ನನ್ನ ಬಾಲ್ಯ
ನಾನು ಗೌರಿ ಎಸ್ ಆರಾಧ್ಯ 'ಮಾತು ಬೆಳ್ಳಿ ಮೌನ ಬ೦ಗಾರ' ಎ೦ಬ೦ತೆ, ಸ್ವಭಾವತ ಕಡಿಮೆ ಮಾತನಾಡುವ ನನಗೆ ,ಮನೆಯವರೆಲ್ಲ ಸೇರಿ ಇಟ್ಟ ವಿಶೇಷಣ"ಮೌನ ಗೌರಿ". ನನ್ನ ಜನನ ಅಪ್ಪಟ ಮಲೆನಾಡಿನ ನನ್ನಜ್ಜನ ಊರು ಕಾಫಿನಾಡು 'ಚಿಕ್ಕಮಗಳೂರು ಜಿಲ್ಲೆಯ' ಮಲೆನಾಡಿನ ಹೆಬ್ಬಾಗಿಲು ಎಂದು ಹೆಸರಾದ ತರೀಕೆರೆ . ಬೆಳದದ್ದು, ಅ ಆ ಇ ಈ ತೊದಲುತ್ತಾ ಕಲಿತದ್ದು ನನ್ನ ಹೆಮ್ಮೆಯ ಬೆ೦ಗಳೂರಿನಲ್ಲಿ. ನನ್ನ 'ಶಿಶುವಿಹಾರ' ದ ದಿನಗಳನ್ನು ಸೆ೦ಟ್ ಥಾಮಸ್ನಲ್ಲಿ ಕಳೆದೆ.ಸರಿ ಸುಮಾರು ಒಂಭತ್ತು ವರ್ಷದವರೆಗೆ ತೊದಲುತ್ತಿದ್ದ ನನಗೆ, ಗುರುಗಳು ಪ್ರಶ್ನೆ ಕೇಳಿ ನಾನು ಉತ್ತರಿಸುವುದು ಅರ್ಥ ವಾಗದೆ ಕ್ಕಕ್ಕಾಬಿಕ್ಕಿ ಯಾಗಿ ಅಮ್ಮನಲ್ಲಿ ದೂರಿ, ದಿನಾಲು ನಾಲಿಗೆಗೆ ಜೇನು ತುಪ್ಪ ಸವರಲು ಹೇಳಿದ್ದರಂತೆ.ನಾನು ತರಗತಿಯಲ್ಲಿ ಸರಿಯಾಗಿ ಗುರುಗಳು ಹೇಳಿದ ಮನೆಗೆಲಸ ಬರೆದುಕೊಂಡು ಬರದೆ, ಚೆನ್ನಾಗಿ ಓದುವ ಸಹಪಾಠಿಗಳ ಮನೆಗೆ ನನ್ನನ್ನು ದರದರ ಎಳೆದುಕೊಂಡು ಹೋಗುತ್ತಿದ್ದುದು ನನಗಿನ್ನು ನೆನಪಿದೆ. ಅ೦ದಿನ ದಿನದಲ್ಲಿ ದಿನಾಲೂ ಕರೆದುಕೊ೦ಡು ಹೋಗುವ ಆಯಾ ಬರೆದೆ , ಸುಮಾರು ಎರಡು ಅವಧಿ ಒಬ್ಬಳೇ ಕುಳಿತದ್ದು, ಅಮ್ಮ ನೆನಪು ಮಾಡಿಕೊ೦ಡು ಈಗಲೂ ಗಾಬರಿಯಾಗುತ್ತಾರೆ. ==
ಒ೦ದನೇ ತರಗತಿಯಿ೦ದ-ಏಳನೇತರಗತಿ ಸೆ೦ಟ್ ಥಾಮಸ್ ಮಾಧ್ಯಮಿಕ ಶಾಲೆ ಜೀವನ ಭಿಮಾ ನಗರದಲ್ಲಿ ಅಭ್ಯಾಸ ಮಾಡಿದೆ. ನನ್ನಮ್ಮ ಹೇಳುವ೦ತೆ ನನಗೆ ಮೂರನೇ ತರಗತಿಯವರೆಗೆ ಸರಿಯಾಗಿ ಮಾತೇ ಬಾರದೆ ಉಪಾಧ್ಯಾಯರ ಪ್ರಶ್ನೆಗೆ, ನಾನು ಉತ್ತರ ಹೇಳಿದರೂ ನನ್ನ ಮಾತುಗಳು ಅರ್ಥವಾಗದೆ ಉಪಾಧ್ಯಾಯರು ಹಿ೦ದಿನ ಬೆ೦ಚಿನಲ್ಲಿ ನಿಲ್ಲಿಸಿದ್ದನ್ನು ಈಗಲೂ ನೆನಪಿಸಿಕೊ೦ಡು ನಗುತ್ತಿರುತ್ತಾರೆ.ಪ್ರೌಢಶಾಲ ವ್ಯಾಸ೦ಗವು ಸೇಕ್ರಡ್ ಹಾರ್ಟ್ ಬಾಲಕಿಯರ ಶಾಲೆ ಜೀವನ ಭಿಮಾ ನಗರದಲ್ಲಿ ಪಡೆದೆ.ಆಟೋಟಗಳಲ್ಲಿ ಭಾಗವಹಿಸಿದೆ. ಬಾಡ್ಮಿಟನ್ ನನ್ನ ನೆಚ್ಚಿನ ಆಟ."ದೇಶ ಸುತ್ತು ಕೋಶ ಓದು" ಎ೦ಬ ಮಾತಿನ೦ತೆ ನನಗೆ ಪ್ರವಾಸೀ ತಾಣಗಳನ್ನು ಸ೦ದರ್ಶಿಸುವುದು ಬಲು ಪ್ರಿಯ. ಒ೦ಭತ್ತನೆ ತರಗತಿಯಲ್ಲಿ ಅಪ್ಪ ಅಮ್ಮನೊ೦ದಿಗೆ ಉತ್ತರ ಭಾರತ ಪ್ರವಾಸಕ್ಕೆ ತೆರೆಳಿ ನಮ್ಮ ದೇಶದ ಭವ್ಯ ಪರ೦ಪರೆ ಮತ್ತು ನಿಸರ್ಗ ಸಿರಿಯನ್ನು ಕ೦ಡು, ಭಾರತಾ೦ಬೆಯ ಮಡಿಲಲ್ಲಿ ಜನಿಸಿದ ನಾನೇ ಭಾಗ್ಯವ೦ತಳು ಎ೦ಬ ಭಾವನೆ ನನ್ನ ಉಸಿರಿರುವತನಕ ಮರೆಯಾಗದು.ಪುಸ್ತಕ ಓದುವುದು ನನ್ನ ನೆಚ್ಚಿನ ಹವ್ಯಾಸ,ಚಿಕ್ಕ೦ದಿನಿ೦ದ 'ಟ್ವಿ೦ಕಲ್ ಡೈಜಸ್ಟ'ಹಾಗು 'ಟೆಲ್ ಮಿ ವೈ' ಓದುತ್ತಾ ನನಗೆ ಓದುವುದಲ್ಲಿ ಎ೦ತಹಾ ಆನ೦ದ ಅಡಗಿದೆ ಎ೦ಬುದು ಅರಿವಾಗಿದೆ. ಅಡುಗೆ ಮಾಡುವುಡು ನನಗೆ ಬಹಳ ಪ್ರಿಯ. ಹಲವು ಹಣ್ಣುಗಳಿ೦ದ ತ೦ಪು ಪಾನೀಯ ತಯಾರಿಸುವುದು, ತರಕಾರಿಗಳನ್ನು ಬಳಸಿ 'ಶಾಖವಿಲ್ಲದ ಪಾಕ ತಯಾರಿಸುವುದು.ಶಾಲಾ ದಿನಗಳಲ್ಲಿ ಪ್ರವಾಸಕ್ಕೆ ಸ್ನೇಹಿತೆಯರ ಜೊತೆಗೆ ತೆರೆಳಿದ್ದ ನೆನಪು-'ಮಧುರ ಅಮರ'.
.ಎಸ್.ಎಲ್.ಸಿ ಯಲ್ಲಿ ಶೇ ೯೨ರ ಅಂಕಗಳಿಸಿ ಪಿಯು ಶಿಕ್ಶಣ ಪದೆಯಲು ಪದವಿಪುರ್ವ ಕಾಲೇಜಿಗೆ ಸೇರಿದೆ. ಬೆಂಗಳೂರಿನ ಈ ಕಾಲೇಜಿಗೆ ಸೇರಿದ್ದು "ಹಳ್ಳಿಯಿ೦ದ ದಿಲ್ಲಿಗೆ ಬ೦ದ೦ತಾಯಿತು" ಹಲವು ಭಾಷೆ , ಆಧುನಿಕತೆ, ನವೀನರೀತಿಯ ಪಾಠಪ್ರವಚನ ಒಟ್ಟಾಗಿ ಸಿಕ್ಕಿದ ಅನುಭವವು ಅನನ್ಯವಾದುದು. ಪಿಯುಸಿ ವಿದ್ಯಾಭ್ಯಾಸ ನನ್ನನ್ನು ಹೊಸ ಪ್ರಯೋಗಕ್ಕೆ ತೆರೆಯಿತು. ಕ್ರೈಸ್ಟ್ ಒಂದು ಪುಟ್ಟ ಪ್ರಪಂಚವಿದ್ದ ಹಾಗೆ. ಸುಂದರ ಕಟ್ಟಡ, ಬಗೆ ಬಗೆಯ ವಿಷಯ ಅಧ್ಯಯನ ಮಾಡುಲು ದೇಶ-ವಿದೇಶಗಳಿಂದ ಆಗಮಿಸುವ ವಿದ್ಯಾರ್ಥಿಗಳು ವಿಭಿನ್ನ ಭಾಷೆ ಸಂಸ್ಕ್ರತಿ ಎರಕಹೊಯ್ದ ತನ್ನದೇ ಆದ ಅಸ್ಮಿತೆಯನ್ನು ಬೆಂಗಳೂರು ಮಹಾನಗರದಲ್ಲಿ ಪಡೆದುಕೊಂಡು ಮಿಂಚುತ್ತಿದೆ, ರಾರಾಜಿಸುತ್ತಿದೆ,ನಳನಳಿಸುತ್ತಿದೆ.
ಇಂತಹ ವಿಭಿನ್ನತೆಯನ್ನು ಹೊಂದಿದ ಕಾಲೇಜಿನಲ್ಲಿ ನಾನು ಅಧ್ಯಯನ ಮಾಡಿರುವುದಕ್ಕೆ ಹೆಮ್ಮೆಯಾಗುತ್ತದೆ. ಸದಾ ಜಿಗಿಗುಡುತ್ತಿರುವ ಕಾಲೇಜಿನ ಆವರಣ ,ಉಪನ್ಯಾಸಕರ ಸ್ನೇಹಮಯ ನಡವಳಿಕೆ, ರೊಮಾಂಚನಗೊಳಿಸುವ ಕಾಲೆಜಿನ ಸಾಂಸ್ಕ್ರತಿಕ ಚಟುವಟಿಕೆಗಳು, "ಸದೃಡ ಮನಸ್ಸು, ಸದೃಡ ಶರೀರ ಎಂಬಂತೆ ನಡೆಸುವ ಕ್ರೀಡಾ ಚಟುವಟಿಗಳು ಎಂತಹವರನ್ನು ಸೂಜಿಗಲ್ಲಿನಂತೆ ಸೆಳೆಯುತ್ತದೆ.
ಕ್ರೈಸ್ಟ್ ಸಂಸ್ಥೆಗೆ ಮಾತೆಯಂತಿರುವ ಸುಂದರಿ ಮನೋಹರಿಯಾದ ಸರಸ್ವತಿ ಆವಾಸವಾಗಿರುವ ವಿಶ್ವವಿದ್ಯಾನಿಲಯಕ್ಕೆ ಪದವಿ ಶಿಕ್ಷಣ ಪಡೆಯಲು ಸೇರಿರುವ ನನಗೆ ಇಲ್ಲಿಯ ಅಧ್ಯಾಪಕರ ಆಹ್ಲಾದಕರ ಮತ್ತು ಪರಿಣಮಕಾರಿ ಬೋಧನೆ ಇನ್ನು ಹೆಚ್ಚಿನ ವಿದ್ಯಾಭ್ಯಾಸ ಮಾಡಲು ಪ್ರೇರೇಪಿಸುತ್ತಿದೆ ಈಗಾಗಲೆ ಕೀರ್ತಿ ಪತಾಕೆ ಹಾರಿಸಿರುವ ಕಾಲೇಜಿನ ಜನಪ್ರಿಯತೆಯನ್ನು ಇನ್ನೂ ಎತ್ತರಕ್ಕೆ ಕೊಂಡೊಯ್ಯುವ ಹೊಣೆಗಾರಿಕೆ ನಮ್ಮೆಲ್ಲರ ಮೇಲಿದೆ. ಪಿಯುಸಿಯಲ್ಲಿ ಶೇ ೯೪% ರ ಅ೦ಕ ಪಡೆದು ನನ್ನ ಹೆಮ್ಮೆಯ ವಿಶ್ವವಿದ್ಯಾನಿಲಯಕ್ಕೆ ಸೇರಿದೀನೆ ನನ್ನ ಒಟ್ಟಾರೆ ವ್ಯಕ್ತಿತ್ವವನ್ನು ಉತ್ತಮ ಪಡಿಸಿಕೊ೦ಡು ಭವಿಷ್ಯದ ಉತ್ತಮ ನಾಗರಿಕ ವೇಶ ಸೇವೆ ಮಾಡುವೆ.