ಸದಸ್ಯ:2240462kvdeeksha/ನನ್ನ ಪ್ರಯೋಗಪುಟ

'"ಭಾರತದ ಆದಿತ್ಯಯಾನ"'

ಬದಲಾಯಿಸಿ

ಭಾರತದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ 'ಇಸ್ರೋ' ಯಶಸ್ಸಿನ ಮುಕುಟಕ್ಕೆ ಮತ್ತೊಂದು ಮಣಿ ಸೇರ್ಪಡೆಗೊಂಡಿದೆ. ಭಾರತದ ಚೊಚ್ಚಲ ಸೌರಯಾನ ಯಶಸ್ವಿಯಾಗಿದೆ. ಸೂರ್ಯನ ಅಧ್ಯಯನಕ್ಕೆ ಇಸ್ರೋ ಕಳುಹಿಸಿದ 'ಆದಿತ್ಯ ಎಲ್-೧' ಗಗನನೌಕೆಯು ನಿಗದಿತ ನಿಲ್ದಾಣವಾದ 'ಲ್ಯಾಗ್ರೇನ್ಗ್ ಪಾಯಿಂಟ್ ೧' ನ (ಎಲ್ -೧) 'ಹ್ಯಾಲೊ ಆರ್ಬಿಟ್ ' ಗೆ (ಪ್ರಭಾಮಂಡಲ ಕಕ್ಷೆ) ಜನವರಿ ೬ ರಂದು ತಲುಪಿದೆ. ಕೊನೆಯ ಕ್ಷಣದಲ್ಲಿ ಗಗನನೌಕೆಯ ವೇಗವನ್ನು ನಿಯಂತ್ರಿಸುವ, ಅದು ಪಥತಪ್ಪದಂತೆ ಕಾಯ್ದುಕೊಳ್ಳುವ ಸವಾಲನ್ನು ಗೆಲ್ಲುವ ಮೂಲಕ ಇಸ್ರೋ ವಿಜ್ನ್ಯಾನಿಗಳು ಮತೊಮ್ಮೆ ಜಗತ್ತಿನ ಗಮನ ಸೆಳೆದಿದ್ದಾರೆ. ಇಸ್ರೋ ಸಾಧನೆಗೆ ಭಾರತ ಮಾತ್ರವಲ್ಲದೆ ಅಮೇರಿಕ, ರಷ್ಯಾ ಸೇರಿದಂತೆ ಹಲವು ಮೆಚ್ಚುಗೆ ವ್ಯಕ್ತಪಡಿಸಿವೆ. ೨೦೨೩ರ ಸೆಪ್ಟೆಂಬರ್ ಎರಡರಂದು 'ಆದಿತ್ಯ ಎಲ್-೧' ಅನ್ನು ಉಡ್ಡಯನ ಮಾಡಲಾಗಿತು. ಹಲವು ಬಾರಿ ಪಥ ಬದಲಾವಣೆ, ಕಕ್ಷೆ ಬದಲಾವಣೆಗಳ ಮೂಲಕ ೧೨೬ ದಿನಗಳಲ್ಲಿ ಇಸ್ರೋ ಇದನ್ನು ಕಕ್ಷೆಗೆ ಸೇರಿಸಿದೆ. ಪಿ ಯಸ್ ಎಲ್ ವಿ -ಸಿ ೫೭ ಮೂಲಕ ಆದಿತ್ಯ-ಎಲ್ ೧ ಉಡಾವಣೆ ಯಶಸ್ವಿಯಾಗಿ ನೆರವೇರಿದೆ.

ಕೊನೆಯ ದಿನದ ಸವಾಲು

'ಆದಿತ್ಯ ಎಲ್-೧' ಅನ್ನು ಕಕ್ಷೆಗೆ ಸೇರಿಸುವ ದಿನದಂದು ಅದರ ವೇಗವನ್ನು ನಿಯಂತ್ರಿಸುವ ಮತ್ತು ಪಥವನ್ನು ಸರಿಪಡಿಸುವ ಮೂಲಕ ಅದು 'ಎಲ್-೧' ಪ್ರದೇಶವನ್ನು ಬಿಟ್ಟು ನಿರ್ಗಮಿಸದಂತೆ ತಡೆಯುವ ಸವಾಲು ಇಸ್ರೋ ವಿಜ್ನ್ಯಾನಿಗಳು ಮುಂದಿತ್ತು, ಹ್ಯಾಲೊ ಆರ್ಬಿಟ್ ಪ್ರವೇಶಿಸುವ ಮುನ್ನ ಗಗನನೌಕೆಯ ವೇಗವನ್ನು ಸೆಕೆಂಡ್ ಗೆ ೩೧ ಮೀಟರಿಗೆ ತಗ್ಗಿಸಲಾಯಿತು. ಜತಗೆ ಅದು ನಿಗದಿತ ಪಥವನ್ನು ಒಂದಿಂಚು ಬದಲಿಸದಂತೆ ತೀವ್ರ ನಿಗಾ ವಹಿಸಲಾಗಿತ್ತು.

 
ಆದಿತ್ಯ ಎಲ್ ೧ ಪ್ರಿ ಲಾಂಚ್

೨೦೨೩ ಸೆಪ್ಟೆಂಬರ್ ೨ರಂದು ಇಂದಿನವರೆಗೆ ಈ ೧೨೬ ದಿನದಲ್ಲಿ ಏನೇನೆಲ್ಲ ಮಾಡಿದ್ದೇವೆ? ರಜೆ - ವಾರದ ರಜೆಗಳನ್ನು ಕಳೆದು ಮನೆಯಿಂದ ಕಚೇರಿಗೆ , ಕಚೇರಿಯಿಂದ ಎಲ್ಲ ಸೇರಿ ಇನ್ನೂರು ಸಲ ಓಡಾಡಿದ್ದೇವೆ. ಸಾವಿರಾರು ಬಳಿ ವಾಟ್ಸ್ಯಾಪ್ , ಫೇಸ್ಬುಕ್ ತೆರೆದು ನೋಡಿದ್ದೇವೆ ದಿನಕ್ಕೆ ಕನಿಷ್ಠ ಎರಡೂವರೆ - ಮೂರು ಕಿಲೋಮೀಟರು ವಾಕಿಂಗ್ ಮಾಡಿದ್ದೆವು. ನಾವು ಈ ಭೂಮಿ ಹೀಗೆಲ್ಲ ಮಿತಿಗಳಲ್ಲಿ ಕಳೆಯುತಿರಬೇಕಾದರೆ, ಭೂಮಿಯಿಂದ ಅಂತರಿಕ್ಷಕ್ಕೆ ಹಾರಿದ ಇಸ್ರೋದ ಆದಿತ್ಯ ನೌಕೆಯು ಬರೋಬ್ಬರಿ ೧೨೬ ದಿನಗಳಲ್ಲಿ ೧೫ ಲಕ್ಷ ಕಿಲೋಮೀಟರು ಕ್ರಮಿಸಿದೆ. ಅಂದರೆ ೪ ಬಾರಿ ಚಂದ್ರನಲ್ಲಿಗೆ ಹೋಗಿಬಂದಷ್ಟು ದೂರ. ಆದಿತ್ಯ ನೌಕೆಯನ್ನು ಎಲ್-೧ ಪಾಯಿಂಟ್ನಲ್ಲಿ ಸ್ಥಿರಗೊಳಿಸುವ ಚಾರಿತ್ರಕ್ಕೆ ಅತ್ಯಂತ ಕಠಿಣ ಸಾಹಸವನ್ನು ಇಸ್ರೋ ಜನವರಿ ೬ ಸಂಜೆ ನಡೆಸಿದೆ. ಆದಿತ್ಯ ಎಲ್-೧ ಭಾರತದ ಮೊಟ್ಟ ಮೊದಲ ಬಾಹ್ಯಾಕಾಶ ಆಧಾರಿತ ವೀಕ್ಷಣಾಲಯ ಆಗಿ ಇತಿಹಾಸ ನಿರ್ಮಿಸಿದೆ.

"ಏನಿದು ಎಲ್-೧ ಪಾಯಿಂಟ್?"

ಇದು ಸೂರ್ಯ ಮತ್ತು ಭೂಮಿಯ ನಡುವಿನ, ಗುರುತ್ವಾಕರ್ಷಣೆ ಶೂನ್ಯ ಪ್ರದೇಶವಾಗಿದೆ . ಈ ಪ್ರದೇಶವು ಭೂಮಿಯಿಂದ ೧೫ ಲಕ್ಷ ಕಿಲೋಮೀಟರ್ ದೂರದಲ್ಲಿದ್ದರೂ, ಭೂಮಿ ಮತ್ತು ಸೂರ್ಯನ ನಡುವಿನ ಒಟ್ಟಾರೆ ದೂರದಲ್ಲಿ ಇದು ಕೇವಲ ೧% ಮಾತ್ರ. ಭೂಮಿ ಮತ್ತು ಸೂರ್ಯನ ನಡುವೆ ಇಂತಹ ೫ ಗುರುತ್ವರಹಿತ ಪ್ರದೇಶಗಳಿದ್ದು, 'ಎಲ್-೧' ಎಂಬುದು ಅದರಲ್ಲಿ ಮೊದಲನೆಯದು.

"ಲಾಗ್ರೇನ್ಜ್ ಪಾಯಿಂಟ್ ಅರ್ಥಮಾಡಿಕೊಳ್ಳುವುದು ಸುಲಭ" ಎನ್ನುತ್ತಾರೆ ಇಸ್ರೋ ನಿವೃತ್ತ ವಿಜ್ನ್ಯಾನಿ ಸುರೇಶ ಕುಮಾರ್ ಎಚ್. ಎನ್. ನಿಮಗೆ ಹಗ್ಗಜಗ್ಗಾಟ ತಿಳಿದಿರಬಹುದು. ಆಚೆಯಿಂದ ಒಬ್ಬ ವ್ಯಕ್ತಿ ಸಮ ಬಲದಲ್ಲಿ ಎಳೆದಾಡಲು ಪ್ರಯ್ನತ್ನಿಸುತ್ತಿರುತಾರಲ್ಲವೇ? ಹಾಗೆಯೇ ಅಂತರಿಕ್ಷದಲ್ಲೂ ಆಕಾಶಕಾಯಗಳ ನಡುವೆ ಗುರುತ್ವ ಬಲದ ಜಗ್ಗಾಟ ಸದಾ ನಡೆಯುರುತ್ತದೆ. ಸೂರ್ಯ ಮತ್ತು ಭೂಮಿ ನಡುವಿನ ಗುರುತ್ವಬಲ ಜಗ್ಗಾಟದ ಕೇಂದ್ರ ಬಿಂದುವೇ ಎಲ್-೧ ಪಾಯಿಂಟ್. ಈ ಪಾಯಿಂಟ್ ನ ಆಚೆಗೆ ಸೂರ್ಯನ ಆಕರ್ಷಣ ಬಲ ಎಷ್ಟಿರುತ್ತದೋ, ಈಚೆಗೆ ಭೂಮಿಯ ಗುರುತ್ವ ಬಲವೂ ಅಷ್ಟೇ ಇರುತ್ತದೆ. ಎಲ್-೧ ಎನ್ನುವುದು ಕಾಲ್ಪನಿಕ ಬಿಂದು. ನೌಕೆ ಈ ಬಿಂದುವಿನಿಂದ ತುಸು ಆಚೆಗೆ ಸಾಗಿದರು ಸೂರ್ಯಾನ ತೆಕ್ಕೆ ಸೇರಬಹುದು.ಎಲ್ ೧ ಪಾಯಿಂಟ್ ತಲುಪಿದ ನೌಕೆಯು ದೀರ್ಘ ವ್ರಿತ್ತಾಕಾರ ಸುತ್ತುತ್ತಿರುತ್ತದೆ ಎನ್ನುತ್ತಾರವರು.

ಎಲ್-೧ ಪಾಯಿಂಟ್ ಅನ್ನು ಮೊದಲು ಗುರುತಿಸಿದ್ದು ಯಾರು?

ಎಲ್-೧ ಪಾಯಿಂಟ್ ಮೊದಲು ಗುರುತಿಸಿದ್ದು ಇಟಾಲಿಯನ್ ಗಣಿತಶಾಸ್ತ್ರಜ್ನ್ಯಾ ಜೋಸೆಫ್ ಲೂಯಿಸ್ ಲ್ಯಾಗ್ರೆಂಜ್. ಗಿರಗಿರನೆ ಸುತ್ತುವ ಎರಡು ಬಾಹ್ಯಾಕಾಶ ವಸ್ತುಗಳ ನಡುವಿನ ಬಿಂದು ಇದೆಂದು ಆತ ೧೭೭೨ ರಲ್ಲಿ ಒಂದು ಪ್ರಭಂದದ ಮೂಲಕ ಜಗತ್ತಿಗೆ ಸಾರಿದ್ದ. ಈ ಪಾಯಿಂಟ್ ನಲ್ಲಿ ಸ್ಥಿರಗೊಳ್ಳುವ ನೌಕೆ ಸೂರ್ಯನ ಬಿಸಿಗೆ ಕರಗುವುದಿಲ್ಲ. ತಾಂತ್ರಿಕವಾಗಿ ಅದಕ್ಕೆ ಹಾನಿಯೂ ಎನ್ನು ನಾಸಾ ಮೊದಲು ಕಂಡುಕೊಂಡಿತು. ಸೂರ್ಯ ಮತ್ತು ಭೂಮಿಯ ಗುರುತ್ವಾಕರ್ಷಣೆಯ ಕೊನೆಯ ಬಿಂದುಗಳು ಸಂಧಿಸುವ ಈ ಜಾಗದಲ್ಲಿ ಯಾವುದೇ ವಸ್ತು ಸ್ಥಿರವಾಗಿ ನಿಲ್ಲುತ್ತದೆ. ಈ ಎಲ್-೧ ಪಾಯಿಂಟ್ ನಿಂದ ತುಸು ಮುಂದಕ್ಕೆ ಹೊರಟರೆ ಸೂರ್ಯನ ಸೆಳತ ಆರಂಬಗೊಳ್ಳುತ್ತದೆ. ಸೂರ್ಯನ ಗುರುತ್ವಾಕರ್ಷಣೆಗೆ ಒಳಗಾಗದಂತೆ ಎಲ್-೧ ಪಾಯಿಂಟ್ನಲ್ಲಿ ನೌಕೆಯನ್ನು ಸ್ಥಿರಗೊಳಿಸುವುದು ಇಸ್ರೋ ಮುಂದಿರುವ ಅತಿ ದೊಡ್ಡ ಸವಾಲಾಗಿತ್ತು. ಅಲ್ಲಿ ನೌಕೆಯನ್ನು ಪಾರ್ಕ್ ಮಾಡಿದ ಮುಂದಿನ ೫ ವರ್ಷಗಳಗೆ ಸೂರ್ಯ ಆಂತರ್ಯದ ಬದಲಾವಣೆಗಳನ್ನು ಹತ್ತಿರದಿಂದ ಅಧ್ಯಯನ ಮಾಡಲು ಸಾಧ್ಯ. ಎಲ್-೧ ರಲ್ಲಿ ಸ್ಥಾಪನೆಗೊಳ್ಳುವ ಉಪಗ್ರಹಗಳ ದೊಡ್ಡ ಅನುಕೂಲವೆಂದರೆ ಗಗನ ನೌಕೆಯು ಯಾವುದೇ ನೆರಳು/ ಮರೆಮಾಚುವಿಕೆ ಅಥವಾ ಗ್ರಹಣಗಳ ಅಡಚಣೆಯಿಲ್ಲದೆ ನಿರಂತರವಾಗಿ ಸೂರ್ಯನನ್ನು ದಿಟ್ಟಿಸುತಾ ಅಧ್ಯಯನ ಮಾಡಲು ಸಾಧ್ಯವಾಗುತ್ತದೆ. ಜೊತೆಗೆ ಸೌರ ಚಟುವಟಿಕೆಗಳು ಮತ್ತು ಅವುಗಳ ಪರಿಣಾಮವನ್ನು ನೈಜ ಸಮಯದಲ್ಲಿ ಅಧ್ಯಯನ ಮಾಡಲು ಅನುಕೂಲವಾಗಲಿದೆ.

ಆದಿತ್ಯ ಎಲ್-೧ ಸೂರ್ಯನೆದುರು ಭಸ್ಮವಾಗುವುದಿಲ್ಲವೇ?

 
ಆದಿತ್ಯ ಎಲ್ ೧ ಸೂರ್ಯನ ಚಿತ್ರ ಒಂದು

ಸೂರ್ಯನ ಮೇಲ್ಮೈಗಿಂತ ತುಸು ಮೇಲೆ ಇರುವ ದ್ಯುತಿಗೋಳದ ಉಷ್ಣತೆಯೇ ಸುಮಾರು ೫೫೦೦ ಡಿಗ್ರಿ ಸೆಲ್ಸಿಯಸ್. ಸೂರ್ಯನ ಗರ್ಭದಲ್ಲಿ ಗರಿಷ್ಠ ತಾಪಮಾನ ೧೫ ದಶಲಕ್ಷ ಡಿಗ್ರಿ ಸೆಲ್ಸಿಯಸ್. ಇಂಥ ರೌದ್ರಾತಿರೌದ್ರ ತಾಪದ ಪರಿಸ್ಥಿಯಲ್ಲಿ ಯಾವುದೇ ಬಾಹ್ಯಾಕಾಶ ನೌಕೆ ಅದರ ಸಮೀಪ ಹೂಗಳು ಸಾಧ್ಯವೇ ಇಲ್ಲ. ಅಷ್ಟೊಂದು ಶಾಖ ತಡೆದುಕೊಳ್ಳುವ ಯಾವುದೇ ವಸ್ತು ಭೂಮಿಯ ಮೇಲು ಇಲ್ಲ. ಆದ್ದರಿಂದ ಆದಿತ್ಯ ಎಲ್-೧ ಬಾಹ್ಯಾಕಾಶ ನೌಕೆ ೧೪.೮೫ ಕೋಟಿ ಕಿಲೋಮೀಟರು ದೂರದಲ್ಲಿರುವ ಸೂರ್ಯನವರೆಗೂ ಹೋಗುವುದಿಲ್ಲ. ಭೂಮಿಯಿಂದ ೧೫ ಲಕ್ಷ ಕಿಲೋಮೀಟರು ದೂರದಲ್ಲಿರುವ ಎಲ್-೧ ಎಂಬ ಸನ್-ಅರ್ಥ್ ಲ್ಯಾಗ್ರೆಂಜ್ ಪಾಯಿಂಟ್ನಲ್ಲಿ ಇಸ್ರೋ ಆದಿತ್ಯ ಎಲ್-೧ ಅನ್ನು ಸ್ಥಾಪನೆ ಮಾಡಿದೆ. ಭೂಮಿ ಮತ್ತು ಸೂರ್ಯನ ನಡುವೆ ಇಂತಹ ೫ ಬಿಂದುಗಳಿದ್ದು, ಭೂಮಿಯ ಗುರುತ್ವಾಕರ್ಷಣೆ ಕೊನೆಗೊಳ್ಳುವ ಜಾಗಗಳಿವು.

ಅದು ರೆಟ್ರೋ ಫೈರಿಂಗ್....ಆ ಕ್ಷಣ ಹೇಗಿರಲಿದೆ?

ಆದಿತ್ಯ ಎಲ್-೧ ನೌಕೆಯನ್ನು ಎಲ್-೧ ಪಾಯಿಂಟ್ನಲ್ಲಿ ನಿಲ್ಲಿಸುವ ಕಾರ್ಯಕ್ಕೆ ರೆಟ್ರೋ ಫೈರಿಂಗ್ ಎನ್ನುತ್ತಾರೆ. ಎಲ್-೧ ಪಾಯಿಂಟ್ ನ ಸುತ್ತ ಇರುವ ಹ್ಯಾಲೊ ಕಕ್ಷೆಗೆ ನೌಕೆಯನ್ನು ಸೇರಿಸುವ ಕೆಲಸ ಮೊದಲು ನಡೆಯುತ್ತದೆ. ಉಪಗ್ರಹವನ್ನು ಎಲ್-೧ ಪಾಯಿಂಟ್ನಲ್ಲಿ ಇರಿಸುವುದು ತುಂಬಾ ಅಪಾಯಕಾರಿ ಮತ್ತು ಸವಾಲಿನ ಕೆಲಸ. ಆದರೆ ಹ್ಯಾಲೊ ಆರ್ಬಿಟ್ನ್ಲಲಿ ಯಶಸ್ವಿಯಾಗಿ ನಿಯೋಜಿಸಬಹುದು. ಒಮ್ಮೆ ಈ ಕೆಲಸ ಪೂರೈಸಿಬಿಟ್ಟರೆ ಸೂಕ್ತ ಸಮಯದಲ್ಲಿ ಎಲ್-೧ ಬಿಂದುವಿಗೆ ಸೇರಿಸುವ ಕುಶಲತೆ ಪ್ರಯೋಗಿಸಬಹುದು.

ಸೌರ ಮಾರುತಗಳ ಅಧ್ಯಯನ ಯಾಕೆ ಮುಖ್ಯ?

ಮೂಲತಃ ಸೂರ್ಯನು ಅಸಾದ್ಯತಾಪದ ಅನಿಲಗಳ ಚೆಂಡು. ಇದು ಶೇಕಡಾ ೯೨.೧ ರಷ್ಟು ಹೈಡ್ರೋಜನ್ ಮತ್ತು ಶೇಕಡಾ ೭.೮ ರಷ್ಟು ಹೀಲಿಯಂ ಅನಿಲವನ್ನು ಹೊಂದಿದೆ. ಸೂರ್ಯನಲ್ಲಿ ಕಾಂತಿಯ ಚಟುವಟಿಕೆಗಳು ನಿರಂತರ ನಡೆಯುತ್ತಲೇ ಇರುತ್ತವೆ. ಇವು ೧೧ ಅಥವಾ ೧೨ ವರ್ಷಗಳ ಮಧ್ಯಂತರದಲ್ಲಿ ಉತ್ತುಂಗ ತಲುಪುತ್ತವೆ. ಸೌರ ಚಕ್ರದ ಈ ಉತ್ತುಂಗ ಸ್ಥಿತಿಯೇ ಭೂಮಿಗೆ ಮಾರಕ. ಸೌರ ಚಕ್ರದ ಸಮಯದಲ್ಲಿ ಶತಕೋಟಿ ಟನ್ ಬಿಸಿ ಅನಿಲ ಜ್ವಾಲೆಗಳು ಭೂಮಿಯ ವಾತಾವರಣವನ್ನು ಪ್ರವೇಶಸುತ್ತವೆ. ಭೂಮಿಯ ವಾತವರಣದಲ್ಲಿ ಇವು ಕಾಂತಿಯ ಬಿರುಗಾಳಿ ಸೃಷ್ಟಿಸಬಹುದು. ಇದನ್ನು ಸೌರ ಚಂಡಮಾರುತ ಎಂದು ಕರೆಯುತ್ತಾರೆ. ೧೯೮೯ ರಲ್ಲಿ ಸೌರಮಾರುತವು ಕೆನಡಾದ ಕ್ವಿಬೆಕ್ ನಗರದ ಮೇಲೆ ಭಾರಿ ಪರಿಣಾಮ ಬೀರಿತ್ತು. ಅಲ್ಲಿ ಸುಮಾರು ೧೨ ಗಂಟೆ ಗಾಲ ಕಾಲ ವಿದ್ಯುತ್ ಸಂಪರ್ಕ ಕಡಿತಗೊಂಡಿತು. ಜನಜೀವನಕ್ಕೆ ಇದರಿಂದ ತೊಂದರೆಯಾಗಿತ್ತು. ಸೌರಮಾರುತಗಳಿಂದ ಉಪಗ್ರಹಗಳು ನೇರ ಹಾನಿಗೊಳಗಾಗುತ್ತದೆ. ಭೂಮಿ ಮೇಲೆ ಇತೀಚೆಗೆ ಬೀಸಿದ ಬಿಪರ್ ಜಾಯ್ ಚಂಡಮಾರುತಕ್ಕಿಂತ ೨೦ ಪಟ್ಟು ಹೆಚ್ಚಿನ ನಷ್ಟವನ್ನು ಇವು ಉಂಟುಮಾಡಬಹುದು. ಸೂರ್ಯನು ಸೃಷ್ಟಿಸುವ ಚಂಡಮಾರುತಗಳು ಬಾಹ್ಯಾಕಾಶ ನಿಲ್ದಾಣಗಳಲ್ಲಿನ ಗಗನಯಾತ್ರಿಗಳ ಮೇಲೆ ಸಾಕಷ್ಟು ದುಷ್ಪರಿಣಾಮಗಳನ್ನು ಬೀರುತ್ತವೆ. ಈ ಅವಗಢಗಳು ತಪ್ಪಿಸಲು ಸೂರ್ಯನ ಅಧ್ಯಯನ ಬಹಳ ಮುಖ್ಯ. ಯಾವತ್ತೋ ಒಂದು ದಿನ ಸೌರ ಮಾರುತಗಳು ಭೂಮಿಗೆ ಅಪ್ಪಳಿಸಿದರೆ ಮನೆಯೊಳಗೇ ಕುಳಿತು ಟಿವಿ ನೋಡಲಾಗದು. ಬೆಡ್ರೂಮ್, ಅಡುಗೆಮನೆ ಮತ್ತು ಮನೆಯಲ್ಲಿ ಯಾವ ಸ್ವಿಚ್ ಒತ್ತಿದರು ಬುಲ್ಬುಗಳು ಉರಿಯುವುದಿಲ್ಲ. ಕರೆಂಟೇ ಇಲ್ಲದ ನಗರಗಳು, ಕಂಪ್ಯೂಟರ್ ಖಾಲಿ ಡಬ್ಬ ಎನಿಸಬಹುದು. ಏ ಟಿ ಎಂ ಯಂತ್ರದಲ್ಲಿ ಪಾಸ್ವರ್ಡ್ ಒತ್ತಿದರು ಗರಿ ಗರಿ ನೋಟುಗಳು ಹೊರಬಾರವು. ವೈಫೈ ಸುಳಿವಿರದು, ಮೊಬೈಲ್ ನೆಟ್ವರ್ಕ್, ವಾಟ್ಸಪ್ಪ್, ವಿಡಿಯೋ ಕರೆಗಳೆಲ್ಲ ಕಲ್ಪನೆಗಳಾಗಬಹುದು. ವಿಮಾನದಲ್ಲಿ ರೇಡಿಯೋ ಸಿಗ್ನಲುಗಳು ಸಿಗದೇ ಪೈಲಟ್ ಲ್ಯಾಂಡಿಂಗಿಗೆ ಪರದಾಡಬಹುದು. ಓಡುತ್ತಿರುವ ಕಾಲ ಗಕ್ಕನೆ ನಿಂತರೆ, ಇಡೀ ಜಗತ್ತಿನ ತಾಂತ್ರಿಕ ವ್ಯವಸ್ಥೆಗಳೇ ಒಮ್ಮೆಲೇ ಹೀಗೆಲ್ಲ ಸ್ತಬ್ದಗೊಂಡರೆ ಅದಕ್ಕೆ ಕಾರಣ ಸರಕಾರಗಳಲ್ಲ. ಇಲ್ಲಿನ ವಿದ್ಯುತ್ ಗ್ರಿಡ್ ವ್ಯವಸ್ಥೆ, ಮೊಬೈಲ್ ನೆಟ್ವರ್ಕ್ , ಎ ಟಿ ಎಂ , ಉಪಗ್ರಹ, ಜಿ ಪಿ ಯಸ್ ವ್ಯವಸ್ಥೆಗಳೆಲ್ಲ ಸೌರ ಮಾರುತದ ದಾಳಿಯಿಂದಾಗಿ ಕ್ಷಣಮಾತ್ರದಲ್ಲೇ ಛಿದ್ರಗೊಳ್ಳಬಹುದು ಎನ್ನುವುದು ವಿಜ್ನ್ಯಾನಿಗಳಿಗಿರುವ ಬಹು ದೊಡ್ಡ ಆತಂಕ.

ಸೆಪ್ಟೆಂಬರ್ ೧ ೧೮೫೯ ರಲ್ಲೂ ಜಗತ್ತಿನ ಟೆಲಿಗ್ರಾಫ್ ಬಳಕೆದಾರರೆಲ್ಲ ಶಾರ್ಟ್ ಸರ್ಕ್ಯೂಟುನಿಂದ ಕರೆಂಟು ಹೊಡೆಸಿಕೊಂಡು ಗಾಬರಿಬಿದ್ದಿದರು. ಭೂಮಂಡಲಕ್ಕೆ ಅಪ್ಪಳಿಸಿದ ಸೌರಮಾರುತವೆ ಇದಕ್ಕೆ ಕಾರಣ ಎಂದು ಬ್ರಿಟಿಷ್ ಖಗೋಳಶಾಸ್ತ್ರಜ್ನ್ಯಾ ರಿಚರ್ಡ್ ಕ್ಯಾರಿಂಗ್ ಟನ್ ಅಚ್ಚರಿಯ ಸಂಶೋಧನೆ ಯನ್ನು ಜಗತ್ತಿನ ಮುಂದಿಟ್ಟಿದ್ದ. ಸೂರ್ಯನಲ್ಲಿ ಪ್ರತಿ ೧೧ ವರ್ಷಗಳಿಗೊಮ್ಮೆ ಇಂತ ಭೀಕರ ಮಾರುತಗಳ ಸೌರ ಚಕ್ರ ಹುಟ್ಟಿಕೊಳ್ಳುತ್ತದೆ. ೨೦೧೨ ರ ಕೊನೆಯಲ್ಲಿ ಅದೃಷ್ಟವಶಾತ್ ಭೂಮಿ ಘೋರ ಸೌರಮಾರುತದಿಂದ ತಪ್ಪಿಸಿಕೊಂಡಿತು. ಈಗ ಈ ವರ್ಷ(೨೦೨೪) ಅಂತದೇ ಸೌರಜ್ವಾಲೆಗಳು ಯೇಳುವ, ಭೂಮಿಯತ್ತ ಸಾಗಿ ಬರುವ ಸಾಧ್ಯತೆ ಇದೆ ಎನ್ನುವುದು ಖಗೋಳ ಶಾಸ್ತ್ರಾಗ್ನ್ಯಾರ ಲೆಕ್ಕಾಚಾರ

"ಆದಿತ್ಯ ಎಲ್-೧ ನೌಕೆಯಾ ಮುಖ್ಯ ಮಾಹಿತಿಗಳು"

<ಆದಿತ್ಯ ಎಲ್-೧ ಕ್ರಮಿಸಿದ ಒಟ್ಟು ದೂರ-೧೫ ಲಕ್ಷ ಕಿಲೋಮೀಟರು

<ಭೂಮಿಯಿಂದ ಕಕ್ಷೆ ತಲುಪಲು ಹಿಡಿದ ಸಮಯ - ೧೨೬ ದಿನಗಳು

<ಆದಿತ್ಯ ಎಲ್-೧ ಜೀವಿತಾವಧಿ- ೫.೨ ವರ್ಷ.

<ಆದಿತ್ಯ ಎಲ್-೧ ಉಪಗ್ರಹದಲ್ಲಿರುವ ಪೇಲೋಡ್ಗಳ ಸಂಖ್ಯೆ-೭

<ಆದಿತ್ಯ ಎಲ್-೧ ಮಿಷನ್ ನ ಅಂದಾಜು ವೆಚ್ಚ- ೪೦೦ ಕೋಟಿ ರೂಪಾಯಿಗಳು

ಎಲ್-೧ ಪಾಯಿಂಟಿಗೆ ತಲುಪಿದ ಮೂರು ದೇಶಗಳು

>ಅಮೆರಿಕಾದ ನಾಸಾದ ವಿಂಡ್, ಅಡ್ವಾನ್ಸ್ ಕಂಪೋಸಿಷನ್ ಎಕ್ಸ್ಪ್ಲೋರರ್, ಡೀಪ್ ಸ್ಪೇಸ್ ಕ್ಲೈಮೇಟ್ ಅಬುಸರ್ವರಿ ಎಲ್-೧ ಪಾಯಿಂಟ್ ನಲ್ಲಿವೆ

>ನಾಸಾದ ಜೊತೆಗೂಡಿ ಯುರೋಪಿಯನ್ ಏಜನ್ಸಿ ಹಾರಿ ಬಿಟ್ಟಿರುವ ಸೋಲಾರ್ ಅಂಡ್ ಹೆಲಿಯೊಸೆಂಟ್ರಿಕ್ ಅಬುಸರ್ವೇಟರಿ

>ಮಿಷನ್ ಯಶಸ್ವಿಯಿಂದ ಈ ಪಾಯಿಂಟ್ ಗೆ ನೌಕೆ ತಲುಪಿಸಿದ ಮೂರನೇ ರಾಷ್ಟ್ರ ಭಾರತವಾಗಿದೆ

"ಆದಿತ್ಯ ಎಲ್-೧ ಇಂದ ಭಾರತಕ್ಕೆ ಇರುವ ಲಾಭ"

ಸುಮಾರು ೪೦೦ ಕೋಟಿ ರೂಪಾಯಿಗಳ ಆದಿತ್ಯ ಎಲ್-೧ ಯೋಜನೆಯು ದೇಶಕ್ಕೆ ೫೦ ಸಾವಿರ ಕೋಟಿ ರೂಪಾಯಿ ಉಳಿತಾಯ ಮಾಡಲಿದೆ. ಎಂದು ಆದಿತ್ಯ ಎಲ್-೧ ಮಿಷನ್ ನ ಯೋಜನಾ ನಿರ್ದೇಶಕಿ ನಿಗರ್ ಶಾಜಿ ಎನ್ ಡಿಟಿವಿ ಜತೆಗಿನ ಸಂದರ್ಶನದಲ್ಲಿ ತಿಳಿಸಿದ್ದಾರೆ. ವಾಸ್ತವದಲ್ಲಿ ಈ ಮಿಷನ್ ಸೂರ್ಯನನ್ನು ಅಧ್ಯಯನ ಮಾಡುವುದಿಲ್ಲ. ಸೌರಮಾರುತಗಳ್ಳನ್ನು ಅಧ್ಯಯನಿಸುವುದೇ ಇದರ ಉದ್ದೇಶ ಎಂದಿದ್ದಾರೆ. ಸೌರಮಾರುತಗಳು ಈಗಾಗಲೇ ಕೆಲವು ರಾಷ್ಟ್ರಗಳ ಉಪಗ್ರಹಗಳ ಅಸ್ಥಿತ್ವವನ್ನೇ ಹೊಸಕಿ ಹಾಕಿವೆ. ಈಗಾಗಲೇ ಬಾಹ್ಯಾಕಾಶದಲ್ಲಿ ಭಾರತ್ ಹಾರಿ ಬಿಟ್ಟ ಸುಮಾರು ೫೦ ಉಪಗ್ರಹಗಳಿವೆ. ಇವುಗಳ ಮೌಲ್ಯ ಸುಮಾರು ೫೦ ಸಾವಿರ ಕೋಟಿ ರೂಪಾಯಿಗಳು . ಸೌರಮಾರುತಗಲ್ಲಿಂದ ಉಪಗ್ರಹಗಳ ರಕ್ಷಣೆಗೆ ಆದಿತ್ಯ ಎಲ್ -೧ ಬಳಕೆಯಾಗಲಿದೆ. ಅಲ್ಲದೆ ಯಾವ ದೇಶವು ತಮ್ಮ ಉಪಗ್ರಹಗಳ ರಕ್ಷಣೆಗೆ ನೆರವು ಕೋರುತ್ತದೋ, ಅವರಿಗೂ ಸಹಾಯ ಮಾಡುವ ಮೂಲಕ ಆದಿತ್ಯ ಎಲ್-೧ ದೇಶಕ್ಕೆ ಆದಾಯವನ್ನೂ ತಂದು ಕೊಡಲಿದೆ.

ಗ್ರಂಥಸೂಚಿ

ಬದಲಾಯಿಸಿ

ವಿಜಯಕರ್ನಾಟಕ ದಿನಪತ್ರಿಕೆಯಿಂದ (ಜನವರಿ ೬ ಮತ್ತು ಜನವರಿ ೭ )