ಎಂದು ಕರೆಯಲಾಗುತ್ತದೆ. ಇವು ಸೃಷ್ಟಿಯಲ್ಲಿನ ಅತ್ಯಂತ ಪ್ರಕಾಶಮಾನ ಹಾಗು ಊರ್ಜಸ್ವಿತವಾದ ವಸ್ತುಗಳು. 'ಕ್ವಸಾರ್'ಗಳು ಒಂದು ಸಂಪೂರ್ಣ ನಕ್ಷತ್ರಪುಂಜ ಹೊರಹೊಮ್ಮಿಸುವಷ್ಟು ಶಕ್ತಿಯನ್ನ ಬಿಡುಗಡೆಪಡೆಸಬಹುದು. ಇದು ೧೦ರಿಂದ ಸಾವಿರ ಬೆಳಕು ವರ್ಷಗಳವರೆಗೆ ಉಳಿದಿರುತ್ತದೆ ಆದರೆ ಇದು ಕೇವಲ ನಮ್ಮ ಸೌರವ್ಯೂಹದಷ್ಟಿನ ಜಾಗದಲ್ಲಿ, ಬರೆಯ ಕೆಲವು ಬೆಳಕು ವರ್ಷಗಳು ಇರುವಲ್ಲಿ ನಡೆಯುತ್ತದೆ.

ಭಯಂಕರ ಬಿಸಿಯಾದ ಬೆಳವಣಿಗೆಯ ಚಕ್ರಗಳಿಂದ ಬರುವ ಊರ್ಜಸ್ವಿತೆಯು ಒಳಬರುವ ಅನಿಲವನ್ನು ತಡೆಗಟ್ಟುತ, ದೈತ್ಯ ಕಪ್ಪು ಕುಳಿ ಮತ್ತು ಸುತ್ತಲಿನ ನಕ್ಷತ್ರಪುಂಜಗಳ ಬೆಳವಣಿಗೆಯನ್ನು ಕ್ರಮಗೊಳಿಸುತ್ತದೆ. ಗಣಕಯಂತ್ರದ ಪ್ರತ್ಯನುಕರಣೆಯ ಸಲಹೆ ಹೇಳುತ್ತದೆ , ಇದು ಸುತ್ತಲಿನ ಅನಿಲದ ಪ್ರಮಾಣ ಹಾಗು ಕಪ್ಪು ಕುಳಿಯ ಅಂಶ ಭಾರವು ಈ ವಿಧಾನವನ್ನು ಅನುಸರಿಸುವುದಿಲ್ಲ. ನಮ್ಮ ಸೃಷ್ಟಿಯಲ್ಲಿನ ಅತ್ಯಂತ ಬೃಹತ್ ನಕ್ಷತ್ರಪುಂಜಗಳಲ್ಲಿ ಹೆಚ್ಚಿನ ಅನಿಲವನ್ನು ಸೆಳೆಯಲಾಗುತ್ತದೆ, ಆದರಿಂದ ಅವುಗಳ ಚಕ್ರಗಳು ಇನ್ನು ಹೆಚ್ಚು ಬಿಸಿಯಾಗಿರುತ್ತದೆ, ಅದಕ್ಕೆ ಹೆಚ್ಚಿನ ಸುತ್ತಲಿನ ಅನಿಲವನ್ನು ಬಿಡುಗಡೆಗೊಳಿಸುತ್ತದೆ. ಚಿಕ್ಕ ನಕ್ಷತ್ರಪುಂಜಗಳಲ್ಲಿ, ಚಕ್ರಗಳು ಅಷ್ಟೊಂದು ಬಿಸಿಯಾಗುವುದಿಲ್ಲ ಆದರೆ ಸುತ್ತಲಿನ ಬಿಡುಗಡೆಗೊಳ್ಳುವ ಅನಿಲದ ಪ್ರಮಾಣ ಕಡಿಮೆ ಇರುತ್ತದೆ. ಎರಡರಲ್ಲೂ ಕಪ್ಪು ಕುಳಿಯ ಅಂಶ ಭಾರವು ಸರಿಯಾದ ಕ್ರಮದಲ್ಲಿರುತ್ತದೆ.

ಖಗೋಳಶಾಸ್ತ್ರಜ್ಞರು ಕ್ವಸಾರ್ ಗಳ ಬಗ್ಗೆ ಇನ್ನು ಹೆಚ್ಚಿನ ಸಂಶೋಧನೆ ನಡೆಸುತ್ತಿದ್ದಾರೆ. ನಕ್ಷತ್ರಪುಂಜ ಹಾಗು ಮಧ್ಯದ ಕಪ್ಪು ಕುಳಿಯ ನಡುವಿನ ಗಾಢ ಬಾಂಧವ್ಯವನ್ನು ಅರ್ಥೈಸಿಕೊಳ್ಳಲು, ನಿಶಬ್ಧ ದೈತ್ಯ ಕಪ್ಪು ಕುಳಿಗಳನ್ನು ಕುರಿತು ವೀಕ್ಷಣೆಗಳನ್ನು ನಡೆಸುತ್ತಿದ್ದಾರೆ.

<ref>http://blackholes.stardate.org/</ref


ಅಲಂಕೃತ ಹಾರುವ ಹಾವು