ಸದಸ್ಯ:1840369sumanasainath/ನನ್ನ ಪ್ರಯೋಗಪುಟ
ಮುನ್ನುಡಿ
ಬದಲಾಯಿಸಿಈಗಲೂ ವಿದ್ಯಾರ್ಥಿಯಾಗಿರುವುದರಿಂದ ಜೀವನದಲ್ಲಿ ದೊಡ್ಡದಾದದ್ದು ಏನೂ ಸಾಧಿಸಿಲ್ಲ. ಸಾಧಿಸಿದ ನಂತರ ನಮ್ಮ ಬಗ್ಗೆ ಬರೆಯುವುದರಲ್ಲಿ ಅರ್ಥವಿದೆ. ಆದರೂ ನಾವು ಸಾಧಿಸಿದೆವು ಎಂದು ನಮಗೆ ಹೇಗೆ ತಿಳಿಯುವುದು? ಜನರ ಬಾಯಿ ಮಾತಿನಿಂದಲಾ? ಅಥವಾ ನಮ್ಮ ಮನಸ್ಸಿಗೆ ಅನಿಸಿದಾಗಲಾ? ಸಂಕ್ಷಿಪ್ತವಾಗಿ ನಮ್ಮ ಸಾಧನೆಗಳಿಗೆ ಮಿತಿಯೆನ್ನುವುದು ಇರಬಾರದು ಎನ್ನುವ ನಾನು ನನ್ನ ಜೀವನವನ್ನು ಹೇಗೆ ನೋಡುತ್ತೇನೆಂದು ಬರೆದಿರುವೆ.
ಪರಿಚಯ
ಬದಲಾಯಿಸಿನನ್ನ ಜೀವನದ ಉದ್ದೇಶವನ್ನು ನನ್ನ ತಾಯಿ ಹುಟ್ಟಿನಿಂದಲೇ ನನ್ನ ಹೆಸರಿನ ರೂಪದಲ್ಲಿ ನನಗೆ ಕಲಿಸಿದ್ದಾರೆ. 'ಸುಮನ' ಎಂದರೆ ಒಳ್ಳೆಯ ಹೃದಯವುಳ್ಳ ವ್ಯಕ್ತಿ . ಜೀವನದಲ್ಲಿ ಮೊಟ್ಟ ಮೊದಲಾಗಿ ಒಳ್ಳೆಯ ಮನುಷ್ಯರಾಗಬೇಕು. ಅದಿಲ್ಲದೇ ನಾವು ಏನೇ ಸಾಧಿಸಿದರೂ ಅರ್ಥವಿರುವುದಿಲ್ಲ. ಮೊದಲಿಗೆ ನಾನು ನಾಸ್ತಿಕಳು. ನಾನು ದೇವರನ್ನು ಮೊದಲು ನನ್ನ ಪೋಷಕರಲ್ಲಿ ನೋಡುತ್ತೇನೆ. ಅವರಂತಹ ಮಹಾನ್ ವ್ಯಕ್ತಿಗಳು ನನಗೆ ಸ್ವರ್ಗದಲ್ಲೂ ಸಿಗುವುದಿಲ್ಲ. ನಂತರ ನಾನು ನಮ್ಮ ಪ್ರಕೃತಿಯಲ್ಲಿ ದೇವರನ್ನು ಕಾಣುತ್ತೇನೆ. ಹಾಗೆಯೇ ದೇವರನ್ನು ನಾನು ಎಲ್ಲರಲ್ಲೂ ಕಾಣುತ್ತೇನೆ, ಅಂದರೆ ನನ್ನ ಜೀವನದಲ್ಲಿರುವ ಜನರ ಕರುಣೆ, ಪ್ರೀತಿ, ಕ್ಷಮೆ ಸ್ವಭಾವವನ್ನು ಮೆಚ್ಚುತ್ತೇನೆ, ಏಕೆಂದರೆ ಅದಿಲ್ಲದೆ ಬದುಕಿಗೆ ಅರ್ಥವಿರುವುದಿಲ್ಲ. ನಾನು ಹೈದರಾಬಾದಿನಲ್ಲಿ ೨೭ ಮೇ ೨೦೦೦ನಂದು ಹುಟ್ಟಿದೆನು. ನಾನು ಈಗ ಬೆಂಗಳೂರಿನಲ್ಲಿ ವಾಸಿಸುತ್ತಿದ್ದೇನೆ.
ಕುಟುಂಬ
ಬದಲಾಯಿಸಿನನ್ನ ಬಾಳಿಗೆ ಅರ್ಥ ನೀಡಿರುವವರು ನನ್ನ ಪೋಷಕರು. ನನ್ನ ತಾಯಿಯ ಹೆಸರು ಜಿ. ಅರುಣಾ ಕುಮಾರಿ ಹಾಗು ತಂದೆಯ ಹೆಸರು ಟಿ. ಆರ್. ಸಾಯಿನಾಥ್ ಪ್ರಭು. ನನ್ನ ತಾಯಿ ಅರ್ಥಶಾಸ್ತ್ರದಲ್ಲಿ ಎಂ.ಎ ಮಾಡಿ ನನಗಾಗಿ ಉತ್ತಮವಾದ ಸರ್ಕಾರ ಕಛೇರಿಯಲ್ಲಿ ಗಣಕಯಂತ್ರ ಪ್ರೋಗ್ರಾಮರ್ ಹುದ್ದೆಯನ್ನು ಬಿಟ್ಟು ಗೃಹಿಣಿಯಾಗಿದ್ದಾರೆ. ನನ್ನ ತಂದೆ ಬಿ.ಎಸ್ ಸಿ, ಎಲ್.ಎಲ್.ಎಮ್ ಮಾಡಿ ಮೂವತ್ತೆಂಟು ವರ್ಷಗಳಿಂದ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ. ಅವರು ಇಪ್ಪತ್ತು ವರ್ಷಗಳಿಗೂ ಮೀರಿ ಕಾನೂನು ಕಾಲೇಜುಗಳಲ್ಲಿ ಕಾನೂನು ಪ್ರಾಧ್ಯಾಪಕರಾಗಿ ಕೆಲಸ ಮಾಡಿದ್ದಾರೆ. ಅವರಿಬ್ಬರು ನನ್ನನ್ನು ತುಂಬ ಮುದ್ದಾಗಿ ಬೆಳಸಿದ್ದಾರೆ. ನಾನು ಕೇಳಿದ್ದೆಲ್ಲ, ಆಸೆಪಟ್ಟಿದ್ದೆಲ್ಲವನ್ನು ನನಗೆ ನೀಡಿದ್ದಾರೆ. ಅವರು ನನಗೆ ಸ್ವಾತಂತ್ರವನ್ನು ನೀಡಿ ಜವಾಬ್ದಾರಿಯನ್ನೂ ಕಲಿಸಿದ್ದಾರೆ. ನಾನು ಇಂದು ಈ ಸ್ಥಾಯಿಯಲ್ಲಿರಲು ಕಾರಣ ನನ್ನ ತಂದೆ, ತಾಯಿ. ಅವರಿಗೆ ಹೆಮ್ಮೆ ತರುವುದೇ ನನ್ನ ಗುರಿ. ಪೋಷಕರಾದಮೇಲೆ ನನಗೆ ನನ್ನ ಸ್ನೇಹಿತರೇ ಆಪ್ತರು. ಒಬ್ಬಂಟಿಗಳಾಗಿ ಬೆಳೆದ ಕಾರಣ, ಎರಡನೇ ವಯಸ್ಸಿನಿಂದಲೂ ಸ್ನೇಹಿತರ ಒಡನಾಟ ಇಷ್ಟ. ಸೋದರಸಂಬಂಧಿ, ಬಂಧುಗಳಿಗಿಂತಲೂ ಸ್ನೇಹಿತರೇ ನನ್ನ ನಿಜ ಬಂಧು, ಸಂಗಾತಿಗಳು.
ವಿದ್ಯಾಭ್ಯಾಸ
ಬದಲಾಯಿಸಿವಿದ್ಯಾಭ್ಯಾಸದ ಬಗ್ಗೆ ಹೇಳಬೇಕಂದರೆ, ನಾನು ಬೇಬಿ ನರ್ಸರಿಯಿಂದ ಹತ್ತನೇ ತರಗತಿಯವರೆಗೂ ಶ್ರೀ ಕುಮಾರನ್ ಚಿಲ್ಢ್ರನ್ಸ್ ಹೋಮ್ನಲ್ಲಿ ಓದಿದೆನು. ಆ ಹದಿನೈದು ವರ್ಷಗಳಲ್ಲಿ ಉತ್ತಮ ಶಿಕ್ಷಣದೊಂದಿಗೆ ನನಗೆ ಜೀವನದಲ್ಲಿ ಬೇಕಾದ ಎಲ್ಲ ನೈತಿಕ ಗುಣಗಳನ್ನು ಅಳವಡಿಸಿಕೊಂಡಿದ್ದೇನೆ. ನಂತರ ಪಿ.ಯು.ಸಿಯನ್ನು ನಾನು ಶ್ರೀ ಕುಮಾರನ್ ಚಿಲ್ಢ್ರನ್ಸ್ ಹೋಮ್ ಕಾಂಪೋಸಿಟ್ ಜೂನಿಯರ್ ಕಾಲೇಜ್ನಲ್ಲಿ ಓದಿದೆನು. ಒಂಬತ್ತನೆ ತರಗತಿಯಿಂದ ಭೌತಶಾಸ್ತ್ರದ ಮೇಲೆ ಆಸಕ್ತಿ ಹೆಚ್ಚಾಯಿತು. ಅಂದಿನಿಂದ ನಾನು ಭೌತಶಾಸ್ತ್ರ ಉಪನ್ಯಾಸಕಿಯಾಗಬೇಕೆಂದು ನಿರ್ಧರಿಸಿದೆ. ಆದ್ದರಿಂದ ನಾನು ಕ್ರೈಸ್ಟ್ (ಡೀಮ್ಡ್ ಟುಬಿ ಯುನೆವರ್ಸಿಟಿ)ಗೆ ಸೇರಿಕೊಂಡೆನು. ಪ್ರಸ್ತುತವಾಗಿ ಅಲ್ಲಿಯೇ ನಾನು ಮೊದಲ ವರ್ಷದ ಬಿ.ಎಸ್ ಸಿ ಮಾಡುತ್ತಿದ್ದೇನೆ. ನನಗಿಲ್ಲಿ ಸಮಗ್ರ ಅಭಿವೃದ್ಧಿ ಹೊಂದಲು ಒಳ್ಳೆಯ ವಾತಾವರಣ, ಅವಕಾಶ ದೊರೆತಿದೆ. ಈ ಮೂರು ಶಿಕ್ಷಣ ಸಂಸ್ಥೆಗಳಲ್ಲಿ ನನಗೆ ಹಲವಾರು ಆದರ್ಶ ಗುರುಗಳ ಜ್ಞಾನ ನನ್ನಲ್ಲಿ ಬಹಳ ಪ್ರಭಾವ ಬೀರಿದೆ. ಅವರ ಆಶೀರ್ವಾದದಿಂದ ನನ್ನ ಕನಸುಗಳನ್ನು ನನಸುಮಾಡಿಕೊಳ್ಳಲು ಹಾದಿಯನ್ನು ಕಂಡುಕೊಂಡಿದ್ದೇನೆ. ಅಬ್ದುಲ್ ಕಲಾಮ್ ಅವರಹಾಗೆ ಉತ್ತಮವಾಗಿ ಓದಿ ಸಾದಿಸಬೇಕೆಂಬ ಗುರಿ ನನ್ನದು.
ಹವ್ಯಾಸ
ಬದಲಾಯಿಸಿಚಿಕ್ಕ ವಯಸ್ಸಿನಿಂದಲೆ, ನನ್ನ ತಾಯಿ ನನಗೆ ಚಿತ್ರ ಬಿಡಿಸುವುದು, ಬಣ್ಣ ತುಂಬುವುದು, ರಂಗೋಲಿ ಹಾಕುವುದನ್ನು ಅಭ್ಯಾಸ ಮಾಡಿಸಿ ಹೇಳಿಕೊಟ್ಟಿದ್ದಾರೆ. ಅಂದಿನಿಂದಲೂ ನನಗೆ ಚಿತ್ರಕಲೆಯಲ್ಲಿ ಆಸಕ್ತಿ. ಮನಸ್ಸಿನ ಭಾವನೆಗಳನ್ನು ಅಭಿವ್ಯಕ್ತಗೊಳಿಸಲು ಚಿತ್ರಕಲೆ ಬಹಳ ಸಹಾಯವಾಗಿದೆ. ಚಿತ್ರಕಲೆ ಕೇವಲ ಕಾಗದದ ಮೇಲೆ ಬಣ್ಣ ತುಂಬಿ ಬರಿಯುವ ಕಾಯಕವಲ್ಲ. ಆ ಕಲೆಯನ್ನು ಪ್ರಸ್ತುತಿ ಪಡಿಸಲು ಅನೇಕ ಪ್ರಾಕಾರಗಳಿವೆ. ಅದರಲ್ಲಿ ಮುಖ ಚಿತ್ರಕಲೆ (ಫೇಸ್ ಪೈಂಟಿಗ್) ನನಗೆ ಇಷ್ಠವಾದ ಹವ್ಯಾಸ. ನಾನು ಇದನ್ನು ಹತ್ತನೇ ತರಗತಿಯಿಂದ ಅಭ್ಯಾಸ ಮಾಡುತ್ತಿದ್ದೇನೆ. ಭಾರತದಲ್ಲಿ ಕಪ್ಪಗಿರುವ ಹೆಂಗಸರನ್ನು ಕೀಳಾಗಿ ಕಾಣುವ ಮನೋಭಾವ ಹೆಚ್ಚು. ಇದನ್ನು ಪ್ರತಿಭಟಿಸಲು ನಾನು ಕಪ್ಪಗಿರುವುದರಿಂದ, ನನ್ನ ಮುಖದಮೇಲೆ ಚಿತ್ರಕಲೆ ಬಿಡಿಸಿಕೊಳ್ಳುತ್ತೇನೆ. ಈ ಕಲೆಯನ್ನು ನಾನು ಇನ್ಸಟಾಗ್ರಾಮ್ ಎನ್ನುವ ಸಾಮಾಜಿಕ ಜಾಲತಾಣದಲ್ಲಿ ಪ್ರದರ್ಶಿಸುತ್ತೇನೆ. ಇದು ಯಾವುದೇ ಪ್ರಶಂಸೆ, ಹೊಗಳಿಕೆಗೆ ಮಾಡದೆ, ನನ್ನ ಮನಸ್ಸಿನ ತೃಪ್ತಿಗಾಗಿ ಮಾಡುತ್ತಿದ್ದೇನೆ.
ಉಪಸಂಹಾರ
ಬದಲಾಯಿಸಿಭವಿಷ್ಯದಲ್ಲಿ ಆಗುವ ಘಟನೆಗಳು ಏನೇ ಆದರೂ, ನಾನು ಸಕಾರಾತ್ಮಕ ಗುಣಗಳೊಂದಿಗೆ ಬದುಕಿ, ಜೀವನದ ಪ್ರತಿ ಹಂತದಲ್ಲೂ ಕಲಿ-ಕಲಿಸು ಮನೋಭಾವ ಬೆಳೆಸಿಕೊಳ್ಳುತ್ತೇನೆ. ಸಂಕ್ಷಿಪ್ತವಾಗಿ ಹೇಳಬೇಕೆಂದರೆ, ನಾನು ಉತ್ತಮ ಮಗಳು, ಗೆಳತಿ, ವಿದ್ಯಾರ್ಥಿ, ಶಿಕ್ಷಕಿ, ಕಲಾವಿದೆ, ದೇಶದ ಪ್ರಜೆ ಹೆಚ್ಚಾಗಿ ಮಾನವೀಯತೆಯ ಮೌಲ್ಯಗಳನ್ನು ಹಿಡಿದೆತ್ತುವ ಮಾನವಳಾಗಿ ಬದುಕಬೇಕೆಂಬುದೇ ನನ್ನ ಜೀವನದ ಲಕ್ಷ್ಯ.