ಸದಸ್ಯ:1810252b/ನನ್ನ ಪ್ರಯೋಗಪುಟ
Bhanu Prakash | |
---|---|
ಜನನ:
ಬದಲಾಯಿಸಿನನ್ನ ಹೆಸರು ಭಾನುಪ್ರಕಾಶ್.ಜೆ.ಎಸ್ ನಾನು ಮೂಲತಹ ಒಂದು ಸಣ್ಣ ಹಳ್ಳಿಯಿಂದ ಬಂದವನು.ನಾನು 11 | 03 | 2000 ರಂದು ಜನಿಸಿದನು ತಂದೆ ಶಿವಣ್ಣ ಮತ್ತು ತಾಯಿ ಶೋಭಾ.ನನ್ನ ಹುಟ್ಟೂರು ರಾಮನಗರ ಜಿಲ್ಲೆಯ ಕನಕಪುರ ತಾಲ್ಲೂಕಿನ ಜಟ್ಟಿಪಾಳ್ಯ ವೆಂಬ ಒಂದು ಚಿಕ್ಕ ಹಳ್ಳಿ.ನಮ್ಮ ಹಳ್ಳಿಯಲ್ಲಿ ಇರುವುದು ಕೇವಲ 55 ಮನೆಗಳು ಮಾತ್ರ ಒಂದು ಚಿಕ್ಕ ಗ್ರಾಮ ಅನ್ನುವ ಬದಲು ಒಂದು ==ಕುಗ್ರಾಮ ಎಂದರೆ ಏನು ತಪ್ಪಾಗಲಾರದು ಯಾಕೆಂದರೆ ನಮ್ಮ ಊರಿಗೆ ಬರುವುದು ಒಂದೇ ಬಸ್ಸು.
ಬಾಲ್ಯ:
ಬದಲಾಯಿಸಿಒಂದು ರೀತಿಯ ಮಧ್ಯಮವರ್ಗದ ಕುಟುಂಬ ನಿಜಕ್ಕೂ ಎಲ್ಲಾ ರೀತಿಯ ಕಷ್ಟ ಬಡತನವನ್ನು ನನ್ನ ತಂದೆ ತಾಯಿ ನನ್ನ ಬಾಲ್ಯದಿಂದಲೇ ತೋರಿಸಿದ್ದಾರೆ.ಆದುದರಿಂದಲೇ ಕಷ್ಟ ಸುಖ ಏನು ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ನನಗೆ ನನ್ನ ಬಾಲ್ಯದ ವಿಷಯಗಳು ಹೆಚ್ಚು ನೆನಪಿಲ್ಲ. ಸುಲಭವಾಗಿ ಹೇಳಬೇಕು ಎಂದರೆ ನನ್ನ ಬಾಲ್ಯ ಬೇವು ಬೆಲ್ಲದಂತೆ ಎಂದು ಹೇಳಬಹುದು. ನನಗೆ ನನ್ನ ಬಾಲ್ಯದಿಂದಲೇ ಕ್ರೀಡೆಯ ಬಗ್ಗೆ ತುಂಬಾ ಆಸಕ್ತಿ ಬೆಳೆಸಿಕೊಂಡಿದ್ದೆ ನಾನು ಮೊದಲಿಗೆ ವ್ಯಾಸಂಗ ಮಾಡುತಿದಿದ್ದು ನಮ್ಮ ಗ್ರಾಮದಲ್ಲಿದ ಸರ್ಕಾರಿ ಶಾಲೆಯಲ್ಲಿ ಮೂರನೇ ತರಗತಿಯ ವರೆಗೂ ಅಲ್ಲೇ ವಿದ್ಯಾಭ್ಯಾಸ ಮಾಡಿದೆ ನಂತರ ನನ್ನ ಬುದ್ದಿ ಮತ್ತು ಚುರುಕತನ ಗಮನಿಸಿದ ಅಲ್ಲಿನ ಒಬ್ಬ ಶಿಕ್ಷಕರು ನನನ್ನು ಎಲ್ಲಾದರು ಇನ್ನು ಒಳ್ಳೆಯ ಶಾಲೆಗೆ ಸೇರಿಸಿ ಎಂದು ನನ್ನ ತಂದೆಯ ಬಳಿ ಹೇಳಿದರು. ಆದರೆ ಸ್ವಲ್ಪ ದಿನಗಳಲ್ಲಿ ಅದು ಆಗುವಂತ ಕೆಲಸವಾಗಿರಲಿಲ್ಲ ಆ ಸಮಯದಲ್ಲಿ ಆರ್ಥಿಕ ಸ್ಥಿತಿ ಚೆನ್ನಾಗಿ ಇಲ್ಲವಾದ ಕಾರಣ ನಾನು ಇನ್ನು ಒಂದು ವರ್ಷ ಅಲ್ಲೆ ಕಳೆದೆ.ನಂತರ ನಾಲ್ಕನೇ ತರಗತಿಗೆ ಮನೆಗೆಸಮೀಪವಿದ್ದ ಜೈನ್ ಪಬ್ಲಿಕ್ ಶಾಲೆ ಎಂಬ ಶಾಲೆಗೆ ಸೇರಿಕೊಂಡೆ.
ಶಿಕ್ಷಣ ಮತ್ತು ಅವ್ಯಾಸ:
ಬದಲಾಯಿಸಿಜೈನ್ ಪಬ್ಲಿಕ್ ಶಾಲೆ ಇವತ್ತು ನಾನು ಏನಾದರೂ ಒಂದು ಸಾಸಿವೆ ಕಾಲಿನಷ್ಟು ಸಾಧನೆ ಮಾಡಿದಿನಿ ಎಂದರೆ ಅದಕ್ಕೆ ಮೂಲ ಕಾರಣ ನನ್ನ ಜೈನ್ ಪಬ್ಲಿಕ್ ಶಾಲೆ. ಈ ಶಾಲೆಯಲ್ಲಿ ನನಗೆ ಎಲ್ಲಾ ರೀತಿಯ ಸೌಲಭ್ಯಗಳು ಸಿಕ್ಕವು. ಏಳನೇ ತರಗತಿ ತಲುಪುವ ವರೆಗೂ ನಾನು ಕೂಡ ಬೇರೆ ಮಕ್ಕಳಂತೆ ಬಂದು ಹೋಗುತಿದ್ದೆ ಆದರೆ ನಂತರ ನನ್ನ ಶಾಲಾ ಬದುಕನ್ನು ಬಡಳಿಸುವಂತೆ ಮಾಡಿದ್ದು ನಾನು ನಂಬಿದಂತ ಕ್ರೀಡೆ.ಏಳನೇ ತರಗತಿಯಲ್ಲಿ ಇರುವಾಗ ವಾಲಿಬಾಲ್ ಕ್ರೀಡೆಯಲ್ಲಿ ಆಸಕ್ತಿ ಬೆಳೆಸಿಕೊಂಡೆ ನನ್ನ ಆಸಕ್ತಿಯನ್ನು ಗುರುತಿಸಿ ನನ್ನನ್ನು ಕ್ರೀಡಾ ಕ್ಷೇತ್ರದಲ್ಲಿ ಮುಂದು ವರೆಯುವಂತೆ ಮಾಡಿದ್ದು ನನ್ನ ಶಾಲೆಯ ಧೈಹಿಕ ಶಿಕ್ಷಕರು. ಅವರ ಅನುಗ್ರಹದಿಂದ ಸತತ ಅಭ್ಯಾಸ ಪರಿಶ್ರಮದಿಂದ ಶಾಲೆ ವಾಲಿಬಾಲ್ ತಂಡದ ನಾಯಕನು ಆದೆ. ನನ್ನ ಪದವಿ ಪೂರ್ವ ಶಿಕ್ಷಣ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮಾಡಿದೆ. ನನ್ನ ಎರಡೂ ವರ್ಷದ ಪದವಿ ಪೂರ್ವ ಶಿಕ್ಷಣವನ್ನು ತಂದೆ ತಾಯಿ ಇಂದ ದೂರ ಉಳಿದು ಕೆಂಗೇರಿಯ ಜ್ಞಾನ ಭಾರತೀಯ ವಿಶ್ವ ವಿದ್ಯಾಲಯದ ಒಳಗೆ ಇರುವ ಕ್ರೀಡಾ ನಿಲಯದಿಂದ ಪ್ರಯಾಣ ಮಾಡುತ್ತಿದ್ದೆ ಈ ಎರಡು ವರ್ಷದ ಎಲ್ಲಾ ರೀತಿಯ ಸೌಲಭ್ಯವನ್ನು ನನಗೆ ಸರ್ಕಾರವೇ ನನಗೆ ನೀಡಿತು.ಅವರ ಕಷ್ಟಕ್ಕೆ ಉತ್ತರವಾಗಿ ನನಗೆ ಕ್ರೈಸ್ಟ್ ಎಂಬ ಒಂದು ದೊಡ್ಡ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅದೃಷ್ಟ ಒಲಿದು ಬಂದಿದ್ದೆ. ನಾನು ಇಲ್ಲಿ ಬಂದು ಸುಮಾರು ಏಳು ತಿಂಗಳು ಆಗಿದ್ದರು ಇಲ್ಲಿನ ಹುಡುಗರ ನಡುವಳಿಕೆ ಕೊಂಚ ವಿಭಿನ್ನ ಅನಿಸುತಿದ್ದೆ ಆದರೂ ಅದನ್ನು ಎಲ್ಲು ತೋರಿಸಿಕೊಳ್ಲದೆ ನನ್ನ ವಿದ್ಯಾಭ್ಯಾಸವನ್ನ ಯಶಸ್ವಿಯಾಗಿ ಪೂರ್ಣಗೊಳಿಸುತ್ತೆನೆ ನನ್ನ ತಂದೆ ತಾಯಿಯ ಆಸೆಯಂತೆ ಬದುಕಲು ಪ್ರಯತ್ನ ಮಾಡುತ್ತೆನೆ.
ಆಸಕ್ತಿ ಕ್ಷೇತ್ರ:
ಬದಲಾಯಿಸಿನಾನು ಶಾಲೆಯಲ್ಲಿ ರಾಜ್ಯಮಟ್ಟ ರಾಷ್ಟ್ರಮಟ್ಟ ದಲ್ಲಿ ನಮ್ಮ ಶಾಲೆಯನ್ನು ಪ್ರತಿನಿದಿಸಿದ್ದೇನೆ.ಕೇವಲ ವಾಲಿಬಾಲ್ ಮಾತ್ರ ವಲ್ಲದೆ ನಾನು ಒಬ್ಬ ಒಳ್ಳೆಯ ಓಟಗಾರನು ಹೌದು. ಈ ನನ್ನ ಬೆಳವಣಿಗೆಯನ್ನು ಗಮನಿಸುತ್ತಿದ್ದ ನನ್ನ ಪ್ರಾಂಶುಪಾಲರು ನನಗೆ ಎಲ್ಲಾ ರೀತಿಯ ಸಹಾಯವನ್ನು ನೀಡುತ್ತಿದ್ದರು.ಏನೇ ತೊಂದರೆಗಳು ಬಂದರು ನನ್ನ ಪರವಾಗಿ ನಿಂತು ಸಹಾಯ ಮಾಡುತಿದ್ದರು. ಅತಿಯಾಗಿ ಶಾಲೆಗೆ ಹೋಗಲು ಸಾಧ್ಯವಾಗುತಿರಲಿಲ್ಲ ಆದುದರಿಂದ ಯಾವಾಗ ಬೇಕಾದರೂ ಶಾಲೆಗೆ ಬಂದು ಶಿಕ್ಷಕರನ್ನು ಭೇಟಿ ಮಾಡುವಂತ ಸ್ವಾತಂತ್ರ್ಯ ನನಗೆ ನೀಡಿದ್ದರು ಅದರಂತೆ ನನ್ನ ಶಿಕ್ಷಕರು ಕೂಡ ಸ್ಪಂದಿಸುತ್ತಿದ್ದರು. ಇವರೆಲ್ಲರ ಸಹಕಾರದಿಂದ ಹತ್ತನೇ ತರಗತಿಯಲ್ಲಿ ಕರ್ನಾಟಕ ರಾಜ್ಯದ ಹದಿನಾರು ವರ್ಷದ ಬಾಲಕರ ವಾಲಿಬಾಲ್ ತಂಡದಲ್ಲಿ ಸ್ಥಾನ ಪಡೆದೆ. ಅದೇ ವರ್ಷ ಕರ್ನಾಟಕ ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ ನಲ್ಲಿ ಹದಿನಾರು ವರ್ಷದವರ ವಿಭಾಗದಲ್ಲಿ 11.34 ಸೆಕೆಂಡ್ಗಳಲ್ಲಿ ನೂರು ಮೀಟರ್ ಓಟ ಮುಗಿಸಿ ಕೂಟದ ವೇಗದ ಓಟಗಾರ ಎಂಬ ಪ್ರಶಸ್ತಿಯನ್ನು ಗೆದ್ದೇ. ಈ ಸಮಯದಲ್ಲಿ ನಾನು ಕ್ರೀಡೆಯಲ್ಲಿ ಉತ್ತಮ ಲಯದಲ್ಲಿ ಇದ್ದಂತ ಸಮಯ. ನನ್ನ ತಂದೆ ತಾಯಿಯ ಮತ್ತು ಶಿಕ್ಷಕರ ಸಹಾಯದಿಂದ ಹತ್ತನೇ ತರಗತಿಯಲ್ಲಿ ಎಂಬತ್ತೊಂದು ಶೇಕಡ ಅಂಕ ಪಡೆದು ಉತೀರ್ಣನಾದೆ. ಹತ್ತನೇ ತರಗತಿ ಮುಗಿಯುತಿಂದಂಗೆ ನನ್ನ ನಡುವಳಿಕೆಕ್ರೀಡೆಯಲ್ಲಿ ಹೊರಬರುತಿದ್ದ ಸಾಧನೆಯನ್ನು ನಮ್ಮ ಹಳ್ಳಿಯಲ್ಲಿ ಎಲ್ಲರೂ ಸಂತೋಷ ಪಡುತ್ತಿದ್ದರು. ಇಷ್ಟು ವರ್ಷದ ನನ್ನ ಎಲ್ಲಾ ಪರಿಶ್ರಮಕ್ಕೂ ಉತ್ತಮ ಪಾಲಿತಂಶವೇ ಸಿಕ್ಕಿತು. ಹತ್ತನೇ ತರಗತಿ ಮುಗಿದ ಒಂದೇ ತಿಂಗಳಲ್ಲಿ ಆ ದೇವರ ಅನುಗ್ರಹದಿಂದ ಕೇಂದ್ರ ಸರ್ಕಾರದ ಕೆಳಗೆ ಕೆಲಸ ವಹಿಸುವ ಭಾರತೀಯ ಕ್ರೀಡಾಪ್ರಾಧಿಕಾರದಲ್ಲಿ(SAI) ನನಗೆ ಉಳಿದು ಕೊಳ್ಳುವ ಅವಕಾಶ ಒಲಿದು ಬಂತು ನನ್ನ ಎಲ್ಲಾ ಶಿಕ್ಷಣ ವ್ಯವಸ್ಥೆ ಎಲ್ಲದರ ಕರ್ಚು ನೋಡುಕೊಳ್ಳುವುದಕ್ಕೆ ಸರ್ಕಾರ ಮುಂದೆ ಬಂತು. ಇದು ನನ್ನ ಜೀವನದ ಅತ್ಯಮೂಲ್ಯ ಕ್ಷಣ. ನನ್ನ ಪದವಿ ಪೂರ್ವ ಶಿಕ್ಷಣ ಬೆಂಗಳೂರಿನ ಜೈನ್ ಕಾಲೇಜಿನಲ್ಲಿ ಮಾಡಿದೆ. ನನ್ನ ಎರಡೂ ವರ್ಷದ ಪದವಿ ಪೂರ್ವ ಶಿಕ್ಷಣವನ್ನು ತಂದೆ ತಾಯಿ ಇಂದ ದೂರ ಉಳಿದು ಕೆಂಗೇರಿಯ ಜ್ಞಾನ ಭಾರತೀಯ ವಿಶ್ವ ವಿದ್ಯಾಲಯದ ಒಳಗೆ ಇರುವ ಕ್ರೀಡಾ ನಿಲಯದಿಂದ ಪ್ರಯಾಣ ಮಾಡುತ್ತಿದ್ದೆ ಈ ಎರಡು ವರ್ಷದ ಎಲ್ಲಾ ರೀತಿಯ ಸೌಲಭ್ಯವನ್ನು ನನಗೆ ಸರ್ಕಾರವೇ ನನಗೆ ನೀಡಿತುಈ ವೇಳೆಯಲ್ಲಿ ನಾನು ಎರಡು ಬಾರಿ ಮತ್ತೆ ಕರ್ನಾಟಕ ರಾಜ್ಯ ಅಥ್ಲೆಟಿಕ್ಸ್ ತಂಡದ ಸದಸ್ಯನಾಗಿದ್ದೆ. ನಾನು ಇದಿದ್ದು ಕ್ರೀಡಾ ಹಾಸ್ಟೆಲ್ನಲ್ಲಿ ಆದುದರಿಂದ ಇಲ್ಲಿಯೂ ಕೂಡ ಬೆಳ್ಳಿಗೆ ಮತ್ತು ಸಂಜೆ ಅಭ್ಯಾಸ ಇರುತ್ತಿದ್ದ ಕಾರಣ ಇಲ್ಲಿಯೂ ನನಗೆ ಎಲ್ಲಾ ರೀತಿಯ ಸೌಲಭ್ಯ ದೊರಕಿತು.ವರ್ಷದ ಕೊನೆಯಲ್ಲಿ ನನ್ನ ಬಲಗಾಲು ಏಟಾಗಿ ಸುಮಾರು ಮೂರು ತಿಂಗಳಾದರೂ ಎಲ್ಲಿಯೂ ಹೋಗದಂತೆ ಆಯಿತು ಈ ವೇಳೆಯಲ್ಲಿ ನನ್ನ ದೇಹದ ಬಗ್ಗೆ ನಾನು ಕಾಳಜಿ ವಹಿಸಲಿಲ್ಲ ಸ್ವಲ್ಪ ನನ್ನ ಲಯ ಬಿಟ್ಟು ಹೋಗಿತ್ತು ಇದಾದ ಸ್ವಲ್ಪ ದಿನಗಳಲ್ಲೇ ಪರೀಕ್ಷೆ ಬಂತು ನಂತರ ಮತ್ತೆ ಅಭ್ಯಾಸ ಮಾಡಲು ಸಾಧ್ಯವಾದರು ಮುಂಚಿನ ವೇಗ ನನಲ್ಲಿ ಇರಲಿಲ್ಲ ನನ್ನ ಎಲ್ಲಾ ಬೆಳವಣಿಗೆಯಲ್ಲೂ ಜೊತೆಗಿದ್ದ ನನ್ನ ತಂದೆ ಇದನ್ನು ಗಮನಿಸಿದರು ನಾನು ನನ್ನ ಮೊದಲಿನ ವೇಗ ಮುಟ್ಟಲು ಇನ್ನು ಮುಂದೆ ಕಷ್ಟ ಇದೇ ಎಂಬುದು ಅವರಿಗೆ ತಿಳಿದಿತ್ತು ಅಷ್ಟೇ ಅಲ್ಲದೆ ನನ್ನ ಸ್ಥಿತಿಯನ್ನು ಆಳವಾಗಿ ಯೋಚಿಸಿದ್ದ ನನ್ನ ತಂದೆ ಇನ್ನು ಕ್ರೀಡೆಯನ್ನೇ ನಂಬಿಕೊಂಡು ಕೂತರೆ ಮುಂದೆ ತುಂಬಾ ಕಷ್ಟ ಅನುಭವಿಸಬೇಕಾಗುತ್ತದೆ ಎಂದು ಹೇಳಿ ನನ್ನನ್ನು ಕ್ರೀಡಾ ನಿಲಯದಿಂದ ವಾಪಸ್ ಮನೆಗೆ ಕರೆ ತಂದರು. ಆ ಒಂದು ಘಟನೆ ಇಂದ ನನ್ನ ಪಾಲಿಗೆ ಅದೃಷ್ಟದ ಚಿಟ್ಟೆಯಂತೆ ಬಂದಿದ್ದ ಅವಕಾಶ ಹಾರಿಹೋಯಿತು. ಕಾಲ ಕ್ರಮೇಣ ನಾನು ಅಭ್ಯಾಸ ಮಾಡುವುದು ಕಡಿಮೆ ಮಾಡಿದೆ ದೇಹವನ್ನು ನನ್ನ ಅದುಬಸ್ಥಿನಲ್ಲಿ ಇಡಲು ಕೊಂಚ ವಿಫಲನಾದೆ ನನ್ನ ಬೇರೆ ಸ್ನೇಹಿತರು ಅಭ್ಯಾಸ ಮಾಡುವುದನ್ನು ನನ್ನಲ್ಲಿ ನೋಡಲು ಸಾಧ್ಯವಾಗುತಿರಲ್ಲಿಲ್ಲ ಒಂದು ಸಂದರ್ಭದಲ್ಲಿ ತುಂಬಾ ಕುಗ್ಗಿ ನಿರಾಸೆಗೊಂಡಿದ್ದೆ ಆ ವೇಳೆಯಲ್ಲೂ ನನ್ನ ಜೊತೆ ಇದಿದ್ದು ನನ್ನ ತಂದೆ ನನ್ನ ನೋವು ಏನು ಎಂಬುಧನ್ನು ಅವರು ಅರಿತು ನಂತರ ಅವರೇ ಮತ್ತೆ ಅಭ್ಯಾಸ ಮಾಡಲು ಪ್ರೇರಣೆ ನೀಡಿದರು ಈ ವೇಳೆಯಲ್ಲಿ ಕಳೆದ ಬಾರಿ ಕರ್ನಾಟಕ ರಾಜ್ಯ ವಾಲಿಬಾಲ್ ತಂಡದಲ್ಲಿ ಸ್ಥಾನ ಗಳಿಸಲು ಸಹಕಾರವಾಯಿತು. ಮತ್ತೆ ರಾಷ್ಟಮಟ್ಟದಲ್ಲಿ ರಾಜ್ಯವನ್ನ ಪ್ರತಿನಿಧಿಸಿದೆ. ದ್ವೀತಿಯ ಪಿಯುಸಿ ಫಲಿತಾಂಶ ಪ್ರಕಟವಾಧಗ ನನ್ನ ತಂದೆಯ ಮೊಕದಲ್ಲಿದ್ದ ಆ ಸಂತೋಷ ಎಷ್ಟು ಹಣ ಕೊಟ್ಟರು ತರಲು ಸಾಧ್ಯವಿಲ್ಲ. ಆ ಗಳಿಗೆ ಮೊಟ್ಟ ಮೊದಲ ಬಾರಿಗೆ ನನ್ನ ಬಗ್ಗೆ ಬೇರೆಯವರ ಬಳಿ ಹೇಳಿದರು. ಅವರ ನಿತ್ಯ ಬೆಂಬಲದಿಂದ ಸೋತಿದ್ದ ನಾನು ಮತ್ತೆ ನನ್ನ ಲಯಕ್ಕೆ ಮರಳು ತುಂಬಾ ಕಷ್ಟ ಪಡುತ್ತಿದ್ದೇನೆ. ಅವರ ಕಷ್ಟಕ್ಕೆ ಉತ್ತರವಾಗಿ ನನಗೆ ಕ್ರೈಸ್ಟ್ ಎಂಬ ಒಂದು ದೊಡ್ಡ ವಿಶ್ವ ವಿದ್ಯಾಲಯದಲ್ಲಿ ವ್ಯಾಸಂಗ ಮಾಡುವ ಅದೃಷ್ಟ ಒಲಿದು ಬಂದಿದ್ದೆ. ನಾನು ಇಲ್ಲಿ ಬಂದು ಸುಮಾರು ಏಳು ತಿಂಗಳು ಆಗಿದ್ದರು ಇಲ್ಲಿನ ಹುಡುಗರ ನಡುವಳಿಕೆ ಕೊಂಚ ವಿಭಿನ್ನ ಅನಿಸುತಿದ್ದೆ ಆದರೂ ಅದನ್ನು ಎಲ್ಲು ತೋರಿಸಿಕೊಳ್ಲದೆ ನನ್ನ ವಿದ್ಯಾಭ್ಯಾಸವನ್ನ ಯಶಸ್ವಿಯಾಗಿ ಪೂರ್ಣಗೊಳಿಸುತ್ತೆನೆ ನನ್ನ ತಂದೆ ತಾಯಿಯ ಆಸೆಯಂತೆ ಬದುಕಲು ಪ್ರಯತ್ನ ಮಾಡುತ್ತೆನೆ.