ಟಿ ಬಿ ಜಯಚಂದ್ರ

ತಿಮ್ಮಮಾನಹಳ್ಳಿ ಬೋರಯ್ಯ ಜಯಚಂದ್ರ ಅವರು ೨೯ ಜುಲೈ ೧೯೪೯ರಂದು ಹುಟ್ಟಿದರು. ಇವರು ಕರ್ನಾಟಕ ರಾಜ್ಯದ,ತುಮಕೂರು ಜಿಲ್ಲೆಯ,ಕಲ್ಲಂಬೆಲ್ಲ ತಾಲೂಕಿಗೆ ಸೇರಿದವರು.ಇವರ ಸಂಗಾತಿ ಜಿ. ಎಚ್. ನಿರ್ಮಲ ಹಾಗು ಇವರಿಗೆ ಮೂರು ಮಕ್ಕಳ್ಳಿದ್ದಾರೆ.ಅವರು ಬ್ಯಾಚುಲರ್ ಆಫ್ ಸೈನ್ಸ್ ಮತ್ತು ಎಲ್.ಎಲ್.ಬಿ ಪದವಿಯನ್ನು ಪಡೆದಿದ್ದಾರೆ.ಇವರು ವೃತ್ತಿಯಲ್ಲಿ ರಾಜಕಾರಣಿ.ಅಲ್ಲದೆ ಇವರು ೨೦೧೩ರಲ್ಲಿ ಕರ್ನಾಟಕ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿ ವಿಧಾನ ಸಭೆಯ ಸದಸ್ಯರಾಗಿದ್ದರು. ಇವರು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಸ್ಥಾನ ಕಳೆದುಕೊಂಡರು. ಎಸ್. ಸುರೇಶ್ ಅವರ ನಂತರ, ಕರ್ನಾಟಕದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ೧೮ ಮೇ, ೨೦೧೩ರಿಂದ ೧೫ ಮೇ, ೨೦೧೮ರವರೆಗೆ ಸೇವೆ ಸಲ್ಲಿಸಿದರು.ಇವರು ೧೭ ಅಕ್ಟೋಬರ್ ೧೯೯೯ರಿಂದ ೨೭ ಜೂನ್ ೨೦೦೨ರವರೆಗೆ ತುಮಕೂರು ಜಿಲ್ಲೆಯ ಕೃಷಿ ಮತ್ತು ಜಿಲ್ಲಾ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ೧೨ ಡಿಸೆಂಬರ್ ೨೦೦೩ ರಿಂದ ೨೮ ಮೇ ೨೦೦೪ ರವರೆಗೆ ಮಂಡ್ಯ ಜಿಲ್ಲೆಯ ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರಾಗಿ ಸೇವೆ ಸಲ್ಲಿಸಿದ್ದಾರೆ. ಜಯಚಂದ್ರ ಅವರು ಮೊದಲ ಬಾರಿ ಕರ್ನಾಟಕ ಶಾಸಕಾಂಗ ಸಭೆಗೆ ೧೯೭೮ರಲ್ಲಿ ಆಯ್ಕೆಯಾದರು.ಇವರು ಸುಮಾರು ಆರು ಬಾರಿ ಕಲ್ಲಂಬೆಲ್ಲಾ ಮತ್ತು ಸಿರಾ ಕ್ಷೇತ್ರದಿಂದ ಕರ್ನಾಟಕ ವಿಧಾನ ಸಭೆಯ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ: ೬ನೇ ವಿಧಾನಸಭೆ - ೧೯೭೮ ರಿಂದ ೧೯೮೩ ರವರೆಗೆ,೯ನೇ ವಿಧಾನಸಭೆ - ೧೯೮೯ ರಿಂದ ೧೯೯೪ ರವರೆಗೆ, ೧೦ನೇ ವಿಧಾನಸಭೆ - ೧೯೯೪ ರಿಂದ ೧೯೯೯ ರವರೆಗೆ,೧೧ ನೇ ವಿಧಾನಸಭೆ - ೧೯೯೯ ರಿಂದ ೨೦೦೪ ರವರೆಗೆ,೧೩ ನೇ ವಿಧಾನಸಭೆ - ೨೦೦೮ ರಿಂದ ೨೦೧೩ ರವರೆಗೆ,೧೪ನೆಯ ವಿಧಾನಸಭೆ -೨೦೧೩ ರಿಂದ ೨೦೧೮ ರವರೆಗೆ.ಇವರು ೨೦೧೩ರ ಚುನಾವಣೆಯಲ್ಲಿ ೭೪,೦೮೯ ಮತಗಳೊಂದಿಗೆ ಸಿರಾದಿಂದ ಗೆದ್ದ ನಂತರ ಕರ್ನಾಟಕ ವಿಧಾನಸಭೆಗೆ ಆಯ್ಕೆಯಾದರು. ೨೭ ಜೂನ್ ೨೦೦೨ರಿಂದ ೧೧ ಡಿಸೆಂಬರ್ ೨೦೦೩ ರವರೆಗೆ ಕ್ಯಾಬಿನೆಟ್ ಮಂತ್ರಿಯ ಪಟ್ಟದಿಂದ ದೆಹಲಿಯಲ್ಲಿ ಕರ್ನಾಟಕದ ವಿಶೇಷ ಪ್ರತಿನಿಧಿಯಾಗಿ ಸೇವೆ ಸಲ್ಲಿಸಿದ್ದಾರೆ.ಕರ್ನಾಟಕ ವಿಧಾನಸಭೆಯಲ್ಲಿ ೧೯೯೪ ರಿಂದ ೧೯೯೯ ರವರೆಗೆ ಮತ್ತು ೨೦೦೮ರಿಂದ ೨೦೧೮ರವರೆಗೆ ವಿರೋಧ ಪಕ್ಷದ ಉಪನಾಯಕರಾಗಿದ್ದರು.ಇವರು ತುಂಬಾ ರಾಜಕೀಯ ಅನುಭವವನ್ನು ಹೊಂದಿರುವ ವ್ಯಕ್ತಿ.ಕಾಂಗ್ರೆಸ್ ಪಕ್ಷದ ಸಂಘಟನೆಗಳಲ್ಲಿ ತಾಲೂಕು, ಜಿಲ್ಲೆ ಮತ್ತು ರಾಜ್ಯ ಮಟ್ಟದಲ್ಲಿ ವಿವಿಧ ಕೆಲಸಗಳನ್ನು ಮಾಡಿದ್ದಾರೆ.ಇವರು ಕೆಪಿಸಿಸಿ ಚುನಾವಣಾ ನಿರ್ವಹಣೆ ಮತ್ತು ಸಹಕಾರ ಸಂಘ ಸಮಿತಿಯ ಸದಸ್ಯರು. ಇವರು ಬೇರೆ ಕ್ಷೇತ್ರಗಳಲ್ಲೂ ಬಹಳ ಕೆಲಸಗಳನ್ನು ಮಾಡಿದ್ದಾರೆ.೧೯೮೦ರಿಂದ - ೧೯೮೧ ರವರೆಗೆ ಕರ್ನಾಟಕ ಫಿಲ್ಮ್ ಇಂಡಸ್ಟ್ರೀಸ್ ಡೆವಲಪ್ಮೆಂಟ್ ಕಾರ್ಪೊರೇಶನ್ನ ಚೈರ್ಮನ್ ಆಗಿದ್ದರು.೨೦೦೨ ರಲ್ಲಿ ತುಮಕೂರಿನಲ್ಲಿ ನಡೆದ ೬೯ ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿಯ ಚೈರ್ಮನ್ ಆಗಿದ್ದರು.ಬೆಂಗಳೂರಿನ ಎಮ್ಸಿಸಿ ಚಾರಿಟಿಗಳ ಮ್ಯಾನೇಜಿಂಗ್ ಟ್ರಸ್ಟೀ ಆಗಿದ್ದಾರೆ.ಇವರು ಯುನಿವರ್ಸಲ್ ಎಜುಕೇಶನ್ ಅಂಡ್ ರಿಸರ್ಚ್ ಫೌಂಡೇಶನ್, ಬೆಂಗಳೂರಿನ ಚೈರ್ಮನ್ ಟ್ರಸ್ಟೀ.ತುಮಕೂರು ಜಿಲ್ಲೆಯ,ಕಲ್ಲಂಬೆಲ್ಲ ತಾಲೂಕಿನ ನೀರಾವರಿ ಸಮಿತಿಯ ಮತ್ತು ಪಾಸ್ಚಿಮ ಗಟ್ಟಾ ನೀರಾವರಿ ಸಮಿತಿಯ ಅಧ್ಯಕ್ಷರಾಗಿದ್ದಾರೆ.ಇವರು ಹೊರದೇಶಗಳಲ್ಲಿ ಭಾರತವನ್ನು ಹಲವಾರು ಬಾರಿ ಪ್ರತಿನಿಧಿಸಿದ್ದಾರೆ.೧೯೯೯ ಮಾರ್ಚ್ನಲ್ಲಿ,ಯುನೈಟೆಡ್ ಕಿಂಗ್ಡಮ್ ನಲ್ಲಿ ನಡೆದ ೪೮ನೇ ಕಾಮನ್ ವೆಲ್ತ್ ಪಾರ್ಲಿಮೆಂಟರಿ ಸೆಮಿನಾರ್ನಲ್ಲಿ ಭಾರತವನ್ನು ಪ್ರತಿನಿಧಿಸರು. ಯುಎಸ್ಎ, ಕೆನಡಾ, ಚೀನಾ, ಜಪಾನ್, ದಕ್ಷಿಣ ಕೊರಿಯಾ,ಯುಎಇ, ದಕ್ಷಿಣ ಪೂರ್ವ ದೇಶಗಳು ಮತ್ತು ಯುರೋಪಿಯನ್ ದೇಶಗಳಿಗೆ ಕೃಷಿ ಮತ್ತು ಕೈಗಾರಿಕೆಗಳನ್ನು ಅಧ್ಯಯನ ಮಾಡಲು ಭೇಟಿ ನೀಡಿದ್ದಾರೆ.ಇವರು ೨೦೧೮ರಲ್ಲಿ ನಡೆದ ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜೆಡಿ (ಎಸ್) ಅಭ್ಯರ್ಥಿಯಾದ ಬಿ. ಸತ್ಯನಾರಾಯಣರಿಗೆ ಸಿರಾದಿಂದ ಸೋತರು.ತಮ್ಮ ಮೃದು ಸ್ವಭಾವದಿಂದಾಗಿ ಕರ್ನಾಟಕ ಕಾಂಗ್ರೆಸ್ನ ಪ್ರಣಬ್ ಮುಖರ್ಜಿ ಎಂದು ಇವರನ್ನು ಕರೆಯುತ್ತಾರೆ."ಇವನು ಅಸೆಂಬ್ಲಿ ಅಧಿವೇಶನಗಳಲ್ಲಿ ಪ್ರತಿಯೊಂದು ಪ್ರಶ್ನೆಯನ್ನು ಬಹಳ ಚಾಣಕ್ಯತೆಯಿಂದ ಉತ್ತರಿಸುತ್ತಾನೆ ಮತ್ತು ಪ್ರತಿಯೊಂದು ವಿಷಯದಲ್ಲೂ ವಿರೋಧ ಪಕ್ಷವನ್ನು ತೆಗೆದುಕೊಳ್ಳುತ್ತಾನೆ. ಕ್ಯಾಬಿನೆಟ್ ಸಭೆಗಳಲ್ಲಿ ಸಹ, ಅವರ ಅಭಿಪ್ರಾಯವನ್ನು ಎಲ್ಲರೂ ತುಂಬಾ ಗಮನ ಕೊಟ್ಟು ಕೇಳುತ್ತಾರೆ." ಎಂದು ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ ಅವರು ಹೇಳಿದ್ದಾರೆ."ಕಾಂಗ್ರೆಸ್ನೊಳಗೆ ಜಯಚಂದ್ರ ಒಂದು ಏಕೀಕೃತ ಶಕ್ತಿ, ಅವನು ಯಾವುದೇ ಬೇಧಭಾವವನ್ನು ಉತ್ತೇಜಿಸುವುದಿಲ್ಲ ಮತ್ತು ತಟಸ್ಥನಾಗಿರಲು ಪ್ರಯತ್ನಿಸುತ್ತಾನೆ", ಎಂದು ಹಿರಿಯ ಕಾಂಗ್ರೆಸ್ ಶಾಸಕರು ಹೇಳಿದ್ದಾರೆ.ಜ್ಯೋತಿಷ್ಯಶಾಸ್ತ್ರದಲ್ಲಿ ಬಹಳ ನಂಬಿಕೆ ಇಟ್ಟುಕೊಂಡಿರುವ ಇವರು, ೨೦೧೮ರಲ್ಲಿ, ಜ್ಯೋತಿಷ್ಯಶಾಸ್ತ್ರವು "ಕುರುಡು ನಂಬಿಕೆಯಲ್ಲ, ವಿಜ್ಞಾನ" ಎಂದು ಕರೆದರು. ಅವರು ೧೦೫ ವರ್ಷಗಳವರೆಗೆ ಬದುಕುತ್ತಾರೆ ಎಂದು ಜ್ಯೋತಿಷಿಗಳು ಹೇಳಿದ ಮಾತಿಗೆ, "ಕರ್ನಾಟಕ ವಿಧಾನ ಸಭೆಯ ಚುನಾವಣೆಯಲ್ಲಿ ಎರೆಡು ಬಾರಿ ಭಾಗವಹಿಸುತ್ತೇನೆ" ಎಂದು ಹೇಳಿದರು.