ಸದಸ್ಯ:ಸಹೃದಯ ಎಂ ಸಿ/ನನ್ನ ಪ್ರಯೋಗಪುಟ೨

ಅಶ್ವನಿ ಕುಮಾರ್ ಚನ್ನನ್

ಬದಲಾಯಿಸಿ

ಮೇಜರ್ ಜನರಲ್ ಎ ಕೆ ಚನ್ನನ್, PVSM, SM ಅವರು ಭಾರತೀಯ ಸೇನೆಯ ನಿವೃತ್ತ ಫಿರಂಗಿ ಅಧಿಕಾರಿ. ಅವರು ೩೮ ವರ್ಷಗಳ ಕಾಲ ಸೇವೆ ಸಲ್ಲಿಸಿದರು ಮತ್ತು ಕಾರ್ಯಾಚರಣೆಯ ಪ್ರದೇಶಗಳಲ್ಲಿ ವಿವಿಧ ಕಮಾಂಡ್ ಮತ್ತು ಸಿಬ್ಬಂದಿ ನೇಮಕಾತಿಗಳನ್ನು ನಡೆಸಿದರು. ಅವರು ಆರ್ಮಿ ಮುಖ್ಯ ಕಚೇರಿಯ ಗ್ರಹಿಕಾ ಯೋಜನಾ ನಿರ್ದೇಶನಾಲಯದಲ್ಲಿ ಸೇವೆ ಸಲ್ಲಿಸಿದರು ಮತ್ತು ಆರ್ಮಿ ಡಿಸೈನ್ ಬ್ಯೂರೋ ಸಂಸ್ಥೆಯ ಮೊದಲ ಎಡಿಜಿ ಆಗಿದ್ದರು.

ವೃತ್ತಿ

ಬದಲಾಯಿಸಿ

ಅವರು ರಾಷ್ಟ್ರೀಯ ರಕ್ಷಣಾ ಅಕಾಡೆಮಿ, ಖಡಕ್ವಾಸಲಾ ಮತ್ತು ರಾಷ್ಟ್ರೀಯ ರಕ್ಷಣಾ ಕಾಲೇಜು, ದೆಹಲಿ ಈ ಎರಡು ಸಂಸ್ಥೆಗಳ ಹಳೆಯ ವಿದ್ಯಾರ್ಥಿ. ಅವರು ವೆಲ್ಲಿಂಗ್ಟನ್ನ ಡಿಎಸ್ಎಸ್ಸಿಯಿಂದ ಪದವಿ ಪಡೆದಿದ್ದಾರೆ. ಮತ್ತು AWC, ಮುಹಾವ್ ನಿಂದ HC ಕೋರ್ಸನ್ನು ಪೂರ್ಣಗೊಳಿಸಿದರು. ಅವರು ಸಮೃದ್ಧ ಬರಹಗಾರರಾಗಿದ್ದಾರೆ.

ಅವರು ನುಸುಳುವಿಕೆ ಪ್ರತಿರೋಧ ಪ್ರದೇಶದಲ್ಲಿ GSO 1 ಆಗಿದ್ದರು ಮತ್ತು ಸೇನಾ ಪ್ರಧಾನ ಕಛೇರಿಯಲ್ಲಿ PP ನಿರ್ದೇಶನಾಲಯದಲ್ಲಿ ಇದ್ದರು. ಅವರು ಡಿವಿ, ಡಿಡಿಜಿ ಪಿ&ಎಂ ಕೋಶದ ಕರ್ನಲ್ (ಆಡಳಿತ) ಮತ್ತು ಕರ್ನಲ್ (ಎಂಎಸ್) ಆಗಿ ಸೇವೆ ಸಲ್ಲಿಸಿದರು ಮತ್ತು ಗ್ರಹಿಕಾ ಯೋಜನೆಯ & ಎಡಿಬಿಯ ಎಡಿಜಿ ಆಗಿದ್ದರು. ಅವರು ೩೧ ಆಗಸ್ಟ್ ೨೦೨೦ ರಂದು ನಿವೃತ್ತರಾದರು.

ಪ್ರಶಸ್ತಿ ಪುರಸ್ಕಾರಗಳು

ಬದಲಾಯಿಸಿ

ಅವರ ೩೮ ವರ್ಷಗಳ ಮಿಲಿಟರಿ ವೃತ್ತಿಜೀವನದಲ್ಲಿ, ಅವರು ೨೦೨೦ರಲ್ಲಿ ಪರಮ ವಿಶಿಷ್ಟ ಸೇವಾ ಪದಕ ಮತ್ತು ೨೦೧೫ ರಲ್ಲಿ ಸೇನಾ ಪದಕವನ್ನು ಪಡೆದರು.

  • ಪರಮ ವಿಶಿಷ್ಠ ಸೇವಾ ಪದಕ
  • ಸೇನಾ ಪದಕ
  • ಸಾಮಾನ್ಯ ಸೇವಾ ಪದಕ
  • ಶೇಷ ಸೇವಾ ಪದಕ
  • ಆಪರೇಷನ್ ವಿಜಯ್ ಸ್ಟಾರ್
  • ಆಪರೇಷನ್ ವಿಜಯ್ ಪದಕ
  • ಆಪರೇಷನ್ ಪರಾಕ್ರಮ್ ಪದಕ
  • ಸೈನ್ಯ ಸೇವಾ ಪದಕ
  • ಹೈ ಆಲ್ಟಿಟ್ಯೂಡ್ ಸೇವಾ ಪದಕ
  • ವಿದೇಶ್ ಸೇವಾ ಪದಕ
  • ಸ್ವಾತಂತ್ರ್ಯ ೫೦ನೇ ವಾರ್ಷಿಕೋತ್ಸವ ಪದಕ
  • ೩೦ ವರ್ಷಗಳ ಸುದೀರ್ಘ ಸೇವಾ ಪದಕ
  • ೨೦ ವರ್ಷಗಳ ಸುದೀರ್ಘ ಸೇವಾ ಪದಕ
  • ೯ ವರ್ಷಗಳ ಸುದೀರ್ಘ ಸೇವಾ ಪದಕ